ಕುಡಿತ ಬಿಡುವ ಬಗ್ಗೆ ಸ್ವಯಂ ಮೂಗುದಾರ ಹಾಕುವ ಅಗತ್ಯವಿದೆ : 1777ನೇ ಮದ್ಯ ವರ್ಜನ ಶಿಬಿರದಲ್ಲಿ ಡಾ.ಡಿ.ವೀರೇಂದ್ರ ಹೆಗ್ಗಡೆ
ಪುತ್ತೂರು: ಮದ್ಯಪಾನಕ್ಕೆ ಪಂಚೇದ್ರಿಯಗಳು ಆಕರ್ಷಣೆಯಾಗದಂತೆ ದೂರವಿರುವುದರ ಜೊತೆಗೆ ಕುಡಿತ ನಿಲ್ಲಿಸುವ ವಿಚಾರದಲ್ಲಿ ಗಟ್ಟಿ ಮತ್ತು ದೃಡವಾದ ಮನಸ್ಸು, ಚಂಚಲತೆ ಇಲ್ಲದ ಹತೋಟಿ ಬೇಕಾಗಿದೆ. ಮದ್ಯವರ್ಜನ ಶಿಬಿರದಲ್ಲಿ ಭಾಗವಿಸಿದ ಎಲ್ಲರೂ ಕುಡಿತ ಬಿಡುವ ಬಗ್ಗೆ ಸ್ವಯಂ ಮೂಗುದಾರ ಹಾಕಿಕೊಂಡು ಹತೋಟಿಯಲ್ಲಿರಬೇಕು ಎಂದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ನುಡಿದರು. ಅವರು ಮಂಗಳವಾರ ಕಲ್ಲೇಗ ಭಾರತ್ ಮಾತಾ ಸಮುದಾಯ ಭವನದಲ್ಲಿ ಕಳೆದ ಆರು ದಿನಗಳಿಂದ ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ಬೆಳ್ತಂಗಡಿ […]










