ಪುತ್ತೂರು

ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪಡೆದ ಅರಂತೋಡಿನ ಸುಶ್ಮಿತಾ ಬಿ.ಎಸ್.ಎಫ್. ಗೆ ಆಯ್ಕೆ

ಪುತ್ತೂರು: ಅತ್ಯುತ್ತಮ ತರಬೇತಿಯ ಮೂಲಕ ಭಾರತೀಯ ಸೇನೆಗೆ ಗ್ರಾಮೀಣ ಪ್ರದೇಶದ ಯುವಕ ಯುವತಿಯರು ನಿರಂತರವಾಗಿ ಸೇರ್ಪಡೆಗೊಳ್ಳಲು ಕಾರಣವಾಗಿರುವ ಕರಾವಳಿ ಭಾಗದ ಪ್ರತಿಷ್ಠಿತ ತರಬೇತಿ ಸಂಸ್ಥೆ ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪಡೆದು ನಿರಂತರವಾಗಿ ಸಶಸ್ತ್ರ ಪಡೆಗಳ ನೇಮಕಾತಿಗಳಿಗೆ ಪ್ರಯತ್ನಿಸುತ್ತಾ ಅಂತಿಮವಾಗಿ ಭಾರತೀಯ ಗಡಿ ರಕ್ಷಣಾ ಪಡೆ ( BSF )ಗೆ ಸಿಬ್ಬಂದಿ ನೇಮಕಾತಿ ಆಯೋಗ ( SSC )ನಡೆಸಿದ ಪರೀಕ್ಷೆಯಲ್ಲಿ ಸುಳ್ಯ ತಾಲೂಕಿನ ಸುಶ್ಮಿತಾ ಆಯ್ಕೆಯಾಗಿದ್ದಾರೆ. ಇವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರಂತೋಡು  ಗ್ರಾಮದ ಬೆದ್ರಪಣೆಯ […]

ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪಡೆದ ಅರಂತೋಡಿನ ಸುಶ್ಮಿತಾ ಬಿ.ಎಸ್.ಎಫ್. ಗೆ ಆಯ್ಕೆ Read More »

ಸನಿಹಾ ಕೆಮ್ಮಿಂಜೆಗೆ ಭರತನಾಟ್ಯ ಜ್ಯೂನಿಯರ್ ಪರೀಕ್ಷೆಯಲ್ಲಿ ಶೇ.96

ಪುತ್ತೂರು: ಸನಿಹಾ ಕೆಮ್ಮಿಂಜೆ ಅವರು ಮೈಸೂರಿನ ಕರ್ನಾಟಕ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ನೃತ್ಯ ವಿಶ್ವವಿದ್ಯಾಲಯ ನಡೆಸಿದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ 96% ಅಂಕಗಳನ್ನು ಗಳಿಸಿ ವಿಶಿಷ್ಟ ಸ್ಥಾನ ಪಡೆಯುವ ಮೂಲಕ ಗಮನಾರ್ಹ ಯಶಸ್ಸನ್ನು ಸಾಧಿಸಿದ್ದಾರೆ. ಅವರು ಮಂಗಳೂರಿನ ಕಲಾಭಾರತಿ ನೃತ್ಯ ಶಾಲೆಯ ಗುರು ಪ್ರಣತಿ ಸತೀಶ್ ಭಟ್ ಅವರ ಶಿಷ್ಯೆ. ಸನಿಹಾ ಕೆಮ್ಮಿಂಜೆ ಮೌಂಟ್ ಕಾರ್ಮೆಲ್ ಶಾಲೆಯಲ್ಲಿ ಏಳನೇ ತರಗತಿಯ ವಿದ್ಯಾರ್ಥಿನಿ ಮತ್ತು ವಿನೋದ್ ಕುಮಾರ್ ಕೆ ಮತ್ತು ಡಾ. ಸಿಂಧು ಬೇಕಲ್ ಅವರ

ಸನಿಹಾ ಕೆಮ್ಮಿಂಜೆಗೆ ಭರತನಾಟ್ಯ ಜ್ಯೂನಿಯರ್ ಪರೀಕ್ಷೆಯಲ್ಲಿ ಶೇ.96 Read More »

ಪುತ್ತೂರಿನಲ್ಲಿ 70 ಕೋಟಿ ವೆಚ್ಚದಲ್ಲಿ ಕಾರ್ಮಿಕ ವಸತಿ ಶಾಲೆ ನಿರ್ಮಾಣ

ಪುತ್ತೂರು: ಪುತ್ತೂರಿನ ಆರ್ಯಾಪು ಗ್ರಾಮದ ಕುರಿಯದಲ್ಲಿ ಕಾರ್ಮಿಕ ಇಲಾಖೆಯ ವತಿಯಿಂದ ಕಾರ್ಮಿಕರ ಮಕ್ಕಳಿಗಾಗಿ ವಸತಿ ಶಾಲೆ ಮಂಜೂರು ಗೊಂಡಿದ್ದು ಇದಕ್ಕಾಗಿ ಏಳು ಎಕ್ರೆ ಜಾಗವನ್ನು ಕಾರ್ಮಿಕ ಇಲಾಖೆಗೆ ಮಂಜೂರು ಮಾಡಲಾಗಿದೆ. ಸುಮಾರು 70 ಕೋಟಿ ವೆಚ್ಚದಲ್ಲಿ ಆ ವಸತಿ ಶಾಲೆ ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಾರಂಭವಾಗುವ ನಿರೀಕ್ಷೆ ಹೊಂದಿದ್ದು ಇದು ಪುತ್ತೂರಿನ ಅಭಿವೃದ್ದಿಗೆ ಮತ್ತೊಂದು ಗರಿಮೆಯಾಗಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು. ಅವರು ಸೋಮವಾರ ಶಾಸಕರ ಕಚೇರಿಯಲ್ಲಿ ನಡೆದ ಸರಳಾ ಸಮಾರಂಭದಲ್ಲಿ ಕಾರ್ಮಿಕ ಇಲಾಖೆಗೆ

ಪುತ್ತೂರಿನಲ್ಲಿ 70 ಕೋಟಿ ವೆಚ್ಚದಲ್ಲಿ ಕಾರ್ಮಿಕ ವಸತಿ ಶಾಲೆ ನಿರ್ಮಾಣ Read More »

ಹಿಂದಿನ ಅವಧಿಯ ಅನುದಾನದಲ್ಲಿ ಆಗಿರುವ ಅಭಿವೃದ್ಧಿಯನ್ನು ತಮ್ಮದೆಂದು ಬಿಂಬಿಸುವುದನ್ನು ಹಾಲಿ ಶಾಸಕರು ನಿಲ್ಲಿಸಬೇಕು : ಪತ್ರಿಕಾಗೋಷ್ಠಿಯಲ್ಲಿ ರಾಜೇಶ್‍ ಬನ್ನೂರು

ಪುತ್ತೂರು: ಪುತ್ತೂರು ಶಾಸಕರು ಮಾತು ಎತ್ತಿದರೆ ಕೋಟಿಗಳ ಲೆಕ್ಕಾಚಾರದಲ್ಲಿ ಮಾತನಾಡುತ್ತಾರೆ. ಆದರೆ ಅವರ ಅವಧಿಯಲ್ಲಿ ತಂದ ಒಂದಾದರು ಯೋಜನೆ ಕಾರ್ಯರೂಪಕ್ಕೆ ಬಂದಿರುವುದನ್ನು ತೋರಿಸಲಿ. ಹಿಂದಿನ ಅವಧಿಯಲ್ಲಿ ಅನುದಾನದಲ್ಲಿ ಅಗಿರುವ ಅಭಿವೃದ್ಧಿಯನ್ನು ತಮ್ಮದೇ ಎಂದು ಜನರನ್ನು ವಂಚಿಸುವುದು, ಸುಳ್ಳು ಭರವಸೆ ನೀಡುವುದನ್ನು ನಿಲ್ಲಿಸಬೇಕೆಂದು ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು ಆರೋಪಿಸಿದ್ದಾರೆ. ಮಹಾಲಿಂಗೇಶ್ವರ ದೇವಸ್ಥಾನವನ್ನು ಅಭಿವೃದ್ಧಿ ಮಾಡುತ್ತೇನೆ ಎಂದು ಶಾಸಕರ ಉತ್ಸಾಹ ದೇವರ ಭಕ್ತರಾದ ನಮಗೆಲ್ಲಾ ಸಂತೋಷ. ಆದರೆ ದೇವಳದ ಸುತ್ತಮುತ್ತಲಿನ ಕಟ್ಟಡಗಳು ಅನಧಿಕೃತವಾಗಿದೆ ಎಂದು ಕಟ್ಟಡ ತೆರವು

ಹಿಂದಿನ ಅವಧಿಯ ಅನುದಾನದಲ್ಲಿ ಆಗಿರುವ ಅಭಿವೃದ್ಧಿಯನ್ನು ತಮ್ಮದೆಂದು ಬಿಂಬಿಸುವುದನ್ನು ಹಾಲಿ ಶಾಸಕರು ನಿಲ್ಲಿಸಬೇಕು : ಪತ್ರಿಕಾಗೋಷ್ಠಿಯಲ್ಲಿ ರಾಜೇಶ್‍ ಬನ್ನೂರು Read More »

ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಧರ್ಮಸ್ಥಳಕ್ಕೆ ಧರ್ಮ ಜಾಗೃತಿ ಯಾತ್ರೆ – ಪುತ್ತೂರಿನಿಂದ ಹೋದ 150ಕ್ಕೂ ಹೆಚ್ಚು ವಾಹನ

ಪುತ್ತೂರು: ಧರ್ಮಸ್ಥಳದ ವಿರುದ್ಧದ ಅಪಪ್ರಚಾರ, ವಿರೋಧ ಆಗುತ್ತಿರುವ ಸಂದರ್ಭ ಕ್ಷೇತ್ರದ ಜೊತೆಗೆ ನಾವಿದ್ದೇವೆ ಎಂಬುದನ್ನು ಸಾರಲು ಮಾಜಿ ಸಂಸದ ಹಾಗೂ ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ದ.ಕ. ಜಿಲ್ಲೆಯ ಎಲ್ಲಾ ಮಂಡಲಗಳಿಂದ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ  ಮಧ್ಯಾಹ್ನ ಧರ್ಮ ಜಾಗೃತಿಯ ಬೃಹತ್ ಯಾತ್ರೆ ನಡೆಯಿತು. ಪುತ್ತೂರಿನಿಂದ 150ಕ್ಕೂ ಹೆಚ್ಚು ವಾಹನ ಧರ್ಮಸ್ಥಳಕ್ಕೆ ತೆರಳಿದೆ. ಇತಿಹಾಸ ಪ್ರಸಿದ್ದ ಮಹಾತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯ ಕೊನೆಯಲ್ಲಿ ಧರ್ಮ ಜಾಗೃತಿ ಯಾತ್ರೆಗೆ ತೆಂಗಿನ ಕಾಯಿ

ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಧರ್ಮಸ್ಥಳಕ್ಕೆ ಧರ್ಮ ಜಾಗೃತಿ ಯಾತ್ರೆ – ಪುತ್ತೂರಿನಿಂದ ಹೋದ 150ಕ್ಕೂ ಹೆಚ್ಚು ವಾಹನ Read More »

ವಿದ್ಯಾ ಸಮೃದ್ಧಿ ಲೋಕಾರ್ಪಣೆ

ಪುತ್ತೂರು: ಶಿಕ್ಷಣ ಕ್ಷೇತ್ರದಲ್ಲಿ ಒಂದು ಕ್ರಾಂತಿ ಮಾಡಲು ಸಜ್ಜಾಗಿರುವ ಆಪ್ (APP) ವಿದ್ಯಾ ಸಮೃದ್ಧಿಯಲ್ಲಿ ಪ್ರಸಾರವಾಗಲಿರುವ 10ನೆ ತರಗತಿಯ ಪಾಠಗಳ ವಿಡಿಯೋ ಚಿತ್ರೀಕರಣಕ್ಕೆ ಇಂದು ನ್ಯೂಸ್ ಪುತ್ತೂರು ಕಚೇರಿಯಲ್ಲಿ ಚಾಲನೆ ನೀಡಲಾಯಿತು. ಜಂಟಿಯಾಗಿ ದೀಪ ಬೆಳಗಿ ಉದ್ಘಾಟನೆಗೈದ shree ಪುಟ್ಟಣ್ಣ ಮತ್ತು ಶ್ರೀ ಶ್ರೀನಿವಾಸ್ ಅವರು ಶುಭ ಹಾರೈಸಿದರು. ಪ್ರೊ. ಪದ್ಮನಾಭ ಅವರು ಆಪ್’ನ ಆಶಯವನ್ನು ವಿಶದಪಡಿಸಿದರು. ಅಕ್ಟೋಬರ್ 20ಕ್ಕೆ ಆಪ್ ಲಭ್ಯವಿದ್ಯಾ ಸಮೃದ್ಧಿ ಆಪ್’ನ ನಿರ್ಮಾಣ ಈಗಾಗಲೇ ಆರಂಭವಾಗಿದ್ದು ಅಕ್ಟೋಬರ್ 20ಕ್ಕೆ ಅದು ವಿದ್ಯಾರ್ಥಿಗಳ ಉಪಯೋಗಕ್ಕೆ

ವಿದ್ಯಾ ಸಮೃದ್ಧಿ ಲೋಕಾರ್ಪಣೆ Read More »

ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಅವರ ಜನ್ಮಶತಮಾನೋತ್ಸವ ಗೌರವ ಪ್ರಶಸ್ತಿ ಪ್ರಕಟ

ಪ್ರೊ. ಕೆ. ಚಿನ್ನಪ್ಪ ಗೌಡ, ನಾ. ದಾಮೋದರ ಶೆಟ್ಟಿ ಆಯ್ಕೆ ಮಂಗಳೂರು: ಜಾನಪದ ವಿದ್ವಾಂಸ, ನಿವೃತ್ತ ಕುಲಪತಿ ಪ್ರೊ. ಕೆ. ಚಿನ್ನಪ್ಪ ಗೌಡ ಮತ್ತು ಸಾಹಿತಿ, ರಂಗಕರ್ಮಿ ನಾ. ದಾಮೋದರ ಶೆಟ್ಟಿ ಅವರು ಸಾಹಿತಿ, ಸಹಕಾರಿ ಕ್ಷೇತ್ರದ ಮುಖಂಡ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಅವರ ಜನ್ಮಶತಮಾನೋತ್ಸವ ಹಿನ್ನೆಲೆ ನೀಡುವ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಆ. 28 ರಂದು ಬಂಟ್ವಾಳ ಸಮೀಪದ ಏರ್ಯ ಬೀಡುವಿನಲ್ಲಿ ‌ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಸಾಹಿತಿ ಪ್ರೊ. ಹಂಪ ‌ನಾಗರಾಜಯ್ಯ ಕಾರ್ಯಕ್ರಮದ

ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಅವರ ಜನ್ಮಶತಮಾನೋತ್ಸವ ಗೌರವ ಪ್ರಶಸ್ತಿ ಪ್ರಕಟ Read More »

ಪರವಾನಗಿ ಭೂಮಾಪಕರ ದ.ಕ.ಜಿಲ್ಲೆ, ತಾಲೂಕು ಸಮಿತಿಗಳ ಪದಾಧಿಕಾರಿಗಳ ಪದಪ್ರದಾನ

ಪುತ್ತೂರು: ಅಖಿಲ ಕರ್ನಾಟಕ ಸರ್ಕಾರಿ ಪರವಾನಗಿ ಭೂಮಾಪಕರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಹಾಗೂ ತಾಲೂಕು ಸಮಿತಿಗಳ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ ತೆಂಕಿಲದಲ್ಲಿರುವ ದರ್ಶನ ಕಲಾ ಮಂದಿರದಲ್ಲಿ ನಡೆಯಿತು. ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧ್ಯಕ್ಷರಾಗಿ ನಾಗ ವಿ., ಉಪಾಧ್ಯಕ್ಷರಾಗಿ ಪ್ರಶಾಂತ್ ಕೆ ಪೂಜಾರಿ, ಕಾರ್ಯದರ್ಶಿಯಾಗಿ ಬಸವಲಿಂಗೇಗೌಡ ಹೆಚ್.ಜೆ., ಖಜಾಂಜಿಯಾಗಿ ಮಣಿಪ್ರಸಾದ್ ಅವರು ಪದಪ್ರದಾನ ಸ್ವೀಕರಿಸಿದರು. ಪುತ್ತೂರು ತಾಲೂಕು ಸಮಿತಿ ಅಧ್ಯಕ್ಷರಾಗಿ ಪೂರ್ಣೇಶ್ ಡಿ.ಎಂ. ಹಾಗೂ ಕಾರ್ಯದರ್ಶಿಯಾಗಿ ಮಧು ಬಿ.ಎಂ. ಅಧಿಕಾರ ಸ್ವೀಕರಿಸಿದರು. ಬೆಳ್ತಂಗಡಿ ತಾಲೂಕು ಸಮಿತಿ

ಪರವಾನಗಿ ಭೂಮಾಪಕರ ದ.ಕ.ಜಿಲ್ಲೆ, ತಾಲೂಕು ಸಮಿತಿಗಳ ಪದಾಧಿಕಾರಿಗಳ ಪದಪ್ರದಾನ Read More »

ದಲಿತ ಸಮುದಾಯದ ಕಲಾವಿದನಿಗೆ ತೇಜೋವಧೆ ಮಾಡುವವರ ವಿರುದ್ಧ ಪ್ರತಿಭಟನೆ- ಪತ್ರಿಕಾಗೋಷ್ಟಿಯಲ್ಲಿ ಎಚ್ಚರಿಕೆ ನೀಡಿದ ದಲಿತ ಸಂಘಟನೆ.

ಪುತ್ತೂರು: ರವಿ ರಾಮಕುಂಜ ಅವರು ನಮ್ಮ ದಲಿತ ಸಮುದಾಯಕ್ಕೆ ಸೇರಿದ ಹುಡುಗನಾಗಿದ್ದು, ಆತನ ಬೆಳವಣಿಗೆಯನ್ನು ಕುಂಠಿತಗೊಳಿಸುವ ನಿಟ್ಟಿನಲ್ಲಿ ತೇಜೋವಧೆ ಮತ್ತು ಷಡ್ಯಂತ್ರ ನಡೆಯುತ್ತಿದೆ. ಇದನ್ನು ಮುಂದುವರಿಸಿದಲ್ಲಿ ತೇಜೋವಧೆ ಮಾಡುತ್ತಿರುವವರ ವಿರುದ್ಧ ದಲಿತ ಸಂಘಟನೆ ಪ್ರತಿಭಟನೆ ನಡೆಸಲಿದೆ ಎಂದು ಅಂಬೇಡ್ಕ‌ರ್ ಆಪದ್ಭಾಂಧವ ಸಂಘಟನೆಯ ಜಿಲ್ಲಾಧ್ಯಕ್ಷ ರಾಜು ಹೊಸ್ಮಠ ಹೇಳಿದ್ದಾರೆ. ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಂಗಳೂರು ಪಂಚನಾಡಿಯಲ್ಲಿ ನಡೆದ ಹಾಸ್ಯ ಪ್ರಹಸನ ಕಾರ್ಯಕ್ರಮದಲ್ಲಿ ರವಿ ರಾಮಕುಂಜ ಅವರು ಮಾಡಿದ ಪಾತ್ರದಲ್ಲಿ ಶ್ರೀ ಕೃಷ್ಣ ದೇವರಿಗೆ ಅವಮಾನ ಆಗಿದೆ ಎಂದು

ದಲಿತ ಸಮುದಾಯದ ಕಲಾವಿದನಿಗೆ ತೇಜೋವಧೆ ಮಾಡುವವರ ವಿರುದ್ಧ ಪ್ರತಿಭಟನೆ- ಪತ್ರಿಕಾಗೋಷ್ಟಿಯಲ್ಲಿ ಎಚ್ಚರಿಕೆ ನೀಡಿದ ದಲಿತ ಸಂಘಟನೆ. Read More »

ಯುವಸಮಾಜ ಧರ್ಮವನ್ನು ಸಂರಕ್ಷಿಸಬೇಕು – ಡಾ. ಬೆ.ನಾ ವಿಜಯೀಂದ್ರ ಆಚಾರ್ಯ | ಭಾರತೀಯ ಜೀವನ ದರ್ಶನ ಪ್ರವಚನ ಮಾಲಿಕೆ

ಪುತ್ತೂರು: ನಮ್ಮಲ್ಲಿರುವ ಭಾವನೆಗಳನ್ನು ಜಾಗೃತವಾಗಿಡಲು ಆಧ್ಯಾತ್ಮಿಕ ಜ್ಞಾನ ಸಹಕಾರಿ. ಕಣ್ಣು, ಕಿವಿ ಮುಂತಾದ ಪಂಚೇಂದ್ರಿಯಗಳಿಗೆ ಅದರದ್ದೇ ಆದ ಮಹತ್ವ ಇದೆ. ಅದರ ಸಮರ್ಥ ಬಳಕೆಯಿಂದ ನಾವು ಪ್ರತಿ ವಿಚಾರಗಳ ಬಗ್ಗೆ ವಿಮರ್ಶೆ ಮಾಡಿ ಮುಂದುವರಿಯಬೇಕು ಎಂದು ಮೈಸೂರು ಅಂಭ್ರಣೀ ಗುರುಕುಲದ ನಿರ್ದೇಶಕ ಡಾ. ಬೆ.ನಾ ವಿಜಯೀಂದ್ರ ಆಚಾರ್ಯ ನುಡಿದರು. ಅವರು ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ(ಸ್ವಾಯತ್ತ) ಇಲ್ಲಿನ ಸಂಸ್ಕೃತ ಸಂಘದ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ ಮತ್ತು ಸಂಸ್ಕೃತ ಸಂಘ, ವಿವೇಕಾನಂದ ಸಂಶೋಧನಾ ಕೇಂದ್ರ, ಸೌರಭ ಪ್ರಸಾರಾಂಗ

ಯುವಸಮಾಜ ಧರ್ಮವನ್ನು ಸಂರಕ್ಷಿಸಬೇಕು – ಡಾ. ಬೆ.ನಾ ವಿಜಯೀಂದ್ರ ಆಚಾರ್ಯ | ಭಾರತೀಯ ಜೀವನ ದರ್ಶನ ಪ್ರವಚನ ಮಾಲಿಕೆ Read More »

error: Content is protected !!
Scroll to Top