ಪುತ್ತೂರು

ಝೀಬ್ರಾ ಪಟ್ಟಿ ಅಳವಡಿಸುವಂತೆ ಎಬಿವಿಪಿ ಘಟಕದಿಂದ ಸಂಚಾರಿಗೆ ಠಾಣೆಗೆ ಮನವಿ

ಪುತ್ತೂರು: ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಘಟಕದ ವತಿಯಿಂದ  ಕಾಲೇಜಿನ ಎದುರುಗಡೆಯ ರಸ್ತೆಯಲ್ಲಿ ದಾಟಲು ಝೀಬ್ರಾ ಪಟ್ಟಿ ಅಳವಡಿಸುವಂತೆ ಪುತ್ತೂರು ಸಂಚಾರಿ ಠಾಣಾ ನಿರೀಕ್ಷಕರಿಗೆ ಮನವಿ ಶನಿವಾರ ನೀಡಲಾಯಿತು. ಇಲ್ಲಿ ಝೀಬ್ರಾ ಪಟ್ಟಿ ಇಲ್ಲದೆ ಸಮಸ್ಯೆ ಉಂಟಾಗಿದ್ದು ಈ ನಿಟ್ಟಿನಲ್ಲಿ ಕಾಲೇಜು ರಸ್ತೆಯ ಬದಿಯಲ್ಲಿ ವಾಹನಗಳಿಗೆ ನಿಧಾನವಾಗಿ ಚಲಿಸಲು ಫಲಕ ಹಾಕುವಂತೆ  ಮನವಿ ಮೂಲಕ ವಿನಂತಿಸಲಾಯಿತು. ಈ ಸಂದರ್ಭದಲ್ಲಿ  ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಕಾನೂನು ಕಾಲೇಜು ಘಟಕದ ಅಧ್ಯಕ್ಷ ಚೇತನ್, ವಿದ್ಯಾರ್ಥಿ […]

ಝೀಬ್ರಾ ಪಟ್ಟಿ ಅಳವಡಿಸುವಂತೆ ಎಬಿವಿಪಿ ಘಟಕದಿಂದ ಸಂಚಾರಿಗೆ ಠಾಣೆಗೆ ಮನವಿ Read More »

ಅಂಬಿಕಾ ಮಹಾವಿದ್ಯಾಲಯ ಶಿಕ್ಷಕ – ರಕ್ಷಕ ಸಂಘದ ಸಭೆ

ಪುತ್ತೂರು: ಇಂದಿನ ಯುವಜನತೆ ವಿದ್ಯಾವಂತರಾಗುತ್ತಿದ್ದಾರೆ. ಆದರೆ ಬಳಿಕ ವೃತ್ತಿಜೀವನಕ್ಕೆ ಸಂಪೂರ್ಣ ಆದ್ಯತೆ ನೀಡುತ್ತಿದ್ದು, ತಮ್ಮ ಪೋಷಕರು, ಪತ್ನಿ ಹಾಗೂ ಮಕ್ಕಳಿಗೆ ಸಮಯ ನೀಡದಷ್ಟು ಮುಂದುವರಿದಿರುವುದು ಬೇಸರದ ಸಂಗತಿ. ಶಿಕ್ಷಣ ಎಂದರೆ ಕೇವಲ ಪದವಿ ಪ್ರಮಾಣ ಪತ್ರ ಪಡೆಯುವುದು ಮಾತ್ರವಲ್ಲ, ಅದರೊಂದಿಗೆ ಸಂಸ್ಕಾರ ಪಡೆಯುವುದೂ ಅತೀ ಅವಶ್ಯಕವಾಗಿದೆ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು. ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದಲ್ಲಿ ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ

ಅಂಬಿಕಾ ಮಹಾವಿದ್ಯಾಲಯ ಶಿಕ್ಷಕ – ರಕ್ಷಕ ಸಂಘದ ಸಭೆ Read More »

ಪುತ್ತೂರು ಶ್ರೀ ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ಮಹಾಶಿವರಾತ್ರಿ | ಭಕ್ತರಿಂದ ನಡೆಯಿತು ಬಿಲ್ವಾರ್ಚನೆ ಸೇವೆ, ಭಜನಾ ಸೇವೆ

ಪುತ್ತೂರು: ಪುತ್ತೂರು ಮಹತೋಭಾರ ಮಹಾಲಿಂಗೇಶ್ವರ ದೇಗುಲದಲ್ಲಿ ಶಿವರಾತ್ರಿ ಜಾಗರಣೆಯೂ ಜಾತ್ರೆ ಸಹಿತವಾಗಿ ಪೂರ್ವಶಿಷ್ಟ ಪದ್ಧತಿಯಂತೆ ಮಹಾರುದ್ರಯಾಗ, ಶತರುದ್ರಾಭಿಷೇಕ, ಬಿಲ್ವಾರ್ಚನೆ ಸೇವೆ ನಡೆಯಿತು. ಬೆಳಗ್ಗಿನಿಂದ ದೇವಳದಲ್ಲಿ ಭಕ್ತ ಸಾಗರ ಹರಿದು ಬಂದಿತ್ತು. ಬಹುತೇಕ ಮಂದಿ ಭಕ್ತರು ದೇವಳದ ಒಳಾಂಗಣ ಮತ್ತು ಹೊರಾಂಗಣದಲ್ಲಿ ಪ್ರದಕ್ಷಿಣೆ ಹಾಕಿದರು. ದೇವಳದ ತುಳಸಿ ಕಟ್ಟೆ ಬಳಿ ಭಕ್ತರು ಶ್ರೀ ದೇವರಿಗೆ ಬಿಲ್ಚಾರ್ಚಣೆ ಸಂಕಲ್ಪ ಕೈಗೊಂಡರು. ಮಧ್ಯಾಹ್ನ ಹವನ ಅಭಿಷೇಕ ಪೂಜಾದಿಗಳು ಜರಗಿ ರಾತ್ರಿಯ ವೇಳೆಗೆ ಶ್ರೀ ದೇವರ ಉತ್ಸವದ ಬಲಿ ಹೊರಟು, ತಂತ್ರ ಸುತ್ತು

ಪುತ್ತೂರು ಶ್ರೀ ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ಮಹಾಶಿವರಾತ್ರಿ | ಭಕ್ತರಿಂದ ನಡೆಯಿತು ಬಿಲ್ವಾರ್ಚನೆ ಸೇವೆ, ಭಜನಾ ಸೇವೆ Read More »

ಮಾ.11, 12 : ವಿವೇಕಾನಂದ ಕಾಲೇಜಿನಲ್ಲಿ ‘ಭಾರತ್ @2047-ಶತಮಾನದ ದೃಷ್ಠಿ’ ರಾಷ್ಟ್ರೀಯ ವಿಚಾರಗೋಷ್ಠಿ

ಪುತ್ತೂರು: ಐಸಿಎಸ್ಎಸ್ಆರ್ ಪ್ರಾಯೋಜಕತ್ವದಲ್ಲಿ ಆರ್ ಎಸ್ ವಿ ಪಿ ಸಹಯೋಗದಲ್ಲಿ ರಾಷ್ಟ್ರೀಯ ವಿಚಾರಗೋಷ್ಠಿ ‘ಭಾರತ್ @2047-ಶತಮಾನದ ದೃಷ್ಠಿ’ ಮಾ.11 ಹಾಗೂ 12 ರಂದು ವಿವೇಕಾನಂದ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)ದಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮ ಸಂಯೋಜಕಿ ಡಾ.ವಿಜಯ ಸರಸ್ವತಿ ತಿಳಿಸಿದ್ದಾರೆ. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ವಿವೇಕಾನಂದ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಸ್ವಾಯತ್ತ ಪಡೆದ ಬಳಿಕ ಶೈಕ್ಷಣಿಕ ಕಾರ್ಯ ಚಟುವಟಿಕೆಗಳನ್ನು ವಿಸ್ತರಿಸುವುದು, ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಜ್ಞಾನ ಅನುಭವಗಳನ್ನು ರಚನಾತ್ಮಕವಾಗಿ ರಾಜ್ಯ,

ಮಾ.11, 12 : ವಿವೇಕಾನಂದ ಕಾಲೇಜಿನಲ್ಲಿ ‘ಭಾರತ್ @2047-ಶತಮಾನದ ದೃಷ್ಠಿ’ ರಾಷ್ಟ್ರೀಯ ವಿಚಾರಗೋಷ್ಠಿ Read More »

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ |ವಿಮೆನ್ ಇಂಡಿಯಾ ಮೂವ್ ಮೆಂಟ್ ನಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ.

ಪುತ್ತೂರು :ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ವಿಮೆನ್ ಇಂಡಿಯಾ ಮೂವ್ ಮೆಂಟ್ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಪುತ್ತೂರು ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ಆಚರಿಸಲಾಯಿತು. ಸುಮಾರು 90 ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ಈ ಸಂದರ್ಭದಲ್ಲಿ ವಿಮೆನ್ ಇಂಡಿಯಾ ಮೂವ್ ಮೆಂಟ್ ಪುತ್ತೂರು ವಿಧಾನ ಸಭಾ ಅಧ್ಯಕ್ಷೆ ಝಹಿದ ಸಾಗರ್, ಉಪಾಧ್ಯಕ್ಷೆ ಝರೀನ, ಕಾರ್ಯದರ್ಶಿ ಸೌದ ಮಠ, ಜೊತೆಕಾರ್ಯದರ್ಶಿ ಫಾತಿಮ ನಿರ್ಮ, ಪುತ್ತೂರು ನಗರ ಸಭಾ ಸದಸ್ಯೆ ಫಾತಿಮತ್ ಝೊಹರಾ

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ |ವಿಮೆನ್ ಇಂಡಿಯಾ ಮೂವ್ ಮೆಂಟ್ ನಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ. Read More »

ಇಂದು ಕುದ್ಮಾರು ಅನ್ಯಾಡಿ ಗ್ರಾಮದೈವ ಶ್ರೀ ಶಿರಾಡಿ ರಾಜನ್ ದೈವದ  ನೇಮೋತ್ಸವ | ಬೆಳಿಗ್ಗೆ ಕಟ್ಟತ್ತಾರು ಕಟ್ಟೆಯಲ್ಲಿ ನಡೆಯಿತು ಗಣಪತಿ ಹೋಮ

ಕುದ್ಮಾರು: ಗ್ರಾಮದೈವ ಶ್ರೀ ಶಿರಾಡಿ ರಾಜನ್ ದೈವದ ದೈವಸ್ಥಾನ ಅನ್ಯಾಡಿ-ಕುದ್ಮಾರು ಇದರ ನೇಮೋತ್ಸವದ ಅಂಗವಾಗಿ ತಂತ್ರಿ ಕೇಶವ ಭಟ್ ಕೇಕಣಾಜೆ ಅವರ ನೇತೃತ್ವದಲ್ಲಿ ಬೆಳಿಗ್ಗೆ ಗಣಪತಿ ಹೋಮ ಕುದ್ಮಾರು ದೈಪಿಲ ದ್ವಾರ ಬಳಿ ಇರುವ ಕಟ್ಟತ್ತಾರು ಕಟ್ಟೆಯಲ್ಲಿ ನಡೆಯಿತು. ನೇಮೋತ್ಸವದ ಅಂಗವಾಗಿ ಇಂದು ರಾತ್ರಿ 7.15 ಕ್ಕೆ ಗ್ರಾಮ ದೈವ ಶ್ರೀ ಶಿರಾಡಿ ರಾಜನ್ ದೈವದ ದೈವಸ್ಥಾನ ಅನ್ಯಾಡಿ ಗ್ರಾಮ ಚಾವಡಿಯಿಂದ ಶ್ರೀ ದೈವಗಳ ಭಂಡಾರ ತೆಗೆಯುವುದು, 8.30 ಕ್ಕೆ ದೈವಕ್ಕೆ ಎಣ್ಣೆ ಬೂಳ್ಯ ನೀಡುವುದು, 9

ಇಂದು ಕುದ್ಮಾರು ಅನ್ಯಾಡಿ ಗ್ರಾಮದೈವ ಶ್ರೀ ಶಿರಾಡಿ ರಾಜನ್ ದೈವದ  ನೇಮೋತ್ಸವ | ಬೆಳಿಗ್ಗೆ ಕಟ್ಟತ್ತಾರು ಕಟ್ಟೆಯಲ್ಲಿ ನಡೆಯಿತು ಗಣಪತಿ ಹೋಮ Read More »

ನಾಳೆ (ಮಾ.10): ಕೊಳ್ತಿಗೆ ಸೌಜನ್ಯ ನ್ಯಾಯಪರ ಹೋರಾಟ ಸಮಿತಿಯಿಂದ ಬೃಹತ್ ಜನಾಂದೋಲನಾ ಸಭೆ

ಪುತ್ತೂರು: ಕೊಳ್ತಿಗೆ ಸೌಜನ್ಯ ನ್ಯಾಯಪರ ಹೋರಾಟ ಸಮಿತಿ ವತಿಯಿಂದ ಬೃಹತ್ ಜನಾಂದೋಲನಾ ಸಭೆ ಮಾ.10 ಭಾನುವಾರ ಕೊಳ್ತಿಗೆ ಗ್ರಾಮದ ಮೊಗಪ್ಪೆಯಲ್ಲಿ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಭರತ್ ಕೆಮ್ಮಾರ ತಿಳಿಸಿದ್ದಾರೆ. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸೌಜನ್ಯ ಹತ್ಯೆ ನಡೆದು 12 ವರ್ಷಗಳು ಕಳೆದರೂ ಹಲವಾರು ಹೋರಾಟಗಳು ತಾಲೂಕು, ಜಿಲ್ಲೆ, ರಾಜ್ಯಮಟ್ಟಗಳಲ್ಲಿ ನಡೆದಿದೆ. ಆದರೆ ಯಾವುದೇ ಒಬ್ಬ ರಾಜಕೀಯ ನಾಯಕರು ಈ ಕುರಿತು ಈ ವರೆಗೂ ಸ್ಪಂದನೆ ನೀಡುತ್ತಿಲ್ಲ. ಈ ನಿಟ್ಟಿನಲ್ಲಿ ಸಮಿತಿ ರಚಿಸಿ ಬೃಹತ್ ಜನಾಂದೋಲನಾ

ನಾಳೆ (ಮಾ.10): ಕೊಳ್ತಿಗೆ ಸೌಜನ್ಯ ನ್ಯಾಯಪರ ಹೋರಾಟ ಸಮಿತಿಯಿಂದ ಬೃಹತ್ ಜನಾಂದೋಲನಾ ಸಭೆ Read More »

ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಕ್ರಾಸ್ ಕಂಟ್ರಿ ಸ್ಪರ್ಧೆಗೆ ಆಯ್ಕೆ

ಪುತ್ತೂರು: ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ನಾಲ್ವರು ವಿದ್ಯಾರ್ಥಿನಿಯರು ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಮಹಿಳೆಯರ ಕ್ರಾಸ್ ಕಂಟ್ರಿ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ತೃತೀಯ ವರ್ಷದ ಇಲೆಕ್ಟ್ರಾನಿಕ್ಸ್ ವಿಭಾಗದ ವಿದ್ಯಾ.ಸಿ.ಎಸ್, ಕಂಪ್ಯೂಟರ್ ಸೈನ್ಸ್ ವಿಭಾಗದ ಮಂಜುಶ್ರೀ.ಎ, ದ್ವಿತೀಯ ವರ್ಷದ ಕಂಪ್ಯೂಟರ್ ಸೈನ್ಸ್ ವಿಭಾಗದ ಜೀಕ್ಷಿತಾ.ಕೆ ಹಾಗೂ ಡಾಟಾ ಸೈನ್ಸ್ ವಿಭಾಗದ ಅಶ್ವಿನಿ ಮಹಾರಾಷ್ಟ್ರದ ನಾಂದೇಡ್ ವಿಷ್ಣುಪುರಿಯ ರಮಾನಂದ ತೀರ್ಥ ಮರಾಠವಾಡ ವಿಶ್ವವಿದ್ಯಾನಿಲಯದಲ್ಲಿ ನಡೆಯುವ ಈ ಸ್ಪರ್ಧೆಯಲ್ಲಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಲಿದ್ದಾರೆ. ಈ ಮೊದಲು

ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಕ್ರಾಸ್ ಕಂಟ್ರಿ ಸ್ಪರ್ಧೆಗೆ ಆಯ್ಕೆ Read More »

ವಿಜೃಂಭಣೆಯಿಂದ ನಡೆದ ಬೆದ್ರಾಳ ನಂದಿಕೇಶ್ವರ ಭಜನಾ ಮಂದಿರದ ವಾರ್ಷಿಕೋತ್ಸವ

ಪುತ್ತೂರು: ಬೆದ್ರಾಳ ನಂದಿಕೇಶ್ವರ ಭಜನಾ ಮಂದಿರದ ವಾರ್ಷಿಕೋತ್ಸವ ಹಾಗೂ ನೇಮೋತ್ಸವ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಬೆಳಿಗ್ಗೆ ಶ್ರೀ ಸತ್ಯನಾರಾಯಣ ಪೂಜೆ, ನಾಗದೇವರಿಗೆ ತಂಬಿಲ ಸೇವೆ ಜರಗಿ ಮಧ್ಯಾಹ್ನ ಸಾವಿರಾರು ಭಕ್ತಾದಿಗಳಿಗೆ ಅನ್ನಸಂತರ್ಪಣೆ ಜರಗಿತು. ಸಂಜೆ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಅಶೋಕ್‍ ಕುಮಾರ್ ರೈ ಮಾತನಾಡಿ, ಆಧುನಿಕ ಯುಗದಲ್ಲಿ ನಮ್ಮ ಸಂಸ್ಕೃತಿಯನ್ನು ನಾವು ಮರೆಯುತ್ತಿದ್ದೇವೆ. ಇದು ಮುಂದಿನ ದಿನಗಳಲ್ಲಿ ಗಂಡಾಂತರಕ್ಕೆ ಕಾರಣವಾಗಲಿದೆ. ಈ ನಿಟ್ಟಿನಲ್ಲಿ ಯುವ ಜನಾಂಗ ಧಾರ್ಮಿಕ ಪ್ರಜ್ಞೆಯೊಂದಿಗೆ ನಡೆದಲ್ಲಿ ಗಂಡಾಂತರಗಳಿಂದ ಪಾರಾಗಬಹುದು

ವಿಜೃಂಭಣೆಯಿಂದ ನಡೆದ ಬೆದ್ರಾಳ ನಂದಿಕೇಶ್ವರ ಭಜನಾ ಮಂದಿರದ ವಾರ್ಷಿಕೋತ್ಸವ Read More »

ಬೈಕ್ ಡಿಕ್ಕಿ : ಪಾದಾಚಾರಿ ಮಹಿಳೆ ಮೃತ್ಯು

ಪುತ್ತೂರು: ಬೈಕ್‍ ಡಿಕ್ಕಿ ಹೊಡೆದು ಪಾದಚಾರಿ ಮಹಿಳೆ ಮೃತಪಟ್ಟ ಘಟನೆ ಇಂದು ಸಂಜೆ ನಡೆದಿದೆ. ಬರೆಪ್ಪಾಡಿ ನಾರಾಯಣ ಭಟ್ ಎಂಬವರ ಪತ್ನಿ ವೈಶಾಲಿ (45) ಮೃತಪಟ್ಟವರು. ಹಾಲಿನ ಡೈರಿಗೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಬೈಕ್‍ ಡಿಕ್ಕಿಯಾಗಿದೆ ಎಂದು ತಿಳಿದು ಬಂದಿದೆ.

ಬೈಕ್ ಡಿಕ್ಕಿ : ಪಾದಾಚಾರಿ ಮಹಿಳೆ ಮೃತ್ಯು Read More »

error: Content is protected !!
Scroll to Top