ಪುತ್ತೂರು

ಪುತ್ತೂರು- ವಿಟ್ಲ ಸರಕಾರಿ ಬಸ್ ಸಂಚಾರ ರದ್ದು : ಪುನರಾರಂಭಿಸುವಂತೆ ಶಾಸಕರಿಗೆ ಮನವಿ

ಪುತ್ತೂರು: ಪುತ್ತೂರಿನಿಂದ ವಿಟ್ಲಕ್ಕೆ ಸಂಚರಿಸುತ್ತಿದ್ದ ಕೆಎಸ್ಆರ್ ಟಿಸಿ ಬಸ್ ಸಂಚಾರವನ್ನು ಕಳೆದ ನಾಲ್ಕು ತಿಂಗಳುಗಳಿಂದ ರದ್ದು ಮಾಡಲಾಗಿದ್ದು, ಬಸ್ ವ್ಯವಸ್ಥೆ ಪುನರಾರಂಭ ಮಾಡಬೇಕೆಂದು ವಿಟ್ಲ‌ ಭಾಗದ ವಕೀಲರು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರಿಗೆ ಮನವಿ ‌ಮಾಡಿದರು. ಸಂಜೆ 7 ಮತ್ತು ಬೆಳಿಗ್ಗೆ ಬಿಸಿರೋಡಿಂದ ವಿಟ್ಲ ಮಾರ್ಗವಾಗಿ ಪುತ್ತೂರಿಗೆ ಬರುತ್ತಿದ್ದ ಬಸ್ಸು ಕಳೆದ ನಾಲ್ಕು ತಿಂಗಳಿನಿಂದ ಸಂಚಾರ ನಿಲ್ಲಿಸಲಾಗಿದೆ. ಈ ಬಗ್ಗೆ ಕೆಎಸ್ ಆರ್ ಟಿಸಿ ಅಧಿಕಾರಿಗಳ ಬಳಿ ಮಾಹಿತಿ ಪಡೆದ ಶಾಸಕರು ಎರಡು ದಿನದೊಳಗೆ ವ್ಯವಸ್ಥೆ […]

ಪುತ್ತೂರು- ವಿಟ್ಲ ಸರಕಾರಿ ಬಸ್ ಸಂಚಾರ ರದ್ದು : ಪುನರಾರಂಭಿಸುವಂತೆ ಶಾಸಕರಿಗೆ ಮನವಿ Read More »

ಉಪ್ಪಿನಂಗಡಿ ಮೂಲದ ವ್ಯಕ್ತಿಯ ರಕ್ತಸಿಕ್ತ ಶವ ಪತ್ತೆ

ಬಂಟ್ವಾಳ : ಬಂಟವಾಳದ ಪ್ರತಿಷ್ಠಿತ ಮದುವೆ ಸಭಾಂಗಣದ ಅವರಣದಲ್ಲಿ ವ್ಯಕ್ತಿಯೋರ್ವನ ಮೃತದೇಹ ಪತ್ತೆಯಾಗಿದೆ. ಉಪ್ಪಿನಂಗಡಿ ವಳಾಲು ಮೂಲದ ಸಂತೋಷ್ ಎಂಬವರ ಶವ ಇದಾಗಿದ್ದು,  ತಲಪಾಡಿಯಲ್ಲಿರುವ ಬಂಟವಾಳದ ಬಂಟರ ಭವನದ ಕಂಪೌಂಡ್ ಒಳಗಡೆಯಲ್ಲಿ ರಕ್ತಸಿಕ್ತವಾಗಿ ಬಿದ್ದುಕೊಂಡಿರುವ ರೀತಿಯಲ್ಲಿ ಪತ್ತೆಯಾಗಿದೆ. ಬಂಟರ ಭವನದ ಹೊರಗಡೆಯಲ್ಲಿ ಈತನ ಸೇರಿದ ಬೈಕ್ ನಿಲ್ಲಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಾವಿಗೆ ನಿಖರವಾದ ಕಾರಣ ಗೊತ್ತಾಗಿಲ್ಲವಾದರೂ ಪೋಲೀಸ್ ಮೂಲಗಳ ಪ್ರಕಾರ ಈತ ಬೈಕ್ ನಿಲ್ಲಿಸಿ ಕಂಪೌಂಡ್ ಮೇಲೆ ಕುಳಿತು ಕೊಂಡಿರಬೇಕು. ಅ ಸಂದರ್ಭದಲ್ಲಿ ನಿಯಂತ್ರಣ ಕಳೆದು ಕೆಳಗೆ

ಉಪ್ಪಿನಂಗಡಿ ಮೂಲದ ವ್ಯಕ್ತಿಯ ರಕ್ತಸಿಕ್ತ ಶವ ಪತ್ತೆ Read More »

ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ಡಾಟಾ ಸೈನ್ಸ್ ವಿಭಾಗ ಮುಖ್ಯಸ್ಥರಾಗಿ ಪ್ರೊ.ರೂಪಾ ಜಿ.ಕೆ. ಪದ ಸ್ವೀಕಾರ

ಪುತ್ತೂರು: ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಕಂಪ್ಯೂಟರ್ ಸೈನ್ಸ್ ಎಂಡ್ ಎಂಜಿನಿಯರಿಂಗ್ (ಡಾಟಾ ಸೈನ್ಸ್) ವಿಭಾಗದ ಮುಖ್ಯಸ್ಥರಾಗಿ ಪ್ರೊ.ರೂಪಾ.ಜಿ.ಕೆ ಪದ ಸ್ವೀಕಾರ ಮಾಡಿದ್ದಾರೆ. 19 ವರ್ಷಗಳ ಅಧ್ಯಾಪನದ ಅನುಭವವನ್ನು ಹೊಂದಿರುವ ಅವರು ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಎಂಡ್ ಮೆಷಿನ್ ಲರ್ನಿಂಗ್, ನಾಚುರಲ್ ಲೇಂಗ್ವೇಜ್ ಪ್ರಾಸೆಸಿಂಗ್, ಬಿಗ್ ಡೇಟಾ ಎನಲಿಟಿಕ್ಸ್ ಮುಂತಾದ ವಿಷಯಗಳ ಬಗ್ಗೆ ಅಪಾರ ತಿಳುವಳಿಕೆಯನ್ನು ಹೊಂದಿದ್ದಾರೆ. ಪ್ರಸ್ತುತ ಸುರತ್ಕಲ್ಲಿನ ಎನ್‌ಐಟಿಕೆಯಲ್ಲಿ ನಾಚುರಲ್ ಲೇಂಗ್ವೇಜ್ ಪ್ರಾಸೆಸಿಂಗ್ ವಿಷಯದಲ್ಲಿ ಪಿಎಚ್‌ಡಿ ಮಾಡುತ್ತಿದ್ದಾರೆ. ಅವರು ಬರೆದಿರುವ 10 ಕ್ಕೂ

ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ಡಾಟಾ ಸೈನ್ಸ್ ವಿಭಾಗ ಮುಖ್ಯಸ್ಥರಾಗಿ ಪ್ರೊ.ರೂಪಾ ಜಿ.ಕೆ. ಪದ ಸ್ವೀಕಾರ Read More »

ಭೀಕ್ಷಂದೇಹಿ ಮೂಲಕ ಸಂಗ್ರಹಿಸಿದ ಧನ ಸಹಾಯ ಹಸ್ತಾಂತರ

ಪುತ್ತೂರು : ಬಾರ್ದಿಲ ಸಾಂಭಸದಾಶಿವ ದೇವಸ್ಥಾನದಲ್ಲಿ ಭವತಿ ಭೀಕ್ಷಂದೇಹಿ ಮೂಲಕ ಸಂಗ್ರಹಿಸಿದ ಧನ ಸಹಾಯವನ್ನು ಫಲಾನುಭವಿಗೆ ಹಸ್ತಾಂತರಿಸಲಾಯಿತು. ಭೀಕ್ಷಂದೇಹಿ ಮೂಲಕ ಸಂಗ್ರಹಿಸಲಾದ ಒಟ್ಟು 25,557 ಮೊತ್ತವನ್ನು ಇಂದು ಮಗುವಿನ ಹೆತ್ತವರಿಗೆ ಹಸ್ತಾಂತರ ಮಾಡಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನ ಆಡಳಿತ ಮಂಡಳಿಯ ಸದಸ್ಯರು, ಕುಪ್ಪೆಪದವು ರಾಮ್ ಸೇನಾ ವಾಯುಪುತ್ರ ಘಟಕ ಕಾರ್ಯಕರ್ತರು ಉಪಸ್ಥಿತರಿದ್ದರು. ಭವತಿ ಭೀಕ್ಷಂದೇಹಿಗೆ ಅವಕಾಶ ಮಾಡಿಕೊಟ್ಟ ಆಡಳಿತ ಮಂಡಳಿಗೆ ಹಾಗೂ ಧನ ಸಹಾಯ ನೀಡಿ ಸಹಕರಿಸಿದವರಿಗೆ ಘಟಕದ ಕಾರ್ಯಕರ್ತರು ಧನ್ಯವಾದ ಸಲ್ಲಿಸಿದ್ದಾರೆ.

ಭೀಕ್ಷಂದೇಹಿ ಮೂಲಕ ಸಂಗ್ರಹಿಸಿದ ಧನ ಸಹಾಯ ಹಸ್ತಾಂತರ Read More »

ಕಂಬಳತ್ತಡ್ಡದ 80 ಮನೆಗಳಿಗೆ ಕುಡಿಯುವ ನೀರಿನ ಕೊರತೆ l ಕೊಳವೆ ಬಾವಿ ತೆರೆಯಲು ಸ್ಥಳೀಯರಿಂದ ಆಕ್ಷೇಪl ಕಂದಾಯ ಅಧಿಕಾರಿಗಳು, ಪೊಲೀಸರ ನೇತೃತ್ವದಲ್ಲಿ ಸಮಸ್ಯೆ ಇತ್ಯರ್ಥ

ಪುತ್ತೂರು : ಸ್ಥಳೀಯರ ವಿರೋಧದ ನಡುವೆಯೂ ಕಂದಾಯ ಅಧಿಕಾರಿಗಳು ಹಾಗೂ ಪೊಲೀಸ್ ಸುಪರ್ದಿಯಲ್ಲಿ ಕೊಳವೆ ಬಾವಿ ತೋಡಿದ ಘಟನೆ ಸೋಮವಾರ ಆರ್ಯಾಪು ಗ್ರಾಮದ ಕಂಬಳತಡ್ಡದಲ್ಲಿ ನಡೆದಿದೆ.ಮಾಣಿ-ಮೈಸೂರು ಹೆದ್ದಾರಿಯಿಂದ ಒಂದು ಕಿ.ಮೀ. ಒಳರಸ್ತೆಯ ಆರ್ಯಾಪು ಗ್ರಾಮದ ಕಂಬಳತ್ತಡ್ಡ ಎಂಬಲ್ಲಿ ಒಂದು ಭಾಗದ ಸುಮಾರು 80 ಮನೆಗಳಿಗೆ ಕಳೆದ ಹಲವಾರು ಸಮಯಗಳಿಂದ ಕುಡಿಯಲು ನೀರಿಲ್ಲದೆ ತಮ್ಮ ಅಳಲನ್ನು ತೋಡಿಕೊಂಡಿದ್ದರು. ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಕೊಂಡುವಂತೆ ಅಲ್ಲಿನ ನಿವಾಸಿಗಳು ಆರ್ಯಾಪು ಗ್ರಾಮ ಪಂಚಾಯಿತಿಗೆ ಮನವಿ ಮಾಡಿದ್ದರು. ಈ ಕುರಿತು ಗ್ರಾಪಂ ಪಿಡಿಒ

ಕಂಬಳತ್ತಡ್ಡದ 80 ಮನೆಗಳಿಗೆ ಕುಡಿಯುವ ನೀರಿನ ಕೊರತೆ l ಕೊಳವೆ ಬಾವಿ ತೆರೆಯಲು ಸ್ಥಳೀಯರಿಂದ ಆಕ್ಷೇಪl ಕಂದಾಯ ಅಧಿಕಾರಿಗಳು, ಪೊಲೀಸರ ನೇತೃತ್ವದಲ್ಲಿ ಸಮಸ್ಯೆ ಇತ್ಯರ್ಥ Read More »

ಕರಾವಳಿಯಲ್ಲಿ ಬಿಸಿಗಾಳಿಯ ಎಚ್ಚರ | ಆರೆಂಜ್ ಅಲರ್ಟ್ ಘೋಷಣೆ

ಪುತ್ತೂರು : ಕರ್ನಾಟಕ ಕರಾವಳಿ ಯಲ್ಲಿ ಬಿಸಿಗಾಳಿಯ  ಎಚ್ಚರಿಕೆ ನೀಡಿದ್ದು ಭಾರತೀಯ ಹವಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಮೇ.6 ಮತ್ತು 7 ರಂದು ಹೀಟ್ ವೇವ್ ಅಪ್ಪಳಿಸಲಿದೆ ಎಂದು ಭಾರತೀಯ ಹವಮಾನ ಇಲಾಖೆ ಮಾಹಿತಿ ನೀಡಿದ್ದು 40ಡಿಗ್ರಿ ತಾಪಮಾನ ದಾಖಲಿಸಿದೆ. ಮೇ.6ರ ಮಧ್ಯಾಹ್ನ 1 ಗಂಟೆಯಿಂದ ಮೇ.7 ರ ವರೆಗೆ ಹೀಟ್ ವೇವ್ ಇರಲಿದೆ. ಕರ್ನಾಟಕದ ಕರಾವಳಿ, ಗುಜರಾತ್, ತೆಲಂಗಾಣ ಸಹಿತ ಹಲವು ಕಡೆ ಬಿಸಿ ಗಾಳಿಯ ಎಫೆಕ್ಟ್ ಇರಲಿದೆ. ಜನತೆ ಆದಷ್ಟು ಬಿಸಿ ಗಾಳಿಯ

ಕರಾವಳಿಯಲ್ಲಿ ಬಿಸಿಗಾಳಿಯ ಎಚ್ಚರ | ಆರೆಂಜ್ ಅಲರ್ಟ್ ಘೋಷಣೆ Read More »

ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ತುರ್ತು ಕುಡಿಯುವ ನೀರಿನ ವ್ಯವಸ್ಥೆಗಾಗಿ 50 ಲಕ್ಷ ಮಂಜೂರು | ಶಾಸಕ ಅಶೋಕ್ ರೈ ಮನವಿಗೆ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ

ಪುತ್ತೂರು : ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಸೇರಿದಂತೆ ದ.ಕ. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಕುಡಿಯುವ ನೀರಿನ ಅಭಾವ ಉಂಟಾಗಿದ್ದು ,ಸಾರ್ವಜನಿಕರಿಗೆ ತುರ್ತು ಕುಡಿಯುವ ನೀರಿನ ವ್ಯವಸ್ಥೆಗಾಗಿ ಸಿಎಂ ಸಿದ್ದರಾಮಯ್ಯ ತುರ್ತು ವ್ಯವಸ್ಥೆಗಾಗಿ 50 ಲಕ್ಷ ರೂ ಅನುದಾನ ಬಿಡುಗಡೆ ಮಾಡಿದ್ದಾರೆ. ಪುತ್ತೂರು ಸೇರಿದಂತೆ ಜಿಲ್ಲೆಯ ವಿವಿಧ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು ಕುಡಿಯುವ ನೀರಿಗೆ ತೊಂದರೆಯಾಗಿರುವ ಬಗ್ಗೆ ಪುತ್ತೂರು ಶಾಸಕ ಅಶೋಕ್ ರೈ ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದ್ದರು. ಶಾಸಕರ ಮನವಿಗೆ ತಕ್ಷಣ ಸ್ಪಂದಿಸಿದ ಶಾಸಕರು

ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ತುರ್ತು ಕುಡಿಯುವ ನೀರಿನ ವ್ಯವಸ್ಥೆಗಾಗಿ 50 ಲಕ್ಷ ಮಂಜೂರು | ಶಾಸಕ ಅಶೋಕ್ ರೈ ಮನವಿಗೆ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ Read More »

ಹೃದಯಾಘಾತದಿಂದ ಹೊಟೇಲ್ ಉದ್ಯಮಿ ಮೃತ್ಯು | ಬೈಕ್ ಚಲಾಯಿಸುತ್ತಿರುವಾಲೇ ನಡೆಯಿತು ಘಟನೆ

ಪುತ್ತೂರು : ಮಂಗಳೂರಿನಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಕುರಿಯ ನಿವಾಸಿ ಬಾಲಕೃಷ್ಣ ಗೌಡ (49) ಅವರು ಮೇ 3ರಂದು ಹೃದಯಾಘಾತದಿಂದ ನಿಧನರಾದರು. ಬಾಲಕೃಷ್ಣ ಗೌಡ ಅವರು ಬೈಕ್ ಓಡಿಸುತ್ತಿರುವಾಗ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಹೃದಯಾಘಾತದಿಂದ ಹೊಟೇಲ್ ಉದ್ಯಮಿ ಮೃತ್ಯು | ಬೈಕ್ ಚಲಾಯಿಸುತ್ತಿರುವಾಲೇ ನಡೆಯಿತು ಘಟನೆ Read More »

ಉಚಿತ ವಾಲಿಬಾಲ್ ತರಬೇತಿ ಶಿಬಿರಕ್ಕೆ ಚಾಲನೆ

ಪುತ್ತೂರು : ಮಿತ್ರವೃಂದ ವಾಲಿಬಾಲ್ ಅಕಾಡೆಮಿ ಮತ್ತು ರೋಟರಿ ಕ್ಲಬ್ ಬೀರಮಲೆ ಹಿಲ್ಸ್ ಹಾಗೂ ಲಿಟಲ್ ಫ್ಲವರ್ ಹೈಯರ್ ಪ್ರೈಮರಿ ಸ್ಕೂಲ್ ಜಂಟಿ ಆಶ್ರಯದಲ್ಲಿ 30 ದಿನಗಳ ಕಾಲ ನಡೆಯುವ ಉಚಿತ ಬೇಸಿಗೆ ವಾಲಿಬಾಲ್ ಶಿಬಿರಕ್ಕೆ ಲಿಟ್ಲ್‍ ಫ್ಲವರ್ ಶಾಲಾ ಆವರಣದಲ್ಲಿ ಚಾಲನೆ ನೀಡಲಾಯಿತು.ತಾಲೂಕು ಆರೋಗ್ಯ ಅಧಿಕಾರಿ ಡಾ. ದೀಪಕ್ ರೈ. ದೀಪ ಬೆಳಗಿಸಿ ಚಾಲನೆ ನೀಡಿ, 10 ವರ್ಷದಿಂದ 18 ವರ್ಷದ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಉಚಿತ ವಾಲಿಬಾಲ್ ತರಬೇತಿಯನ್ನ ನೀಡುವ ಸಂಘಟಕರ ಉದ್ದೇಶ

ಉಚಿತ ವಾಲಿಬಾಲ್ ತರಬೇತಿ ಶಿಬಿರಕ್ಕೆ ಚಾಲನೆ Read More »

ನಮ್ಮೊಳಗಿನ ಮೌಲ್ಯಗಳನ್ನು ಗುರುತಿಸಿಕೊಳ್ಳಿ | ವಿವೇಕಾನಂದ ಕಾಲೇಜಿನಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪ್ರೊ ಡಾ. ಎಂ. ಎಸ್ ಮೂಡಿತ್ತಾಯ

ಪುತ್ತೂರು : ವಿದ್ಯಾರ್ಥಿಗಳಲ್ಲಿ ವಿಪುಲವಾದ ಪ್ರತಿಭೆಗಳಿರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳದ್ದಾಗಿರುತ್ತದೆ. ಜೊತೆಗೆ ಸ್ವಾಯತ್ತ ವಿದ್ಯಾಸಂಸ್ಥೆಗಳಿಗೆ ಇಂತಹ ಅವಕಾಶಗಳು ಹೇರಳವಾಗಿರುತ್ತದೆ. ಯುವಜನತೆ ಇಂದು ಶಿಕ್ಷಣದತ್ತ ಮುಖಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಏನೇ ಅಡೆತಡೆ ಬಂದರೂ ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು ಮುಂದುವರೆಯಬೇಕು.ಆತ್ಮವಿಶ್ವಾಸ ಒಂದೇ ಯಶಸ್ಸಿನ ಗುಟ್ಟು ಹಾಗೂ ನಮ್ಮ ಜೀವನದ ಯಶಸ್ಸಿಗೆ ಕಾರಣಕರ್ತರಾದವರನ್ನು ನಾವು ಎಂದಿಗೂ ಮರೆಯಬಾರದು ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ ಡಾ. ಎಂ. ಎಸ್ ಮೂಡಿತ್ತಾಯ ಹೇಳಿದರು.ವಿವೇಕಾನಂದ ಕಲಾ, ವಿಜ್ಞಾನ

ನಮ್ಮೊಳಗಿನ ಮೌಲ್ಯಗಳನ್ನು ಗುರುತಿಸಿಕೊಳ್ಳಿ | ವಿವೇಕಾನಂದ ಕಾಲೇಜಿನಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪ್ರೊ ಡಾ. ಎಂ. ಎಸ್ ಮೂಡಿತ್ತಾಯ Read More »

error: Content is protected !!
Scroll to Top