ರಾಜಕೀಯ

ನಿಮ್ಮನ್ನು ಹಂದಿ ಮರಿ, ಕತ್ತೆ ಮರಿ ಎಂದರೆ ಒಪ್ಪಿಗೇನಾ?

ಸಿದ್ದರಾಮಯ್ಯಗೆ ಈಶ್ವರಪ್ಪ ಟಾಂಗ್‌ ಶಿವಮೊಗ್ಗ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ನಾಯಿಗೆ ಹೋಲಿಸಿರುವ ಸಿದ್ದರಾಮಯ್ಯ ಅವರು ರಾಜ್ಯ ಜನತೆಯ ಬಳಿ ಕ್ಷಮೆಯಾಚಿಸಬೇಕು ಎಂದು ಶಾಸಕ ಕೆ.ಎಸ್‌. ಈಶ್ವರಪ್ಪ ಆಗ್ರಹಿಸಿದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದವರು. ಒಬ್ಬ ಮುಖ್ಯಮಂತ್ರಿಯನ್ನು ಹೇಗೆ ಸಂಬೋಧಿಸಬೇಕೆಂಬ ಪರಿಜ್ಞಾನ ಇಲ್ಲ. ನಾಯಿಗೆ ಹೋಲಿಸುತ್ತಾರೆ. ನಮಗೂ ಹೋಲಿಕೆ ಮಾಡಲು ಬೇಕಾದಷ್ಟು ಪ್ರಾಣಿಗಳಿವೆ. ಕೇವಲ ನಾಯಿ ಅಲ್ಲ ಹಂದಿಯೂ ಇದೆ. ನಿಂದನೆ ಮಾಡಲು ನಮಗೆ ಬರುವುದಿಲ್ಲವೇ ಎಂದು ಪ್ರಶ್ನಿಸಿದ ಅವರು, ನಾವು ನಿಮ್ಮನ್ನು ನಾಯಿಮರಿ, ಕತ್ತೆ ಮರಿ, ಹಂದಿ […]

ನಿಮ್ಮನ್ನು ಹಂದಿ ಮರಿ, ಕತ್ತೆ ಮರಿ ಎಂದರೆ ಒಪ್ಪಿಗೇನಾ? Read More »

ಪುತ್ತೂರಿನಲ್ಲಿ ಮಹಿಳಾ ಮತದಾರರೇ ಅಧಿಕ | ಒಟ್ಟು 208272 ಮತದಾರರ ಪೈಕಿ 105363 ಮಹಿಳೆಯರು

ಪುತ್ತೂರು: ಇದುವರೆಗೆ ದಾಖಲಾಗಿರುವ ಪುತ್ತೂರು ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿ ಸಿದ್ಧವಾಗಿದ್ದು, 208272 ಮತದಾರರ ಹೆಸರು ಹಕ್ಕು ಚಲಾಯಿಸುವ ಕಾರ್ಯಕ್ಕೆ ಅಂತಿಮಗೊಂಡಿದೆ. ಇದರಲ್ಲಿ 105363 ಮಂದಿ ಮಹಿಳೆಯರೇ ಎನ್ನುವುದು ವಿಶೇಷ. ಪುತ್ತೂರು ತಾಲೂಕು ಕಚೇರಿಯ ಲೆಕ್ಕಾಚಾರದಂತೆ, ಇದುವರೆಗೆ 208272 ಮಂದಿ ಮತದಾರರ ಪಟ್ಟಿ ಸಿದ್ಧವಾಗಿದೆ. ಅಂದರೆ ಇದೇ ಅಂತಿಮವಲ್ಲ. ಚುನಾವಣೆ ಸಮೀಪಿಸುತ್ತಿದ್ದಂತೆ, ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಘೋಷಣೆ ಮಾಡುವ ದಿನದವರೆಗೂ ಮತದಾರರ ಪಟ್ಟಿಗೆ ಹೆಸರು ನೀಡಲು ಅವಕಾಶವಿದೆ ಎಂದು ಸಹಾಯಕ ಆಯುಕ್ತ ಗಿರೀಶ್ ನಂದನ್ ಮಾಹಿತಿ ನೀಡಿದರು.

ಪುತ್ತೂರಿನಲ್ಲಿ ಮಹಿಳಾ ಮತದಾರರೇ ಅಧಿಕ | ಒಟ್ಟು 208272 ಮತದಾರರ ಪೈಕಿ 105363 ಮಹಿಳೆಯರು Read More »

ಉಪ್ಪಿನಂಗಡಿ ಗ್ರಾಮ ಪಂಚಾಯತ್ಗೆ ಗ್ರಂಥಾಲಯ, ಮಾಹಿತಿ ಕೇಂದ್ರ ಕಟ್ಟಡಕ್ಕೆ ಶಾಸಕರಿಂದ ಶಂಕುಸ್ಥಾಪನೆ

ಪುತ್ತೂರು: ಉಪ್ಪಿನಂಗಡಿ ಗ್ರಾಮ ಪಂಚಾಯತ್ಗೆ ಗ್ರಂಥಾಲಯ ಕೊಠಡಿ, ಮಾಹಿತಿ ಕೇಂದ್ರ ಕಟ್ಟಡಕ್ಕೆ ಶಾಸಕ ಸಂಜೀವ ಮಠಂದೂರು ಅವರು ಗುರುವಾರ ಶಂಕುಸ್ಥಾಪನೆ ನೆರವೇರಿಸಿದರು. ಇದೇ ಸಂದರ್ಭ ಸಾರ್ವಜನಿಕ ಉದ್ಯಾನವನಕ್ಕೆ ಶಿಲಾನ್ಯಾಸ ನಡೆಸಲಾಯಿತು. ಬಳಿಕ ಮಾತನಾಡಿದ ಶಾಸಕರು, ಅಮೃತ ಗ್ರಾಮ ಯೋಜನೆಯಡಿ ಒಟ್ಟು 27 ಲಕ್ಷದ 25 ಸಾವಿರ ರೂ. ಮಂಜೂರಾಗಿದ್ದು, ಇದರಲ್ಲಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಕ್ಕೆ ಕಟ್ಟಡ ನಿರ್ಮಾಣ ಆಗಲಿದೆ. ಈ ಮೂಲಕ ಆಧುನಿಕತೆಗೆ ಗ್ರಂಥಾಲಯದ ಸ್ಪರ್ಶ ನೀಡುವ ಕೆಲಸ ಇಲ್ಲಿ ನಡೆಯುತ್ತಿದೆ. ಸಾಮಾಜಿಕ ಜಾಲತಾಣ, ಮೊಬೈಲ್

ಉಪ್ಪಿನಂಗಡಿ ಗ್ರಾಮ ಪಂಚಾಯತ್ಗೆ ಗ್ರಂಥಾಲಯ, ಮಾಹಿತಿ ಕೇಂದ್ರ ಕಟ್ಟಡಕ್ಕೆ ಶಾಸಕರಿಂದ ಶಂಕುಸ್ಥಾಪನೆ Read More »

ಬೆಟ್ಟಂಪಾಡಿಯಲ್ಲಿ ಬೂತ್ ವಿಜಯ ಅಭಿಯಾನ

ಪುತ್ತೂರು: ಬೆಟ್ಟಂಪಾಡಿ ಗ್ರಾಮದಲ್ಲಿ ಬೂತ್ ವಿಜಯ ಅಭಿಯಾನದ ಅಂಗವಾಗಿ ಶಂಕರ್ ಅವರ ಮನೆಯಲ್ಲಿ ಸೋಮವಾರ ಬಿಜೆಪಿ ಧ್ವಜವನ್ನು ಹಸ್ತಾಂತರಿಸಿ, ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಪುತ್ತೂರು ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಮೀನಾಕ್ಷಿ ಮಂಜುನಾಥ್, ಬಿಜೆಪಿ ಶಕ್ತಿ ಕೇಂದ್ರದ ಸಂಚಾಲಕ ಜಗನ್ನಾಥ ರೈ ಕೊಮ್ಮಂಡ, ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

ಬೆಟ್ಟಂಪಾಡಿಯಲ್ಲಿ ಬೂತ್ ವಿಜಯ ಅಭಿಯಾನ Read More »

13.90 ಲಕ್ಷ ರೂ.ನ ಪರ್ಪುಂಜ ಶಾಲಾ ನೂತನ ಕೊಠಡಿಗೆ ಶಿಲಾನ್ಯಾಸ, ಸ್ಮಾರ್ಟ್ ಕ್ಲಾಸ್, ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿದ ಶಾಸಕ ಸಂಜೀವ ಮಠಂದೂರು

ಪುತ್ತೂರು: ಶಾಸಕರ ಅನುದಾನದಿಂದ ಪರ್ಪುಂಜ ಸ.ಹಿ.ಪ್ರಾ. ಶಾಲೆಗೆ 13.90 ಲಕ್ಷ ರೂ.ನಲ್ಲಿ ಹೊಸ ಕೊಠಡಿಗೆ ಶಿಲಾನ್ಯಾಸ ಹಾಗೂ ಸ್ಮಾರ್ಟ್ ಕ್ಲಾಸ್, ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನೆಯನ್ನು ಜ. 1ರಂದು ಶಾಸಕ ಸಂಜೀವ ಮಠಂದೂರು ನೆರವೇರಿಸಿದರು. ಬಳಿಕ ಮಾತನಾಡಿದ ಶಾಸಕ ಸಂಜೀವ ಮಠಂದೂರು, ಸರಕಾರಿ ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ಯಾವುದೇ ಕೊರತೆ ಆಗಬಾರದು ಎಂಬ ನೆಲೆಯಲ್ಲಿ ಸರಕಾರ ಹಲವು ಯೋಜನೆಗಳನ್ನು ಜಾರಿ ಮಾಡಿದೆ. ಪುತ್ತೂರಿನ 111 ಶಾಲೆಗಳಿಗೆ ನೂತನ ಕೊಠಡಿ ನಿರ್ಮಾಣಕ್ಕಾಗಿ 5 ಕೋಟಿ ರೂ. ಅನುದಾನ

13.90 ಲಕ್ಷ ರೂ.ನ ಪರ್ಪುಂಜ ಶಾಲಾ ನೂತನ ಕೊಠಡಿಗೆ ಶಿಲಾನ್ಯಾಸ, ಸ್ಮಾರ್ಟ್ ಕ್ಲಾಸ್, ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿದ ಶಾಸಕ ಸಂಜೀವ ಮಠಂದೂರು Read More »

ಕುಟ್ಟಿನೋಪಿನಡ್ಕ ಶಾಲೆಯ ನೂತನ ಕಾಮಗಾರಿಗೆ ಶಿಲಾನ್ಯಾಸ, ಶುದ್ಧ ಕುಡಿಯುವ ನೀರಿನ ಘಟಕ, ಸ್ಮಾರ್ಟ್ ಕ್ಲಾಸ್ ಉದ್ಘಾಟನೆ | ಜಿಲ್ಲೆಯಲ್ಲಿ ಪುತ್ತೂರಿಗೆ ಮಾತ್ರ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಎಂದ ಶಾಸಕ ಸಂಜೀವ ಮಠಂದೂರು

ಪುತ್ತೂರು: ಕುಟ್ಟಿನೋಪಿನಡ್ಕ ಪ್ರಾಥಮಿಕ ಶಾಲಾ ತರಗತಿ ಕಟ್ಟಡಕ್ಕೆ ಮಂಜೂರಾದ 13.90 ಲಕ್ಷ ರೂ.ನ ಕಾಮಗಾರಿಗೆ ಶಿಲಾನ್ಯಾಸ ಹಾಗೂ 3.30 ಲಕ್ಷ ರೂ.ನ ಸ್ಮಾರ್ಟ್ ಕ್ಲಾಸ್, ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನೆಯನ್ನು ಶಾಸಕ ಸಂಜೀವ ಮಠಂದೂರು ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಪ್ರಾಥಮಿಕ ಶಾಲೆಗಳಿಗೆ ಉಚಿತ ಶಿಕ್ಷಣ, ಉಚಿತ ಬಿಸಿಊಟ, ಉಚಿತ ಸಮವಸ್ತ್ರ, ಪೌಸ್ಟಿಕ ಆಹಾರ, ಪ್ರತಿಭಾವಂತ ಅಧ್ಯಾಪಕರು, ನೂತನ ಶಾಲಾ ಕೊಠಡಿ, ಸ್ಮಾರ್ಟ್ ಕ್ಲಾಸ್ ವ್ಯವಸ್ಥೆಗಳನ್ನು ಒದಗಿಸಲಾಗಿದೆ. ಗ್ರಾಮೀಣ ಮಕ್ಕಳ ಭವಿಷ್ಯದ ದೃಷ್ಠಿಯಿಂದ ದ.ಕ. ಜಿಲ್ಲೆಯಲ್ಲಿ

ಕುಟ್ಟಿನೋಪಿನಡ್ಕ ಶಾಲೆಯ ನೂತನ ಕಾಮಗಾರಿಗೆ ಶಿಲಾನ್ಯಾಸ, ಶುದ್ಧ ಕುಡಿಯುವ ನೀರಿನ ಘಟಕ, ಸ್ಮಾರ್ಟ್ ಕ್ಲಾಸ್ ಉದ್ಘಾಟನೆ | ಜಿಲ್ಲೆಯಲ್ಲಿ ಪುತ್ತೂರಿಗೆ ಮಾತ್ರ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಎಂದ ಶಾಸಕ ಸಂಜೀವ ಮಠಂದೂರು Read More »

ಭಾರತ್ ಜೋಡೋ ಯಾತ್ರೆಯ ನಿರ್ಬಂಧ ಅಮಿತ್ ಶಾಗೇಕಿಲ್ಲ | ಪುತ್ತೂರು ಕಾಂಗ್ರೆಸ್ ಪ್ರಶ್ನೆ

ಪುತ್ತೂರು: ಭಾರತ್ ಜೋಡೋ ಯಾತ್ರೆಯನ್ನು ತಡೆಯುವ ಉದ್ದೇಶದಿಂದ ರಾಹುಲ್ ಗಾಂಧಿಯವರಿಗೆ ಕೇಂದ್ರ ಸರಕಾರ ಪತ್ರ ಬರೆಯುತ್ತದೆ. ಆದರೆ ಕರ್ನಾಟಕಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸುವಾಗ ಇದಾವುದೇ ನಿಯಮಾವಳಿ ಅನ್ವಯವಾಗುವುದಿಲ್ಲವೇ ಎಂದು ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಪ್ರಶ್ನಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ್ ಜೋಡೋ ಯಾತ್ರೆ ಮುಂದುವರಿಯುತ್ತಿದ್ದಂತೆ ಕೇಂದ್ರ ಸಚಿವರಾದ ಮನ್ಸೂರ್ ಮಾಂಡವಿಯಾ ಅವರು ರಾಹುಲ್ ಗಾಂಧಿ ಅವರಿಗೆ ಪತ್ರ ಬರೆಯುತ್ತಾರೆ. ನಿಮ್ಮ ಯಾತ್ರೆಯಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸಿಲ್ಲ ಎಂದು ಆರೋಪಿಸುತ್ತಾರೆ. ಅಂದರೆ ಇದು ಯಾತ್ರೆಯನ್ನು

ಭಾರತ್ ಜೋಡೋ ಯಾತ್ರೆಯ ನಿರ್ಬಂಧ ಅಮಿತ್ ಶಾಗೇಕಿಲ್ಲ | ಪುತ್ತೂರು ಕಾಂಗ್ರೆಸ್ ಪ್ರಶ್ನೆ Read More »

ಎನನ್ ಬದ್ಕಾಯ ಮಗ… | ಶಾಸಕ ಮಠಂದೂರಿಗೆ ಕೃತಜ್ಞತೆ ಸಲ್ಲಿಸಿದ್ದ ಮಹಿಳೆ | ವೈರಲ್ ಆಗಿದ್ದ ಫೊಟೋದ ಅಸಲಿ ಕಥೆ ಇಲ್ಲಿದೆ ನೋಡಿ

ಪುತ್ತೂರು: “ಎನನ್ ಬದ್ಕಾಯ ಮಗ…” ತನ್ನ ಅನಾರೋಗ್ಯದ ಸಮಯದಲ್ಲಿ ನೆರವಾದ ಶಾಸಕ ಸಂಜೀವ ಮಠಂದೂರು ಅವರಿಗೆ ಮಹಿಳೆಯೊಬ್ಬರು ಕೃತಜ್ಞತೆ ಸಲ್ಲಿಸಿದ್ದ ಭಾವುಕ ಕ್ಷಣವಿದು. ಕೆಲ ದಿನಗಳ ಹಿಂದೆ ಪುರಭವನದಲ್ಲಿ ಕಾರ್ಯಕ್ರಮವೊಂದನ್ನು ಮುಗಿಸಿ ಮಠಂದೂರು ಅವರು ಹೊರಬರುತ್ತಿದ್ದಂತೆ, ಮಹಿಳೆಯೊಬ್ಬರು ಶಾಸಕರ ಕೈಹಿಡಿದು ತನ್ನ ಒಡಲಿನ ಮಾತುಗಳನ್ನು ಹೊರಗೆಡವಿದ ಬಗೆ ಇದು. ಕಳೆದ ಕೆಲ ದಿನಗಳಿಂದ ಬೇರೆ ಬೇರೆ ಸಾಲುಗಳನ್ನು ಹೊದ್ದುಕೊಂಡು, ಶಾಸಕರ ಫೊಟೋವೊಂದು ವೈರಲ್ ಆಗಿತ್ತು. ಹೆಚ್ಚಿನ ಮಂದಿ ತಮ್ಮ ಸಂದೇಹವನ್ನು ತೋಡಿಕೊಂಡಿದ್ದರೂ ಕೂಡ. ಮಹಿಳೆಯ ಕಣ್ಣಲ್ಲಿ ಕೃತಜ್ಞತಾ

ಎನನ್ ಬದ್ಕಾಯ ಮಗ… | ಶಾಸಕ ಮಠಂದೂರಿಗೆ ಕೃತಜ್ಞತೆ ಸಲ್ಲಿಸಿದ್ದ ಮಹಿಳೆ | ವೈರಲ್ ಆಗಿದ್ದ ಫೊಟೋದ ಅಸಲಿ ಕಥೆ ಇಲ್ಲಿದೆ ನೋಡಿ Read More »

ಸರಣಿ ಆಡಿಯೋ ರಿಲೀಸ್: ಚುನಾವಣೆಗೆ ಭರ್ಜರಿ ತಯಾರಿಯೇ?

ಪುತ್ತೂರು: ಒಂದರ ಬೆನ್ನಿಗೆ ಇನ್ನೊಂದರಂತೆ ಹೊರಬರುತ್ತಿರುವ ಆಡಿಯೋ ತುಣುಕುಗಳು ಚುನಾವಣೆಗೆ ತಯಾರಿಯೇ? ಹೌದು ಎನ್ನುತ್ತಿವೆ ಬಲ್ಲಮೂಲಗಳು. ಚುನಾವಣೆ ಇನ್ನೇನು ಬಂದೇ ಬಿಟ್ಟಿತು ಎನ್ನುವಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಹೊಸ ವರಸೆಗಳು ಆರಂಭವಾಗತೊಡಗುತ್ತವೆ. ಹೇಳಿಕೆಗಳ ವಾರ್, ವೀಡಿಯೋ ರಿಲೀಸ್ ಹೀಗೆ ಅನೇಕ ರೀತಿ. ಆದರೆ ಈ ಬಾರಿ ಪುತ್ತೂರು ಕ್ಷೇತ್ರದಲ್ಲಿ ಆಡಿಯೋ ವಾರ್ ಆರಂಭವಾಗಿವೆ. ಈ ಆಡಿಯೋ ವಾರ್ ಯಾರನ್ನು ಗುರಿಯಾಗಿಸಿಕೊಂಡಿವೆ? ಉದ್ದೇಶವಾದರೂ ಏನು? ಆಗಿರುವ ಅಭಿವೃದ್ಧಿ ಕಾರ್ಯಗಳಿಗೆ ಮಸಿ ಎರಚುವ ಹುನ್ನಾರವೇ? ಹೀಗೆ ಹತ್ತು ಹಲವು ಪ್ರಶ್ನೆಗಳು

ಸರಣಿ ಆಡಿಯೋ ರಿಲೀಸ್: ಚುನಾವಣೆಗೆ ಭರ್ಜರಿ ತಯಾರಿಯೇ? Read More »

ಸಾರಡ್ಕ-ಪರಿಯಾಲ್ತಡ್ಕ: 9.75 ಕೋಟಿ ರೂ.ನ ಯೋಜನೆಗೆ ಶಂಕುಸ್ಥಾಪನೆ

ಪುತ್ತೂರು: ಪುಣಚ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾರಡ್ಕ – ಪರಿಯಾಲ್ತಾಡ್ಕ ಪ್ರದೇಶದಲ್ಲಿ 9.75 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ಸಂಜೀವ ಮಠಂದೂರು ಅವರು ಶಂಕುಸ್ಥಾಪನೆ ನೆರವೇರಿಸಿದರು. ಶಕ್ತಿ ಕೇಂದ್ರದ ಪ್ರಮುಖರಾದ ಹರೀಶ್ ಭಟ್, ಉದಯ ಬಾಸ್ಕರ, ಪುಣಚ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಕೃಷ್ಣ ಬಳಂತಿಮೊಗರು, ಕೇಪು ಪಂಚಾಯತ್ ಅಧ್ಯಕ್ಷೆ ಯಶಸ್ವಿನಿ ಶಾಸ್ತ್ರೀ, ಪುಣಚ ಮಹಾಶಕ್ತಿಕೆಂದ್ರದ ಅಧ್ಯಕ್ಷ ಹರಿಪ್ರಸಾದ್ ಯಾದವ್, ಮಹಿಷಮರ್ಧಿನಿ ದೇವಸ್ಥಾನ ಆಡಳಿತ ಮಂಡಳಿ ಪುಣಚ ಅಧ್ಯಕ್ಷ ಎಸ್.ಆರ್ ರಂಗಮೂರ್ತಿ, ವ್ಯಾಪಾರ ಪ್ರಕೋಷ್ಠದ ಸಂಚಾಲಕ

ಸಾರಡ್ಕ-ಪರಿಯಾಲ್ತಡ್ಕ: 9.75 ಕೋಟಿ ರೂ.ನ ಯೋಜನೆಗೆ ಶಂಕುಸ್ಥಾಪನೆ Read More »

error: Content is protected !!
Scroll to Top