ರಾಜಕೀಯ

ಪುತ್ತೂರು ಬಿಜೆಪಿಯಿಂದ ಚುನಾವಣಾ ಸಂಚಾಲಕ, ಸಹ ಸಂಚಾಲಕರ ನೇಮಕ

ಪುತ್ತೂರು: ಉಡುಪಿ – ದಕ್ಷಿಣ ಕನ್ನಡ ವಿಧಾನ ಪರಿಷತ್ ಸ್ಥಾನಕ್ಕೆ ನಡೆಯುವ ಉಪ ಚುನಾವಣೆ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿ ಪುತ್ತೂರು ವಿಧಾನ ಸಭಾ ಕ್ಷೇತ್ರಕ್ಕೆ ಸಂಚಾಲಕ , ಸಹ ಸಂಚಾಲಕರನ್ನು ನೇಮಕಗೊಳಿಸಿದೆ. ಪುತ್ತೂರು ವಿಧಾನ ಸಭಾ ಕ್ಷೇತ್ರದ ಚುನಾವಣಾ ಸಂಚಾಲಕರಾಗಿ ಗ್ರಾಮಾಂತರ ಮಂಡಲ ನಿಕಟಪೂರ್ವ ಪ್ರ.ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ , ಹಾಗೂ ಸಹ ಸಂಚಾಲಕರಾಗಿ ನಗರ ಮಂಡಲ ಉಪಾಧ್ಯಕ್ಷ ಸಂತೋಷ್ ಕುಮಾರ್ ಕೈಕಾರ ಅವರನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷರು ನಿಯುಕ್ತಿಗೊಳಿಸಿರುತ್ತಾರೆ. ಅಕ್ಟೋಬರ್ 21 ರಂದು […]

ಪುತ್ತೂರು ಬಿಜೆಪಿಯಿಂದ ಚುನಾವಣಾ ಸಂಚಾಲಕ, ಸಹ ಸಂಚಾಲಕರ ನೇಮಕ Read More »

ವಿಧಾನ ಪರಿಷತ್ ಉಪಚುನಾವಣೆ | ಜನಪ್ರತಿನಿಧಿಗಳ ಸಭೆ

ಮಂಗಳೂರು: ವಿಧಾನ ಪರಿಷತ್‌ ಸ್ಥಾನದ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಕಚೇರಿಯಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟ ಜನಪ್ರತಿನಿಧಿಗಳ ಸಭೆ ಇಂದು ನಡೆಯಿತು. ಸಭೆಯನ್ನು ಉದ್ಧೇಶಿಸಿ ಮಾತನಾಡಿದ ಸಂಸದ ಕ್ಯಾ. ಬ್ರಿಜೇಶ್ ಚೌಟ, ಕಿಶೋರ್ ಕುಮಾರ್ ಅವರಿಂದ ಪಕ್ಷ ಚಟುವಟಿಕೆಯಲ್ಲಿ ಪ್ರೇರಣೆ ಪಡೆದವರಲ್ಲಿ ನಾನೂ ಒಬ್ಬ ಎಂಬ ಹೆಮ್ಮೆಯಿದೆ. ವಿವಿಧ ಚುನಾವಣೆಗಳಲ್ಲಿ ಬೂತ್ ಮಟ್ಟದಿಂದ ರಾಜ್ಯ ಮಟ್ಟದ ವರೆಗೆ ಸಂಘಟನಾ ಚಟುವಟಿಕೆಯ ಅನುಭವವಿರುವ ಕಿಶೋರ್ ಕುಮಾರ್ ಅವರನ್ನು ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಬಿಜೆಪಿಯು ಪಕ್ಷ

ವಿಧಾನ ಪರಿಷತ್ ಉಪಚುನಾವಣೆ | ಜನಪ್ರತಿನಿಧಿಗಳ ಸಭೆ Read More »

ಗ್ರಾಮ ಪಂಚಾಯತ್ ಗಳ ಬಲವರ್ಧನೆಗೆ ಬಿಜೆಪಿ ನೇತೃತ್ವದ ಎನ್ ಡಿಎ ಸರಕಾರ ಕಾರಣ : ನಳಿನ್ ಕುಮಾರ್ ಕಟೀಲ್

ಮಂಗಳೂರು: ಗ್ರಾಮ ಪಂಚಾಯತ್ ಗಳ ಬಲವರ್ಧನೆಗೆ ಕೇಂದ್ರದ ಬಿಜೆಪಿಯ ನರೇಂದ್ರ ಮೋದಿಯವರ ನಾಯಕತ್ವದ ಎನ್ ಡಿಎ ಸರಕಾರ ಕಾರಣ ಎಂದು ಮಾಜಿ ಸಂಸದ ಹಾಗೂ ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ಅವರು ಶನಿವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡ ಸುದ್ದಿ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಗ್ರಾಮ ಪಂಚಾಯತ್ ಗಳಿಗೆ ಕೇಂದ್ರದಿಂದ ನೇರವಾಗಿ ಅನುದಾನ ಬಿಡುಗಡೆ, ನರೇಗಾ, ಸ್ವರ್ಣ ಗ್ರಾಮ ಯೋಜನೆ, ಪಂಚಾಯತ್ ಸದಸ್ಯರಿಗೆ ಗೌರವಧನ ಬಿಜೆಪಿ ನೇತೃತ್ವದ ಸರಕಾರದ ಕೊಡುಗೆಗಳು. ಕಳೆದ ಆರೂವರೆ ವರ್ಷ

ಗ್ರಾಮ ಪಂಚಾಯತ್ ಗಳ ಬಲವರ್ಧನೆಗೆ ಬಿಜೆಪಿ ನೇತೃತ್ವದ ಎನ್ ಡಿಎ ಸರಕಾರ ಕಾರಣ : ನಳಿನ್ ಕುಮಾರ್ ಕಟೀಲ್ Read More »

ಸರ್ವಸ್ಪರ್ಶಿ, ನಾಯಕತ್ವ ಗುಣ ಬೆಳೆಸುವಲ್ಲಿ ಸದಸ್ಯತ್ವ ಅಭಿಯಾನದ ಪಾತ್ರ ಮಹತ್ವದ್ದು : ಕ್ಯಾ.ಬ್ರಿಜೇಶ್‍ ಚೌಟ | ಎರಡನೇ ಹಂತದ ಅಭಿಯಾನದಲ್ಲಿ ದ.ಕ.ಜಿಲ್ಲೆಯಲ್ಲಿ 3.5 ಲಕ್ಷ ಸದಸ್ಯತ್ವದ ಗುರಿ

ಪುತ್ತೂರು: ಎಲ್ಲಾ ರೀತಿಯಲ್ಲೂ ಸರ್ವ ಸ್ಪರ್ಶಿಯಾಗಿ, ಕಾರ್ಯಕರ್ತರು ಬೆಳೆದು, ನಾಯಕರಾಗಿ ಬೆಳೆಯುವಲ್ಲಿ ಸದಸ್ಯತ್ವ ಅಭಿಯಾನ ಪ್ರಮುಖ ಕಾರಣವಾಗಿದ್ದು, ಜಿಲ್ಲೆ, ರಾಜ್ಯಗಳಲ್ಲಿ ಸದಸ್ಯತ್ವ ಅಭಿಯಾನ ನಡೆಯುತ್ತಿದೆ. ಸೆ.1 ರಿಂದ 30 ರ ತನಕ ಮೊದಲನೇ ಹಂತದ ಅಭಿಯಾನದಲ್ಲಿ ಸುಮಾರು 2.50 ಲಕ್ಷ ಸದಸ್ಯರು ನೊಂದಾವಣೆಗೊಂಡಿದ್ದಾರೆ ಎಂದು ದ.ಕ.ಜಿಲ್ಲಾ ಸಂಸದ ಕ್ಯಾ.ಬ್ರಿಜೇಶ್‍ ಚೌಟ ತಿಳಿಸಿದರು. ಅವರು ಶನಿವಾರ ಬಿಜೆಪಿ ಕಚೇರಿಯಲ್ಲಿ ಎರಡನೇ ಹಂತದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. 2ನೇ ಹಂತದ ಅಭಿಯಾನಕ್ಕೆ ಇಂದು ಚಾಲನೆ ನೀಡಲಾಗುತ್ತಿದ್ದು, ಸಾರ್ವಜನಿಕ

ಸರ್ವಸ್ಪರ್ಶಿ, ನಾಯಕತ್ವ ಗುಣ ಬೆಳೆಸುವಲ್ಲಿ ಸದಸ್ಯತ್ವ ಅಭಿಯಾನದ ಪಾತ್ರ ಮಹತ್ವದ್ದು : ಕ್ಯಾ.ಬ್ರಿಜೇಶ್‍ ಚೌಟ | ಎರಡನೇ ಹಂತದ ಅಭಿಯಾನದಲ್ಲಿ ದ.ಕ.ಜಿಲ್ಲೆಯಲ್ಲಿ 3.5 ಲಕ್ಷ ಸದಸ್ಯತ್ವದ ಗುರಿ Read More »

ಭ್ರಷ್ಟಾಚಾರದ ಒಂದೇ ಒಂದು ಕಪ್ಪುಚುಕ್ಕಿಯಿಲ್ಲ ಎಂದ ಮುಖ್ಯಮಂತ್ರಿ ಸಿದ್ಧರಾಮಯ್ಯರಿಗೆ ಬಿಳಿಚುಕ್ಕೆ ಹುಡುಕುವ ಪರಿಸ್ಥಿತಿ ಬಂದಿದೆ | ಪತ್ರಿಕಾಗೋಷ್ಠಿಯಲ್ಲಿ ಕ್ಯಾ.ಬ್ರಿಜೇಶ್‍ ಚೌಟ

ಪುತ್ತೂರು: ಇದುವರೆಗಿನ ನನ್ನ ಆಡಳಿತದಲ್ಲಿ ನನ್ನ ಮೇಲೆ ಒಂದೇ ಒಂದು ಭ್ರಷ್ಟಾಚಾರದ ಕಪ್ಪು ಚುಕ್ಕಿ ಇಲ್ಲಾ ಎಂದು ಬಡಾಯಿಕೊಚ್ಚಿಕೊಳ್ಳುತ್ತಿದ್ದ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಬಟ್ಟೆಯಿಡೀ ಕಪ್ಪುಚುಕ್ಕೆಯಿಂದ ಕಪ್ಪಾಗಿದ್ದು, ಬಿಳಿ ಚುಕ್ಕೆ ಹುಡುಕುವ ಪರಿಸ್ಥಿತಿ ಬಂದಿದೆ. ಇನ್ನಾದರೂ ಸಿದ್ಧರಾಮಯ್ಯ ತನ್ನ 40 ವರ್ಷದ ರಾಜಕೀಯ ಆಡಳಿತ ನೋಡಿಕೊಂಡು ನಮ್ಮ ನೆಲದ ಸಂಸ್ಕೃತಿ ಆಧಾರದಲ್ಲಿ ಗೌರವ ನೀಡಿ ರಾಜೀನಾಮೆ ನೀಡಬೇಕು ಎಂದು ದ.ಕ. ಜಿಲ್ಲಾ ಸಂಸದ ಕ್ಯಾ.ಬ್ರಿಜೇಶ್‍ ಚೌಟ ಆಗ್ರಹಿಸಿದರು. ಪುತ್ತೂರು ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ

ಭ್ರಷ್ಟಾಚಾರದ ಒಂದೇ ಒಂದು ಕಪ್ಪುಚುಕ್ಕಿಯಿಲ್ಲ ಎಂದ ಮುಖ್ಯಮಂತ್ರಿ ಸಿದ್ಧರಾಮಯ್ಯರಿಗೆ ಬಿಳಿಚುಕ್ಕೆ ಹುಡುಕುವ ಪರಿಸ್ಥಿತಿ ಬಂದಿದೆ | ಪತ್ರಿಕಾಗೋಷ್ಠಿಯಲ್ಲಿ ಕ್ಯಾ.ಬ್ರಿಜೇಶ್‍ ಚೌಟ Read More »

ರಾಜ್ಯ ಬಿಜೆಪಿ ಯುವಮೋರ್ಚಾ ಅಧ್ಯಕ್ಷ, ದೊಡ್ಡಬಳ್ಳಾಪುರ ಕ್ಷೇತ್ರದ ಶಾಸಕ ಧೀರಜ್ ಮುನಿರಾಜ್ ಅರುಣ್ ಪುತ್ತಿಲ ಮನೆಗೆ ಭೇಟಿ

ಪುತ್ತೂರು: ರಾಜ್ಯ ಬಿಜೆಪಿ ಯುವಮೋರ್ಚಾ ಅಧ್ಯಕ್ಷ,  ದೊಡ್ಡಬಳ್ಳಾಪುರ ಕ್ಷೇತ್ರದ ಶಾಸಕ ಧೀರಜ್ ಮುನಿರಾಜ್ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಮನೆಗೆ ಭೇಟಿ ನೀಡಿದರು. ಬಿಜೆಪಿ ಸದಸ್ಯತ್ವ ಅಭಿಯಾನದ ಪ್ರಯುಕ್ತ ಜಿಲ್ಲೆಗೆ ಭೇಟಿ ನೀಡಿದ ಯುವ ಮೋರ್ಚಾ ಅಧ್ಯಕ್ಷರನ್ನು ನರಿಮೊಗರು ಬಳಿ ಇರುವ ಅರುಣ್ ಪುತ್ತಿಲ ರವರ ಮನೆ ಬಳಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂದೀಪ್ ರವಿ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ,  ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ನಂದನ್ ಮಲ್ಯ, ಪುತ್ತೂರು ಮಂಡಲ

ರಾಜ್ಯ ಬಿಜೆಪಿ ಯುವಮೋರ್ಚಾ ಅಧ್ಯಕ್ಷ, ದೊಡ್ಡಬಳ್ಳಾಪುರ ಕ್ಷೇತ್ರದ ಶಾಸಕ ಧೀರಜ್ ಮುನಿರಾಜ್ ಅರುಣ್ ಪುತ್ತಿಲ ಮನೆಗೆ ಭೇಟಿ Read More »

ವಿಧಾನಪರಿಷತ್ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಬೊಟ್ಯಾಡಿ ನಾಮಪತ್ರ ಸಲ್ಲಿಕೆ

ಮಂಗಳೂರು: ವಿಧಾನಪರಿಷತ್ ಉಪಚುನಾವಣೆ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಬೊಟ್ಯಾಡಿ ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಚುನಾವಣಾಧಿಕಾರಿ, ಜಿಲ್ಲಾಧಿಕಾರಿ  ಮುಲ್ಲೈ ಮುಗಿಲನ್ ಅವರಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್, ಸಂಸದ ಬ್ರಿಜೇಶ್ ಚೌಟ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಉಪಸ್ಥಿತರಿದ್ದರು

ವಿಧಾನಪರಿಷತ್ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಬೊಟ್ಯಾಡಿ ನಾಮಪತ್ರ ಸಲ್ಲಿಕೆ Read More »

ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಗೆಲುವು ನಿಶ್ಚಿತ : ನಳಿನ್‌ ಕುಮಾರ್ ಕಟೀಲ್ ವಿಶ್ವಾಸ

ಮಂಗಳೂರು : ವಿಧಾನ ಪರಿಷತ್‌ನ ದಕ್ಷಿಣ ಕನ್ನಡ ಸ್ಥಳೀಯಾಡಳಿತ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಯುವ ನಾಯಕ ಕಿಶೋರ್ ಕುಮಾರ್ ಪುತ್ತೂರು ಸ್ಪರ್ಧಿಸಲಿದ್ದು, ಅವಿಭಜಿತ ದ.ಕ.ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಅಭೂತಪೂರ್ವ ಗೆಲುವಿಗೆ ಸಹಕರಿಸಬೇಕೆಂದು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ವಿನಂತಿಸಿದ್ದಾರೆ. ಪಕ್ಷ ಯುವಕರಿಗೆ ಆದ್ಯತೆ ನೀಡಿದ್ದು, ಆರ್‌ ಎಸ್‌ ಎಸ್ ಸ್ವಯಂಸೇವಕ ಕಿಶೋರ್ ಕುಮಾರ್ ಪುತ್ತೂರು ಅಭಾವಿಪ ನಾಯಕನಾಗಿ, ಯುವ ಮೋರ್ಚಾದ ಜಿಲ್ಲಾಧ್ಯಕ್ಷರಾಗಿ ಪಕ್ಷ ಸಂಘಟನೆಗೆ ದುಡಿದವರು. ಬಿಜೆಪಿಯ

ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಗೆಲುವು ನಿಶ್ಚಿತ : ನಳಿನ್‌ ಕುಮಾರ್ ಕಟೀಲ್ ವಿಶ್ವಾಸ Read More »

ವಿಧಾನಸಭಾ ಉಪಚುನಾವಣೆ : ಬಿಜೆಪಿಯ ಯುವ ನಾಯಕ ಕಿಶೋರ್ ಕುಮಾರ್ ಬೊಟ್ಯಾಡಿ ಹೆಸರು ಘೋಷಣೆ

ವಿಧಾನಸಭಾ ಉಪಚುನಾವಣೆಗೆ ಬಿಜೆಪಿಯಿಂದ ಯುವ ನಾಯಕ ಕಿಶೋರ್ ಕುಮಾರ್ ಬೊಟ್ಯಾಡಿ ಅವರ ಹೆಸರನ್ನು ಘೋಷಣೆ ಮಾಡಲಾಗಿದೆ. ದಕ್ಷಿಣ ಕನ್ನಡ ಸ್ಥಳೀಯಾಡಳಿತ ಸಂಸ್ಥೆಗಳ ಜನಪ್ರತಿನಿಧಿ ಸ್ಥಾನಕ್ಕೆ ಬಿಜೆಪಿಯಿಂದ ಕಿಶೋರ್ ಕುಮಾರ್ ಬೊಟ್ಯಾಡಿ ಅವರ ಹೆಸರು ಘೊಷಣೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಕಿಶೋರ್ ಕುಮಾರ್ ಅವರು ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ಬೊಟ್ಯಾಡಿ ನಿವಾಸಿಯಾಗಿದ್ದಾರೆ. ಕೋಟಾ ಅವರಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ.

ವಿಧಾನಸಭಾ ಉಪಚುನಾವಣೆ : ಬಿಜೆಪಿಯ ಯುವ ನಾಯಕ ಕಿಶೋರ್ ಕುಮಾರ್ ಬೊಟ್ಯಾಡಿ ಹೆಸರು ಘೋಷಣೆ Read More »

ಕೆದಂಬಾಡಿ ಶಕ್ತಿ ಕೇಂದ್ರದ ಬೂತ್ 186 ರ ನೂತನ ಅಧ್ಯಕ್ಷರಾಗಿ ನೇಮಿರಾಜ್‍ ರೈ, ಕಾರ್ಯದರ್ಶಿಯಾಗಿ ರಕ್ಷಿತ್ ಗೌಡ ಆಯ್ಕೆ

ಪುತ್ತೂರು: ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಕೆದಂಬಾಡಿ ಶಕ್ತಿಕೇಂದ್ರದ ಬೂತ್ ಸಂಖ್ಯೆ 186ರ ಸಭೆ ಕುಂಬ್ರ ಬಾಲಕೃಷ್ಣ ರೈ ಮನೆಯಲ್ಲಿ ನಡೆಯಿತು. 186 ಬೂತ್ ಗೆ ನೂತನ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಇತರ ಪದಾಧಿಕಾರಿಗಳನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ನೇಮಿರಾಜ್ ರೈ ಕುರಿಕ್ಕಾರ ಹಾಗೂ ಕಾರ್ಯದರ್ಶಿಯಾಗಿ ರಕ್ಷಿತ್ ಗೌಡ ಇದ್ಯಪ್ಪೆ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಬೂತ್ ನ ಮತಗಟ್ಟೆ ಏಜೆಂಟಾಗಿ ಸೀತಾರಾಮ ಗೌಡ ಇದ್ಯಪ್ಪೆ ಬಿಎಲ್ಎ—2 ಆಗಿ ಮಹೇಶ್ ಗೌಡ ಇದ್ಯಪ್ಪೆ, ಪ್ರೀತಾ

ಕೆದಂಬಾಡಿ ಶಕ್ತಿ ಕೇಂದ್ರದ ಬೂತ್ 186 ರ ನೂತನ ಅಧ್ಯಕ್ಷರಾಗಿ ನೇಮಿರಾಜ್‍ ರೈ, ಕಾರ್ಯದರ್ಶಿಯಾಗಿ ರಕ್ಷಿತ್ ಗೌಡ ಆಯ್ಕೆ Read More »

error: Content is protected !!
Scroll to Top