ರಾಜಕೀಯ

ಶಾಂತಿಗೋಡು ಗ್ರಾಮದಲ್ಲಿ ಬಿಜೆಪಿ ವತಿಯಿಂದ ಮತ ಯಾಚನೆ

ಪುತ್ತೂರು: ಭಾರತೀಯ ಜನತಾ ಪಾರ್ಟಿ ವತಿಯಿಂದ ಶಾಂತಿಗೋಡು ಗ್ರಾಮದಲ್ಲಿ ಬುಧವಾರ ಮತ ಯಾಚನೆ ಮಾಡಲಾಯಿತು. ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ನೇತೃತ್ವದಲ್ಲಿ ಶಾಂತಿಗೋಡು ಗ್ರಾಮದ ಕೈಂದಾಡಿ, ಶಾಂತಿಗೋಡು, ಕುಕ್ಯಾನ, ಕರ್ಪುತಮೂಳೆ, ಪಜಿರೋಡಿ ಮುಂತಾದ ಕಡೆಗಳಲ್ಲಿ ಮನೆ ಮನೆಗೆ ತೆರಳಿ ಮತ ಯಾಚಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಜಿಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಶಕ್ತಿಕೇಂದ್ರದ ಅಧ್ಯಕ್ಷ ಶ್ಯಾಮ್ ಭಟ್, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ವಿನೋದ್ ಕರ್ಪುತಮೂಳೆ, ಕಾರ್ಯಕರ್ತರಾದ ಶಿವಪ್ರಸಾದ್ ಕೈಂದಾಡಿ, ವಿಘ್ನೇಶ್ ಕುಕ್ಯಾನ, ಹೊನ್ನಪ್ಪ […]

ಶಾಂತಿಗೋಡು ಗ್ರಾಮದಲ್ಲಿ ಬಿಜೆಪಿ ವತಿಯಿಂದ ಮತ ಯಾಚನೆ Read More »

ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ವಕೀಲರ ಸಂಘದ ಕಚೇರಿಗೆ ಭೇಟಿ | ಮತ ಯಾಚನೆ

ಪುತ್ತೂರು: ಪುತ್ತೂರು ಕೋರ್ಟು‌ಆವರಣದಲ್ಲಿರುವ ವಕೀಲರ ಸಂಘದ ಕಚೇರಿಗೆ ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಭೇಟಿ ನೀಡಿ ಮತ ಯಾಚಿಸಿದರು. ವಕೀಲರ ಜೊತೆ ಮಾತುಕತೆ ನಡೆಸಿದ ಅಶೋಕ್ ರೈಯವರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಕೇಳಿಕೊಂಡರು. ಈ ಸಂದರ್ಭದಲ್ಲಿ ವಕೀಲರು ಆನಾಜೆಯಲ್ಲಿರುವ ನ್ಯಾಯಾಲಯ ಸಂಕೀರ್ಣದವರೆಗೆ ಸಿಟಿ ಬಸ್ ಸೌಕರ್ಯ ಕಲ್ಪಿಸಿದರೆ ಕಕ್ಷಿದಾರರಿಗೆ ಪ್ರಯೋಜನವಾಗಲಿದೆ. ಆನಾಜೆ ಕೋರ್ಟಿಗೆ ತೆರಳುವ ರಸ್ತೆಯನ್ನು ಅಗಲೀಕರಣ ಮಾಡಬೇಕು ಮತ್ತು ಸೋಲಾರ್ ಅಳವಡಿಕೆಯ ಕುರಿತು ಚರ್ಚಿಸಿದರು. ಶಾಸಕನಾಗಿ ಆಯ್ಕೆಯಾದಲ್ಲಿ ತಮ್ಮ ಬೇಡಿಕೆಗಳ ಕಡೆ ಹೆಚ್ಚು ಒತ್ತು

ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ವಕೀಲರ ಸಂಘದ ಕಚೇರಿಗೆ ಭೇಟಿ | ಮತ ಯಾಚನೆ Read More »

ಜೆಡಿಎಸ್ ಅಭ್ಯರ್ಥಿ ದಿವ್ಯಪ್ರಭಾ ಚಿಲ್ತಡ್ಕರಿಂದ ಹಲವೆಡೆ ಮತ ಯಾಚನೆ

ಪುತ್ತೂರು: ಜೆಡಿಎಸ್ ಅಭ್ಯರ್ಥಿ ದಿವ್ಯ ಪ್ರಭಾ ಚಿಲ್ತಡ್ಕ ರವರು ಇಂದು ಉಕ್ಕುಡ ಶ್ರೀ ಶಾರದಾ ಪ್ರೋಸೆಸರ್ಸ್ ಹಾಗೂ ಚಂದಳಿಕೆ ಶ್ರೀ ವೆಂಕಟೇಶ್ವರ ಪ್ರೋಸೆಸರ್ಸ್ ಗೇರು ಬೀಜ ಕಾರ್ಖಾನೆಗಳಿಗೆ ಭೇಟಿ ನೀಡಿದರು. ಭೇಟಿ ನೀಡಿದ ಅವರು ಸಿಬ್ಬಂದಿಗಳಲ್ಲಿ ಮತ ಯಾಚಿಸಿದರು. ಈ ಸಂಧರ್ಭದಲ್ಲಿ  ರಾಜ್ಯ ಜೆಡಿಎಸ್ ವಕ್ತಾರೆ ಜೋಹರ ನಿಸಾರ್ ಅಹ್ಮದ್, ಗಧಾದರ್ ಮಲಾರ್, ಜಾಫರ್ ಖಾನ್, ಪುತ್ತೂರು ತಾಲೂಕು ಜೆಡಿಎಸ್ ಅಧ್ಯಕ್ಷ ಅಶ್ರಫ್ ಕಲ್ಲೆಗ, ರಫೀಕ್ ಮನಿಯಾರ್ ಮತ್ತಿತರರು ಉಪಸ್ಥಿತರಿದ್ದರು.

ಜೆಡಿಎಸ್ ಅಭ್ಯರ್ಥಿ ದಿವ್ಯಪ್ರಭಾ ಚಿಲ್ತಡ್ಕರಿಂದ ಹಲವೆಡೆ ಮತ ಯಾಚನೆ Read More »

ಕುಚ್ಚಲಕ್ಕಿ ಬೇಡಿಕೆ ಕಾಂಗ್ರೆಸ್ ನಿಂದ ಈಡೇರಲಿದೆ : ಅಶೋಕ್ ರೈ

ಪುತ್ತೂರು: ಪಡಿತರ ವಿತರಣೆಯಲ್ಲಿ ಇದುವರೆಗೆ ಬೆಳ್ತಿಗೆ ಮತ್ತು ಬಿಳಿ ಅಕ್ಕಿಯನ್ನು ನೀಡಲಾಗುತ್ತಿದೆ. ಕರಾವಳಿ ಭಾಗದ ಜನ ಕುಚ್ಚಲಕ್ಕಿ ಅನ್ನ ಊಟ ಮಾಡುವ ಕಾರಣ ಈ ಭಾಗಕ್ಕೆ ರೇಶನ್ ಮೂಲಕ ಕುಚ್ಚಲಕ್ಕಿ ನೀಡಬೇಕು ಎಂಬ ಬೇಡಿಕೆ ಇದ್ದು ಈ ಬೇಡಿಕೆಯನ್ನು ಈ ಬಾರಿ ಕಾಂಗ್ರೆಸ್ ಈಡೇರಿಸಲಿದೆ ಎಂದು ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಭರವಸೆ ನೀಡಿದ್ದಾರೆ. ವಿಟ್ಲ ಕಂಬಳಬೆಟ್ಟುವಿನಲ್ಲಿ ರಾತ್ರಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕರಾವಳಿಗೆ ಕುಚ್ಚಲಕ್ಕಿ ನೀಡುವುದಾಗಿ ಕಳೆದ ಒಂದು ವರ್ಷದಿಂದ ಬಿಜೆಪಿ

ಕುಚ್ಚಲಕ್ಕಿ ಬೇಡಿಕೆ ಕಾಂಗ್ರೆಸ್ ನಿಂದ ಈಡೇರಲಿದೆ : ಅಶೋಕ್ ರೈ Read More »

ಗಿಡದಲ್ಲಿ ನೇತು ಹಾಕಿದ್ದ 1 ಕೋಟಿ ರೂ. ವಶ | ಅಶೋಕ್ ರೈ ಸಹೋದರನ ಮನೆಗೆ ಐಟಿ ದಾಳಿ!?

ಪುತ್ತೂರು: ಮೈಸೂರಿನಲ್ಲಿ ಕೆ.ಸುಬ್ರಹ್ಮಣ್ಯ ರೈ ಎಂಬುವವರ ಮನೆಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಗಿಡಕ್ಕೆ ನೇತು ಹಾಕಿದ್ದ 1 ಕೋಟಿ ರೂ.ವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಪುತ್ತೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಉದ್ಯಮಿ ಅಶೋಕ್ ಕುಮಾರ್ ರೈ ಅವರ ಸಹೋದರ ಕೆ. ಸುಬ್ರಹ್ಮಣ್ಯ ರೈ ಎಂದು ಹೇಳಲಾಗಿದೆ. ಖಚಿತ ಮಾಹಿತಿ ಮೇರೆಗೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಹಣವನ್ನು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗಿಡದಲ್ಲಿ ನೇತು ಹಾಕಿದ್ದ 1 ಕೋಟಿ ರೂ. ವಶ | ಅಶೋಕ್ ರೈ ಸಹೋದರನ ಮನೆಗೆ ಐಟಿ ದಾಳಿ!? Read More »

ತಾಕತ್ತಿದ್ದರೆ ಕಾಂಗ್ರೆಸ್ ಬಜರಂಗದಳ ಕಾರ್ಯಕರ್ತರ ಮೈ ಮುಟ್ಟಿನೋಡಲಿ  : ಆಶಾ ತಿಮ್ಮಪ್ಪ

ಪುತ್ತೂರು : ಹಿಂದೂ ಹೆಣ್ಣು ಮಕ್ಕಳ, ಮಹಿಳೆಯರ ರಕ್ಷಣೆ ಜತೆಗೆ ಯಾವುದೇ ಒಂದು ಕೆಲಸವನ್ನು ಒಂದು ನಿರ್ಧಾರ ಇಟ್ಟುಕೊಂಡು ಮಾಡುವ ಬಜರಂಗದಳವನ್ನು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ನಿಷೇಧ ಮಾಡುತ್ತೇವೆ ಎಂದು ಹೇಳಿದ್ದು, ತಾಕತ್ತಿದ್ದರೆ ಕಾಂಗ್ರೆಸ್ ಬಜರಂಗದಳ ಕಾರ್ಯಕರ್ತರ ಮೈಮುಟ್ಟಿ ನೋಡಲಿ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗುಡುಗಿದ್ದಾರೆ. ಬಜರಂಗದಳ, ವಿಹಿಂಪ, ಹಿಂಜಾವೇ ಇವೆಲ್ಲ ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡುತ್ತಿದ್ದು, ಹಿಂದೂಗಳ ರಕ್ಷಣ ಮಾಡುವ ಇಂತಹಾ ಸಂಘಟನೆಗಳನ್ನು ಕಾಂಗ್ರೆಸ್ ನಿಷೇಧ ವಿಚಾರ ಎತ್ತಿರುವುದು

ತಾಕತ್ತಿದ್ದರೆ ಕಾಂಗ್ರೆಸ್ ಬಜರಂಗದಳ ಕಾರ್ಯಕರ್ತರ ಮೈ ಮುಟ್ಟಿನೋಡಲಿ  : ಆಶಾ ತಿಮ್ಮಪ್ಪ Read More »

ಬಜರಂಗದಳ ನಿಷೇಧದ ಕಾಂಗ್ರೆಸ್ ಪ್ರಣಾಳಿಕೆ ಜೇನುಗೂಡಿಗೆ ಕಲ್ಲೆಸೆದಂತೆ | ಬಜರಂಗದಳ ದಕ್ಷಿಣ ಪ್ರಾಂತ ಸಹಸಂಯೋಜ ಮುರಳೀಕೃಷ್ಣ ಹಸಂತಡ್ಕ ಪತ್ರಿಕಾಗೋಷ್ಠಿ

ಪುತ್ತೂರು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅತ್ಯಂತ ಕೆಟ್ಟ ಪರಿಸ್ಥಿತಿ ಉಂಟಾಗಿದ್ದು, ಹತಾಶ ಮನೋಸ್ಥಿತಿಯಿಂದ ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡುವ ಮೂಲಕ ಜೇನು ಗೂಡಿಗೆ ಕಲ್ಲು ಎಸೆಯುವ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ಬಜರಂಗದಳ ದಕ್ಷಿಣ ಪ್ರಾಂತ ಸಹಸಂಯೋಜಕ ಮುರಳೀಕೃಷ್ಣ ಹಸಂತಡ್ಕ ಹೇಳಿದ್ದಾರೆ. ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಮ ಮಂದಿರ ಹೋರಾಟದಿಂದ ಹುಟ್ಟಿಕೊಂಡಿರುವ ಬಜರಂಗದಳವನ್ನು ಕೆರಳಿಸುವ ಕೆಲಸಕ್ಕೆ ಕೈಹಾಕಿದ್ದು, ಕೋವಿಡ್ ಸಂದರ್ಭದಲ್ಲಿ ಬಜರಂಗದಳದ ಕಾರ್ಯಕರ್ತರು ತಮ್ಮ ಮನೆ ಮಠಗಳನ್ನು ಬಿಟ್ಟು ಯಾವುದೇ ಫಲಾಪೇಕ್ಷೆಯಿಲ್ಲದೆ ಜನರ ಆರೋಗ್ಯ

ಬಜರಂಗದಳ ನಿಷೇಧದ ಕಾಂಗ್ರೆಸ್ ಪ್ರಣಾಳಿಕೆ ಜೇನುಗೂಡಿಗೆ ಕಲ್ಲೆಸೆದಂತೆ | ಬಜರಂಗದಳ ದಕ್ಷಿಣ ಪ್ರಾಂತ ಸಹಸಂಯೋಜ ಮುರಳೀಕೃಷ್ಣ ಹಸಂತಡ್ಕ ಪತ್ರಿಕಾಗೋಷ್ಠಿ Read More »

ಕಾರ್ಮಿಕ ವರ್ಗಕ್ಕೆ ದ್ರೋಹ ಬಗೆದ ಡಬಲ್ ಇಂಜಿನ್  ಸರಕಾರ : ಸುನೀಲ್ ಕುಮಾರ್ ಬಜಾಲ್

ಪುತ್ತೂರು: ಕಾರ್ಮಿಕ ವರ್ಗದ ಹಕ್ಕು ಸವಲತ್ತುಗಳನ್ನು ಕಿತ್ತು ಹಾಕಿದ್ದಲ್ಲದೆ,  ಮಾಲಕರ ಪರ ಕಾನೂನು ತಿದ್ದುಪಡಿ ಮಾಡಿ ತ್ಯಾಗ ಬಲಿದಾನಗಳಿಂದ ಪಡೆದ ಹಕ್ಕಾದ 8 ಗಂಟೆ ಕೆಲಸವನ್ನು 12 ಗಂಟೆ ಕೆಲಸಕ್ಕೆ ಏರಿಸಿ ಡಬಲ್ ಇಂಜಿನ್ ಸರಕಾರ ಕಾರ್ಮಿಕ ವರ್ಗಕ್ಕೆ ದ್ರೋಹ ಎಸಗಿದೆ ಎಂದು ಸಿಐಟಿಯು ದ.ಕ. ಜಿಲ್ಲಾ ಸಮಿತಿ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಹೇಳಿದರು. ಅವರು ಮಂಗಳವಾರ ಸಿಐಟಿಯು ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ ಪುತ್ತೂರು ಮಾಜಿ ಸೈನಿಕರ ಭವನದಲ್ಲಿ ನಡೆದ ಮೇ ದಿನಾಚರಣೆಯನ್ನು ಉದ್ಘಾಟಿಸಿ

ಕಾರ್ಮಿಕ ವರ್ಗಕ್ಕೆ ದ್ರೋಹ ಬಗೆದ ಡಬಲ್ ಇಂಜಿನ್  ಸರಕಾರ : ಸುನೀಲ್ ಕುಮಾರ್ ಬಜಾಲ್ Read More »

ಪುತ್ತೂರಿನ ಅಮರನಾಥ್ ಗೌಡ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಜಂಟಿ ಸಂಚಾಲಕರಾಗಿ ನೇಮಕ

ಪುತ್ತೂರು: ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಜಂಟಿ ಸಂಚಾಲಕರಾಗಿ ಅಮರನಾಥ್ ಗೌಡ ಅವರನ್ನು ನೇಮಿಸಲಾಗಿದೆ. ಸ್ಥಳೀಯ ಜಿಲ್ಲಾ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ನೇಮಕ ಮಾಡಿದ್ದು, ಬ್ಲಾಕ್ ಅಧ್ಯಕ್ಷರು ಹಾಗೂ ಅಭ್ಯರ್ಥಿಗಳ ನಿರ್ದೇಶನದಂತೆ ಪಕ್ಷದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳುವಂತೆ ನಿರ್ದೇಶನ ಮಾಡಲಾಗಿದೆ. ಅಮರನಾಥ ಗೌಡ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು.

ಪುತ್ತೂರಿನ ಅಮರನಾಥ್ ಗೌಡ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಜಂಟಿ ಸಂಚಾಲಕರಾಗಿ ನೇಮಕ Read More »

ಸ್ವಯಂಘೋಷಿತ ಖಲಿಸ್ತಾನ ಕಮಾಂಡರ್ ಗಳಂತ ಸ್ವತಂತ್ರ ನಾಯಕರು ನಮಗೆ ಬೇಡ | ಸವಾಲುಗಳಿಗೆ ಪುತ್ತೂರಿನಲ್ಲಿ ಉತ್ತರಿಸಿದ ಡಿ.ವಿ. ಸದಾನಂದ ಗೌಡ | ಬಿಜೆಪಿ ಚುನಾವಣಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿ |  ಗೂಂಡಾ ರಾಜ್ಯಕ್ಕೆ ಬಿಜೆಪಿ ಅವಕಾಶ ನೀಡುವುದಿಲ್ಲ

ಪುತ್ತೂರು: ಪ್ರಚಾರ – ಅಪಪ್ರಚಾರಗಳಿಂದಲೇ ತಾನು ಇಲ್ಲಿಯವರೆಗೆ ಬೆಳೆದು ಬಂದಿದ್ದೇನೆ. ಪಕ್ಷ ನೀಡಿದ ಎಲ್ಲಾ ಜವಾಬ್ದಾರಿಗಳಿಂದ ಸಂತೃಪ್ತನಾಗಿದ್ದೇನೆ. ಪುತ್ತೂರು ಸೇರಿದಂತೆ ರಾಜ್ಯದಲ್ಲಿ 130 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ವಿಶ್ವಾಸ ವ್ಯಕ್ತಪಡಿಸಿದರು. ಪುತ್ತೂರು ಬಿಜೆಪಿಯ ಚುನಾವಣಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಗೂಂಡಾ ರಾಜ್ಯವಾಗಿದ್ದ ಪುತ್ತೂರಲ್ಲಿ ಶಾಂತಿ ನೆಲೆಸಲು ಬಿಜೆಪಿ ಕಾರಣ. 90ರ ದಶಕದಲ್ಲಿ ಪುತ್ತೂರು ಹೇಗಿತ್ತು. ಸಂಜೆ 6 ಗಂಟೆ ನಂತರ ಪುತ್ತೂರಲ್ಲಿ ನಡೆದಾಡಲು ಸಾಧ್ಯವಿರಲಿಲ್ಲ. ಅಡಕೆ

ಸ್ವಯಂಘೋಷಿತ ಖಲಿಸ್ತಾನ ಕಮಾಂಡರ್ ಗಳಂತ ಸ್ವತಂತ್ರ ನಾಯಕರು ನಮಗೆ ಬೇಡ | ಸವಾಲುಗಳಿಗೆ ಪುತ್ತೂರಿನಲ್ಲಿ ಉತ್ತರಿಸಿದ ಡಿ.ವಿ. ಸದಾನಂದ ಗೌಡ | ಬಿಜೆಪಿ ಚುನಾವಣಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿ |  ಗೂಂಡಾ ರಾಜ್ಯಕ್ಕೆ ಬಿಜೆಪಿ ಅವಕಾಶ ನೀಡುವುದಿಲ್ಲ Read More »

error: Content is protected !!
Scroll to Top