ರಾಜಕೀಯ

ಪುತ್ತೂರು ಪೇಟೆಯಲ್ಲಿ ಸಾಗಿದ ಕಾಂಗ್ರೆಸ್ ರೋಡ್ ಶೋ

ಪುತ್ತೂರು: ನಟಿ ರಮ್ಯಾ ಅನುಪಸ್ಥಿತಿಯಲ್ಲಿ ಕಾಂಗ್ರೆಸ್ ರೋಡ್ ಶೋ ಬೊಳುವಾರಿನಿಂದ ದರ್ಬೆ ವೃತ್ತದವರೆಗೆ ಸೋಮವಾರ ಸಂಜೆ ನಡೆಯಿತು. ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರ ರೋಡ್ ಶೋ ನಡೆದ ಸ್ವಲ್ಪ ಹೊತ್ತಿನಲ್ಲೇ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರ ರೋಡ್ ಶೋ ನಡೆಯಿತು. ಚಿತ್ರನಟಿ ರಮ್ಯಾ ಆಗಮಿಸುತ್ತಾರೆ ಎಂದು ಹೇಳಲಾಗಿತ್ತಾದರೂ, ಅವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಕಲ್ಲಡ್ಕ ಗೊಂಬೆ ಬಳಗ, ಕೋಲು ನಡಿಗೆಯ ಜೊತೆ ಕಾಂಗ್ರೆಸ್ ಕಾರ್ಯಕರ್ತರು ಹೆಜ್ಜೆ ಹಾಕಿದರೆ, ಹಿಂಬದಿಯಲ್ಲಿ ಅಶೋಕ್ ಕುಮಾರ್ […]

ಪುತ್ತೂರು ಪೇಟೆಯಲ್ಲಿ ಸಾಗಿದ ಕಾಂಗ್ರೆಸ್ ರೋಡ್ ಶೋ Read More »

ಪುತ್ತೂರು: ಕೇಸರಿ ರಂಗಿನ ನಡುವೆ ಪುತ್ತಿಲ ರೋಡ್ ಶೋ

ಪುತ್ತೂರು: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಅರುಣ್ ಕುಮಾರ್ ಪುತ್ತಿಲ ಅವರು ಸೋಮವಾರ ಸಂಜೆ ಪುತ್ತೂರು ಪೇಟೆಯಲ್ಲಿ ರೋಡ್ ಶೋ ನಡೆಸಿದರು. ಬೊಳುವಾರಿನಿಂದ ಆರಂಭಗೊಂಡ ರೋಡ್ ಶೋ ಪುತ್ತೂರು ಪೇಟೆಯಾಗಿ ಸಾಗಿ ದರ್ಬೆಯಲ್ಲಿ ಸಮಾಪನಗೊಂಡಿತು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ರೋಡ್ ಶೋಗೆ ಹೊಸ ಮೆರುಗು ತಂದರು. ಬಹಿರಂಗ ಪ್ರಚಾರದ ಕೊನೆ ದಿನವಾದ ಸೋಮವಾರ ಸಂಜೆ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳ ಜೊತೆ ರೋಡ್ ಶೋ ನಡೆಯಿತು.

ಪುತ್ತೂರು: ಕೇಸರಿ ರಂಗಿನ ನಡುವೆ ಪುತ್ತಿಲ ರೋಡ್ ಶೋ Read More »

ದ.ಕ.ಜಿಲ್ಲೆಯಲ್ಲಿ ಜೆಡಿಎಸ್ ನಿಂದ ಸಮರ್ಥ ಅಭ್ಯರ್ಥಿಗಳು ಕಣಕ್ಕೆ : ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ

ಪುತ್ತೂರು: ದ.ಕ.ಜಿಲ್ಲೆಯಲ್ಲಿ ಈ ಬಾರಿ ಜೆಡಿಎಸ್ ಪಕ್ಷದಿಂದ ಜನ ಸಾಮಾನ್ಯರಿಗೆ ಸ್ಪಂದಿಸುವ, ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಜನತೆ ನಮ್ಮನ್ನು ಗೆಲ್ಲಿಸಿದಲ್ಲಿ ಈಗಾಗಲೇ ಪ್ರಣಾಳಿಕೆಯನ್ನು ತಿಳಿಸಿದಂತೆ ನೂರಕ್ಕೆ ನೂರು ಈಡೇರಿಸಲಿದ್ದೇವೆ ಎಂದು ಜೆಡಿಎಸ್ ಜಿಲ್ಲಾ ಅಧ್ಯಕ್ಷ ಜಾಕೆ ಮಾಧವ ಗೌಡ ತಿಳಿಸಿದ್ದಾರೆ. ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜೆಡಿಎಸ್ ಪಕ್ಷ ನೇತಾರ ದೇವೇಗೌಡರು ಪ್ರಧಾನಿ, ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಸಂದರ್ಭ ದೇಶಕ್ಕೆ, ಕರ್ನಾಟಕ ರಾಜ್ಯಕ್ಕೆ ನೀಡಿದ ಕೊಡುಗೆ ಅಪಾರವಾಗಿದ್ದು, ಆದರ್ಶ ಮುಖ್ಯಮಂತ್ರಿಯಾಗಿದ್ದರು, ರೈತಾಪಿ, ದುಡಿಯುವ ವರ್ಗಕ್ಕೆ ಆಶಾವಾದಿಯಾಗಿದ್ದರು. ಎಂದು

ದ.ಕ.ಜಿಲ್ಲೆಯಲ್ಲಿ ಜೆಡಿಎಸ್ ನಿಂದ ಸಮರ್ಥ ಅಭ್ಯರ್ಥಿಗಳು ಕಣಕ್ಕೆ : ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ Read More »

ಶಾಂತಿಗೋಡು ಬೂತ್ ವತಿಯಿಂದ ಆಶಾ ತಿಮ್ಮಪ್ಪ ಪರ ಮತ ಯಾಚನೆ

ಪುತ್ತೂರು: ಶಾಂತಿಗೋಡು ಬೂತ್ ವತಿಯಿಂದ ಪುತ್ತೂರು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಪರ ಮತ ಯಾಚನೆ ನಡೆಯಿತು. ಜಿಪಂ ಮಾಜಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ನೇತೃತ್ವದಲ್ಲಿ ಮನೆ ಮನೆ ಭೇಟಿ ಮಾಡಿ ಮತ ಯಾಚಿಸಲಾಯಿತು. ಈ ಸಂದರ್ಭದಲ್ಲಿ ಶಕ್ತಿ ಕೇಂದ್ರದ ಅಧ್ಯಕ್ಷ ಶ್ಯಾಮ್ ಭಟ್, ಉಪಾಧ್ಯಕ್ಷ ದೇವರಾಜ್ ಕಲ್ಕಾರ್, ಯುವಮೋರ್ಚಾ ಕಾರ್ಯದರ್ಶಿ ವಿನೋದ್ ಕರ್ಪುತಮೂಲೆ, ಶಿವಪ್ರಸಾದ್ ಕೈಂದಾಡಿ, ಪ್ರವೀಣ್ ಶೆಟ್ಟಿ, ವಿಘ್ನೇಶ್ ಕುಕ್ಯನ ನಾರಾಯಣ ಗೌಡ ಪಾದೆ, ರಂಜಿತ್ ಕೈಂದಾಡಿ, ದೀಕ್ಷಿತ್ ಮತ್ತಿತರರು ಉಪಸ್ಥಿತರಿದ್ದರು.

ಶಾಂತಿಗೋಡು ಬೂತ್ ವತಿಯಿಂದ ಆಶಾ ತಿಮ್ಮಪ್ಪ ಪರ ಮತ ಯಾಚನೆ Read More »

ಬಿಳಿಯೂರು-ಪಾದೆಬರಿಯಲ್ಲಿ ಆಶಾ ತಿಮ್ಮಪ್ಪ ಪರ ಮತ ಯಾಚನೆ

ಪುತ್ತೂರು: ಪುತ್ತೂರು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಪರ ಬಂಟ್ವಾಳ ತಾಲೂಕಿನ ಬಿಳಿಯೂರು-ಪಾದೆಬರಿಯಲ್ಲಿ ಮತ ಯಾಚನೆ ನಡೆಯಿತು. ಶಾಸಕ ಸಂಜೀವ ಮಠಂದೂರು ಅವರ ನೇತೃತ್ವದಲ್ಲಿ ನಡೆದ ಮತ ಯಾಚನೆ ಸಭೆಯಲ್ಲಿ ಆಶಾ ತಿಮ್ಮಪ್ಪ ಅವರನ್ನು ಗೆಲ್ಲಿಸಿಕೊಂಡುವಂತೆ ವಿನಂತಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು, ಸ್ಥಳೀಯರು ಉಪಸ್ಥಿತರಿದ್ದರು.

ಬಿಳಿಯೂರು-ಪಾದೆಬರಿಯಲ್ಲಿ ಆಶಾ ತಿಮ್ಮಪ್ಪ ಪರ ಮತ ಯಾಚನೆ Read More »

ಹಿಂದೂಗಳ ರಕ್ಷಣೆಗೆ ಬಿಜೆಪಿ ಸರಕಾರ ಅವಶ್ಯ |ಭಜರಂಗದಳ ನಿಷೇಧ, ಗೋ ಹತ್ಯೆ ನಿಷೇಧ ವಾಪಾಸ್ ಮೊದಲಾದ ಕಾಂಗ್ರೆಸಿನ ಬೆದರಿಕೆಗೆ ಪ್ರತ್ಯುತ್ತರ ನೀಡಲೇಬೇಕು | ಪಾಂಗಲಾಯಿಯಲ್ಲಿ ನಡೆದ ಭಾರತ ಮಾತಾ ಪೂಜನಾದಲ್ಲಿ ಮುರಳೀಕೃಷ್ಣ ಹಸಂತ್ತಡ್ಕ

ಪುತ್ತೂರು: ಈಗಾಗಲೇ ಕಾಂಗ್ರೆಸ್ ತಿಳಿಸಿರುವಂತೆ ಅಧಿಕಾರಕ್ಕೆ ಬಂದರೆ ಬಜರಂಗದಳಕ್ಕೆ ನಿಷೇಧ ಹೇರುತ್ತಾರಂತೆ. ಗೋ ಹತ್ಯೆ ನಿಷೇಧ ಮಸೂದೆಯನ್ನು ವಾಪಾಸ್ ಮಾಡುವುದಾಗಿ ತಿಳಿಸಿದ್ದಾರೆ. ಹಾಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಾರದಂತೆ ತಡೆಯುವ ಅವಶ್ಯಕತೆ ಇದೆ. ಇದನ್ನು ತಡೆಯಲು ವ್ಯಕ್ತಿಯೋರ್ವನಿಂದ ಅಸಾಧ್ಯ. ಸಂಘಟನೆಯ ಶಕ್ತಿಯಿರುವ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲೇಬೇಕು ಎಂದು ಭಜರಂಗದಳದ ಪ್ರಾಂತ ಸಹಸಂಯೋಜಕ ಮುರಳೀಕೃಷ್ಣ ಹಸಂತ್ತಡ್ಕ ಹೇಳಿದರು. ಪಾಂಗಲಾಯಿಯ ಸಂತೋಷ್ ಬೋನಂತಾಯ ಅವರ ಮನೆಯಲ್ಲಿ ಭಾನುವಾರ ಸಂಜೆ ನಡೆದ ಭಾರತ ಮಾತಾ ಪೂಜನಾ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ

ಹಿಂದೂಗಳ ರಕ್ಷಣೆಗೆ ಬಿಜೆಪಿ ಸರಕಾರ ಅವಶ್ಯ |ಭಜರಂಗದಳ ನಿಷೇಧ, ಗೋ ಹತ್ಯೆ ನಿಷೇಧ ವಾಪಾಸ್ ಮೊದಲಾದ ಕಾಂಗ್ರೆಸಿನ ಬೆದರಿಕೆಗೆ ಪ್ರತ್ಯುತ್ತರ ನೀಡಲೇಬೇಕು | ಪಾಂಗಲಾಯಿಯಲ್ಲಿ ನಡೆದ ಭಾರತ ಮಾತಾ ಪೂಜನಾದಲ್ಲಿ ಮುರಳೀಕೃಷ್ಣ ಹಸಂತ್ತಡ್ಕ Read More »

ತಾಲೂಕು ಸ್ವೀಪ್ ಸಮಿತಿ ವತಿಯಿಂದ ಮತದಾನ ಜಾಗೃತಿ

ಪುತ್ತೂರು: ತಾಲೂಕು ಸ್ವೀಪ್ ಸಮಿತಿ ವತಿಯಿಂದ ಪುತ್ತೂರು ವಿಧಾನಸಭಾ ಕ್ಷೇತ್ರ ಮಟ್ಟದ ಮತದಾನ ಜಾಗೃತಿ ಕಾರ್ಯಕ್ರಮವನ್ನು ಭಾನುವಾರ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ  ಸಾರ್ವಜನಿಕರಿಗೆ ಆಯೋಗದಿಂದ ನೀಡಿದ ವಿವಿಧ ಮತದಾನ ಜಾಗೃತಿ ವಿಡಿಯೋ ಗಳನ್ನು ಪ್ರದರ್ಶನ ಮಾಡಲಾಯಿತು. ಮತದಾನ ಜಾಗೃತಿಗೆ ಸಂಬಂಧಿತ ಭಿತ್ತಿಪತ್ರ ಪತ್ರಗಳನ್ನು ಪ್ರದರ್ಶಿಸಿ, ಸಾರ್ವಜನಿಕರಿಗೆ ಹಂಚಿಕೆ ಮಾಡಲಾಯಿತು.  ಈ ಸಂದರ್ಭದಲ್ಲಿ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ನವೀನ್ ಕುಮಾರ್ ಭಂಡಾರಿ, ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್,  ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಜರಿದ್ದರು.

ತಾಲೂಕು ಸ್ವೀಪ್ ಸಮಿತಿ ವತಿಯಿಂದ ಮತದಾನ ಜಾಗೃತಿ Read More »

ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಗ್ರಾಮೀಣ ಪ್ರದೇಶಕ್ಕೆ ಭೇಟಿ | ಮತದಾರರ ಭೇಟಿ |  ಮತಯಾಚನೆ

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೆತ್ರದ ವಿವಿಧ ಗ್ರಾಮಗಳಿಗೆಭೇಟಿ ನೀಡಿ ಕಾಂಗ್ರೆಸ್ ಅಭ್ಯರ್ಥಿ ಶನಿವಾರ ಮತಯಾಚನೆ ನಡೆಸಿದರು. ಮುಖ್ಯವಾಗಿ ದಲಿತ ಕಾಲನಿಗಳು ಹಾಗೂ ಮನೆ ಮನೆಗೆ ಭೇಟಿ ನೀಡುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವಂತೆ ಮತದಾರರಲ್ಲಿ ಮನವಿ ಮಾಡಿದರು. ಉಪ್ಪಿನಂಗಡಿ, ನೆಕ್ಕಿಲಾಡಿ, ಹಿರೆಬಂಡಾಡಿ, ಬನ್ನೂರು, ಒಳಮೊಗ್ರು, ಅರಿಯಡ್ಕ, ಬಜತ್ತೂರು, ಸೇರಿದಂತೆ ಹಲವು ಗ್ರಾಮಗಳಿಗೆ ಭೇಟಿ ನೀಡಿದ್ದರು. ಈ ವೇಳೆ ಹಲವಾರು ಕಾರ್ಯಕರ್ತರು ಇವರ ಜೊತೆಗಿದ್ದು ಅಭ್ಯರ್ಥಿ ಪರ ಮತಯಾಚನೆ ನಡೆಸಿದರು. ಈ ಸಂಧರ್ಭದಲ್ಲಿ ಮಾತನಾಡಿದ ಅಶೋಕ್ ರೈ ಬಹುತೇಕ

ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಗ್ರಾಮೀಣ ಪ್ರದೇಶಕ್ಕೆ ಭೇಟಿ | ಮತದಾರರ ಭೇಟಿ |  ಮತಯಾಚನೆ Read More »

ಜೆಡಿಎಸ್ ಅಭ್ಯರ್ಥಿ ದಿವ್ಯಪ್ರಭಾ ಗೌಡರಿಂದ ಮತ ಯಾಚನೆ

ಪುತ್ತೂರು: ಪುತ್ತೂರು ವಿಧಾನಸಭಾ ಜೆಡಿಎಸ್ ಅಭ್ಯರ್ಥಿ ದಿವ್ಯ ಪ್ರಭಾ ಗೌಡ ಪುತ್ತೂರು ನೆಹರುನಗರದಲ್ಲಿ ಮತ ಯಾಚಿಸಿದರು. ನೆಹರೂನಗರದ ಪ್ರಖ್ಯಾತ ಮಳಿಗೆ ಮಂಗಲ್ ಸ್ಟೋರ್ಸ್ ಗೆ ಭೇಟಿ ನೀಡಿ ಮತ ಯಾಚನೆ ನಡೆಸಿದರು. ಈ ಸಂಧರ್ಭದಲ್ಲಿ  ರಾಜ್ಯ ಜೆಡಿಎಸ್ ವಕ್ತಾರೆ ಜೋಹರ ನಿಸಾರ್ ಅಹ್ಮದ್, ಗಧಾದರ್ ಮಲಾರ್, ಐ ಸಿ ಕೈಲಾಶ್ ಗೌಡ ಮತ್ತಿತರರು ಉಪಸ್ಥಿತರಿದ್ದರು.

ಜೆಡಿಎಸ್ ಅಭ್ಯರ್ಥಿ ದಿವ್ಯಪ್ರಭಾ ಗೌಡರಿಂದ ಮತ ಯಾಚನೆ Read More »

ಮೇ8 : ಉಪ್ಪಿನಂಗಡಿಯಲ್ಲಿ ಬೃಹತ್ ರೋಡ್ ಶೋ : ಪೂರ್ವಭಾವಿ ಸಭೆ

ಪುತ್ತೂರು: ಮೇ8 ರಂದು ಉಪ್ಪಿನಂಗಡಿಯಲ್ಲಿ ನಡೆಯಲಿರುವ  ಬೃಹತ್ ರೋಡ್ ಶೋ ಯಶಸ್ಸಿಗಾಗಿ ಪೂರ್ವಭಾವಿ ಸಭೆ ಉಪ್ಪಿನಂಗಡಿ ಶ್ರೀ ಶಾರದಾ ಕಲಾ ಮಂಟಪದಲ್ಲಿ ನಡೆಯಿತು. ಶಾಸಕ ಸಂಜೀವ ಮಟಂದೂರು ಅವರ  ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜಾಥಾದ ಯಶಸ್ಸಿಸ ರೂಪುರೇಷೆಗಳ ಕುರಿತು ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರು,ಶಕ್ತಿಕೇಂದ್ರ ಸಂಚಾಲಕರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಮೇ8 : ಉಪ್ಪಿನಂಗಡಿಯಲ್ಲಿ ಬೃಹತ್ ರೋಡ್ ಶೋ : ಪೂರ್ವಭಾವಿ ಸಭೆ Read More »

error: Content is protected !!
Scroll to Top