ರಾಜಕೀಯ

ಹಿರೇಬಂಡಾಡಿಯಲ್ಲಿ ಮತ ಚಲಾಯಿಸಿದ ಶಾಸಕ ಸಂಜೀವ ಮಠಂದೂರು

ಪುತ್ತೂರು: ಶಾಸಕ ಸಂಜೀವ ಮಠಂದೂರು ಅವರು ಹಿರೇಬಂಡಾಡಿ ಗ್ರಾಮ ಪಂಚಾಯತಿ ಸಮುದಾಯ ಭವನದಲ್ಲಿ ಮತ ಚಲಾಯಿಸಿದರು. ಬೆಳಿಗ್ಗೆ ಮತದಾನ ಕೇಂದ್ರಕ್ಕೆ ಆಗಮಿಸಿದ ಅವರು, ಮತ ಚಲಾಯಿಸಿ, ಬೂತ್ ಪ್ರಮುಖರ ಜೊತೆ ಮಾತುಕತೆ ನಡೆಸಿದರು. ಇದೇ ಸಂದರ್ಭ ಮತದಾರರ ಜೊತೆಯೂ ಮಾತನಾಡಿ, ಹೆಚ್ಚು ಮತದಾನ ಆಗಲು ಸಹಕಾರ ಕೇಳಿದರು.

ಹಿರೇಬಂಡಾಡಿಯಲ್ಲಿ ಮತ ಚಲಾಯಿಸಿದ ಶಾಸಕ ಸಂಜೀವ ಮಠಂದೂರು Read More »

ಮತದಾನ ಕೇಂದ್ರದ ಮುಂದೆ ಬೆಳಗ್ಗಿನಿಂದಲೇ ಮಾರುದ್ದದ ಸರತಿ ಸಾಲು

ಪುತ್ತೂರು: ಬುಧವಾರ ಬೆಳಗ್ಗೆ ಶುರುವಾದ ಮತದಾನಕ್ಕೆ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮತದಾನ ಕೇಂದ್ರದ ಮುಂದೆ ಮಾರುದ್ದದ ಸರತಿ ಸಾಲು ಕಂಡುಬಂದಿದೆ. ವಾರದ ನಡುವಿನ ದಿನದಲ್ಲಿ ಚುನಾವಣೆ ಬಂದಿರುವ ಕಾರಣದಿಂದ ಎಲ್ಲರೂ ಬೆಳಗ್ಗೆಯೆ ಮತದಾನ ಮಾಡಲು ಬಂದಿದ್ದರು. ಪ್ರತಿ ಮತದಾನ ಕೇಂದ್ರದಲ್ಲು ಸರತಿ ಸಾಲು ಮಾರುದ್ದ ಬೆಳೆದಿತ್ತು. ಬುಧವಾರ ಹೆಚ್ಚಿನ ಕಚೇರಿ, ಅಂಗಡಿ- ಮಳಿಗೆಗಳಿಗೆ ರಜೆ ಘೋಷಿಸಲಾಗಿದ್ದರೂ, ಗ್ರಾಮೀಣ ಭಾಗಗಳಿಗೆ ಇದು ಅನ್ವಯ ಆಗುವುದಿಲ್ಲ. ಆದ್ದರಿಂದ ಬೆಳಿಗ್ಗೆಯೇ ಮತದಾನ ಮಾಡಿ ತೆರಳುವ ಧಾವಂತ ಎಲ್ಲರಲ್ಲೂ ಕಾಣುತ್ತಿತ್ತು. ಮತದಾನ

ಮತದಾನ ಕೇಂದ್ರದ ಮುಂದೆ ಬೆಳಗ್ಗಿನಿಂದಲೇ ಮಾರುದ್ದದ ಸರತಿ ಸಾಲು Read More »

ಮತದಾರನ ಮನದಾಳ ಇಂದೇ ನಿರ್ಧಾರ

ಪುತ್ತೂರು: ಚುನಾವಣೆಯ ಪೂರ್ವಭಾವಿಯಾಗಿ ಟೆಸ್ಟಿಂಗ್ ಓಟ್ ಪ್ರಕ್ರಿಯೆ ನಡೆದಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಮತದಾನದ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ. ಮತದಾರ ತನ್ನ ಮನದಾಳದ ನಿರ್ಧಾರವನ್ನು ಪ್ರಕಟಿಸಲಿದ್ದಾನೆ. ಪುತ್ತೂರು ವಿಧಾನಸಭಾ ಕ್ಷೇತ್ರದ 220 ಬೂತ್ ಗಳಲ್ಲಿ ಚುನಾವಣೆ ನಡೆಯಲಿದ್ದು, ಮತಗಟ್ಟೆ ಅಧಿಕಾರಿಗಳು ಮಂಗಳವಾರ ಸಂಜೆಯೇ ಬಂದು ಸನ್ನದ್ಧರಾಗಿದ್ದಾರೆ. ಕಣದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಆಶಾ ತಿಮ್ಮಪ್ಪ, ಕಾಂಗ್ರೆಸ್ ಅಭ್ಯರ್ಥಿಯಾಗಿ ಅಶೋಕ್ ಕುಮಾರ್ ರೈ, ಜೆಡಿಎಸ್ ಅಭ್ಯರ್ಥಿಯಾಗಿ ದಿವ್ಯಪ್ರಭಾ ಚಿಲ್ತಡ್ಕ, ಪಕ್ಷೇತರ ಅಭ್ಯರ್ಥಿಯಾಗಿ ಅರುಣ್ ಕುಮಾರ್ ಪುತ್ತಿಲ, ಎಸ್.ಡಿ.ಪಿ.ಐ. ಅಭ್ಯರ್ಥಿಯಾಗಿ ಶಾಫಿ

ಮತದಾರನ ಮನದಾಳ ಇಂದೇ ನಿರ್ಧಾರ Read More »

ಪುತ್ತೂರಿನಲ್ಲಿ ಬಿಜೆಪಿಗೆ ಜಯ ನಿಶ್ಚಿತ: ವರದಿ

ಪುತ್ತೂರು: ಹೈವೋಲ್ಟೇಜ್ ಕ್ಷೇತ್ರವೆಂದೇ ಗುರುತಿಸಿಕೊಂಡಿರುವ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಜಯ ಗಳಿಸುವುದು ನಿಶ್ಚಿತ. ಹೀಗೆಂದು ಪುತ್ತೂರು ವಿಧಾನಸಭಾ ಕ್ಷೇತ್ರದ 220 ಬೂತ್ ಗಳ ವರದಿ ದೃಢಪಡಿಸಿದೆ. ಆರಂಭದಿಂದಲೂ ಭಾರೀ ಹಣಾಹಣಿಯ ಕ್ಷೇತ್ರವಾಗಿ ಪುತ್ತೂರು ಮೂಡಿಬಂದಿತ್ತು. ಪ್ರಬಲ ಪೈಪೋಟಿ, ನೇರಾ – ನೇರ ಸ್ಪರ್ಧೆ ಹೀಗೆ ಎಲ್ಲಾ ಆಯಾಮಗಳಲ್ಲೂ ರಾಜ್ಯದ ಗಮನ ಸೆಳೆದಿತ್ತು. ಈ ಎಲ್ಲಾ ಕಾರಣಗಳಿಂದಾಗಿ ಮತದಾರರು ಒಂದಷ್ಟು ಗೊಂದಲಗಳಿಗೆ ಒಳಗಾಗಿದ್ದು ಕೂಡ ನಿಜ. ಇದೀಗ ಈ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯುವ ದಿನ ಸನ್ನಿಹಿತವಾಗುತ್ತಿದೆ.

ಪುತ್ತೂರಿನಲ್ಲಿ ಬಿಜೆಪಿಗೆ ಜಯ ನಿಶ್ಚಿತ: ವರದಿ Read More »

ಪಕ್ಷಾಂತರಗೊಂಡ ಅಭ್ಯರ್ಥಿಯಿಂದ ಅಭಿವೃದ್ದಿಯನ್ನು ಹೇಗೆ ಬಯಸುತ್ತೀರಾ : ದಿವ್ಯ ಪ್ರಭಾ ಗೌಡ | ನಗರದಲ್ಲಿ ಭರ್ಜರಿ ಮತ ಪ್ರಚಾರ

ಪುತ್ತೂರು: ಇಂದು ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರದ ಕೊನೆಯ ದಿನವಾಗಿದ್ದು ಜೆಡಿಎಸ್ ಪಕ್ಷದ ಅಭ್ಯರ್ಥಿ ದಿವ್ಯ ಪ್ರಭಾ ಗೌಡ ಇಂದು ಪುತ್ತೂರು ನಗರದಲ್ಲಿ ಭರ್ಜರಿ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ದಿವ್ಯಪ್ರಭಾ ಚಿಲ್ತಡ್ಕ, ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಭರವಸೆಗಳು ಪೊಳ್ಳು ಭರವಸೆ. ಪದವೀಧರ ವಿಧ್ಯಾರ್ಥಿಗಳಿಗೆ ಉದ್ಯೋಗದ ಭರವಸೆ ನೀಡದೆ ಪಾಕೆಟ್ ಮನಿ ನೀಡಿ ಸೋಮರಿಗಳನ್ನಾಗಿ ಮಾಡಲು ಹೊರಟಿದೆ. ಬುದ್ದಿ ಕಲಿಸುತ್ತೇನೆ ಎಂದು ಪಕ್ಷಾಂತರಗೊಂಡ ಅಭ್ಯರ್ಥಿಯಿಂದ ಯಾವ ಅಭಿವೃದ್ದಿಯನ್ನು ಪುತ್ತೂರಿನ ಜನತೆ ಬಯಸಬಹುದು. ಈ ಬಾರಿ ಪುತ್ತೂರಿನ

ಪಕ್ಷಾಂತರಗೊಂಡ ಅಭ್ಯರ್ಥಿಯಿಂದ ಅಭಿವೃದ್ದಿಯನ್ನು ಹೇಗೆ ಬಯಸುತ್ತೀರಾ : ದಿವ್ಯ ಪ್ರಭಾ ಗೌಡ | ನಗರದಲ್ಲಿ ಭರ್ಜರಿ ಮತ ಪ್ರಚಾರ Read More »

ಸುಳ್ಯ ಕ್ಷೇತ್ರ ಅಭ್ಯರ್ಥಿ ಭಾಗೀರಥಿ ಮುರುಳ್ಯ ಪರ ಕಡಬ ಪೇಟೆಯಲ್ಲಿ ಮತ ಯಾಚನೆ

ಕಡಬ: ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಾಗೀರತಿ ಮುರುಳ್ಯ ಸೋಮವಾರ ಸಂಜೆ ಕಡಬ ಪೇಟೆಯಲ್ಲಿ ಬೃಹತ್ ರೋಡ್ ಶೋ ನಡೆಸಿ ಮತಯಾಚನೆ ಮಾಡಿದರು. ಕಡಬ ತಾಲೂಕು ಕಛೇರಿಯಿಂದ ಮೇಲಿನ ಪೇಟೆಯ ತನಕ ಪಾದಯಾತ್ರೆ ಮಾಡಿ ಮತಯಾಚಿಸಿದರು. ಬಳಿಕ ಕಡಬ ಬಸ್‌ನಿಲ್ದಾಣದ ಬಳಿ ನಡೆದ ಸಭೆಯಲ್ಲಿ ಮಾತನಾಡಿ, ನಿಷ್ಠಾವಂತ ಕಾರ್ಯಕರ್ತರನ್ನು ಹೊದಿರುವ ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರ ಅಚಲವಾದ ಶಕ್ತಿಯಿಂದಲೇ ಗಟ್ಟಿಯಾಗಿ ಬೆಳೆದು ನಿಂತಿದೆ, ನನ್ನಂತಹ ಒಬ್ಬ ಬೀಡಿ ಕಾರ್ಮಿಕೆ, ಕೂಲಿ ಕಾರ್ಮಿಕೆಯನ್ನು ಬೆಳೆಸಿ ನಾಯಕತ್ವ ನೀಡಿ ಇದೀಗ

ಸುಳ್ಯ ಕ್ಷೇತ್ರ ಅಭ್ಯರ್ಥಿ ಭಾಗೀರಥಿ ಮುರುಳ್ಯ ಪರ ಕಡಬ ಪೇಟೆಯಲ್ಲಿ ಮತ ಯಾಚನೆ Read More »

ಕೊನಯ‌ ದಿನ ಅಶೋಕ್ ಕುಮಾರ್ ರೈ ಬಿರುಸಿನ‌ ಪ್ರಚಾರ ಕಾರ್ಯ

ಪುತ್ತೂರು: ಚುನಾವಣಾ ಪ್ರಚಾರದ ಕೊನಯ ದಿನವಾದ ಇಂದು ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈಯವರು ಬಿರುಸಿನ‌ ಪ್ರಚಾರದಲ್ಲಿ ತೊಡಗಿಸಿಕೊಂಡರು. ಪುತ್ತೂರು ನಗರ ಹೊರ ವಲಯದ ಅಡಿಕೆ ಗಾರ್ಬಲ್ ಗಳು, ಸಣ್ಣ ಕೈಗಾರಿಕಾ ಕೇಂದ್ರ ಹಾಗೂ ಪುತ್ತೂರು ನಗರದ ವಿವಿಧ ಬಟ್ಟೆ ಮಳಿಗೆಗಳಿಗೆ ಭೇಟಿ ನೀಡಿ ಮತ ಯಾಚನೆ ಮಾಡಿದರು‌. ಅವರ ಜೊತೆ ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಪ್ರಮುಖರಾದ ಪ್ರಸನ್ನ‌ಶೆಟ್ಟಿ ಸಿಝ್ಲರ್ ಸೇರಿದಂತೆ ಹಲವು ಮಂದಿ ‌ಕಾರ್ಯಕರ್ತರು ಇದ್ದರು.

ಕೊನಯ‌ ದಿನ ಅಶೋಕ್ ಕುಮಾರ್ ರೈ ಬಿರುಸಿನ‌ ಪ್ರಚಾರ ಕಾರ್ಯ Read More »

ಮತಬೇಟೆಗೆ ಅಂತಿಮ ತಯಾರಿ | ಮಸ್ಟರಿಂಗ್ ಕೇಂದ್ರದಲ್ಲಿ ಅಧಿಕಾರಿಗಳು ರೆಡಿ

ಪುತ್ತೂರು: ಮೇ 10ರಂದು ನಡೆಯುವ ಪ್ರಜಾಪ್ರಭುತ್ವದ ಹಬ್ಬಕ್ಕೆ ಅಂತಿಮ ತಯಾರಿಗಳು ತೆಂಕಿಲ ವಿವೇಕಾನಂದ ಶಾಲೆಯಲ್ಲಿ ನಡೆಯುತ್ತಿವೆ. ವಿವೇಕಾನಂದ ಶಾಲೆಯನ್ನು ಮಸ್ಟರಿಂಗ್ ಕೇಂದ್ರವಾಗಿ ಪರಿವರ್ತಿಸಿದ್ದು, ಅಧಿಕಾರಿಗಳು ಮಸ್ಟರಿಂಗ್ ಕಾರ್ಯದಲ್ಲಿ ನಿರತರಾಗಿದ್ದಾರೆ. ಸಂಜೆ ವೇಳೆ ಪುತ್ತೂರು ವಿಧಾನಸಭಾ ಕ್ಷೇತ್ರದ 220 ಬೂತ್ ಗಳಿಗೆ ತೆರಳಲಿದ್ದಾರೆ. ನಾಳೆ ಅಂದರೆ ಮೇ 10ರಂದು ಮತಗಟ್ಟೆಗಳಲ್ಲಿ ಮತದಾನ ನಡೆಸಿಕೊಡಲಿದ್ದಾರೆ. 1 ಸಾವಿರಕ್ಕಿಂತ ಹೆಚ್ಚಿನ ಮತದಾರರಿರುವ ಬೂತ್ ಗಳಲ್ಲಿ ಹೆಚ್ಚುವರಿ ಅಧಿಕಾರಿಗಳನ್ನು ನೇಮಿಸಲಾಗಿದೆ. ಮಸ್ಟರಿಂಗ್ ಕೇಂದ್ರದಲ್ಲಿ ಪೊಲೀಸರು ಬೀಡು ಬಿಟ್ಟಿದ್ದು, ಬಂದೋಬಸ್ತಿನ ವ್ಯವಸ್ಥೆಗಳಲ್ಲಿ ನಿರತರಾಗಿದ್ದಾರೆ.

ಮತಬೇಟೆಗೆ ಅಂತಿಮ ತಯಾರಿ | ಮಸ್ಟರಿಂಗ್ ಕೇಂದ್ರದಲ್ಲಿ ಅಧಿಕಾರಿಗಳು ರೆಡಿ Read More »

ಬನ್ನೂರಿನಲ್ಲಿ ಬಿಜೆಪಿ ಅಭ್ಯರ್ಥಿ ಆಶಾ ಪರ ಮತ ಯಾಚನೆ

ಪುತ್ತೂರು: ಬನ್ನೂರು ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಪರ ಮತ ಯಾಚನೆ, ಸಾರ್ವಜನಿಕ ಸಭೆ ಈಶ್ವರ ಗೌಡ ಗೋಳ್ತಿಲ ಅವರ ಮನೆಯಲ್ಲಿ ನಡೆಯಿತು. ಪುತ್ತೂರು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷೆ ಜಯ ಏಕ, ಸೂರಜ್ ಗೋಳ್ತಿಲ, ಚಂದ್ರ ಗೋಳ್ತಿಲ, ಹರೀಶ್ ಪ್ರಭು, ಶಕ್ತಿ ಕೇಂದ್ರದ ಅಧ್ಯಕ್ಷ ನಾಗೇಶ್, ಹರಿಣಾಕ್ಷಿ, ಶೀನಪ್ಪ ಕುಲಾಲ್, ತಿಮ್ಮಪ್ಪ ಪೂಜಾರಿ, ಅಕ್ಷಯ್ ಗೋಳ್ತಿಲ, ರೇಷ್ಮಾ ಗೋಳ್ತಿಲ, ಕವನ ಗೋಳ್ತಿಲ  ಮತ್ತಿತರರು ಉಪಸ್ಥಿತರಿದ್ದರು.

ಬನ್ನೂರಿನಲ್ಲಿ ಬಿಜೆಪಿ ಅಭ್ಯರ್ಥಿ ಆಶಾ ಪರ ಮತ ಯಾಚನೆ Read More »

ಈಶ್ವರಮಂಗಲ ಪೇಟೆಯಲ್ಲಿ ಬಿಜೆಪಿ ಬೃಹತ್ ರೋಡ್ ಶೋ | ಮತ ಯಾಚನೆ

ಪುತ್ತೂರು: ಭಾರತೀಯ ಜನತಾ ಪಾರ್ಟಿ ವತಿಯಿಂದ ಈಶ್ವರಮಂಗಲ ಪೇಟೆಯಲ್ಲಿ ಬೃಹತ್ ರೋಡ್ ಶೋ ನಡೆಸಲಾಯಿತು. ಪುತ್ತೂರು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಮತ ಯಾಚಿಸಿದರು. ಈ ಸಂದರ್ಭದಲ್ಲಿ ಹುಬ್ಬಳ್ಳಿ ರಮೇಶ್, ಪ್ರದೀಪ್ ಕಾರ್ನೂರ್, ದೀಪಕ್ ಮುಂಡ್ಯ, ಅಬ್ದುಲ್ ಖಾದರ್ ನರ್ಸಿನಡ್ಕ, ಅಬ್ದುಲ್ ರಝಾಕ್, ದೀಪಕ್, ಚಂದ್ರಹಾಸ್, ಎಪಿಎಂಸಿ ಸದಸ್ಯೆ ಮೋಹನಾಂಗಿ, ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

ಈಶ್ವರಮಂಗಲ ಪೇಟೆಯಲ್ಲಿ ಬಿಜೆಪಿ ಬೃಹತ್ ರೋಡ್ ಶೋ | ಮತ ಯಾಚನೆ Read More »

error: Content is protected !!
Scroll to Top