ರಾಜಕೀಯ

ಲೀಡ್ ಹೆಚ್ಚಿಸಿಕೊಂಡ ಪುತ್ತಿಲ ಮೊದಲ ಸ್ಥಾನದಲ್ಲಿ | 8ನೇ ಸುತ್ತಿನಲ್ಲಿ 556 ಮತಗಳ ಅಂತರದಿಂದ ಮುನ್ನಡೆ

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕ್ಷಣದಿಂದ ಕ್ಷಣಕ್ಕೆ ರೋಚಕವಾಗುತ್ತಿದೆ. ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರು 32226 ಮತಗಳನ್ನು ಪಡೆದುಕೊಂಡು, 556 ಮತಗಳಿಗೆ ಅಂತರದಿಂದ ಮುನ್ನಡೆಯಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರು 31670 ಮತ ಪಡೆದು ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ 20126 ಮತ ಪಡೆದಿದ್ದಾರೆ. ನೋಟಾ ಪರವಾಗಿ 394 ಮತ ಚಲಾವಣೆಗೊಂಡಿದೆ.

ಲೀಡ್ ಹೆಚ್ಚಿಸಿಕೊಂಡ ಪುತ್ತಿಲ ಮೊದಲ ಸ್ಥಾನದಲ್ಲಿ | 8ನೇ ಸುತ್ತಿನಲ್ಲಿ 556 ಮತಗಳ ಅಂತರದಿಂದ ಮುನ್ನಡೆ Read More »

ಸುಳ್ಯದಲ್ಲಿ ಭಾಗೀರಥಿ ಮುರುಳ್ಯ ಮುನ್ನಡೆ | ಜಯದತ್ತ ದಾಪುಗಾಲಿಡುತ್ತಿರುವ ಬಿಜೆಪಿ

ಪುತ್ತೂರು: ಸುಳ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಮುನ್ನಡೆ ಕಾಯ್ದುಕೊಂಡು, ಜಯದತ್ತ ದಾಪುಗಾಲಿಡುತ್ತಿದೆ. ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರು 39258 ಮತಗಳನ್ನು ಪಡೆದುಕೊಂಡು, 10846 ಮತಗಳ ಅಂತರದಿಂದ ಮುನ್ನಡೆಯಲಿದ್ದಾರೆ. ಕಾಂಗ್ರೆಸಿನ ಕೃಷ್ಣಪ್ಪ ರಾಮಕುಂಜ 28412 ಮತ, ಜೆಡಿಎಸ್‍ ನ ಎಚ್.ಎಲ್. ವೆಂಕಟೇಶ್ 630 ಮತ, ಆಮ್ ಆದ್ಮಿಯ ಸುಮನಾ ಬೆಳ್ಳಾರ್ಕರ್ 401 ಮತ, ಕರ್ನಾಟಕ ರಾಷ್ಟ್ರ ಸಮಿತಿಯ ಗಣೇಶ್ ಎಂ 129 ಮತ, ರಮೇಶ್ ಬೂಡು 172, ಸುಂದರ್ ಮೇರ್ಲ 151, ಗುರುವಪ್ಪ ಕಲ್ಲುಗುಡ್ಡೆ 253

ಸುಳ್ಯದಲ್ಲಿ ಭಾಗೀರಥಿ ಮುರುಳ್ಯ ಮುನ್ನಡೆ | ಜಯದತ್ತ ದಾಪುಗಾಲಿಡುತ್ತಿರುವ ಬಿಜೆಪಿ Read More »

7ನೇ ಸುತ್ತಿನ ಫಲಿತಾಂಶ | ಮುನ್ನಡೆಯಲ್ಲಿ ಪುತ್ತಿಲ | ಕ್ಲಾಸ್ ಮೇಟ್ ರೈಗೆ ಪ್ರಬಲ ಪೈಪೋಟಿ ನೀಡುತ್ತಿರುವ ಪುತ್ತಿಲ

ಪುತ್ತೂರು: 7ನೇ ಸುತ್ತಿನ ಮತ ಎಣಿಕೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಮುನ್ನಡೆ ಕಾಯ್ದುಕೊಳ್ಳಲು ಸಫಲವಾಗಿದ್ದಾರೆ. ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರು 27512 ಮತ ಪಡೆದುಕೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಅಶೊಕ್ ಕುಮಾರ್ ರೈ 27421 ಮತ ಪಡೆದಿದ್ದಾರೆ. ಈ ಮೂಲಕ ದೋಸ್ತಿಗಳ ನಡುವೆ ಪೈಪೋಟಿ ಏರ್ಪಟಿದ್ದು, ಪುತ್ತಿಲ ಮುನ್ನಡೆಯಲ್ಲಿ ಗುರುತಿಸಿಕೊಂಡಿದ್ದಾರೆ.

7ನೇ ಸುತ್ತಿನ ಫಲಿತಾಂಶ | ಮುನ್ನಡೆಯಲ್ಲಿ ಪುತ್ತಿಲ | ಕ್ಲಾಸ್ ಮೇಟ್ ರೈಗೆ ಪ್ರಬಲ ಪೈಪೋಟಿ ನೀಡುತ್ತಿರುವ ಪುತ್ತಿಲ Read More »

6ನೇ ಸುತ್ತಿನಲ್ಲಿ ಹೆಚ್ಚು ಮತ ಬಾಚಿಕೊಂಡ ಪುತ್ತಿಲ

ಪುತ್ತೂರು: 6ನೇ ಸುತ್ತಿನಲ್ಲಿ ಅರುಣ್ ಕುಮಾರ್ ಪುತ್ತಿಲ ಅವರು 23102 ಮತ ಪಡೆದುಕೊಂಡು, ಅಶೋಕ್ ಕುಮಾರ್ ರೈ ಅವರಿಗೆ ಪ್ರಬಲ ಸ್ಪರ್ಧೆ ಒಡ್ಡಿದ್ದಾರೆ. ಅಶೋಕ್ ಕುಮಾರ್ ರೈ 24592 ಮತ ಪಡೆದುಕೊಂಡು, ಗೆಲುವಿನ ಅಂತರವನ್ನು 1490 ಮತಗಳ ಅಂತರಕ್ಕೆ ಕುಸಿದಿದೆ. ಬಿಜೆಪಿ 15350 ಮತ ಪಡೆದುಕೊಂಡಿದೆ. ನೋಟಾ ಪರವಾಗಿ 273 ಮತ ಪಡೆದುಕೊಂಡಿದೆ. ಒಟ್ಟು 65377 ಮತಗಳ ಎಣಿಕೆ ಕಾರ್ಯ ಪೂರ್ಣಗೊಂಡಿದೆ.

6ನೇ ಸುತ್ತಿನಲ್ಲಿ ಹೆಚ್ಚು ಮತ ಬಾಚಿಕೊಂಡ ಪುತ್ತಿಲ Read More »

5ನೇ ಸುತ್ತಿನ ಫಲಿತಾಂಶ | ಅಶೋಕ್ ರೈಗೆ 20094, ಪುತ್ತಿಲ 18873, ಆಶಾ 12505 | ನೋಟಾ ಪರ ಹೆಚ್ಚಳಗೊಂಡ ಮತ

ಪುತ್ತೂರು: 5ನೇ ಸುತ್ತಿನ ಫಲಿತಾಂಶ ಪ್ರಕಟವಾಗಿದ್ದು ಅಶೋಕ್ ಕುಮಾರ್ ರೈ 20094 ಮತ ಪಡೆದುಕೊಂಡು ಮುನ್ನಡೆ ಕಾಯ್ದುಕೊಂಡಿದ್ದಾರೆ. ಪಕ್ಷೇತರ ಅಭ್ಯರ್ಥಿ ಪುತ್ತಿಲ 18873 ಮತ ಪಡೆದಿದ್ದಾರೆ.  ಒಟ್ಟು 50442 ಮತಗಳ ಎಣಿಕೆ ಈಗಾಗಲೇ ಮುಕ್ತಾಯಗೊಂಡಿದೆ. ಬಿಜೆಪಿಯ ಆಶಾ ತಿಮ್ಮಪ್ಪ 12505 ಮತ, ಶಾಫಿ ಬೆಳ್ಳಾರೆ 986, ದಿವ್ಯಪ್ರಭಾ ಚಿಲ್ತಡ್ಕ 230, ವಿಶು ಕುಮಾರ್ 194, ಐವನ್ ಫೆರಾವೊ 134, ಸುಂದರ ಕೊಯಿಲ 196, ನೋಟಾ 230 ಮತ ಪಡೆದಿದೆ.

5ನೇ ಸುತ್ತಿನ ಫಲಿತಾಂಶ | ಅಶೋಕ್ ರೈಗೆ 20094, ಪುತ್ತಿಲ 18873, ಆಶಾ 12505 | ನೋಟಾ ಪರ ಹೆಚ್ಚಳಗೊಂಡ ಮತ Read More »

4ನೇ ಸುತ್ತಿನ ಫಲಿತಾಂಶ ಔಟ್ | ಮತ್ತೆ ಕಾಂಗ್ರೆಸ್ ಮುನ್ನಡೆ, ಪುತ್ತಿಲ 2ನೇ ಸ್ಥಾನ

ಪುತ್ತೂರು: ಅಶೋಕ್ ಕುಮಾರ್ ರೈ ಅವರು 4ನೇ ಸುತ್ತಿನ ಮತ ಎಣಿಕೆಯಲ್ಲೂ ಮುನ್ನಡೆ ಕಾಯ್ದುಕೊಂಡಿದ್ದು, 16666 ಮತ ಪಡೆದುಕೊಂಡಿದ್ದಾರೆ. ಅಂದರೆ 2289 ಮತಗಳ ಅಂತರದಲ್ಲಿ ಮುನ್ನಡೆಯಲಿದ್ದಾರೆ. ಅರುಣ್ ಕುಮಾರ್ ಪುತ್ತಿಲ ಅವರು 14377 ಮತ ಪಡೆದುಕೊಂಡು ಎರಡನೇ ಸ್ಥಾನದಲ್ಲಿದ್ದಾರೆ. ಬಿಜೆಪಿಯ ಆಶಾ ತಿಮ್ಮಪ್ಪ ಅವರು 10043 ಮತಗಳನ್ನು ಪಡೆದಿದ್ದಾರೆ. ನೋಟಾ ಪರವಾಗಿ 188 ಮತ ಚಲಾವಣೆಯಾಗಿದೆ.

4ನೇ ಸುತ್ತಿನ ಫಲಿತಾಂಶ ಔಟ್ | ಮತ್ತೆ ಕಾಂಗ್ರೆಸ್ ಮುನ್ನಡೆ, ಪುತ್ತಿಲ 2ನೇ ಸ್ಥಾನ Read More »

ಶಾಸಕಾಂಗ ಪಕ್ಷದ ಸಭೆ ಕರೆದ ಕಾಂಗ್ರೆಸ್ | ಸರಕಾರ ರಚನೆ ಹಿನ್ನೆಲೆಯಲ್ಲಿ ಅಲರ್ಟ್ ಆದ ಕೈ ನಾಯಕರು

ಪುತ್ತೂರು: ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಮುನ್ನಡೆ ಸಾಧಿಸುತ್ತಿದ್ದಂತೆ ಶಾಸಕಾಂಗ ಪಕ್ಷದ ಸಭೆ ಕರೆದಿದೆ. ಈಗಾಗಲೇ 112 ಸ್ಥಾನಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದು, ಬಿಜೆಪಿ 83 ಸ್ಥಾನಗಳಲ್ಲಿ, ಜೆಡಿಎಸ್ 25 ಸ್ಥಾನಗಳಲ್ಲಿ, ಇತರೆ 4 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಕಾಂಗ್ರೆಸ್ 100ಕ್ಕೂ ಹೆಚ್ಚಿನ ಕ್ಷೇತ್ರಗಳಲ್ಲಿ ಮುನ್ನಡೆ ದಾಟುತ್ತಿದ್ದಂತೆ ಕಾಂಗ್ರೆಸ್ ರಾಜ್ಯ ನಾಯಕರು ಅಲರ್ಟ್ ಆಗಿದ್ದಾರೆ. ಆದ್ದರಿಂದ ಭಾನುವಾರವೇ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಇದು ಸರಕಾರ ರಚನೆಗೆ ಸಂಬಂಧಪಟ್ಟಂತೆ ಕೈಗೊಂಡ ಮೊದಲ ಕ್ರಮ ಎಂದೇ ವಿಶ್ಲೇಷಿಸಲಾಗಿದೆ.

ಶಾಸಕಾಂಗ ಪಕ್ಷದ ಸಭೆ ಕರೆದ ಕಾಂಗ್ರೆಸ್ | ಸರಕಾರ ರಚನೆ ಹಿನ್ನೆಲೆಯಲ್ಲಿ ಅಲರ್ಟ್ ಆದ ಕೈ ನಾಯಕರು Read More »

ಎಲ್.ಇ.ಡಿ. ಪರದೆಯಲ್ಲಿ ಫಲಿತಾಂಶ ವೀಕ್ಷಿಸುತ್ತಿರುವ ಪುತ್ತಿಲ ಮತ್ತು ಅಭಿಮಾನಿಗಳು

ಪುತ್ತೂರು: ಭಾರೀ ಕುತೂಹಲ ಮೂಡಿಸಿರುವ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಹಾಗೂ ಅವರ ಅಭಿಮಾನಿಗಳು ಮುಕ್ರಂಪಾಡಿ ಸುಭದ್ರ ಸಭಾಮಂದಿರದಲ್ಲಿ ಎಲ್.ಇ.ಡಿ. ಪರದೆಯ ಮೂಲಕ ಫಲಿತಾಂಶ ವೀಕ್ಷಿಸುತ್ತಿದ್ದಾರೆ. ಸಭಾಭವನದ ಮುಂಭಾಗದಲ್ಲಿ ಎಲ್.ಇ.ಡಿ. ಪರದೆಯನ್ನು ಹಾಕಲಾಗಿದ್ದು, ಕ್ಷಣ ಕ್ಷಣದ ಫಲಿತಾಂಶವನ್ನು ವೀಕ್ಷಿಸುತ್ತಿದ್ದಾರೆ. ಅರುಣ್ ಕುಮಾರ್ ಪುತ್ತಿಲ ಅವರು ಕೂಡ ಉಪಸ್ಥಿತರಿದ್ದು, ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಜೊತೆಯಾಗಿದ್ದಾರೆ.

ಎಲ್.ಇ.ಡಿ. ಪರದೆಯಲ್ಲಿ ಫಲಿತಾಂಶ ವೀಕ್ಷಿಸುತ್ತಿರುವ ಪುತ್ತಿಲ ಮತ್ತು ಅಭಿಮಾನಿಗಳು Read More »

ಅಶೋಕ್ ಕುಮಾರ್ ರೈ ಭಾರೀ ಮುನ್ನಡೆ, ಅರುಣ್ ಕುಮಾರ್ ಪುತ್ತಿಲ ಎರಡನೇ ಸ್ಥಾನ, ಖಾತೆ ತೆರೆಯದ ಎಸ್.ಡಿ.ಪಿ.ಐ. | ಇಲ್ಲಿವರೆಗಿನ ಮತಗಳ ವಿವರ ಇಲ್ಲಿದೆ

ಪುತ್ತೂರು: ಚುನಾವಣಾ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರು ಭಾರೀ ಮುನ್ನಡೆ ಕಾಯ್ದುಕೊಂಡಿದ್ದಾರೆ. 8666 ಮತಗಳನ್ನು ಪಡೆದುಕೊಂಡು, ಮೊದಲ ಸ್ಥಾನ ಕಾಯ್ದುಕೊಂಡಿದ್ದಾರೆ. ಎರಡನೇ ಸ್ಥಾನದಲ್ಲಿ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಗುರುತಿಸಿಕೊಂಡಿದ್ದು, 6495 ಮತ ಪಡೆದುಕೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರು ಮೂರನೇ ಸ್ಥಾನದಲ್ಲಿದ್ದು 4513 ಮತ ಪಡೆದುಕೊಂಡಿದ್ದಾರೆ. ಈಗಾಗಲೇ ಒಟ್ಟು 20357 ಮತ ಚಲಾವಣೆಗೊಂಡಿದೆ. ಇದರಲ್ಲಿ ದಿವ್ಯಪ್ರಭಾ ಚಿಲ್ತಡ್ಕ 75 ಮತ, ವಿಷು ಕುಮಾರ್ 71 ಮತ, ಶಾಫಿ

ಅಶೋಕ್ ಕುಮಾರ್ ರೈ ಭಾರೀ ಮುನ್ನಡೆ, ಅರುಣ್ ಕುಮಾರ್ ಪುತ್ತಿಲ ಎರಡನೇ ಸ್ಥಾನ, ಖಾತೆ ತೆರೆಯದ ಎಸ್.ಡಿ.ಪಿ.ಐ. | ಇಲ್ಲಿವರೆಗಿನ ಮತಗಳ ವಿವರ ಇಲ್ಲಿದೆ Read More »

ಅಂಚೆ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಮುನ್ನಡೆ

ಪುತ್ತೂರು: ವಿಧಾನಸಭೆ ಚುನಾವಣೆಯ ಅಂಚೆ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಮುನ್ನಡೆ ಕಾಯ್ದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮತ ಎಣಿಕೆಗೂ ಮುನ್ನ ನಡೆದ ಅಂಚೆ ಮತ ಎಣಿಕೆಯಲ್ಲಿ ಅಶೋಕ್ ಕುಮಾರ್ ರೈ ಮುನ್ನಡೆ ಸಾಧಿಸಿದ್ದಾರೆ. ಚುನಾವಣೆಗೆ ಮೊದಲು ಅಧಿಕಾರಿಗಳು ಅಂಚೆ ಮತದಾನ ಮಾಡಿದ್ದರು.

ಅಂಚೆ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಮುನ್ನಡೆ Read More »

error: Content is protected !!
Scroll to Top