ಅಶೋಕ್ ಕುಮಾರ್ ರೈ ಬಿಜೆಪಿ ಸದಸ್ಯನೇ ಅಲ್ಲವೆಂದ ಬಿಜೆಪಿ ಮುಖಂಡರು | 6 ವರ್ಷ ಹಿಂದೆಯೇ ಫಿಕ್ಸ್ ಆಗಿತ್ತೇ ಕಾಂಗ್ರೆಸ್ ಸೇರುವ ಪ್ಲಾನ್
ಪುತ್ತೂರು: ಕಾಂಗ್ರೆಸಿನ ಪುತ್ತೂರು ಅಭ್ಯರ್ಥಿಯಾಗಿ ಅಶೋಕ್ ಕುಮಾರ್ ರೈ ಅವರ ಹೆಸರು ಗಟ್ಟಿಯಾಗಿ ಕೇಳಿಬರುತ್ತಿರುವ ನಡುವೆಯೇ, ಅಶೋಕ್ ಕುಮಾರ್ ರೈ ಅವರು ಕಳೆದ 6 ವರ್ಷಗಳಿಂದ ಬಿಜೆಪಿ ಸದಸ್ಯತನವನ್ನೇ ನವೀಕರಿಸಿಲ್ಲ ಎಂಬ ಮಾಹಿತಿಯನ್ನು ಪುತ್ತೂರು ಬಿಜೆಪಿ ಪ್ರಮುಖರು ಖಾತ್ರಿ ಪಡಿಸಿದ್ದಾರೆ. ಅಶೋಕ್ ಕುಮಾರ್ ರೈ ಅವರು ಶಾಸಕ ಆಕಾಂಕ್ಷಿ ಅಭ್ಯರ್ಥಿ ಎನ್ನುವುದು ಕೆಲ ವರ್ಷಗಳಿಂದಲೇ ಪ್ರಚಲಿತದ್ದಲ್ಲಿತ್ತು. ಇದರಲ್ಲೇನು ಹೊಸತನವಿಲ್ಲ. ಆದರೆ ಏಕಾಏಕೀ ಬಿಜೆಪಿ ತೊರೆದು, ಕಾಂಗ್ರೆಸ್ ಸೇರಿದ್ದಾರೆ ಎಂದರೆ ಹಲವರ ಹುಬ್ಬು ಗಂಟ್ಟಿಕ್ಕುವಂತೆ ಮಾಡಿತ್ತು. ಇದೀಗ ಇದಕ್ಕೂ […]