ರಾಜಕೀಯ

ಒಕ್ಕಲಿಗ ಗೌಡ ಸಮುದಾಯದ ಅಭ್ಯರ್ಥಿಗೆ ಕಾಂಗ್ರೆಸ್‍ ಟಿಕೇಟ್ ನೀಡಿ

ಪುತ್ತೂರು, ಸುಳ್ಯ, ಬೆಳ್ತಂಗಡಿ ಒಕ್ಕಲಿಗ ಗೌಡ ಸಮುದಾಯದ ಕಾಂಗ್ರೆಸ್ ಮುಖಂಡರಿಂದ ಡಿಕೆಶಿಗೆ ಮನವಿ ಪುತ್ತೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಒಕ್ಕಲಿಗ ಗೌಡ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುವಂತೆ ಪುತ್ತೂರು, ಸುಳ್ಯ, ಬೆಳ್ತಂಗಡಿ ಒಕ್ಕಲಿಗ ಗೌಡ ಸಮಾಜದ ಕಾಂಗ್ರೆಸ್ ಮುಖಂಡರ ನಿಯೋಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು. ಇದೇ ಸಂದರ್ಭ ದ.ಕ. ಜಿಲ್ಲೆಯಲ್ಲಿ ಒಕ್ಕಲಿಗ ಗೌಡ ಸಮುದಾಯವನ್ನು ಕಡೆಗಣಿಸಿರುವುದನ್ನು ಡಿ.ಕೆ. ಶಿವಕುಮಾರ್ ಅವರ ಗಮನಕ್ಕೆ ತರಲಾಯಿತು. ನಿಯೋಗದ […]

ಒಕ್ಕಲಿಗ ಗೌಡ ಸಮುದಾಯದ ಅಭ್ಯರ್ಥಿಗೆ ಕಾಂಗ್ರೆಸ್‍ ಟಿಕೇಟ್ ನೀಡಿ Read More »

ಬಿಜೆಪಿಗೆ ಹರಿದು ಬಂತು 1917 ಕೋ.ರೂ. ದೇಣಿಗೆ

ಕಾಂಗ್ರೆಸ್‌ ಹಿಂದಿಕ್ಕಿದ ಟಿಎಂಸಿ ದ್ವಿತೀಯ ಸ್ಥಾನದಲ್ಲಿ ಹೊಸದಿಲ್ಲಿ : ಬಿಜೆಪಿ 2021-22ನೇ ಸಾಲಿನ ಆರ್ಥಿಕ ವರ್ಷದಲ್ಲಿ ಬರೊಬ್ಬರಿ 1917 ಕೋಟಿ ದೇಣಿಗೆ ಪಡೆದುಕೊಂಡಿದೆ. ಎಂಟು ಮಾನ್ಯತೆ ಪಡೆದ ರಾಷ್ಟ್ರೀಯ ಪಕ್ಷಗಳಿಗೆ ಭಾರತದಾದ್ಯಂತ ಒಟ್ಟು 3289.34 ಕೋಟಿ ರೂ ದೇಣಿಗೆ ಸಂದಾಯವಾಗಿದ್ದು, ಈ ಪೈಕಿ ಅರ್ಧಕ್ಕೂ ಹೆಚ್ಚು ಮೊತ್ತವನ್ನು ಬಿಜೆಪಿಯೊಂದೇ ಪಡೆದುಕೊಂಡಿದೆ. ಬಿಜೆಪಿಯ ಪ್ರಮುಖ ಎದುರಾಳಿಯಾಗಿರುವ ಕಾಂಗ್ರೆಸ್‌ಗೆ ಸಿಕ್ಕಿರುವುದು 541 ಕೋ. ರೂ. ಮಾತ್ರ. ವಿಶೇಷವೆಂದರೆ ಕಾಂಗ್ರೆಸ್‌ಗಿಂತ ಹೆಚ್ಚು ದೇಣಿಗೆ ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್‌ಗೆ ಹರಿದುಬಂದಿದೆ. ಚುನಾವಣಾ

ಬಿಜೆಪಿಗೆ ಹರಿದು ಬಂತು 1917 ಕೋ.ರೂ. ದೇಣಿಗೆ Read More »

ನಾರಾಯಣ ಗುರುಗಳ ಅನುಯಾಯಿಗಳಿಗೆ ಅವಮಾನ: ಅಮಳ ರಾಮಚಂದ್ರ

ಪುತ್ತೂರು: ಪಠ್ಯ ಪುಸ್ತಕ ಪರಿಷ್ಕರಣೆ ಸಂದರ್ಭದಲ್ಲಿ ನಾರಾಯಣ ಗುರುಗಳ ಕುರಿತು ವಿಚಾರವನ್ನು ಕಿತ್ತು ಹಾಕಿರುವುದು ದ.ಕ. ಜಿಲ್ಲೆಯ ನಾರಾಯಣ ಗುರುಗಳ ಅನುಯಾಯಿಗಳಿಗೆ ಮಾಡಿದ ಅವಮಾನ ಎಂದು ಕೆಪಿಸಿಸಿ ವಕ್ತಾರ ಅಮಲ ರಾಮಚಂದ್ರ ಆರೋಪಿಸಿದ್ದಾರೆ. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಿತಿ ರಚಿಸಿ, ಸಮಿತಿಗೆ ತೃತೀಯ ದರ್ಜೆ ಲೇಖಕ ರೋಹಿತ್ ಚಕ್ರತೀರ್ಥರನ್ನು ಅಧ್ಯಕ್ಷರನ್ನಾಗಿ ಮಾಡಿ, ಅವರ ವಿಚಾರಗಳನ್ನೇ ಸಮರ್ಥನೆ ಮಾಡಿ ನಾರಾಯಣ ಗುರುಗಳಿಗೆ ಅವಮಾನ ಮಾಡಿರುವುದು ಇಡೀ ಸಮಾಜಕ್ಕೆ ಮಾಡಿದ ಅವಮಾನ. ಸಂವಿಧಾನದ ಮೂಲ ತಿರುಳನ್ನು ತಿರುಚುವ ಮೂಲಕ

ನಾರಾಯಣ ಗುರುಗಳ ಅನುಯಾಯಿಗಳಿಗೆ ಅವಮಾನ: ಅಮಳ ರಾಮಚಂದ್ರ Read More »

ಇಂದಿನಿಂದ ರಾಜ್ಯದಲ್ಲಿ ಬಿಜೆಪಿ ವಿಜಯ ಸಂಕಲ್ಪ ರಥಯಾತ್ರೆ : ರಾಷ್ಟ್ರೀಯ ಅಧ್ಯಕ್ಷ ಜೆ. ಪಿ ನಡ್ಡಾ ಚಾಲನೆ

ಬೆಂಗಳೂರು : ಇಂದಿನಿಂದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಪ್ರಾರಂಭವಾಗಲಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟದಿಂದ ಆರಂಭವಾಗುವ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಮಾ.1ರಂದು ಬೆಳಗ್ಗೆ 11ಕ್ಕೆ ದೆಹಲಿಯಿಂದ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಬಳಿಕ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿ, ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಬಳಿಕ ವಿಜಯ ಸಂಕಲ್ಪ ರಥ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ ಸೋಲಿಗ

ಇಂದಿನಿಂದ ರಾಜ್ಯದಲ್ಲಿ ಬಿಜೆಪಿ ವಿಜಯ ಸಂಕಲ್ಪ ರಥಯಾತ್ರೆ : ರಾಷ್ಟ್ರೀಯ ಅಧ್ಯಕ್ಷ ಜೆ. ಪಿ ನಡ್ಡಾ ಚಾಲನೆ Read More »

ಕುಮಾರಸ್ವಾಮಿ ಪಾಲಿಗಿದು ಕೊನೆಯ ಚುನಾವಣೆ!

ಬೆಂಗಳೂರು : ಈ ಸಲದ ವಿಧಾನಸಭೆ ಚುನಾವಣೆ ಹಲವು ಹಿರಿಯ ನಾಯಕರ ಪಾಲಿಗೆ ಕೊನೇ ಚುನಾವಣೆ ಆಗಲಿದೆ. ಯಡಿಯೂರಪ್ಪ ಈಗಾಗಲೇ ಚುನಾವಣಾ ರಾಜಕೀಯಕ್ಕೆ ವಿದಾಯ ಘೋಷಿಸಿದ್ದಾರೆ. ಸಿದ್ದರಾಮಯ್ಯ ಕೂಡ ಅಭಿಮಾನಿಗಳ ಒತ್ತಾಯಕ್ಕೆ ಕಟ್ಟುಬಿದ್ದು ಈ ಸಲ ಸ್ಪರ್ಧಿಸುತ್ತಿದ್ದೇನೆ. ಇನ್ನು ಚುನಾವಣೆ ಕಣಕ್ಕಿಳಿಯುವುದಿಲ್ಲ ಎನ್ನುತ್ತಿದ್ದಾರೆ. ಇದರ ಬೆನ್ನಿಗೆ ಇದೀಗ ಜೆಡಿಎಸ್‌ ನಾಯಕ, ಮಾಜಿ ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿಯವರೂ ಇದೇ ನನ್ನ ಕೊನೇ ಚುನಾವಣೆ ಎಂಭ ಭಾವನಾತ್ಮಕ ಅಸ್ತ್ರ ಪ್ರಯೋಗ ಮಾಡಿದ್ದಾರೆ.“ನಾನು 2028ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ಏಕೆಂದರೆ

ಕುಮಾರಸ್ವಾಮಿ ಪಾಲಿಗಿದು ಕೊನೆಯ ಚುನಾವಣೆ! Read More »

‘ಆರ್ಯಾಪು ಗ್ರಾಪಂ ಉಪಚುನಾವಣೆಯ ಗೆಲುವು ವಿಧಾನಸಭೆ ಚುನಾವಣೆಗೆ ದಿಕ್ಸೂಚಿ’ | ಶಾಸಕರ ಅಭಿವೃದ್ಧಿ ಕಾರ್ಯಕ್ರಮಗಳ ಪ್ರತಿಫಲವೇ ಈ ಜಯ

ಪುತ್ತೂರು: ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯ ಹುದ್ದೆಗೆ ನಡೆದ ಉಪಚುನಾವಣೆಯ ಗೆಲುವು ಮುಂದಿನ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಿದ್ದು, ಶಾಸಕ ಸಂಜೀವ ಮಠಂದೂರು ಅವರ ಅಭಿವೃದ್ಧಿ ಕಾರ್ಯಕ್ರಮಗಳ ಪ್ರತಿಫಲ ಈ ಜಯ ಎಂದು ಬಿಜೆಪಿಯ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ತಿಳಿಸಿದ್ದಾರೆ. ಆರ್ಯಾಪು ಗ್ರಾಮ ಪಂಚಾಯತ್ ಬಿಜೆಪಿ ಅಧಿಕಾರದ ಕ್ಷೇತ್ರ. ಈ ಹಿಂದೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯೇ ಆಗಿದ್ದ ಗಿರೀಶ್ ಗೌಡ ಅವರು ಈ ವಾರ್ಡಿನ ಸದಸ್ಯರಾಗಿದ್ದರು. ಅವರ ಅಕಾಲಿಕ ಮರಣದಿಂದ ತೆರವಾದ ಸ್ಥಾನಕ್ಕೆ ಮತ್ತೊಮ್ಮೆ

‘ಆರ್ಯಾಪು ಗ್ರಾಪಂ ಉಪಚುನಾವಣೆಯ ಗೆಲುವು ವಿಧಾನಸಭೆ ಚುನಾವಣೆಗೆ ದಿಕ್ಸೂಚಿ’ | ಶಾಸಕರ ಅಭಿವೃದ್ಧಿ ಕಾರ್ಯಕ್ರಮಗಳ ಪ್ರತಿಫಲವೇ ಈ ಜಯ Read More »

ಆರ್ಯಾಪು ಗ್ರಾ.ಪಂ. ಉಪಚುನಾವಣೆಯಲ್ಲಿ ಗೆಲುವು, ಸಂಭ್ರಮಾಚರಣೆ | ಶಾಸಕ ಸಂಜೀವ ಮಠಂದೂರು ಅಭಿನಂದನೆ

ಪುತ್ತೂರು: ಆರ್ಯಾಪು ಗ್ರಾಮ ಪಂಚಾಯತ್ ಉಪಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಯತೀಶ್ ದೇವ ಅವರು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಸಂಭ್ರಮವನ್ನು ಆಚರಿಸಲಾಯಿತು. ಬಿಜೆಪಿ ಕಚೇರಿಯಲ್ಲಿ ಶಾಸಕ ಸಂಜೀವ ಮಠಂದೂರು ಹಾಗೂ ಪ್ರಮುಖರು ಅಭಿನಂಧಿಸಿ, ಶುಭಹಾರೈಸಿದರು. ಇದೇ ಸಂದರ್ಭ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹಾಗೂ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳಿ, ಪೂಜೆ ಸಲ್ಲಿಸಲಾಯಿತು. ಗೆಲುವು ಪಡೆದ ತಕ್ಷಣ ಬಿಜೆಪಿಗೆ ಕಚೇರಿಗೆ ತೆರಳಿ ಬಳಿಕ ಆರ್ಯಾಪು ಗ್ರಾಮ ಪಂಚಾಯತಿಗೆ ತೆರಳಲಾಯಿತು. ಗಿರೀಶ್ ಗೌಡ ಅವರ ನಿಧನದಿಂದ ತೆರವಾದ

ಆರ್ಯಾಪು ಗ್ರಾ.ಪಂ. ಉಪಚುನಾವಣೆಯಲ್ಲಿ ಗೆಲುವು, ಸಂಭ್ರಮಾಚರಣೆ | ಶಾಸಕ ಸಂಜೀವ ಮಠಂದೂರು ಅಭಿನಂದನೆ Read More »

ಖುಷ್ಬೂ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ

ಚೆನ್ನೈ : ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆಯಾಗಿರುವ ನಟಿ ಖುಷ್ಬೂ ಸುಂದರ್ ಅವರನ್ನು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಲಾಗಿದೆ. ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರ ಶಿಫಾರಸ್ಸಿನ ಮೇರೆಗೆ ಖುಷ್ಬೂ ಈ ಹುದ್ದೆಗೇರಿದ್ದಾರೆ.ಈ ನಾಮನಿರ್ದೇಶನ ಅಧಿಕಾರ ವಹಿಸಿಕೊಂಡ ದಿನದಿಂದ ಮೂರು ವರ್ಷಗಳ ಅವಧಿಗೆ ಅಥವಾ 65 ವರ್ಷ ವಯಸ್ಸಿನವರೆಗೆ ಇರುತ್ತದೆ. ಎನ್‌ಸಿಡಬ್ಲ್ಯು ಸದಸ್ಯ ಸ್ಥಾನಕ್ಕೆ ನಾಮನಿರ್ದೇಶನಗೊಂಡಿರುವ ಖುಷ್ಬೂ ಅವರನ್ನು ಅಣ್ಣಾಮಲೈ ಅಭಿನಂದಿಸಿದ್ದಾರೆ. ಕನ್ನಡ ಸಿನೆಮಾಗಳ ಮೂಲಕ ಪ್ರಸಿದ್ಧಿಗೆ ಬಂದ ನಟಿ ಖುಷ್ಬೂ ಬಳಿಕ

ಖುಷ್ಬೂ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ Read More »

ಆರ್ಯಾಪು ಗ್ರಾಪಂ ಉಪಚುನಾವಣೆ: ಬಿಜೆಪಿ ಬೆಂಬಲಿತ ಅಭ್ಯರ್ಥಿ ಯತೀಶ್ ಡಿ.ಬಿ. ಜಯ

ಪುತ್ತೂರು: ಆರ್ಯಾಪು ಗ್ರಾಮ ಪಂಚಾಯತ್ ಉಪಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಯತೀಶ್ ಡಿ.ಬಿ. ಅವರು 171 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ. ಯತೀಶ್ ಡಿ.ಬಿ. ಅವರು 498 ಮತಗಳನ್ನು ಪಡೆದಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪ್ರಜ್ವಲ್ ರೈ ತೋಟ್ಲ ಅವರು 327 ಮತಗಳನ್ನು ಪಡೆದುಕೊಂಡಿದ್ದಾರೆ. 11 ಮತಗಳು ತಿರಸ್ಕೃತಗೊಂಡಿವೆ. ಒಟ್ಟು 836 ಮತಗಳು ಚಲಾವಣೆಗೊಂಡಿದ್ದವು. ಆರ್ಯಾಪು ಗ್ರಾಮ ಪಂಚಾಯತ್‍ನ ಸದಸ್ಯರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಫೆ. 25ರಂದು ಚುನಾವಣೆ ನಡೆದಿತ್ತು.

ಆರ್ಯಾಪು ಗ್ರಾಪಂ ಉಪಚುನಾವಣೆ: ಬಿಜೆಪಿ ಬೆಂಬಲಿತ ಅಭ್ಯರ್ಥಿ ಯತೀಶ್ ಡಿ.ಬಿ. ಜಯ Read More »

ನಾಳೆ (ಮಾ.1) : ಅರಿಯಡ್ಕದಲ್ಲಿ ಕಾಂಗ್ರೆಸ್ ಉತ್ಸವ-2023

ಪುತ್ತೂರು : ಅರಿಯಡ್ಕ ವಲಯ ಕಾಂಗ್ರೆಸ್‍ ಆಶ್ರಯುದಲ್ಲಿ ಕಾಂಗ್ರೆಸ್ ಉತ್ಸವ-2023 ಮಾ.1 ಬುಧವಾರ ಕೌಡಿಚ್ಚಾರ್ ನಲ್ಲಿ ನಡೆಯಲಿದೆ. ಕೌಡಿಚ್ಚಾರ್ ಎಸ್ ಬಿಲ್ಡಿಂಗ್ ವಠಾರದಲ್ಲಿ ಬೆಳಿಗ್ಗೆ 9 ರಿಂದ ನಡೆಯುವ ಕಾರ್ಯಕ್ರಮವನ್ನು ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಉದ್ಘಾಟಿಸುವರು. ಪುತ್ತೂರು ಬ್ಲಾಕ್ ಕಾಂಗ್ರೆಸ್‍ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಚಿಂತಕ ಎಂ.ಜಿ. ಹೆಗ್ಡೆ ಮುಖ್ಯ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಪಂಚಾಯಿತಿ ಸದಸ್ಯರುಗಳು, ಮಾಜಿ ವಲಯ ಅಧ್ಯಕ್ಷರುಗಳು, ಹಿರಿಯ ಕಾಂಗ್ರೆಸ್‍ ಕಾರ್ಯಕರ್ತರು, ಸಹಕಾರ, ಶಿಕ್ಷಣ ಕ್ಷೇತ್ರದ

ನಾಳೆ (ಮಾ.1) : ಅರಿಯಡ್ಕದಲ್ಲಿ ಕಾಂಗ್ರೆಸ್ ಉತ್ಸವ-2023 Read More »

error: Content is protected !!
Scroll to Top