ರಾಜಕೀಯ

ಅದಾನಿ ಮತ್ತು ವಾದ್ರಾ ಜೊತೆಯಿರುವ ಫೋಟೋ ಉಲ್ಲೇಖಿಸಿ ಸ್ಮೃತಿ ಇರಾನಿ ವಾಗ್ದಾಳಿ

ದೆಹಲಿ: ಉದ್ಯಮಿ ಗೌತಮ್ ಅದಾನಿ ಕುರಿತಂತೆ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸುತ್ತಿರುವ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಾಗ್ದಾಳಿ ನಡೆಸಿದ್ದಾರೆ.ಕೇಂದ್ರ ಸಚಿವೆ ಸ್ಮೃತಿ ಇರಾನಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ವಾಗ್ದಾಳಿ ನಡೆಸಿದ್ದು, ಗೌತಮ್ ಅದಾನಿ ಜೊತೆಗಿನ ರಾಬರ್ಟ್ ವಾದ್ರಾ ಅವರ ಹಳೆಯ ಫೋಟೋವನ್ನು ಬಹಿರಂಗಪಡಿಸಿರುವ ಸ್ಮೃತಿ ಇರಾನಿ ಇದು ಏನೆಂದು ರಾಹುಲ್ ಗಾಂಧಿ ಅವರನ್ನು ಪ್ರಶ್ನಿಸಿದ್ದಾರೆ. ಅದಾನಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ಪ್ರತಿಭಟನೆ ಮುಂದುವರಿದಿರುವಂತೆಯೇ ಕೇಂದ್ರ ಸಚಿವೆ ಸ್ಮೃತಿ ಇರಾನಿ ಇಂದು […]

ಅದಾನಿ ಮತ್ತು ವಾದ್ರಾ ಜೊತೆಯಿರುವ ಫೋಟೋ ಉಲ್ಲೇಖಿಸಿ ಸ್ಮೃತಿ ಇರಾನಿ ವಾಗ್ದಾಳಿ Read More »

ಮುಸ್ಲಿಂ ಮೀಸಲಾತಿ ರದ್ಧತಿ : ಪುತ್ತೂರಿನಲ್ಲಿ ಎಸ್‌ಡಿಪಿಐ ಪ್ರತಿಭಟನೆ

ಪುತ್ತೂರು: ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯಕ್ಕೆ ಇದ್ದ ಮೀಸಲಾತಿಯನ್ನು ರದ್ದು ಮಾಡಿದ ನಿರ್ಣಯವನ್ನು ಖಂಡಿಸಿ ಎಸ್ ಡಿ ಪಿ ಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯಿಂದ ಮಂಗ:ಳವಾರ ಪುತ್ತೂರು ಕಿಲ್ಲೆ ಮೈದಾನದ ಅಮರ್ ಜವಾನ್ ಸ್ಮಾರಕ ಜ್ಯೋತಿ ಬಳಿ ಪ್ರತಿಭಟನೆ ನಡೆಯಿತು. ಮುಸ್ಲಿಂಮರಿಗೆ ಪ್ರವರ್ಗ 2ಬಿ ಅಡಿಯಲ್ಲಿದ್ದ ಶೇ 4ರಷ್ಟು ಮೀಸಲಾತಿಯನ್ನು ರದ್ದು ಮಾಡಿರುವುದು ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಮಾಡಿರುವ ಉದ್ದೇಶಿತ ದಾಳಿಯಾಗಿದೆ. ಇದು ಸರ್ಕಾರದ ಅಸಂವಿಧಾನಿಕ ತೀರ್ಮಾನವಾಗಿದೆ. ಮುಸ್ಲಿಮರ ವಿರುದ್ಧ ಸರ್ಕಾರ ನಡೆಸುವ ಷಡ್ಯಂತ್ರ ಇದಾಗಿದೆ

ಮುಸ್ಲಿಂ ಮೀಸಲಾತಿ ರದ್ಧತಿ : ಪುತ್ತೂರಿನಲ್ಲಿ ಎಸ್‌ಡಿಪಿಐ ಪ್ರತಿಭಟನೆ Read More »

ಏ.5ಕ್ಕೆ ರಾಹುಲ್‌ ಗಾಂಧಿ ಕೋಲಾರಕ್ಕೆ ಭೇಟಿ

ಕೋಲಾರದಿಂದಲೇ ಅನರ್ಹತೆಗೆ ಪ್ರತ್ಯುತ್ತರ ನೀಡಲು ಕಾಂಗ್ರೆಸ್‌ ಪ್ಲಾನಿಂಗ್‌ ಕೋಲಾರ : ಕೋಲಾರದಲ್ಲಿ 2019ರ ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಮೋದಿ ಸಮುದಾಯದ ವಿರುದ್ಧ ಅವಹೇಳಕಾರಿಯಾಗಿ ಮಾತನಾಡಿದ್ದಾರೆಂಬ ಆರೋಪದ ಮೇಲೆ ನ್ಯಾಯಾಲಯದಿಂದ ಶಿಕ್ಷೆ ಮತ್ತು ಸಂಸದ ಸ್ಥಾನದಿಂದ ಅನರ್ಹಗೊಂಡಿರುವ ರಾಹುಲ್​ ಗಾಂಧಿ ಕೋಲಾರದಿಂದಲೇ ಪ್ರತ್ಯುತ್ತರ ನೀಡಲು ನಿರ್ಧರಿಸಿದ್ದಾರೆ. ಏಪ್ರಿಲ್​ 5 ರಂದು ರಾಹುಲ್​ ಗಾಂಧಿ ವಿಧಾನಸಭೆ ಚುನಾವಣೆ ಪ್ರಚಾರಕ್ಕಾಗಿ ಕೋಲಾರಕ್ಕೆ ಆಗಮಿಸಲಿದ್ದಾರೆ. ರಾಹುಲ್​ ಗಾಂಧಿ ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹವಾಗಿದ್ದು ಕೋಲಾರದಲ್ಲಿ ಮಾಡಿದ ಬಾಷಣದಿಂದ. ಹೀಗಾಗಿ ಕೋಲಾರದಿಂದಲೇ ಪ್ರಚಾರ

ಏ.5ಕ್ಕೆ ರಾಹುಲ್‌ ಗಾಂಧಿ ಕೋಲಾರಕ್ಕೆ ಭೇಟಿ Read More »

ಸರಕಾರಿ ಬಂಗಲೆ ಏ.22 ರೊಳಗೆ ಖಾಲಿ ಮಾಡಲು ರಾಹುಲ್‌ ಗಾಂಧಿಗೆ ನೋಟಿಸ್‌

ದೆಹಲಿ : ಅನರ್ಹಗೊಂಡ ಲೋಕಸಭಾ ಸದಸ್ಯ ರಾಹುಲ್ ಗಾಂಧಿ ಅವರಿಗೆ ನೀಡಲಾದ ಅಧಿಕೃತ ಬಂಗಲೆಯನ್ನು ಏ.22 ರೊಳಗೆ ಖಾಲಿ ಮಾಡುವಂತೆ ಸೂಚಿಸಿ ನೋಟಿಸ್‌ ಜಾರಿಗೊಳಿಸಲಾಗಿದೆ.ಕಳೆದ ವಾರ ಅನರ್ಹತೆಯ ನೋಟಿಸ್ ನೀಡಿದ ನಂತರ 12 ತುಘಲಕ್ ಮಾರ್ಗದ ಬಂಗಲೆಯನ್ನು ಖಾಲಿ ಮಾಡುವಂತೆ ಗಾಂಧಿ ಅವರಿಗೆ ಲೋಕಸಭೆಯ ವಸತಿ ಸಮಿತಿಯಿಂದ ನೋಟಿಸ್ ನೀಡಲಾಗಿದೆ.ಮೋದಿ ಸಮುದಾಯದ ವಿರುದ್ಧ ಮಾನಹಾನಿ ಹೇಳಿಕೆ ಪ್ರಕರಣದಲ್ಲಿ ಗುಜರಾತ್‌ನ ಸ್ಥಳೀಯ ನ್ಯಾಯಾಲಯ ಮಾ.23ರಂದು ರಾಹುಲ್‌ ಗಾಂಧಿಯನ್ನು ಅಪರಾಧಿ ಎಂದು ಘೋಷಿಸಿ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.ಅನರ್ಹಗೊಂಡ

ಸರಕಾರಿ ಬಂಗಲೆ ಏ.22 ರೊಳಗೆ ಖಾಲಿ ಮಾಡಲು ರಾಹುಲ್‌ ಗಾಂಧಿಗೆ ನೋಟಿಸ್‌ Read More »

ಆಧಾರ್-ಪಾನ್ ಜೋಡಣೆ ಹೆಸರಿನಲ್ಲಿ ವಸೂಲಿ ಮಾಡಿದ ಹಣವನ್ನು ಸರಕಾರ ಏನು ಮಾಡುತ್ತಿದೆ ಎಂದು ಬಹಿರಂಗ ಪಡಿಸಲಿ : ರವೀಂದ್ರ ನೆಕ್ಕಿಲು ಆಗ್ರಹ

ಪುತ್ತೂರು: ಜನರ ಹಣ ಲೂಟಿ ಮಾಡಲೆಂದೇ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರ ಹುಟ್ಟಿದ್ದು, ಆಧಾರ್ – ಪಾನ್ ಜೋಡಣೆಯ ಹೆಸರಿನಲ್ಲಿ ಜನರಿಂದ ವಸೂಲಿ ಮಾಡಿದ ಹಣವನ್ನು ಸರ್ಕಾರ ಏನು ಮಾಡುತ್ತಿದೆ ಎಂದು ಬಹಿರಂಗ ಪಡಿಸಬೇಕಾಗಿದೆ. ಎಂದು ಕಾಂಗ್ರೆಸ್ ಕಾರ್ಮಿಕ ಘಟಕದ ಜಿಲ್ಲಾ ಉಪಾಧ್ಯಕ್ಷ ರವೀಂದ್ರ ರೈ ನೆಕ್ಕಿಲು ಆಗ್ರಹಿಸಿದ್ದಾರೆ. ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ರೀತಿ ಸಾರ್ವಜನಿಕ ಹಣವನ್ನು ಲೂಟಿ ಮಾಡುವ ಪ್ರಕ್ರಿಯೆಯನ್ನು ಖಂಡಿಸುತ್ತೇವೆ ಮತ್ತು ಈಗಾಗಲೇ ಪಡೆದ ಹಣವನ್ನು ತಕ್ಷಣ ಮರುಪಾವತಿ ಮಾಡಬೇಕೆಂದು

ಆಧಾರ್-ಪಾನ್ ಜೋಡಣೆ ಹೆಸರಿನಲ್ಲಿ ವಸೂಲಿ ಮಾಡಿದ ಹಣವನ್ನು ಸರಕಾರ ಏನು ಮಾಡುತ್ತಿದೆ ಎಂದು ಬಹಿರಂಗ ಪಡಿಸಲಿ : ರವೀಂದ್ರ ನೆಕ್ಕಿಲು ಆಗ್ರಹ Read More »

ಲೋಕಸಭೆಯಿಂದ ರಾಹುಲ್‌ ಗಾಂಧಿ ಅನರ್ಹತೆ : ಕಾಂಗ್ರೆಸ್ ಸಂಸದರು ಸಂಸತ್​ನಲ್ಲಿ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ

ದೆಹಲಿ : ರಾಹುಲ್ ಗಾಂಧಿಯನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವ ಹಿನ್ನೆಲೆಯಲ್ಲಿ ಸೋಮವಾರ ನಡೆದ ಸಂಸತ್‌ ಅಧಿವೇಶನದಲ್ಲಿ ಕಾಂಗ್ರೆಸ್ ಸಂಸದರು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದ್ದಾರೆ. ಲೋಕಸಭಾ ಕಲಾಪವನ್ನು ಸಂಜೆ 4 ಗಂಟೆವರೆಗೆ ಮುಂದೂಡಲಾಗಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಪ್ಪು ಬಟ್ಟೆ ಧರಿಸಿ ಆಗಮಿಸಿದ್ದರು. ರಾಹುಲ್ ಗಾಂಧಿ ಮೋದಿ ಉಪನಾಮದ ಕುರಿತು ಹೇಳಿಕೆ ನೀಡಿದ್ದಕ್ಕಾಗಿ ಸೂರತ್ ನ್ಯಾಯಾಲಯವು ಅವರು ದೋಷಿ ಎಂದು ತೀರ್ಪು ನೀಡಿತ್ತು. ಜತೆಗೆ 2 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಇದೀಗ ಅವರು

ಲೋಕಸಭೆಯಿಂದ ರಾಹುಲ್‌ ಗಾಂಧಿ ಅನರ್ಹತೆ : ಕಾಂಗ್ರೆಸ್ ಸಂಸದರು ಸಂಸತ್​ನಲ್ಲಿ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ Read More »

ಸಿ.ಟಿ.ರವಿ ಅವರಿಗೆ ಮತಿಭ್ರಮಣೆಯಾಗಿದೆ, ನಿಮ್ಹಾನ್ಸ್‌ಗೆ ಸೇರಿಸಿ : ಡಿಕೆಶಿ

ಡಿ.ಕೆ.ಬ್ರದರ್ಸ್‌ ಹೇಳಿಕೆಗೆ ತಿರುಗೇಟು ಬೆಂಗಳೂರು : ಸೋಲುವ ಭೀತಿಯಿಂದಾಗಿ ಸಿ.ಟಿ.ರವಿ ಅವರಿಗೆ ಮತಿಭ್ರಮಣೆಯಾಗಿದೆ. ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದು, ಕೂಡಲೇ ಅವರಿಗೆ ನಿಮ್ಹಾನ್ಸ್‌ ಅಥವಾ ಬೇರೆ ಯಾವುದಾದರೂ ಮಾನಸಿಕ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.ಶಾಲಾ ಮಕ್ಕಳನ್ನು ಗುರಿಯಾಗಿಸಿಕೊಂಡು ಕುಕ್ಕರ್‌ನಲ್ಲಿ ಬಾಂಬ್‌ ಇಡುವ ಕೆಲಸವನ್ನು ಡಿ.ಕೆ.ಬ್ರದರ್ಸ್‌ ಮಾಡಿದ್ದರು ಎಂಬ ಸಿ.ಟಿ.ರವಿ ಅವರ ವಿವಾದಾತ್ಮಕ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಅವರು, ರವಿ ಹೇಳಿಕೆ ಬಗ್ಗೆ ಮಾನನಷ್ಟ ಮೊಕದ್ದಮೆ ಹೂಡುವ ಬಗ್ಗೆಯೂ ಪರಿಶೀಲಿಸುವುದಾಗಿ ತಿಳಿಸಿದರು. ಮುಖ್ಯಮಂತ್ರಿಗಳು,

ಸಿ.ಟಿ.ರವಿ ಅವರಿಗೆ ಮತಿಭ್ರಮಣೆಯಾಗಿದೆ, ನಿಮ್ಹಾನ್ಸ್‌ಗೆ ಸೇರಿಸಿ : ಡಿಕೆಶಿ Read More »

ಸಾವರ್ಕರ್‌ ಅವರನ್ನು ಅವಮಾನಿಸಬೇಡಿ ಎಂದು ರಾಹುಲ್‌ಗೆ ಉದ್ಧವ್‌ ಎಚ್ಚರಿಕೆ

ಮೈತ್ರಿಯಲ್ಲಿ ಬಿರುಕು ಉಂಟಾದೀತು ಎಂದು ತಾಕೀತು ಮುಂಬಯಿ : ಸಾವರ್ಕರ್‌ ಅವರನ್ನು ಅವಮಾನಿಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ಅವರ ಮಿತ್ರ ಪಕ್ಷವೇ ತಿರುಗಿ ಬಿದ್ದಿದೆ. ಸಾವರ್ಕರ್ ನಮ್ಮ ದೇವರು ಅವರನ್ನು ಅವಮಾನಿಸಿದರೆ ನಾವು ಸಹಿಸುವುದಿಲ್ಲ ಎಂದು ಮಹಾರಾಷ್ಟ್ರದಲ್ಲಿ ಕಾಂಗ್ರ್‌ನ ಮಿತ್ರ ಪಕ್ಷವಾಗಿರುವ ಶಿವಸೇನೆ (ಉದ್ಧವ್‌ ಬಣ) ಮುಖಂಡ, ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ. ರಾಹುಲ್ ಗಾಂಧಿ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿರುವ ಅವರು, ನಮ್ಮ ಪ್ರಜಾಪ್ರಭುತ್ವವನ್ನು ರಕ್ಷಿಸಲು ನಾವು ಒಟ್ಟಾಗಿ ಹೋರಾಡಬೇಕಿದೆ, ಸಾವರ್ಕರ್ ಅವರು

ಸಾವರ್ಕರ್‌ ಅವರನ್ನು ಅವಮಾನಿಸಬೇಡಿ ಎಂದು ರಾಹುಲ್‌ಗೆ ಉದ್ಧವ್‌ ಎಚ್ಚರಿಕೆ Read More »

ಬಿಜೆಪಿ ಯುವಮೋರ್ಚಾ ವತಿಯಿಂದ ಬೈಕ್ ರ್ಯಾಲಿ

ಪುತ್ತೂರು : ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಇಂಡಸ್ಟ್ರೀಯಲ್ ಏರಿಯಾಕ್ಕೆ 100 ಎಕ್ರೆ ಜಾಗ ಮಂಜೂರು ಮಾಡಲಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು. ಬಿಜೆಪಿ ಯುವ ಮೋರ್ಚಾ ವತಿಯಿಂದ ಭಾನುವಾರ ಹಮ್ಮಿಕೊಂಡ ಬೈಕ್ ಜಾಥಾದ ಅಂಗವಾಗಿ ಕಲ್ಲೇಗ ಸಭಾ ವೇದಿಕೆಯಲ್ಲಿ ನಡೆದ ಜಾಥಾದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಕ್ರೀಡೆಗೆ ಪೂರಕವಾಗಿ ಪುತ್ತೂರಿನ ತೆಂಕಿದಲ್ಲಿ ಈಗಾಲೇ ಜಾಗ ಖರೀದಿ ಮಾಡಲಾಗಿದೆ ಎಂದ ಅವರು, ಪುತ್ತೂರಿನಲ್ಲಿ ಮತ್ತೊಮ್ಮೆ ಕಮಲ ಅರಳಿಸುವ ಸಂದೇಶವನ್ನು ಬೈಕ್ ಜಾಥಾ ಮೂಲಕ ಆಯೋಜಿಸಿದ ಯುವ

ಬಿಜೆಪಿ ಯುವಮೋರ್ಚಾ ವತಿಯಿಂದ ಬೈಕ್ ರ್ಯಾಲಿ Read More »

ರಾಹುಲ್‌ ಗಾಂಧಿಯ ಸಂಸತ್‌ ಸದಸ್ಯತ್ವ ಅನರ್ಹಗೊಳಿಸಿರುವುದನ್ನು ಪ್ರತಿಭಟಿಸಿ ಇಂದು ಕಾಂಗ್ರೆಸ್‌ ಸಂಕಲ್ಪ ಸತ್ಯಾಗ್ರಹ

ರಾಜಧಾನಿ, ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ದೆಹಲಿ : ರಾಹುಲ್‌ ಗಾಂಧಿಯ ಸಂಸತ್‌ ಸದಸ್ಯತ್ವ ಅನರ್ಹಗೊಳಿಸಿರುವುದನ್ನು ಪ್ರತಿಭಟಿಸಿ ಕಾಂಗ್ರೆಸ್‌ ಇಂದು ದಿಲ್ಲಿ ಹಾಗೂ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸತ್ಯಾಗ್ರಹ ನಡೆಸಲಿದೆ.ಜಾತಿ ನಿಂದನೆ ಪ್ರಕರಣದಲ್ಲಿ 2 ವರ್ಷ ಜೈಲು ಶಿಕ್ಷೆಗೊಳಗಾದ ಬಳಿಕ ರಾಹುಲ್‌ ಗಾಂಧಿಯನ್ನು ಸಂಸತ್‌ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ಇದು ಸರಕಾರದ ನಿರಂಕುಶ ನಡೆ ಎಂದು ಆರೋಪಿಸಿ ಕಾಂಗ್ರೆಸ್‌ ಪ್ರತಿಭಟಿಸುತ್ತಿದೆ. ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾಡ್ರಾ ರಾಜ್‌ ಘಾಟ್‌ನಲ್ಲಿ ಸತ್ಯಾಗ್ರಹ

ರಾಹುಲ್‌ ಗಾಂಧಿಯ ಸಂಸತ್‌ ಸದಸ್ಯತ್ವ ಅನರ್ಹಗೊಳಿಸಿರುವುದನ್ನು ಪ್ರತಿಭಟಿಸಿ ಇಂದು ಕಾಂಗ್ರೆಸ್‌ ಸಂಕಲ್ಪ ಸತ್ಯಾಗ್ರಹ Read More »

error: Content is protected !!
Scroll to Top