ದೇಶ

ಮಣಿಪುರ: ಹಿಂಸಾ ನಿರತ 40 ಕುಕಿ ಉಗ್ರರ ಹತ್ಯೆಗೈದ ಕಮಾಂಡೋ

ಹೊಸದಿಲ್ಲಿ : ಮಣಿಪುರದಲ್ಲಿ ಹಿಂಸಾಚಾರ ನಡೆಸುತ್ತಿರುವ ಕುಕಿ ಉಗ್ರರನ್ನು ನಿಗ್ರಹಿಸಲು ಅಲ್ಲಿನ ಪೊಲೀಸ್ ಪಡೆಯ ಕಮಾಂಡೋಗಳು ಉಗ್ರ ಕಾರ್ಯಾಚರಣೆ ನಡೆಸಿದ್ದಾರೆ. ಭಾನುವಾರ ಬೆಳಗ್ಗಿನಿಂದ ಮಣಿಪುರದ ವಿವಿಧೆಡೆ ಕಮಾಂಡೊಗಳು ಸಾಕಷ್ಟು ದಂಗೆಕೋರರನ್ನು ಹತ್ಯೆಗೈಯುವಲ್ಲಿ ಸಫಲರಾಗಿದ್ದಾರೆ. ಸುಮಾರು 40 ಉಗ್ರರನ್ನು ಹತ್ಯೆಗೈಯ್ಯಲಾಗಿದೆ ಎಂದು ಮಣಿಪುರದ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ತಿಳಿಸಿದ್ದಾರೆ. ಈ ಉಗ್ರರು ಎಂ-16 ಮತ್ತು ಎಕೆ-47 ರೈಫಲ್​ಗಳು ಮತ್ತು ಸ್ನೈಪರ್ ಗನ್​ಗಳನ್ನು ಜನಸಾಮಾನ್ಯರ ಮೇಲೆ ಉಪಯೋಗಿಸುತ್ತಿದ್ದಾರೆ. ಹಳ್ಳಿಗಳಿಗೆ ಹೋಗಿ ಮನೆಗಳನ್ನು ಸುಟ್ಟುಹಾಕುತ್ತಿದ್ದಾರೆ. ನಮ್ಮ ಸೇನೆ ಮತ್ತು ಭದ್ರತಾ […]

ಮಣಿಪುರ: ಹಿಂಸಾ ನಿರತ 40 ಕುಕಿ ಉಗ್ರರ ಹತ್ಯೆಗೈದ ಕಮಾಂಡೋ Read More »

ಸಂಸತ್‌ ಭವನದಲ್ಲಿ ಸೆಂಗೋಲ್‌ ಪ್ರತಿಷ್ಠಾಪನೆ

ಹೊಸದಿಲ್ಲಿ : ಬ್ರಿಟಿಷರು ಭಾರತ ಬಿಟ್ಟು ಹೋಗುವಾಗ ಅಧಿಕಾರ ಹಸ್ತಾಂತರದ ಸಂಕೇತವಾಗಿ ನೀಡಿದ್ದ ಐತಿಹಾಸಿಕ ಸೆಂಗೋಲ್‌ ಅನ್ನು ಪ್ರಧಾನಿ ನರೇಂದ್ರ ಮೋದಿ ಇಂದು ನೂತನ ಸಂಸತ್‌ ಭವನದಲ್ಲಿ ಸ್ಪೀಕರ್‌ ಪೀಠದ ಬದಿಯಲ್ಲಿ ಪ್ರತಿಷ್ಠಾಪಿಸಿದರು. ಪುರೋಹಿತರಿಂದ ಸೆಂಗೋಲ್​​ ಸ್ವೀಕರಿಸಿದ ಪ್ರಧಾನಿ ಮೋದಿ ದಶದಿಕ್ಕುಗಳಿಗೂ ನಮಸ್ಕರಿಸಿ ಅದನ್ನು ಭಕ್ತಿಭಾವದಿಂದ ಸ್ಪೀಕರ್‌ ಆಸನದ ಬಳಿಯಲ್ಲಿ ಅದಕ್ಕಾಗಿ ರಚಿಸಿದ್ದ ಪೀಠದ ಬಳಿಗೊಯ್ದರು. ಬಳಿಕ ಸ್ಪೀಕರ್‌ ಓಂ ಬಿರ್ಲಾ ಅವರನ್ನು ಕರೆದು ಅವರ ಜತೆಗೂಡಿ ಸೆಂಗೋಲ್‌ ಪ್ರತಿಷ್ಠಾಪಿಸಿದರು. ಸಂಸತ್ ಭವನ ಪ್ರವೇಶಿಸಿದ ಮೋದಿಯವರು  ಮೊದಲಿಗೆ

ಸಂಸತ್‌ ಭವನದಲ್ಲಿ ಸೆಂಗೋಲ್‌ ಪ್ರತಿಷ್ಠಾಪನೆ Read More »

ನೂತನ ಸಂಸತ್ ಕಟ್ಟಡ ವಿವಾದ: ರಾಷ್ಟ್ರಪತಿಯೇ ಉದ್ಘಾಟಿಸಬೇಕೆಂದು ಕೋರಿ ಸುಪ್ರೀಂಗೆ ಪಿಐಎಲ್ ಸಲ್ಲಿಕೆ

ನವದೆಹಲಿ: ನೂತನ ಸಂಸತ್ ಕಟ್ಟಡವನ್ನು ಮೇ 28 ರಂದು  ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೇ ಉದ್ಘಾಟಿಸಬೇಕು ಎಂದು ನಿರ್ದೇಶನ ನೀಡುವಂತೆ ಕೋರಿ ಗುರುವಾರ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಲೋಕ ಸಭೆಯ ಸಚಿವಾಲಯವು ರಾಷ್ಟ್ರಪತಿಗಳನ್ನು ಉದ್ಘಾಟನೆಗೆ ಆಹ್ವಾನಿಸದೆ ಸಂವಿಧಾನವನ್ನು ಉಲ್ಲಂಘಿಸಿದೆ ಎಂದು ಪಿಐಎಲ್ ನಲ್ಲಿ ಹೇಳಲಾಗಿದೆ. ನೂತನ ಸಂಸತ್ ಭವನದ ಉದ್ಘಾಟನೆ ಕುರಿತು ಮೇ 18 ರಂದು  ಲೋಕಸಭೆಯ ಕಾರ್ಯದರ್ಶಿ ನೀಡಿದ ಹೇಳಿಕೆ ಮತ್ತು ರಾಷ್ಟ್ರಪತಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನ ನೀಡದಿರುವುದು ಸಂವಿಧಾನದ ಉಲ್ಲಂಘನೆಯಾಗಿದೆ ಎಂದು

ನೂತನ ಸಂಸತ್ ಕಟ್ಟಡ ವಿವಾದ: ರಾಷ್ಟ್ರಪತಿಯೇ ಉದ್ಘಾಟಿಸಬೇಕೆಂದು ಕೋರಿ ಸುಪ್ರೀಂಗೆ ಪಿಐಎಲ್ ಸಲ್ಲಿಕೆ Read More »

ವಿಜಯ್‌ ಮಲ್ಯ ಒಡೆತನದಲ್ಲಿದ್ದ ಟಿಪ್ಪುವಿನ ಖಡ್ಗ 145 ಕೋಟಿ ರೂ. ಗೆ ಹರಾಜು

ಬೆಂಗಳೂರು: ಮೈಸೂರಿನ ಹುಲಿ ಎಂದೇ ಖ್ಯಾತರಾಗಿರುವ ಟಿಪ್ಪು ಸುಲ್ತಾನ್ ಗೆ ಸೇರಿದ್ದ ಖಡ್ಗವನ್ನು ಮಂಗಳವಾರ ಲಂಡನ್‌ನ ಬೊನ್ಹಾಮ್‌ನಲ್ಲಿ ಹರಾಜು ಹಾಕಲಾಗಿದ್ದು, ಈ ಖಡ್ಗ ಬರೋಬ್ಬರಿ ರೂ. 145 ಕೋಟಿಗೆ ಹರಾಜಾಗಿದೆ. ಈ ಹಿಂದೆ ವಿಜಯ್‌ ಮಲ್ಯ ಒಡೆತನದಲ್ಲಿ ಇದ್ದ ಈ ಖಡ್ಗವನ್ನು ಮಲ್ಯ ಅವರಿಂದ ರೂ 1.5 ಕೋಟಿಗೆ ಪಡೆದುಕೊಳ್ಳಲಾಗಿತ್ತು. ಈ ಖಡ್ಗವನ್ನು ಮಲ್ಯ 2004ರಲ್ಲಿ ಕೊಂಡುಕೊಂಡಿದ್ದರು. ಬ್ಯಾಂಕ್‌ಗಳಿಗೆ ಸಾಲ ಮರುಪಾವತಿಸದೆ ವಂಚಿಸಿದ ಆರೋಪ ಎದುರಿಸುತ್ತಿರುವ ಮಲ್ಯ ಈ ಖಡ್ಗ ತಮ್ಮ ಕುಟುಂಬಕ್ಕೆ ದುರದೃಷ್ಟವಾಗಿದೆ ಎಂದು ಹೇಳಿಕೊಂಡು

ವಿಜಯ್‌ ಮಲ್ಯ ಒಡೆತನದಲ್ಲಿದ್ದ ಟಿಪ್ಪುವಿನ ಖಡ್ಗ 145 ಕೋಟಿ ರೂ. ಗೆ ಹರಾಜು Read More »

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಸಚಿವರ ಮನೆ ಧ್ವಂಸ

ಇಂಫಾಲ: ಘರ್ಷಣೆ ಪೀಡಿತ ಮಣಿಪುರದ ಬಿಷ್ಣುಪುರ್ ಹಾಗೂ ಚುರಾಚಂದ್‌ಪುರ ಜಿಲ್ಲೆಗಳ ಗಡಿ ಪ್ರದೇಶದಲ್ಲಿ ಶಂಕಿತ ಉಗ್ರರು ಹಾಗೂ  ಜನರ ಗುಂಪಿನ ನಡುವೆ ನಡೆದ ಹೊಸ ಹಿಂಸಾಚಾರದಲ್ಲಿ ಓರ್ವ  ಸಾವನ್ನಪ್ಪಿದ್ದಾನೆ ಹಾಗೂ ಇನ್ನೊಬ್ಬನು ಗಾಯಗೊಂಡಿದ್ದಾನೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಏತನ್ಮಧ್ಯೆ, ಹಿಂಸಾಚಾರ ಪೀಡಿತ ರಾಜ್ಯದಲ್ಲಿ ಸರಕಾರವು ಮತ್ತೊಂದು ಸಮುದಾಯಕ್ಕೆ ಸೇರಿದ ಉಗ್ರಗಾಮಿಗಳಿಂದ ಸ್ಥಳೀಯರನ್ನು ರಕ್ಷಿಸಲು ಸಾಕಷ್ಟು ಕೆಲಸ  ಮಾಡುತ್ತಿಲ್ಲ ಎಂದು ಆರೋಪಿಸಿ ಮಣಿಪುರದ ಪಿಡಬ್ಲ್ಯೂಡಿ ಸಚಿವ ಕೊಂತೌಜಮ್ ಗೋವಿಂದಸ್ ಅವರ ಬಿಷ್ಣುಪುರ ಜಿಲ್ಲೆಯಲ್ಲಿರುವ  ಮನೆಯನ್ನು ಬುಧವಾರ ಧ್ವಂಸಗೊಳಿಸಿದೆ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಸಚಿವರ ಮನೆ ಧ್ವಂಸ Read More »

ನಾಳೆಯಿಂದ 2,000 ರೂ. ನೋಟು ಬದಲಾವಣೆ

ಹೊಸದಿಲ್ಲಿ : ಎರಡು ಸಾವಿರ ರೂ. ಮುಖಬೆಲೆಯ ನೋಟುಗಳನ್ನು ವಾಪಸ್‌ ಪಡೆಯುವ ಪ್ರಕ್ರಿಯೆ ಬ್ಯಾಂಕ್‌ಗಳಲ್ಲಿ ಮಂಗಳವಾರದಿಂದ ಶುರುವಾಗಲಿದೆ. ಅದಕ್ಕಾಗಿ ಯಾವುದೇ ಫಾರಂಗಳನ್ನು ಭರ್ತಿ ಮಾಡುವುದು ಅಥವಾ ಗುರುತಿನ ಚೀಟಿ ನೀಡುವ ಅಗತ್ಯವಿಲ್ಲವೆಂದು ಎಸ್‌ಬಿಐ ಸ್ಪಷ್ಟಪಡಿಸಿದೆ. 2 ಸಾವಿರ ರೂ. ನೋಟು ವಿನಿಮಯ ಮಾಡಲು ಕೋರಿಕೆ ರಸೀತಿ (ರಿಕ್ವಿಸಿಷನ್‌ ಸ್ಲಿಪ್‌), ಗುರುತಿನ ಚೀಟಿ ನೀಡಬೇಕು, ಫಾರಂ ಭರ್ತಿ ಮಾಡಿಕೊಡಬೇಕು ಎಂದು ಹಲವು ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿದ್ದವು. ನೋಟು ವಿನಿಮಯ ಕೌಂಟರ್‌ಗಳಲ್ಲಿ ಒಂದು ಬಾರಿಗೆ ಒಬ್ಬರಿಂದ 20 ಸಾವಿರ ರೂ.ವರೆಗೆ

ನಾಳೆಯಿಂದ 2,000 ರೂ. ನೋಟು ಬದಲಾವಣೆ Read More »

ಹೀಗೆ ಬದಲಾಯಿಸಿಕೊಳ್ಳಿ 2,000 ರೂ. ನೋಟು

ಬೆಂಗಳೂರು: 2,000 ರೂ. ಮುಖಬೆಲೆಯ ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ಹಿಂದೆಗೆದುಕೊಂಡ ಬಳಿಕ ಈ ಕುರಿತು ಹಲವು ಗೊಂದಲಕಾರಿ ಮಾಹಿತಿಗಳು ಹರಿದಾಡುತ್ತಿವೆ. ಇದು 2016ರ ನೋಟ್‌ ಬ್ಯಾನ್‌ ಮಾದರಿಯ ಕ್ರಮ ಎಂದು ಕೆಲವರು ತಪ್ಪಾಗಿ ಭಾವಿಸಿದ್ದಾರೆ. ನೋಟ್‌ ಬ್ಯಾನ್‌ಗೂ ಚಲಾವಣೆಯಿಂದ ಹಿಂದೆಗೆದುಕೊಳ್ಳುವುದಕ್ಕೂ ವ್ಯತ್ಯಾಸವಿದೆ. ಅಲ್ಲದೆ ಸದ್ಯ 2,000 ರೂ. ನೋಟು ಚಲಾವಣೆ ಬಹಳ ಕಡಿಮೆಯಾಗಿರುವುದರಿಂದ ಜನರಿಗೆ ಈ ನೋಟುಗಳನ್ನು ಹಿಂದೆಗೆದುಕೊಳ್ಳುವುದರಿಂದ ಹೆಚ್ಚು ಸಮಸ್ಯೆಯಾಗುವುದಿಲ್ಲ. 2,000 ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಬದಲಾಯಿಸಿಕೊಳ್ಳಲು ಮುಂಬರುವ ಸೆಪ್ಷಟಂಬರ್‌ 30ರ ತನಕ ಸಮಯ ಇದೆ ಎಂದು

ಹೀಗೆ ಬದಲಾಯಿಸಿಕೊಳ್ಳಿ 2,000 ರೂ. ನೋಟು Read More »

ಕಂಬಳ ಸಿಂಧುತ್ವ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

ದೆಹಲಿ: ಕರಾವಳಿಯ ಗ್ರಾಮೀಣ ಕ್ರೀಡೆ ಕಂಬಳದ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದ್ದು, ಈ ಮೂಲಕ ಕಂಬಳಕ್ಕಿದ್ದ ದೊಡ್ಡ ತೊಡಕೊಂದು ನಿವಾರಣೆಯಾದಂತಾಗಿದೆ. ಕರ್ನಾಟಕದ ಕಂಬಳ, ತಮಿಳುನಾಡಿನ ಜಲ್ಲಿಕಟ್ಟು ಹಾಗೂ ಮಹಾರಾಷ್ಟ್ರದ ಎತ್ತಿನ ಗಾಡಿ ಓಟದ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಪ್ರಾಣಿಗಳನ್ನು ಹಿಂಸಿಸಲಾಗುತ್ತಿದೆ ಎನ್ನುವ ವಿಚಾರದಲ್ಲಿ ಪ್ರಕರಣ ಸುಪ್ರೀಂ ಮೆಟ್ಟಿಲೇರಿತ್ತು. ಸಲ್ಲಿಕೆ ಆಗಿರುವ ಅರ್ಜಿಗಳಿಗೆ ಸಂಬಂಧಿಸಿ ಸುಪ್ರಿಂ ಕೋರ್ಟ್‌ನ ಸಾಂವಿಧಾನಿಕ ಪೀಠ ಮೇ 18ರಂದು ತನ್ನ ತೀರ್ಪು ನೀಡಿದ್ದು, ಜಲ್ಲಿಕಟ್ಟು ಸ್ಪರ್ಧೆಗೆ ಅನುಮತಿ ನೀಡಿ ಎಂದು

ಕಂಬಳ ಸಿಂಧುತ್ವ ಎತ್ತಿ ಹಿಡಿದ ಸುಪ್ರೀಂ ಕೋರ್ಟ್ Read More »

ಆದಾಯ ತೆರಿಗೆ ಇಲಾಖೆಯ ವೆಬ್​ಸೈಟ್ ಹ್ಯಾಕ್​ : ಓರ್ವ ಸಿಐಡಿ ವಶಕ್ಕೆ

ಬೆಂಗಳೂರು : ಕರ್ನಾಟಕದ ಅತಿದೊಡ್ಡ ಸೈಬರ್ ವಂಚಕನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ದಿಲೀಪ್ ರಾಜೇಗೌಡ ಬಂಧಿತ ಆರೋಪಿ. ಇನ್ನು ಆರೋಪಿಯನ್ನು ಸೆರೆ ಹಿಡಿಯಲು ಸಿಐಡಿ ಎಸ್​ಪಿ ಎಂ.ಡಿ ಶರತ್ ನೇತೃತ್ವದಲ್ಲಿ ವಿಶೇಷ ತಂಡ ಕಾರ್ಯಾಚರಣೆ ನಡೆಸಿತ್ತು. ಆದಾಯ ತೆರಿಗೆ ಇಲಾಖೆಯ ವೆಬ್​ಸೈಟ್​ನಲ್ಲಿನ ಲೋಪವನ್ನು ತಿಳಿದುಕೊಂಡ ಆರೋಪಿ, ಆ ಲೋಪದ ಮೂಲಕ ತೆರಿಗೆ ಕಟ್ಟಿದ್ದವರಿಗೆ ಸಲ್ಲಬೇಕಿದ್ದ ರೀ ಫಂಡ್ಸ್​ ಹಣವನ್ನು​ ತನ್ನ ಖಾತೆಗೆ ಜಾಮಾ ಮಾಡಿಕೊಳ್ಳುತ್ತಿದ್ದನು. ಹೀಗೆ ಆದಾಯ ತೆರಿಗೆ ಇಲಾಖೆಗೆ ಬರೋಬ್ಬರಿ 1,41,84,360 ರೂ. ಹಣವನ್ನು ವಂಚಿಸಿರುವುದು

ಆದಾಯ ತೆರಿಗೆ ಇಲಾಖೆಯ ವೆಬ್​ಸೈಟ್ ಹ್ಯಾಕ್​ : ಓರ್ವ ಸಿಐಡಿ ವಶಕ್ಕೆ Read More »

ಇಂದು ರಾಜ್ಯಕ್ಕೆ ಯೋಗಿ ಆದಿತ್ಯನಾಥ್‌ ಭೇಟಿ

ಚುನಾವಣಾ ಪ್ರಚಾರದಲ್ಲಿ ಕೇಂದ್ರದ ನಾಯಕರು ಭಾಗಿ ಬೆಂಗಳೂರು: ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಕೇಂದ್ರ ಸಚಿವರು ಮತ್ತು ಬಿಜೆಪಿಯ ಪ್ರಮುಖ ನಾಯಕರ ದಂಡೇ ರಾಜ್ಯಕ್ಕೆ ಆಗಮಿಸುತ್ತಿದೆ. ವಿವಿಧ ರಾಜ್ಯಗಳ ಸಿಎಂ, ಡಿಸಿಎಂ ಮತ್ತು ಕೇಂದ್ರ ಸಚಿವರು ಆಗಮಿಸುತ್ತಿದ್ದಾರೆ. ಇಂದು ಮಂಡ್ಯ ಮತ್ತು ವಿಜಯಪುರ ಜಿಲ್ಲೆಗೆ ಹಿಂದೂ ಫಯರ್​ ಬ್ರ್ಯಾಂಡ್​ ಲೀಡರ್‌ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಆಗಮಿಸಲಿದ್ದಾರೆ.ಲಖನೌನಿಂದ ಮೈಸೂರಿಗೆ ಆಗಮಿಸುವ ಯೋಗಿ ಆದಿತ್ಯನಾಥ್​​ 11 ಗಂಟೆಗೆ ಮಂಡ್ಯದಲ್ಲಿ ನಡೆಯುವ ರೋಡ್​​ ಶೋ ಮತ್ತು ಪ್ರಚಾರ ಸಭೆಯಲ್ಲಿ ಭಾಗಿಯಾಗುತ್ತಾರೆ.

ಇಂದು ರಾಜ್ಯಕ್ಕೆ ಯೋಗಿ ಆದಿತ್ಯನಾಥ್‌ ಭೇಟಿ Read More »

error: Content is protected !!
Scroll to Top