ದೇಶ

ಲೋಕಸಭಾ ಚುನಾವಣೆ : ಸೂರತ್ ನಲ್ಲಿ ಅವಿರೋಧ ಆಯ್ಕೆ ಮೂಲಕ ಖಾತೆ ತೆರೆದ ಬಿಜೆಪಿ

ನವದೆಹಲಿ: ಸೂರತ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಮುಖೇಶ್ ದಲಾಲ್ ಅವಿರೋಧವಾಗಿ ಆಯ್ಕೆಯಾಗುವ ಮೂಲಕ 2024 ರ ಲೋಕಸಭೆಯಲ್ಲಿ ಬಿಜೆಪಿ ಮೊದಲ ಖಾತೆಯನ್ನು ತೆರೆದಿದೆ. ಈ ಹಿಂದೆ ಕಾಂಗ್ರೆಸ್ ಅಭ್ಯರ್ಥಿ ನಿಲೇಶ್ ಕುಂಬಾನಿ ಅವರ ನಾಮಪತ್ರಕ್ಕೆ ಸಹಿ ಹಾಕಿಲ್ಲ ಎಂದು ಅವರ ಪ್ರಸ್ತಾಪಕರು ಹೇಳಿದ ನಂತರ ಚುನಾವಣಾ ಆಯೋಗ ಅವರ ನಾಮಪತ್ರವನ್ನು ತಿರಸ್ಕರಿಸಿತ್ತು. ಸೂರತ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಿಲೇಶ್ ಕುಂಭಾನಿ ಅವರ ನಾಮಪತ್ರವೂ ತಿರಸ್ಕೃತಗೊಂಡಿದೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸುರೇಶ್ ಪಡ್ವಾಲ ಅವರಿಗೂ […]

ಲೋಕಸಭಾ ಚುನಾವಣೆ : ಸೂರತ್ ನಲ್ಲಿ ಅವಿರೋಧ ಆಯ್ಕೆ ಮೂಲಕ ಖಾತೆ ತೆರೆದ ಬಿಜೆಪಿ Read More »

ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷರಾಗಿ ಮಹೇಶ್ ಪುಚ್ಚಪ್ಪಾಡಿ,  ಕಾರ್ಯದರ್ಶಿಯಾಗಿ ವೆಂಕಟಗಿರೀಶ್ ಸಿ.ಜಿ

ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ನೂತನ ಅಧ್ಯಕ್ಷರಾಗಿ ಗುತ್ತಿಗಾರು ಕಮಿಲದ ಮಹೇಶ್ ಪುಚ್ಚಪ್ಪಾಡಿ ಹಾಗೂ ಕಾರ್ಯದರ್ಶಿಯಾಗಿ ಕೋಡಪದವು ಕೆಲಿಂಜದ ವೆಂಕಟಗಿರೀಶ್ ಸಿ.ಜಿ. ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಉಪಾಧ್ಯಕ್ಷರಾಗಿ ಶಂ. ನಾ. ಖಂಡಿಗೆ ಪೆರ್ಲ, ಎಂ.ಡಿ. ವಿಜಯಕುಮಾರ್ ಮಡಪ್ಪಾಡಿ ಹಾಗೂ ಜತೆ ಕಾರ್ಯದರ್ಶಿಯಾಗಿ ಸಾಯಿಶೇಖರ್ ಕರಿಕಳ ಪಂಜ ಆಯ್ಕೆಯಾದರು. ಸಂಘದ ನಿಕಟಪೂರ್ವ ಅಧ್ಯಕ್ಷ ಅಶೋಕ್ ಕಿನಿಲ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷರಾಗಿ ಮಹೇಶ್ ಪುಚ್ಚಪ್ಪಾಡಿ,  ಕಾರ್ಯದರ್ಶಿಯಾಗಿ ವೆಂಕಟಗಿರೀಶ್ ಸಿ.ಜಿ Read More »

ಸಂಭ್ರಮದ ಶ್ರೀ ರಾಮ ನವಮಿ | ಅಯೋಧ್ಯೆ ಶ್ರೀ ರಾಮಲಲ್ಲಾನಿಗೆ ಸೂರ್ಯ ಕಿರಣದ ತಿಲಕ

ಅಯೋಧ್ಯೆ: ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರದಲ್ಲಿ ಶ್ರೀರಾಮನವಮಿ ಸಂಭ್ರಮ ಮುಗಿಲು ಮುಟ್ಟಿದೆ. ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಬಳಿಕ ಮೊದಲ ರಾಮನವಮಿಯನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. ಶ್ರೀರಾಮ ನವಮಿಯಂದು ಬಾಲರಾಮನಿಗೆ ಸೂರ್ಯ ರಶ್ಮಿ ಸ್ಪರ್ಶವಾಗಿದೆ.  ಸೂರ್ಯವಂಶದ ರಘುರಾಮನಿಗೆ ಸೂರ್ಯ ಭಗವನನಿಂದ ಅಭಿಷೇಕ ಮಾಡಲಾಗಿದೆ. ಇಂದು ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ರಾಮಲಲ್ಲಾನಿಗೆ ಸೂರ್ಯ ರಶ್ಮಿ ಸ್ಪರ್ಶ ಮಾಡಿದ್ದು, ಸುಮಾರು 70 ಮಿ.ಮೀ ಉದ್ದದ ತಿಲಕ ಹಣೆ ಮೇಲೆ ಮೂಡಿದೆ.

ಸಂಭ್ರಮದ ಶ್ರೀ ರಾಮ ನವಮಿ | ಅಯೋಧ್ಯೆ ಶ್ರೀ ರಾಮಲಲ್ಲಾನಿಗೆ ಸೂರ್ಯ ಕಿರಣದ ತಿಲಕ Read More »

ರಾಮಾಯಣ ಪುಸ್ತಕ ಅರ್ಪಿಸಿದ ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮೀ ನಾರಾಯಣ್‌

ಅಯೋಧ್ಯೆ: ಅಯೋಧ್ಯೆಯ ಪ್ರಭು ಶ್ರೀರಾಮನಿಗೆ ಸುಮಾರು 151 ಕೆಜಿ ತೂಕದ ರಾಮಚರಿತ ಮಾನಸ ಪ್ರತಿಯನ್ನು 5 ಕೋಟಿ ಮೊತ್ತದಲ್ಲಿ ತಯಾರಿಸಿದ್ದು, ಇದಕ್ಕೆ ಏಳು ಕೆಜಿ ಚಿನ್ನದ ಲೇಪನ ಮಾಡಲಾಗಿದೆ. ಬಾಲ ರಾಮನಿಗೆ 24 ಕ್ಯಾರೆಟ್ ಚಿನ್ನದ ರಾಮಾಯಣವನ್ನು ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮೀ ನಾರಾಯಣ್‌ ಅವರು ಸಮರ್ಪಿಸಿದ್ದಾರೆ.24 ಕ್ಯಾರೆಟ್ ಚಿನ್ನದ ಲೇಪನದಿಂದ ಕೂಡಿರುವ ರಾಮಚರಿತ ಮಾನಸ 10,902 ಕಾವ್ಯಗಳನ್ನು ಒಳಗೊಂಡಿದೆ. ಈ ಚಿನ್ನದ ಕೃತಿಯಲ್ಲಿ ಸುಮಾರು 480 ರಿಂದ 500 ಪುಟಗಳು ಇವೆ ಎಂದು ಮೂಲಗಳು ತಿಳಿಸಿವೆ.

ರಾಮಾಯಣ ಪುಸ್ತಕ ಅರ್ಪಿಸಿದ ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮೀ ನಾರಾಯಣ್‌ Read More »

ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸಲು ಹೋಗಿ ಒಂದೇ ಮನೆಯ ಐದು ಮಂದಿ ಸಾವು

ಮಹಾರಾಷ್ಟ್ರ : ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸಲು ಹೋಗಿ ಒಂದೇ ಮನೆಯ ಆರು ಜನರು ಬಾವಿಗೆ ಬಿದ್ದ ಘಟನೆ ನೆವಾಸ ತಾಲೂಕಿನ ವಕಾಡಿ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.ಪಾಳು ಬಿದ್ದ ಬಾವಿಯನ್ನು ಮುಚ್ಚಲಾಗಿತ್ತು. ಅದರಲ್ಲಿ ಕಸವನ್ನು ಶೇಖರಣೆ ಮಾಡಲಾಗಿತ್ತು. ಹೀಗಾಗಿ ಅದರಲ್ಲಿ ವಿಷ ಅನಿಲ ಸೇರಿತ್ತು ಎನ್ನಲಾಗುತ್ತಿದೆ. ಇದೇ ಬಾವಿಗೆ ಮನೆಯ ಬೆಕ್ಕು ಬಿದ್ದದ್ದನ್ನು ಗಮನಿಸಿದ ಮನೆ ಮಂದಿ ಅದನ್ನು ಕಾಪಾಡಲೆಂದು ಮುಂದಾಗುತ್ತಾರೆ. ಈ ವೇಳೆ ಒಬ್ಬರಂತೆ ಒಬ್ಬರು ಬಾವಿಗೆ ಇಳಿಯುತ್ತಾರೆ. ಒಟ್ಟು ಆರು ಜನರು ಬಾವಿಗೆ ಇಳಿದಿದ್ದು,

ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸಲು ಹೋಗಿ ಒಂದೇ ಮನೆಯ ಐದು ಮಂದಿ ಸಾವು Read More »

ಚಿನ್ನದ ದರ ಆಕಾಶದತ್ತ ಏರಿಕೆ

ಮುಂಬೈ: ಚಿನ್ನದ ಬೆಲೆ ಗರಿಷ್ಠ ಮಟ್ಟದಲ್ಲಿ ಏರಿಕೆಯಾಗುತ್ತಿದ್ದು, ಸೋಮವಾರ ಒಂದೇ ದಿನ ಚಿನ್ನದ ಬೆಲೆ 10 ಗ್ರಾಂ ಗೆ 1500 ರೂಪಾಯಿ ಏರಿಕೆಯಾಗಿದೆ. ಮೊದಲ ಬಾರಿಗೆ 10 ಗ್ರಾಂ ಚಿನ್ನದ ಬೆಲೆ 70 ಸಾವಿರದ ಗಡಿ ದಾಟಿ 71100 ರೂಪಾಯಿ ತಲುಪಿದೆ. ಭೌಗೋಳಿಕ ಹಾಗೂ ರಾಜಕೀಯ ಅಪಾಯ ಸಾಧ್ಯತೆಗಳು ಮತ್ತು ಕೇಂದ್ರೀಯ ಬ್ಯಾಂಕ್ ಗಳಿಂದ ಖರೀದಿ ಭರಾಟೆಯ ಹಿನ್ನೆಲೆಯಲ್ಲಿ ಚಿನ್ನದ ಬೆಲೆ ಆಕಾಶದತ್ತರಕ್ಕೆ ಏರಿಕೆ ಆಗಿದೆ. ಬೆಳ್ಳಿ ಕೂಡಾ ಇದರಲ್ಲಿ ಪಾಲು ಪಡೆದಿದ್ದು, ಇದೇ ಮೊದಲ ಬಾರಿಗೆ

ಚಿನ್ನದ ದರ ಆಕಾಶದತ್ತ ಏರಿಕೆ Read More »

ವಿಧಾನಸಭೆ ಚುನಾವಣೆ | ವಿರೋಧ ಪಕ್ಷದಿಂದ ಅಭ್ಯರ್ಥಿಯಿಲ್ಲದೆ ಐವರು ಬಿಜೆಪಿ ಅಭ್ಯರ್ಥಿಗಳು ಅವಿರೋಧ ಆಯ್ಕೆ

ಇಟಾನಗರ: ವಿಧಾನಸಭೆ ಚುನಾವಣೆ ಇಲ್ಲದೆ ಬಿಜೆಪಿಯ ಐವರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದ ವಿದ್ಯಮಾನ ನಡೆದಿರುವುದು ಅರುಣಾಚಲ ಪ್ರದೇಶದಲ್ಲಿ. ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಸೇರಿ ಐವರು ಬಿಜೆಪಿ ಅಭ್ಯರ್ಥಿಗಳು ವಿಧಾನಸಭೆಗೆ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ವಿಧಾನಸಭಾ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಬುಧವಾರ ಕೊನೆಯ ದಿನವಾಗಿತ್ತು. ಆದರೆ ಕೊನೇ ಗಳಿಗೆ ತನಕ ಐದು ಕ್ಷೇತ್ರಗಳಿಗೆ ಬೇರೆ ಯಾರೂ ನಾಮಪತ್ರ ಸಲ್ಲಿಸಿಲ್ಲ. ಹೀಗಾಗಿ 5 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅರುಣಾಚಲ ಪ್ರದೇಶದ ಎರಡು ಲೋಕಸಭಾ ಕ್ಷೇತ್ರಗಳು

ವಿಧಾನಸಭೆ ಚುನಾವಣೆ | ವಿರೋಧ ಪಕ್ಷದಿಂದ ಅಭ್ಯರ್ಥಿಯಿಲ್ಲದೆ ಐವರು ಬಿಜೆಪಿ ಅಭ್ಯರ್ಥಿಗಳು ಅವಿರೋಧ ಆಯ್ಕೆ Read More »

ಲೋಕಸಭೆ ಚುನಾವಣೆ | ಬಿಜೆಪಿ ನಾಲ್ಕನೇ ಪಟ್ಟಿ ಬಿಡುಗಡೆ

ನವದೆಹಲಿ: ಬಿಜೆಪಿ ಲೋಕಸಭೆ ಚುನಾವಣೆ ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ 15 ಅಭ್ಯರ್ಥಿಗಳಿಗೆ ಬಿಜೆಪಿ ಟಿಕೆಟ್‌ ನೀಡಿದೆ. ಅದರಲ್ಲೂ, ಬಹುಭಾಷಾ ನಟಿ, ನಟ ಶರತ್‌ಕುಮಾರ್‌ ಅವರ ಪತ್ನಿ ರಾಧಿಕಾ ಶರತ್‌ ಕುಮಾರ್‌ ಅವರಿಗೆ ಬಿಜೆಪಿ ಟಿಕೆಟ್‌ ಘೋಷಿಸಿದೆ. ರಾಧಿಕಾ ಶರತ್‌ ಕುಮಾರ್‌ ಅವರು ತಮಿಳುನಾಡಿನ ವಿರುಧುನಗರ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಪುದುಚೇರಿಯ ಹಾಗೂ ತಮಿಳುನಾಡಿನ 14 ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿಯು ಬಿಡುಗಡೆ ಮಾಡಿದೆ. ತಮಿಳುನಾಡಿನಲ್ಲಿ ಬಿಜೆಪಿ ಬಿಡುಗಡೆ ಮಾಡುತ್ತಿರುವ ಎರಡನೇ ಪಟ್ಟಿ ಇದಾಗಿದೆ.

ಲೋಕಸಭೆ ಚುನಾವಣೆ | ಬಿಜೆಪಿ ನಾಲ್ಕನೇ ಪಟ್ಟಿ ಬಿಡುಗಡೆ Read More »

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನ !

ಹೊಸದಿಲ್ಲಿ: ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮನ್ಸ್ ನೀಡಲು ಜಾರಿ ನಿರ್ದೇಶನಾಲಯದ (ಇ.ಡಿ.) ತಂಡ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಗುರುವಾರ ಬಂಧಿಸಿದೆ. ಕೇಜ್ರಿವಾಲ್ ನಿವಾಸಕ್ಕೆ ಗುರುವಾರ ಸಂಜೆ ಆಗಮಿಸಿದ ತನಿಖಾ ಸಂಸ್ಥೆಯ ತಂಡವು ಮನಿ ಲಾಂಡರಿಂಗ್ ಕಾಯ್ದೆಯ (ಪಿಎಂಎಲ್‌ಎ) ಸೆಕ್ಷನ್ 50 ರ ಅಡಿಯಲ್ಲಿ ದೆಹಲಿ ಮುಖ್ಯಮಂತ್ರಿಯ ಹೇಳಿಕೆಯನ್ನು ದಾಖಲಿಸಿಕೊಂಡು ಬಂಧನ ಮಾಡಿದೆ. ಅರವಿಂದ್ ಕೇಜ್ರಿವಾಲ್ ಅವರ ಕಾನೂನು ತಂಡವು ತತ್ ಕ್ಷಣವೇ ಈ ವಿಷಯದ ತುರ್ತು ವಿಚಾರಣೆಯನ್ನು ಕೋರಿ ಸುಪ್ರೀಂ ಕೋರ್ಟ್‌ಗೆ ಮೊರೆ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನ ! Read More »

ನಾಳೆ ಚುನಾವಣಾ ವೇಳಾ ಪಟ್ಟಿ ಪ್ರಕಟ | ಚುನಾವಣಾ ಆಯುಕ್ತರ ಸುದ್ದಿಗೋಷ್ಠಿಯಲ್ಲಿ ದಿನಾಂಕ ನಿಗದಿ

ನವದೆಹಲಿ : ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಗೆ ಮುಹೂರ್ತ ನಿಗದಿಯಾಗಿದ್ದು, ನಾಳೆ ಮಧ್ಯಾಹ್ನ 3 ಗಂಟೆಗೆ ಕೇಂದ್ರ ಚುನಾವಣಾ ಆಯುಕ್ತರು ಸುದ್ದಿಗೋಷ್ಠಿ ಆಯೋಜಿಸಿದ್ದು, ನಾಳೆಯೇ ಲೋಕಸಭಾ ಚುನಾವಣೆಗೆ ದಿನಾಂಕ ಫಿಕ್ಸ್ ಆಗಲಿದೆ. ನಾಳೆ ಮಧ್ಯಾಹ್ನ 3 ಗಂಟೆಗೆ ದೆಹಲಿಯ ವಿಜ್ಞಾನ್ ಭವನದಲ್ಲಿ ಚುನಾವಣಾ ಆಯೋಗ ಸುದ್ದಿಗೋಷ್ಟಿ ನಡೆಸಲಿದೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾ‌ರ್ ಅವರ ನೇತೃತ್ವದ ಚುನಾವಣಾ ಆಯೋಗ ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆ ಮಾಡಲಿದೆ ಎನ್ನಲಾಗಿದೆ. ಇಂದು ಕೇಂದ್ರ ಚುನಾವಣಾ ಆಯೋಗದ ಆಯುಕ್ತರಾಗಿ ಸುಖಬೀ‌ರ್

ನಾಳೆ ಚುನಾವಣಾ ವೇಳಾ ಪಟ್ಟಿ ಪ್ರಕಟ | ಚುನಾವಣಾ ಆಯುಕ್ತರ ಸುದ್ದಿಗೋಷ್ಠಿಯಲ್ಲಿ ದಿನಾಂಕ ನಿಗದಿ Read More »

error: Content is protected !!
Scroll to Top