ವಿದೇಶ

ಮೊದಲ ಮಹಿಳಾ ಕಮಾಂಡರ್ ಆಗಿ ಕರ್ನಲ್ ಗೀತಾ ರಾಣಾ ನೇಗಿ ಆಯ್ಕೆ

ಡೆಹ್ರಾಡೂನ್: ಪೂರ್ವ ಲಡಾಖ್ ನ ಗಡಿ ವಾಸ್ತವ ರೇಖೆಯ ಬೆಟಾಲಿಯನ್ ನ ಮೊದಲ ಮಹಿಳಾ ಕಮಾಂಡರ್ ಆಗಿ ಕರ್ನಲ್ ಗೀತಾ ರಾಣಾ ನೇಗಿ ಆಯ್ಕೆಯಾಗಿದ್ದಾರೆ. ಇವರು ಬೆಟಾಲಿಯನ್ ಆಫ್ ಕಾರ್ಪ್ಸ್ ಆಫ್ ಇಂಜಿನಿಯರ್ಸ್‌ಗೆ ಸೇರಿದವರು. ಭಾರತೀಯ ಸೇನೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳಾ ಅಧಿಕಾರಿಯೊಬ್ಬರಿಗೆ ಇಂತಹ ಕಮಾಂಡ್ ನೀಡಲಾಗಿದೆ. ಕಮಾಂಡರ್‌ಗಳ ಪಾತ್ರದಲ್ಲಿ ಮಹಿಳಾ ಅಧಿಕಾರಿಗಳನ್ನು ನಿಯೋಜಿಸಲು ಸೇನೆಯು ಇತ್ತೀಚೆಗೆ ಸರ್ಕಾರದ ಅನುಮೋದನೆಯನ್ನು ಪಡೆದಿತ್ತು. ಕರ್ನಲ್ ನೇಗಿ ಈ ಸಾಧನೆ ಮಾಡಿದ ಮೊದಲ ಅಧಿಕಾರಿಯಾಗಿದ್ದಾರೆ. ಕರ್ನಲ್ ಉತ್ತರಾಖಂಡ್‌ನ ಪೌರಿಯಿಂದ […]

ಮೊದಲ ಮಹಿಳಾ ಕಮಾಂಡರ್ ಆಗಿ ಕರ್ನಲ್ ಗೀತಾ ರಾಣಾ ನೇಗಿ ಆಯ್ಕೆ Read More »

ಸತತ ಮೂರನೇ ಬಾರಿ ಚೀನದ ಅಧ್ಯಕ್ಷರಾಗಿ ಕ್ಸಿ ಜಿನ್‌ಪಿಂಗ್‌ ಆಯ್ಕೆ

ಬೀಜಿಂಗ್‌ : ಹಲವು ಪ್ರತಿಕೂಲ ಪರಿಸ್ಥಿತಿಯಿರುವ ಹೊರತಾಗಿಯೂ ಕ್ಸಿ ಜಿನ್‌ಪಿಂಗ್‌ ಅವರೇ ಚೀನದ ಅಧ್ಯಕ್ಷರಾಗಿ ಸತತ ಮೂರನೇ ಬಾರಿ ಪುನರಾಯ್ಕೆಯಾಗಿದ್ದಾರೆ. ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್‌ನ 14ನೇ ಸಭೆಯಲ್ಲಿ ಕ್ಸಿ ಮೂರನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಮೊದಲ ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ಏರಿದಾಗ ಕ್ಸಿ ಜಿನ್‌ಪಿಂಗ್ ಅವರು ವಿಶ್ವಾಸಘಾತುಕ, ಭ್ರಷ್ಟ ಅಥವಾ ನಿಷ್ಪರಿಣಾಮಕಾರಿ ಎಂದು ಪರಿಗಣಿಸಲ್ಪಟ್ಟ ಅಧಿಕಾರಿಗಳನ್ನು ತೆಗೆದುಹಾಕಲು ಬೃಹತ್ ಅಭಿಯಾನವನ್ನು ಕೈಗೊಂಡಿದ್ದರು. ಆ ಖಾಲಿ ಸ್ಥಾನಗಳಲ್ಲಿ ಮಿತ್ರರನ್ನು ತುಂಬುವ ಮೂಲಕ ಜಿನ್‌ಪಿಂಗ್ ತಮ್ಮ ನೆಲೆಯನ್ನು ಭದ್ರಪಡಿಸಿಕೊಂಡಿದ್ದರು.ಚೀನದಲ್ಲಿ

ಸತತ ಮೂರನೇ ಬಾರಿ ಚೀನದ ಅಧ್ಯಕ್ಷರಾಗಿ ಕ್ಸಿ ಜಿನ್‌ಪಿಂಗ್‌ ಆಯ್ಕೆ Read More »

ಇಂಡೋನೇಷ್ಯಾದ ರಾಜಧಾನಿಯ ಸ್ಥಳಾಂತರ

ಜಕಾರ್ತ : ಇಂಡೋನೇಷ್ಯಾದ ರಾಜಧಾನಿಯನ್ನೇ ಸ್ಥಳಾಂತರ ಮಾಡಲಾಗುತ್ತಿದೆ. ಹಾಲಿ ರಾಜಧಾನಿ ಜಕಾರ್ತದಲ್ಲಿ ಜನದಟ್ಟಣೆ, ಮಾಲಿನ್ಯ ಹೆಚ್ಚಳವಾಗಿದ್ದು, ಭೂಕಂಪಗಳಿಗೆ ತುತ್ತಾಗಿ, ಕ್ಷಿಪ್ರಗತಿಯಾಗಿ ಜಾವಾ ಸಮುದ್ರಕ್ಕೆ ಮುಳುಗುವ ಭೀತಿ ಇದ್ದ ಹಿನ್ನೆಲೆಯಲ್ಲಿ ಹೊಸ ರಾಜಧಾನಿ ನಿರ್ಮಾಣ ಆರಂಭಿಸಲಾಗಿದೆ.ಈಗ ಸರ್ಕಾರ ಇಂಡೋನೇಷ್ಯಾದ ರಾಜಧಾನಿಯನ್ನು ಬೊರ್ನಿಯೊ ದ್ವೀಪಕ್ಕೆ ವರ್ಗಾವಣೆ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿದೆ. ಹೊಸ ಮಹಾನಗರವು “ಸುಸ್ಥಿರ ಅರಣ್ಯ ನಗರ” ಎಂದು ಇಂಡೋನೇಷ್ಯಾದ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಈ ಯೋಜನೆ ಪರಿಸರವಾದಿಗಳ ಮತ್ತು ಸ್ಥಳೀಯ ಸಮುದಾಯಗಳ ಕೆಂಗಣ್ಣಿಗೆ ಗುರಿಯಾಗಿದೆ. ಒರಾಂಗುಟನ್‌ಗಳಂತಹ ಅಳಿವಿನಂಚಿನಲ್ಲಿರುವ ಪ್ರಾಣಿಗಳ

ಇಂಡೋನೇಷ್ಯಾದ ರಾಜಧಾನಿಯ ಸ್ಥಳಾಂತರ Read More »

ವಿದೇಶದಲ್ಲಿ ಭಾರತದ ಬಗ್ಗೆ ಹಗುರವಾಗಿ ಮಾತನಾಡಿದ ರಾಹುಲ್ ಗಾಂಧಿಗೆ ತಿರುಗೇಟು ನೀಡಿದ ಪ್ರಹ್ಲಾದ್‌ ಜೋಶಿ

ಮೈಕ್‌ ಆಫ್‌ ಆರೋಪಕ್ಕೆ ತಿರುಗೇಟು ಹೊಸದಿಲ್ಲಿ : ರಾಹುಲ್‌ ಗಾಂಧಿಗೆ ದೇಶದ ಜನ ಮಾತನಾಡಲು ಎಷ್ಟು ಅವಕಾಶ ಕೊಟ್ಟಿದ್ದಾರೋ ಅಷ್ಟನ್ನು ಲೋಕಸಭೆಯಲ್ಲಿ ಸರಕಾರ ಕೂಡ ಕೊಟ್ಟಿದೆ ಎನ್ನುವ ಮೂಲಕ ವಿದೇಶಗಳಲ್ಲಿ ಭಾರತದ ಬಗ್ಗೆ ಹಗುರವಾಗಿ ಮಾತನಾಡುವ ಕಾಂಗ್ರೆಸ್‌ ನಾಯಕನಿಗೆ ಬಿಜೆಪಿ ತಿರುಗೇಟು ನೀಡಿದೆ. ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕರ ಮೈಕ್ ಆಫ್ ಮಾಡುವ ಮೂಲಕ ಧ್ವನಿಯನ್ನು ದಮನ ಮಾಡಲಾಗ್ತಿದೆ ಎಂದು ರಾಹುಲ್ ಗಾಂಧಿ ಲಂಡನ್‌ನಲ್ಲಿ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ,

ವಿದೇಶದಲ್ಲಿ ಭಾರತದ ಬಗ್ಗೆ ಹಗುರವಾಗಿ ಮಾತನಾಡಿದ ರಾಹುಲ್ ಗಾಂಧಿಗೆ ತಿರುಗೇಟು ನೀಡಿದ ಪ್ರಹ್ಲಾದ್‌ ಜೋಶಿ Read More »

ಮೇಘಾಲಯ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಸಂಗ್ಮಾ ಕಾನ್ರಾಡ್

ನಾಗಾಲ್ಯಾಂಡ್​ನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನೆಫಿಯು ರಿಯೊ ಗುವಾಹಟಿ : ಮೇಘಾಲಯದ ಮುಖ್ಯಮಂತ್ರಿಯಾಗಿ ಕಾನ್ರಾಡ್ ಕೆ ಸಂಗ್ಮಾ ಮಾ. 7 ರಂದು ಸತತ ಎರಡನೇ ಬಾರಿ ಪ್ರಮಾಣ ವಚನ ಸ್ವೀಕರಿಸಿದರು. ಶಿಲ್ಲಾಂಗ್‌ನ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಫಾಗು ಚೌಹಾಣ್ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಸಂಗ್ಮಾ ನೇತೃತ್ವದ ನ್ಯಾಷನಲ್ ಪೀಪಲ್ಸ್ ಪಾರ್ಟಿಯ ಪ್ರೆಸ್ಟೋನ್ ಟೈನ್‌ಸಾಂಗ್ ಅವರು ಉಪಮುಖ್ಯಮಂತ್ರಿಯಾಗಿ ಮತ್ತು ಕೆಲವರು ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ,

ಮೇಘಾಲಯ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಸಂಗ್ಮಾ ಕಾನ್ರಾಡ್ Read More »

ಏ.14ರಿಂದ ಬಿಜೆಪಿ ಘರ್ ಘರ್ ಜೋಡೊ ಕಾರ್ಯಕ್ರಮ

ಅಂಬೇಡ್ಕರ್‌ ಜಯಂತಿಯಿಂದ ಬುದ್ಧ ಜಯಂತಿ ತನಕ ಯಾತ್ರೆ ಹೊಸದಿಲ್ಲಿ : ಬಿಜೆಪಿಯ ಎಸ್‌.ಸಿ ಮೋರ್ಚಾ ಅಂಬೇಡ್ಕರ್ ಜಯಂತಿ ದಿನವಾದ ಏ.14ರಿಂದ ಘರ್ ಘರ್ ಜೋಡೊ ಕಾರ್ಯಕ್ರಮ ಆರಂಭಿಸಲಿದೆ. ಇದು ಎಸ್‌ಸಿ ಸಮುದಾಯವನ್ನು ತಲುಪುವ ಬಿಜೆಪಿ ನಡೆಸುವ ಯಾತ್ರೆ. 21 ದಿನಗಳ ಈ ಯಾತ್ರೆ ಅಂಬೇಡ್ಕರ್‌ ಜಯಂತಿಯಂದು ಆರಂಭವಾಗಿ ಬುದ್ಧ ಜಯಂತಿ ದಿನವಾದ ಮೇ 5ರಂದು ಕೊನೆಗೊಳ್ಳಲಿದೆ.ಈ ಕಾರ್ಯಕ್ರಮಕ್ಕಾಗಿ ಬಿಜೆಪಿ ಎಸ್‌ಸಿ ಮೋರ್ಚಾ 11 ಸದಸ್ಯರ ರಾಷ್ಟ್ರೀಯ ಸಮಿತಿಯನ್ನು ರಚಿಸಿದೆ. ಅದೇ ರೀತಿ ರಾಜ್ಯ ಮತ್ತು ಜಿಲ್ಲಾವಾರು ಸಮಿತಿಗಳನ್ನು

ಏ.14ರಿಂದ ಬಿಜೆಪಿ ಘರ್ ಘರ್ ಜೋಡೊ ಕಾರ್ಯಕ್ರಮ Read More »

ಹೋಳಿಯ ಬಣ್ಣ ಸೋಕಬಾರದೆಂದು ಮಸೀದಿಗೆ ಟಾರ್ಪಾಲು ಹೊದಿಕೆ

ಇಡೀ ಮಸೀದಿಗೆ ಕಪ್ಪು ಪ್ಲಾಸ್ಟಿಕ್‌ ಕವರ್‌ ಲಖನೌ : ಜನರು ಹೋಳಿ ಆಡುವಾಗ ಬಣ್ಣ ಸೋಕುತ್ತದೆ ಎಂದು ಉತ್ತರ ಪ್ರದೇಶದ ಅಲಿಗಢದ ಮಸೀದಿಯೊಂದಕ್ಕೆ ಟಾರ್ಪಾಲು ಹೊದಿಕೆ ಹಾಕಿ ಮುಚ್ಚಿದ್ದಾರೆ. ಹೋಳಿ ದಿನದಂದು ಪೊಲೀಸ್ ಆಡಳಿತದ ಸೂಚನೆಯ ಮೇರೆಗೆ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಅಲಿಗಢದ ಅತ್ಯಂತ ಸೂಕ್ಷ್ಮ ಪ್ರದೇಶದಲ್ಲಿರುವ ಅಬ್ದುಲ್ ಕರೀಂ ಮಸೀದಿಯನ್ನು ಹೋಳಿ ಸಮಯದಲ್ಲಿ ಬಣ್ಣಗಳಿಂದ ಕಾಪಾಡಲು ಕಪ್ಪು ಟಾರ್ಪಲಿನ್​ನಿಂದ ಮುಚ್ಚಲಾಗಿದೆ.ವಿಶೇಷವೆಂದರೆ, ಕಳೆದ ಕೆಲವು ವರ್ಷಗಳಿಂದ ಹೋಳಿಯಂದು ಸೂಕ್ಷ್ಮ ಪ್ರದೇಶದಲ್ಲಿರುವ ಮಸೀದಿಯನ್ನು ರಾತ್ರಿಯಿಡೀ ಟಾರ್ಪಾಲಿನ್‌ನಿಂದ

ಹೋಳಿಯ ಬಣ್ಣ ಸೋಕಬಾರದೆಂದು ಮಸೀದಿಗೆ ಟಾರ್ಪಾಲು ಹೊದಿಕೆ Read More »

1.5 ಕೋ. ರೂ. ಆಸ್ತಿಯನ್ನು ಸರಕಾರಕ್ಕೆ ಕೊಟ್ಟ ವೃದ್ಧ

ಮಕ್ಕಳು ನೋಡಿಕೊಂಡಿಲ್ಲ ಎಂಬ ಸಿಟ್ಟಿನಲ್ಲಿ ದಾನ ಲಖನೌ : ಹಿರಿಯ ವ್ಯಕ್ತಿಯೊಬ್ಬರು ವೃದ್ಧಾಪ್ಯದಲ್ಲಿ ತನ್ನನ್ನು ಸರಿಯಾಗಿ ನೋಡಿಕೊಳ್ಳದ ಮಕ್ಕಳ ಮೇಲಿನ ಸಿಟ್ಟಿನಲ್ಲಿ ಎಲ್ಲ 1.5 ಕೋ. ರೂ. ಆಸ್ತಿಯನ್ನು ಉತ್ತರ ಪ್ರದೇಶ ಸರಕಾರಕ್ಕೆ ಉಯಿಲು ಬರೆದುಕೊಟ್ಟಿದ್ದಾರೆ. ನಾಥು ಸಿಂಗ್ ಎಂಬ 85ರ ಹರೆಯದ ವೃದ್ಧ ತಮ್ಮ ಐವರು ಮಕ್ಕಳಲ್ಲಿ ಯಾರೂ ಕೊನೆಯ ಕಾಲದಲ್ಲಿ ನೋಡಿಕೊಳ್ಳಲು ಮುಂದೆ ಬಾರದಿದ್ದಾಗ 1.5 ಕೋಟಿ ಮೌಲ್ಯದ ಆಸ್ತಿಯನ್ನು ಉತ್ತರಪ್ರದೇಶದ ಸರ್ಕಾರಕ್ಕೆ ಬರೆದುಕೊಟ್ಟಿದ್ದಾರೆ. ಅಲ್ಲದೆ ತಮ್ಮ ದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡಿದ್ದಾರೆ.

1.5 ಕೋ. ರೂ. ಆಸ್ತಿಯನ್ನು ಸರಕಾರಕ್ಕೆ ಕೊಟ್ಟ ವೃದ್ಧ Read More »

ಪಾಕಿಸ್ತಾನದ ಬಲೂಚಿಸ್ಥಾನ್‌ ಪ್ರಾಂತ್ಯದಲ್ಲಿ ಉಗ್ರರ ಆತ್ಮಾಹುತಿ ಬಾಂಬ್ ದಾಳಿ

9 ಭದ್ರತಾ ಅಧಿಕಾರಿಗಳ ದುರ್ಮರಣ ಪಾಕಿಸ್ತಾನ : ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಎರಡನೇ ಮಾರಣಾಂತಿಕ ದಾಳಿ ನಡೆದಿದ್ದು, 9 ಮಂದಿ ಭದ್ರತಾ ಅಧಿಕಾರಿಗಳು ಸಾವನ್ನಪ್ಪಿದ್ದಾರೆ. 13 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಬಲೂಚಿಸ್ತಾನ ಪ್ರಾಂತ್ಯದ ರಾಜಧಾನಿ ಕ್ವೆಟ್ಟಾದಿಂದ ಭದ್ರತಾ ಪಡೆ ಅಧಿಕಾರಿಗಳು ವಾಪಸ್ ತೆರಳುವ ವೇಳೆ ಉಗ್ರರು ಆತ್ಮಾಹುತಿ ದಾಳಿ ನಡೆಸಿದ್ದಾರೆ. ಹಬ್ಬದ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಅಧಿಕಾರಿಗಳು ವಾಪಸ್ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಈ ಕೃತ್ಯದ ಹೊಣೆಯನ್ನು ಯಾವುದೇ

ಪಾಕಿಸ್ತಾನದ ಬಲೂಚಿಸ್ಥಾನ್‌ ಪ್ರಾಂತ್ಯದಲ್ಲಿ ಉಗ್ರರ ಆತ್ಮಾಹುತಿ ಬಾಂಬ್ ದಾಳಿ Read More »

ಚಹಾಪುಡಿ 1,600 ರೂ.; ಗೋದಿಹಿಟ್ಟು 1,000 ರೂ. | ದಿವಾಳಿಯಾಗಿರುವ ಪಾಕಿಸ್ಥಾನದಲ್ಲಿ ಆಹಾರಕ್ಕೂ ಅಭಾವ

ಕರಾಚಿ: ಪಾಕಿಸ್ಥಾನದಲ್ಲಿ 1 ಕೆಜಿ ಚಹಾಪುಡಿ ಬೆಲೆ 1600 ರೂ! ಆರ್ಥಿಕವಾಗಿ ದಿವಾಳಿಯಾಗಿ ತತ್ತರಿಸುತ್ತಿರುವ ಪಾಕ್‌ನಲ್ಲೀಗ ಜನರಿಗೆ ನಿತ್ಯ ಬಳಕೆಯ ಆಹಾರ ವಸ್ತುಗಳು ಕೂಡ ಬೆಲೆ ಏರಿಕೆಯಿಂದಾಗಿ ಐಷರಾಮಿ ವಸ್ತುಗಳಾಗಿವೆ. 15 ದಿನಗಳ ಹಿಂದೆ ಕೆಜಿಗೆ 1,100 ರೂ. ಇದ್ದ ಚಹಾಪುಡಿ ಬೆಲೆ ಇದೀಗ 1600 ರೂ. ದಾಟಿದೆ. ಕಳೆದ ಡಿಸೆಂಬರ್‌ನಿಂದಲೂ ಬಂದರಿನಲ್ಲೇ ಉಳಿದುಕೊಂಡಿರುವ ಆಮದಾದ ಚಹಾಪುಡಿ ಶೀಘ್ರವೇ ಮಾರುಕಟ್ಟೆಗೆ ಬರದೇ ಇದ್ದರೆ ರಮ್ಜಾನ್‌ ವೇಳೆಗೆ ಬೆಲೆ 2,500 ರೂ. ದಾಟಬಹುದು ಎಂದು ವ್ಯಾಪಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಚಹಾಪುಡಿ 1,600 ರೂ.; ಗೋದಿಹಿಟ್ಟು 1,000 ರೂ. | ದಿವಾಳಿಯಾಗಿರುವ ಪಾಕಿಸ್ಥಾನದಲ್ಲಿ ಆಹಾರಕ್ಕೂ ಅಭಾವ Read More »

error: Content is protected !!
Scroll to Top