ದರ್ಬೆ ಪ್ರಶಾಂತ್ ಮಹಲ್ ನಲ್ಲಿ ಮೇಳೈಸಿದ “ಆಟಿಡೊಂಜಿ ದಿನ” | ಜನಮನ ಸೂರೆಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳು, 49 ಬಗೆಯ ಖಾದ್ಯಗಳು
ಪುತ್ತೂರು: ಸವಣೂರು ಸೀತಾರಾಮ ರೈ ಅವರ ಮುಂದಾಳುತ್ವದಲ್ಲಿ ತುಳು ಜಾನಪದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೊಳಗೊಂಡ “ಆಟಿಡೊಂಜಿ ದಿನ” ಕಾರ್ಯಕ್ರಮ ಶನಿವಾರ ದರ್ಬೆ ಪ್ರಶಾಂತ್ ಮಹಲ್ ನ ಸನ್ನಿಧಿ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಆಟಿದ ಅಟಿಲ್ ನಲ್ಲಿ 49 ಬಗೆಯ ಖಾದ್ಯಗಳು ನೆರೆದಿದ್ದವರ ಬಾಯಿ ಚಪ್ಪರಿಸುವಂತೆ ಮಾಡಿತು. ಕಾರ್ಯಕ್ರಮದ ಆರಂಭದಲ್ಲಿ ಹಿರಿಯರ ಆಟಿ ತಿಂಗಳ ಸುಂದರ ಆಟವಾಗಿರುವ “ಚೆನ್ನಮಣೆ” ಆಟವನ್ನು ಮಹಿಳೆಯರು ಹಾಗೂ ಪುರುಷರು ಆಟವಾಡುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಕಳೆಯನ್ನು ಒದಗಿಸಲಾಯಿತು. ಪುರುಷರಕಟ್ಟೆ, ಗುರುಕುಲ ಕಲಾ ಕೇಂದ್ರದ ಮಕ್ಕಳಿಂದ […]










