ಮನರಂಜನೆ

ಪ್ರೇತದೊಂದಿಗೆ ಬೆರೆತ ದಿವಾಕರ ದೇವಾಡಿಗ!

ಪುತ್ತೂರು: ವೃತ್ತಿಯಲ್ಲಿ ಆಟೋ ಚಾಲಕ. ಪ್ರವೃತ್ತಿಯಲ್ಲಿ ಪ್ರೇತ ವೇಷಧಾರಿ. ಇದು ದಿವಾಕರ ದೇವಾಡಿಗ ಅವರ ಪ್ರತಿಭೆ. ಪುತ್ತೂರಿನ ಚಿಕ್ಕಮುಡ್ನೂರು ಗ್ರಾಮದ ದಿವಾಕರ ದೇವಾಡಿಗ ಅವರು ಪ್ರತೀ ವರ್ಷ ನವರಾತ್ರಿ ಸಂದರ್ಭದಲ್ಲಿ ಪ್ರೇತದೊಂದಿಗೆ ಬೆರೆತು ಮಾತನಾಡುತ್ತಾರೆ.ಕಳೆದ 12 ವರ್ಷಗಳಿಂದ ನವರಾತ್ರಿ ಸಂದರ್ಭದಲ್ಲಿ ನಿಷ್ಠೆಯಿಂದ ವೇಷ ಧರಿಸುತ್ತಾರೆ. ಶುರುವಿನ ವರ್ಷದಲ್ಲಿ ಕೃಷ್ಣ, ರಾಮ ಹೀಗೆ ನಾನಾ ವಿಧದ ವೇಷ ಧರಿಸುತ್ತಿದ್ದರು. ಇತ್ತೀಚಿನ ಆರು ವರ್ಷಗಳಿಂದ ಪ್ರೇತ ವೇಷ ಧರಿಸಿ ಜನಮಾನಸದಲ್ಲಿ ಅಚ್ಚಾಗಿದ್ದಾರೆ. ನವರಾತ್ರಿ ಬಂತೆಂದರೆ ಸಾಕು. 9 ದಿನ ಉಪವಾಸ […]

ಪ್ರೇತದೊಂದಿಗೆ ಬೆರೆತ ದಿವಾಕರ ದೇವಾಡಿಗ! Read More »

ಇಂದು ಕರೆ ಮುಹೂರ್ತ: ಡಿಕೆಶಿಗೆ ಆಹ್ವಾನ

ಪುತ್ತೂರು: ಇಂದು ಬೆಂಗಳೂರು ಅರಮನೆ ಮೈದಾನದಲ್ಲಿ  ನಡೆಯಲಿರುವ ಬೆಂಗಳೂರು ‌ಕಂಬಳದ ಕರೆ‌ಮುಹೂರ್ತ ಕಾರ್ಯಕ್ರಮಕ್ಕೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ರವರಿಗೆ ಆಹ್ವಾನ‌ ನೀಡಲಾಯಿತು. ನ.25 ಹಾಗೂ 26 ರಂದು ಬೆಂಗಳೂರು‌ಕಂಬಳ ನಡೆಯಲಿದ್ದು ಕರೆ ಮುಹೂರ್ತ ಕಾರ್ಯಕ್ರಮ ಇಂದು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಲಿದೆ. ಈ ಸಂದರ್ಭದಲ್ಲಿ ಬೆಂಗಳೂರು‌ ಕಂಬಳ ಸಮಿತಿ‌ ಅಧ್ಯಕ್ಷ ಶಾಸಕ ಅಶೋಕ್ ರೈ, ಗೌರವಾಧ್ಯಕ್ಷ ಪ್ರಕಾಶ್ ಶೆಟ್ಟಿ, ಕಾರ್ಯಾಧ್ಯಕ್ಷ ಗುರುಕಿರಣ್, ಉಪಾಧ್ಯಕ್ಷರಾದ ಗುಣರಂಜನ್ ಶೆಟ್ಟಿ , ಮುರಳೀಧರ್ ರೈ ಮಠಂತಬೆಟ್ಟು ಸಹಿತಿ ಕಂಬಳ

ಇಂದು ಕರೆ ಮುಹೂರ್ತ: ಡಿಕೆಶಿಗೆ ಆಹ್ವಾನ Read More »

ಪಿಲಿಗೊಬ್ಬು’, `ಫುಡ್ ಫೆಸ್ಟ್’ಗೆ ಚಪ್ಪರ ಮುಹೂರ್ತ

ಪುತ್ತೂರು: ವಿಜಯ ಸಾಮ್ರಾಟ್ ವತಿಯಿಂದ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯಲಿರುವ ಪಿಲಿಗೊಬ್ಬು ಸ್ಪರ್ಧೆ ಹಾಗೂ ಫುಡ್ ಫೆಸ್ಟ್ ಕಾರ್ಯಕ್ರಮದ ಚಪ್ಪರ ಮುಹೂರ್ತ ಶನಿವಾರ ನಡೆಯಿತು. ಪುತ್ತೂರು ವಿಜಯ ಸಾಮ್ರಾಟ್ ನ ಸ್ಥಾಪಕಾಧ್ಯಕ್ಷ ಸಹಜ್ ರೈ ನೇತೃತ್ವದಲ್ಲಿ ಪುತ್ತೂರಿನಲ್ಲಿ ಪ್ರಥಮ ಬಾರಿಗೆ ನಡೆಯುವ ಕಾರ್ಯಕ್ರಮದ ಚಪ್ಪರ ಮುಹೂರ್ತವನ್ನು ದೇವಸ್ಥಾನದ ಅರ್ಚಕ ಉದಯಕೃಷ್ಣ ಭಟ್ ಪೂಜಾ ವಿಧಿವಿಧಾನಗಳೊಂದಿಗೆ ನೆರವೇರಿಸಿದರು. ಈ ಸಂದರ್ಭದಲ್ಲಿ ಸಹಜ್ ರೈ ಬಳಜ್ಜ, ನಾಗರಾಜ್ ನಡುವಡ್ಕ, ಶರತ್ ಕುಮಾರ್ ಮಾಡಾವು, ಶಂಕರ್ ಭಟ್

ಪಿಲಿಗೊಬ್ಬು’, `ಫುಡ್ ಫೆಸ್ಟ್’ಗೆ ಚಪ್ಪರ ಮುಹೂರ್ತ Read More »

ಬೆಂಗಳೂರು ಕಂಬಳ ಯಶಸ್ವಿಗಾಗಿ ಶಾಸಕ ಅಶೋಕ್ ರೈ ಪ್ರಾರ್ಥನೆ

ಪುತ್ತೂರು: ನ. 25 ಮತ್ತು 26ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಬೆಂಗಳೂರು ಕಂಬಳ ಯಶಸ್ವಿಗಾಗಿ ಶಾಸಕ ಅಶೋಕ್ ರೈ ಅವರು ಕೋಡಿಂಬಾಡಿ ಶ್ರೀಮಹಿಷಮರ್ದಿನಿ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬೆಂಗಳೂರು ಕಂಬಳವು ಅಭೂತಪೂರ್ವ ಯಶಸ್ವಿಯಾಗಲಿ ಎಂದು ತನ್ನ ಊರಿನ ದೇವಾಲಯದಲ್ಲಿ ಶನಿವಾರ ಶಾಸಕರು ಪ್ರಾರ್ಥನೆ ಸಲ್ಲಿಸಿದರು. ಪ್ರಥಮ ಭಾರಿಗೆ ರಾಜ್ಯದ ರಾಜಧಾನಿಯಲ್ಲಿ ಕರಾವಳಿಯ ಜನಪದ ಕ್ರೀಡೆ ಕಂಬಳವನ್ನು ಆಯೋಜಿಸಲಾಗಿದ್ದು, ಕಂಬಳದಲ್ಲಿ ಲಕ್ಷಾಂತರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಇದಕ್ಕಾಗಿ ಈಗಾಗಲೇ ಸಿದ್ದತೆಗಳು ಆರಂಭಗೊಂಡಿದೆ.

ಬೆಂಗಳೂರು ಕಂಬಳ ಯಶಸ್ವಿಗಾಗಿ ಶಾಸಕ ಅಶೋಕ್ ರೈ ಪ್ರಾರ್ಥನೆ Read More »

ಅ. 22: ವಿಜಯ ಸಾಮ್ರಾಟ್ ವತಿಯಿಂದ ಪಿಲಿಗೊಬ್ಬು-2023, ಫುಡ್ ಫೆಸ್ಟ್  | ಪುತ್ತೂರು ದೇವಳದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ

 ಪುತ್ತೂರು: ಅ.22 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಪುತ್ತೂರು ವಿಜಯ ಸಾಮ್ರಾಟ್ ವತಿಯಿಂದ ನಡೆಯಲಿರುವ “ಪುತ್ತೂರುದ ಪಿಲಿಗೊಬ್ಬು-2023” ರ ಆಮಂತ್ರಣ ಪತ್ರಿಕೆ ಬಿಡುಗಡೆ ಗುರುವಾರ ಸಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಹಾಗೂ ಡಾ.ನರಸಿಂಹ ಕಾನಾವು ಜಂಟಿಯಾಗಿ ಆಮಂತ್ರಣ ಪತ್ರ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಈ ಹುಲಿವೇಷ ಕುಣಿತ, ಹಾಗೆಯೇ ಫುಡ್

ಅ. 22: ವಿಜಯ ಸಾಮ್ರಾಟ್ ವತಿಯಿಂದ ಪಿಲಿಗೊಬ್ಬು-2023, ಫುಡ್ ಫೆಸ್ಟ್  | ಪುತ್ತೂರು ದೇವಳದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ Read More »

ಬಲಮುರಿ ವಿದ್ಯಾ ಗಣಪತಿ ದೇವಸ್ಥಾನದಲ್ಲಿ “ಮಾಯಾಮೃಗ” ತಾಳಮದ್ದಳೆ | ತಿಂಗಳ ಸರಣಿ ಕಾರ್ಯಕ್ರಮದಲ್ಲಿ ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ

ಪುತ್ತೂರು: ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ವತಿಯಿಂದ ಶ್ರೀ ಬನ್ನೂರು ಬಲಮುರಿ ವಿದ್ಯಾ ಗಣಪತಿ ದೇವಸ್ಥಾನದಲ್ಲಿ ತಿಂಗಳ ಸರಣಿ ಕಾರ್ಯಕ್ರಮದ ಅಂಗವಾಗಿ “ಮಾಯಾಮೃಗ” ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ  ಲಕ್ಷ್ಮೀ ನಾರಾಯಣ ಭಟ್ ಬಟ್ಯಮೂಲೆ, ಆನಂದ್ ಸವಣೂರು ಹಾಗೂ ಚೆಂಡೆ ಮದ್ದಳೆಗಳಲ್ಲಿ ಪ್ರೊ.ದಂಬೆ ಈಶ್ವರ ಶಾಸ್ತ್ರೀ, ಅಚ್ಯುತ ಪಾಂಗಣ್ಣಾಯ, ಪರೀಕ್ಷಿತ್ ಸಹಕರಿಸಿದರು. ಮುಮ್ಮೇಳದಲ್ಲಿ ಪಕಳಕುಂಜ ಶ್ಯಾಮ್ ಭಟ್ (ರಾವಣ), ಗುಡ್ಡಪ್ಪ ಬಲ್ಯ (ಸನ್ಯಾಸಿ ರಾವಣ), ಭಾಸ್ಕರ ಬಾರ್ಯ (ಶ್ರೀ ರಾಮ), ದುಗ್ಗಪ್ಪ ನಡುಗಲ್ಲು(ಸೀತೆ), ಮಾಂಬಾಡಿ

ಬಲಮುರಿ ವಿದ್ಯಾ ಗಣಪತಿ ದೇವಸ್ಥಾನದಲ್ಲಿ “ಮಾಯಾಮೃಗ” ತಾಳಮದ್ದಳೆ | ತಿಂಗಳ ಸರಣಿ ಕಾರ್ಯಕ್ರಮದಲ್ಲಿ ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ Read More »

ಅ. 22ರಂದು ಪುತ್ತೂರುದ ಪಿಲಿರಂಗ್ ಸೀಸನ್-2 | ಆಮಂತ್ರಣ ಪತ್ರ ಬಿಡುಗಡೆ

ಪುತ್ತೂರು: ಅ. 22ರಂದು ಪುತ್ತೂರು ಕಿಲ್ಲೆ ಮೈದಾನದಲ್ಲಿ ನಡೆಯುವ ಪುತ್ತೂರುದ ಪಿಲಿರಂಗ್ ಸೀಸ್-2 ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು. ಶಾಸಕ ಅಶೋಕ್ ಕುಮಾರ್ ರೈ ಹಾಗೂ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಪುತ್ತೂರುದ ಪಿಲಿರಂಗ್ ಸೀಸನ್-2 ಸಮಿತಿಯ ವಿವಿಧ ಪದಾಧಿಕಾರಿಗಳಾದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಎನ್. ಚಂದ್ರಹಾಸ ಶೆಟ್ಟಿ, ಪಂಜಿಗುಡ್ಡೆ ಈಶ್ವರ ಭಟ್,

ಅ. 22ರಂದು ಪುತ್ತೂರುದ ಪಿಲಿರಂಗ್ ಸೀಸನ್-2 | ಆಮಂತ್ರಣ ಪತ್ರ ಬಿಡುಗಡೆ Read More »

ದೊಡ್ಡ ಬಜೆಟಿನಲ್ಲಿ `ಕಾಂತಾರ 2’ ಸೆಟ್ಟೇರುವುದು ಪಕ್ಕಾ! | `ಕಾಂತಾರ 2’ ಯಾವ ಹಂತದಲ್ಲಿದೆ ಎನ್ನುವುದು ಈಗ ಬಹಿರಂಗ!!

ಇನ್ನಿಲ್ಲದ ಸಕ್ಸಸ್ ಕಂಡಿದ್ದ ಕಾಂತಾರ ಸಿನಿಮಾದ ಬಳಿಕ ಕಾಂತಾರ 2 ಬರಲಿದೆ ಎನ್ನುವ ಮಾತು ಅಲ್ಲಲ್ಲಿ ಕೇಳಿಬರುತ್ತಿತ್ತು. ಇದೀಗ ನಟ, ನಿರ್ದೇಶಕ ರಾಜ್ ಬಿ. ಶೆಟ್ಟಿ ಅವರೇ ಇದನ್ನು ಖಾತ್ರಿಪಡಿಸಿದ್ದಾರೆ. ಸುಮಾರು 100 ಕೋಟಿ ರೂ.ನಲ್ಲಿ ಕಾಂತಾರ 2 ಸೆಟ್ಟೇರುವ ಸಾಧ್ಯತೆ ಇದೆ. ಅಂದರೆ ಕಾಂತಾರ ಚಿತ್ರಕ್ಕಿಂತಲೂ ಹೆಚ್ಚು – ಕಮ್ಮಿ 10 ಪಟ್ಟು ಹೆಚ್ಚು ಬಜೆಟ್ ಹೊಂದಿದ್ದು, ಅದ್ಧೂರಿಯಾಗಿ ತೆರೆ ಕಾಣಲಿದೆಯಂತೆ. ಸದ್ಯ ಕಾಂತಾರ 2 ಬರವಣಿಗೆ ಹಂತದಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ. ರಾಜ್ ಬಿ.

ದೊಡ್ಡ ಬಜೆಟಿನಲ್ಲಿ `ಕಾಂತಾರ 2’ ಸೆಟ್ಟೇರುವುದು ಪಕ್ಕಾ! | `ಕಾಂತಾರ 2’ ಯಾವ ಹಂತದಲ್ಲಿದೆ ಎನ್ನುವುದು ಈಗ ಬಹಿರಂಗ!! Read More »

“ಯಾನ್ ಸೂಪರ್ ಸ್ಟಾರ್” ತುಳು ಸಿನಿಮಾ ಸೆ. 22ರಂದು ತೆರೆಗೆ | ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ್ರು ನಿರ್ದೇಶಕ ಸಂತೋಷ್ ಶೆಟ್ಟಿ

ಪುತ್ತೂರು: ಆನಂದ ಫಿಲಂಸ್ ಮತ್ತು ದ ಮಂಗಳೂರಿಯನ್ಸ್ ಲಾಂಛನದಲ್ಲಿ ರಾಮ್ ಶೆಟ್ಟಿ ಅರ್ಪಿಸುವ, ದಯಾನಂದ ಶೆಟ್ಟಿ ನಿರ್ಮಾಣದ “ಯಾನ್ ಸೂಪರ್ ಸ್ಟಾರ್” ತುಳು ಚಲನಚಿತ್ರ ಸೆ. 22ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ ಎಂದು ನಿರ್ದೇಶಕ ಸಂತೋಷ್ ಶೆಟ್ಟಿ ತಿಳಿಸಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾನ್ ಸೂಪರ್ ಸ್ಟಾರ್ ಸಿನಿಮಾ ಮಂಗಳೂರಿನಲ್ಲಿ ರೂಪವಾಣಿ, ಭಾರತ್ ಸಿನಿಮಾಸ್, ಪಿವಿಆರ್, ಸಿನಿಪೊಲಿಸ್, ಉಡುಪಿಯಲ್ಲಿ ಕಲ್ಪನ, ಮಣಿಪಾಲದಲ್ಲಿ ಐನಾಕ್ಸ್, ಭಾರತ್ ಸಿನಿಮಾಸ್, ಪಡುಬಿದ್ರೆಯಲ್ಲಿ ಭಾರತ್ ಸಿನಿಮಾಸ್, ಕಾರ್ಕಳದಲ್ಲಿ ರಾಧಿಕಾ, ಪ್ಲಾನೆಟ್,

“ಯಾನ್ ಸೂಪರ್ ಸ್ಟಾರ್” ತುಳು ಸಿನಿಮಾ ಸೆ. 22ರಂದು ತೆರೆಗೆ | ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ್ರು ನಿರ್ದೇಶಕ ಸಂತೋಷ್ ಶೆಟ್ಟಿ Read More »

KGF ಸ್ಟಾರ್ ಯಶ್ ಹೊಸ ಸಿನಿಮಾ! | ನಿಗದಿಯಾಗಿದೆ ಸಿನಿಮಾ ಹೆಸರು ಘೋಷಣೆಯ ದಿನಾಂಕ | ಐತಿಹಾಸಿಕ ಚಿತ್ರವೊಂದಕ್ಕೂ ಕಮಿಟ್ ಆಗಿದ್ದಾರೆಯೇ ಯಶ್?

ಬೆಂಗಳೂರು: ಕೆಜಿಎಫ್ ಸಿನಿಮಾದ ಮೂಲಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಾನ್ಯತೆ ಪಡೆದಿರುವ ಸ್ಯಾಂಡಲ್’ವುಡ್ ಸ್ಟಾರ್ ನಟ ಯಶ್ ಅವರು ಹೊಸ ಸಿನಿಮಾದಲ್ಲಿ ನಟಿಸುತ್ತಿರುವುದು ಪಕ್ಕಾ ಆಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಗಣೇಶೋತ್ಸವದಂದು ಯಶ್ ಅವರ ಹೊಸ ಸಿನಿಮಾದ ಹೆಸರು ಘೋಷಣೆಯಾಗುವ ಸಾಧ್ಯತೆ ಇದೆ. ಮಲಯಾಳಂ ಫಿಲ್ಮ್ ಮೇಕರ್ ಗೀತು ಮೋಹನ್’ದಾಸ್ ಹಾಗೂ ನಟ ಯಶ್ ಅವರ ಸಂಯೋಜನೆ ಸಿನಿಮಾದ ಕುತೂಹಲವನ್ನು ಇಮ್ಮಡಿಗೊಳಿಸಿದೆ. ಮುಂದಿನ ವರ್ಷ ಅಥವಾ ಡಿಸೆಂಬರ್ ವೇಳೆಗೆ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ ಎಂಬ ಸುದ್ದಿಗಳು ಓಡಾಡುತ್ತಿವೆ.

KGF ಸ್ಟಾರ್ ಯಶ್ ಹೊಸ ಸಿನಿಮಾ! | ನಿಗದಿಯಾಗಿದೆ ಸಿನಿಮಾ ಹೆಸರು ಘೋಷಣೆಯ ದಿನಾಂಕ | ಐತಿಹಾಸಿಕ ಚಿತ್ರವೊಂದಕ್ಕೂ ಕಮಿಟ್ ಆಗಿದ್ದಾರೆಯೇ ಯಶ್? Read More »

error: Content is protected !!
Scroll to Top