ಸೌಜನ್ಯಳ ಪರ ಹೋರಾಟದಲ್ಲಿ ಆದಿಚುಂಚನಗಿರಿ ಮಠ ಜೊತೆಗಿದೆ | ಯಾವ ಹೆಣ್ಣು ಮಕ್ಕಳಿಗೂ ಈ ರೀತಿಯ ಅನ್ಯಾಯ ಆಗಬಾರದು | ಬೃಹತ್ ಪ್ರತಿಭಟನೆಯಲ್ಲಿ ಗುಡುಗಿದ ಶ್ರೀ ಧರ್ಮಪಾಲನಾಥ ಸ್ವಾಮೀಜಿ
ಬೆಳ್ತಂಗಡಿ : ಈಗಾಗಲೇ ಸೌಜನ್ಯ ಪ್ರಕರಣದಲ್ಲಿ ನಡೆದ ಉನ್ನತ ಮಟ್ಟದ ತನಿಖೆ ಸಂಪೂರ್ಣ ವಿಫಲವಾಗಿದ್ದು, ದೇಶದ ದೊಡ್ಡ ದುರಂತ. ಮನೆಯೊಳಗೇ ಅಡಗಿ ಕುಳಿತ ಕಳ್ಳಬೆಕ್ಕನ್ನು ನ್ನು ಹಿಡಿಯಲೇಬೇಕಿದ್ದು, ಸತ್ಯ, ನ್ಯಾಯ ನೀತಿ ಧರ್ಮದ ಹೋರಾಟದಲ್ಲಿ ಆದಿಚುಂಚನಗಿರಿ ಮಠ ಜೊತೆಗಿದೆ ಎಂದು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಗುಡುಗಿದ್ದಾರೆ. ಬೆಳ್ತಂಗಡಿಯಲ್ಲಿ ಪ್ರಜಾಪ್ರಭುತ್ವ ವೇದಿಕೆ ಹಾಗೂ ರಾಷ್ಟ್ರೀಯ ಹಿಂ.ಜಾ.ವೇದಿಕೆ ನೇತೃತ್ವದಲ್ಲಿ ಬೆಳ್ತಂಗಡಿ ಮಿನಿ ವಿಧಾನಸೌಧದ ಎದುರು ನಡೆಸುತ್ತಿರುವ ಬೃಹತ್ ಹೋರಾಟದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ಯಾವುದೇ ಹೆಣ್ಮಕ್ಕಳಿಗೂ […]










