ಕರ್ನಾಟಕಕ್ಕೆ ಸಾಗಿಸಲು ಕಾಸರಗೋಡಿನಲ್ಲಿ ಸ್ಫೋಟಕ ದಾಸ್ತಾನು | ಭಾರೀ ಪ್ರಮಾಣದ ಸ್ಫೋಟಕ ಅಬಕಾರಿ ಅಧಿಕಾರಿಗಳ ವಶ
ಕಾಸರಗೋಡು: ಕರ್ನಾಟಕಕ್ಕೆ ಸಾಗಿಸಲು ಕಾಸರಗೋಡಿನಲ್ಲಿ ದಾಸ್ತಾನು ಇಟ್ಟಿದ್ದ ಭಾರೀ ಪ್ರಮಾಣದ ಸ್ಫೋಟಕಗಳನ್ನು ಅಬಕಾರಿ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿ ಮಹಮ್ಮದ್ ಮುಸ್ತಫಾ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ ಮುಂಜಾನೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ, 7 ಸಾವಿರ ಡಿಟೋನೇಟರ್‌ಗಳು, 2,800 ಜಿಲೆಟಿನ್ ಕಡ್ಡಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಅಧಿಕಾರಿಗಳು ದಿನನಿತ್ಯದಂತೆ ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಮಹಮ್ಮದ್ ಮುಸ್ತಫಾ ಎಂಬವನ ವಾಹನದಲ್ಲಿ ಸ್ಫೋಟಕ ಸಾಮಗ್ರಿಗಳು ಪತ್ತೆಯಾಗಿವೆ. ನಂತರ ಅವನ ಮನೆಗೆ ತೆರಳಿದಾಗ ಅಲ್ಲಿ […]