ದಕ್ಷಿಣ ಕನ್ನಡ

ಚಾರ್ಮಾಡಿ ಘಾಟಿ ಬಿದಿರುತಳ ಸಮೀಪ ಗುಡ್ಡ ಕುಸಿತ | ವಾಹನ ಸಂಚಾರಕ್ಕೆ ಸಮಸ್ಯೆ

ಚಾರ್ಮಾಡಿ : ಸುರಿಯುತ್ತಿರುವ ಭಾರೀ ಮಳೆಗೆ ಚಾರ್ಮಾಡಿ ಘಾಟಿಯ ಚಿಕ್ಕಮಗಳೂರು ವಿಭಾಗದ ಬಿದಿರುತಳ ಆಲೇಖಾನ್ ನಡುವಿನ ರಸ್ತೆಯಲ್ಲಿ ಗುಡ್ಡ ಕುಸಿತ ಉಂಟಾಗಿ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಯಿತು. ಕಳೆದ ಕೆಲವು ದಿನಗಳಿಂದ ಭಾರಿ ಮಳೆ ಸುರಿಯುತ್ತಿರುವ ಪರಿಣಾಮ ಗುಡ್ಡದ ಮಣ್ಣು ಕುಸಿತಗೊಂಡು ರಸ್ತೆಗೂ ಬಂದು ಬಿದ್ದು ವಾಹನಗಳು ಸಂಚರಿಸಲು ಅನಾನುಕೂಲವಾಯಿತು. ಇದರಿಂದ ಘಾಟಿ ಪ್ರದೇಶದಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಮುಂದುವರಿಯಿತು. ಗುಡ್ಡ ಕುಸಿದ್ದ ಉಂಟಾದ ಸ್ಥಳದ ಪಕ್ಕದಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿಯಾಗುತ್ತಿದ್ದು, ಈ ರಸ್ತೆ ಇಲ್ಲಿ ತೀವ್ರ […]

ಚಾರ್ಮಾಡಿ ಘಾಟಿ ಬಿದಿರುತಳ ಸಮೀಪ ಗುಡ್ಡ ಕುಸಿತ | ವಾಹನ ಸಂಚಾರಕ್ಕೆ ಸಮಸ್ಯೆ Read More »

ವಿವಿ ಸೆಮಿಸ್ಟರ್ ಪರೀಕ್ಷೆ ಮುಂದೂಡದ ಜಿಲ್ಲಾಡಳಿತ | ಅಪಾಯಕಾರಿ ಸ್ಥಿತಿಯಲ್ಲಿ ತೆರಳಬೇಕಾದ ವಿದ್ಯಾರ್ಥಿಗಳು

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಸಮೀಪದ ಕುಮಾರಧಾರ ಬಳಿಯ ಹೆದ್ದಾರಿ ಜಲಾವೃತಗೊಂಡಿದ್ದು, ಪರೀಕ್ಷೆಗೆ ಹಾಜರಾದ ಪದವಿ ವಿದ್ಯಾರ್ಥಿಗಳು ಅಪಾಯಕಾರಿ ಪರಿಸ್ಥಿತಿಯಲ್ಲಿ ಪರೀಕ್ಷೆಗೆ ಹಾಜರಾಗಬೇಕಾಗಿ ಬಂತು. ಮಂಗಳೂರು ಯುನಿವರ್ಸಿಟಿ ಸೆಮಿಸ್ಟರ್ ಪರೀಕ್ಷೆ ನಡೆಯುತ್ತಿದ್ದು, ಭಾರೀ ಮಳೆ ಇದ್ದರೂ ಮುಂದೂಡಿಕೆ ಆಗಿರಲಿಲ್ಲ. ಪರಿಣಾಮ ಪಂಜ ಭಾಗದಿಂದ ಸುಬ್ರಹ್ಮಣ್ಯ ಕೆಎಸ್‍ ಎಸ್‍ ಕಾಲೇಜಿಗೆ ಪರೀಕ್ಷೆ ಕೇಂದ್ರಗಳತ್ತ ಬಂದಿದ್ದಾರೆ. ವಿವಿ ಸೆಮಿಸ್ಟರ್ ಪರೀಕ್ಷೆ ಮುಂದೂಡಲಿ ಎಂಬ ಆಗ್ರಹ ವ್ಯಕ್ತವಾಗಿತ್ತು.

ವಿವಿ ಸೆಮಿಸ್ಟರ್ ಪರೀಕ್ಷೆ ಮುಂದೂಡದ ಜಿಲ್ಲಾಡಳಿತ | ಅಪಾಯಕಾರಿ ಸ್ಥಿತಿಯಲ್ಲಿ ತೆರಳಬೇಕಾದ ವಿದ್ಯಾರ್ಥಿಗಳು Read More »

ಬಂಟ್ವಾಳ ನೇತ್ರಾವತಿ ನದಿ ನೀರಿನ ಮಟ್ಟ 6.7 ಕ್ಕೆ ತಲುಪಿದೆ

ಬಂಟ್ವಾಳ : ಭಾರೀ ಮಳೆಯಿಂದಾಗಿ ಬಂಟ್ವಾಳ ನೇತ್ರಾವತಿ ನೀರಿನ ಮಟ್ಟ ಏರಿಕೆ  ಇಂದು 6.7 ಮೀಟರ್ ಎತ್ತರದಲ್ಲಿ ಹರಿಯುತ್ತಿದೆ. ಬಂಟ್ವಾಳ ನೇತ್ರಾವತಿ ನದಿಯ ಅಪಾಯದ ಮಟ್ಟ 8.5 ಮೀಟರ್ ಆಗಿದೆ. ಮಳೆಯ ಪ್ರಮಾಣ ಜಾಸ್ತಿಯಾದಲ್ಲಿ ಅಪಾಯದ ಮಟ್ಟವನ್ನು ತಲುಪುವ ಸಾಧ್ಯತೆಯಿದೆ.

ಬಂಟ್ವಾಳ ನೇತ್ರಾವತಿ ನದಿ ನೀರಿನ ಮಟ್ಟ 6.7 ಕ್ಕೆ ತಲುಪಿದೆ Read More »

ಬೆಳ್ತಂಗಡಿ ತಾಲೂಕಿನಾದ್ಯಂತ ಭಾರಿ ಮಳೆ : ಕೊಪ್ಪದ ಗಂಡಿ ಸೇತುವೆ ಮುಳುಗಡೆ

ಬೆಳ್ತಂಗಡಿ : ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಬೆಳ್ತಂಗಡಿ ತಾಲೂಕಿನಾದ್ಯಂತ ನದಿ, ಕೊಳ್ಳಗಳು ತುಂಬಿ ಹರಿಯುತ್ತಿದೆ. ಮಿತ್ತಬಾಗಿಲು-ಬಂಗಾಡಿ ಸಂಪರ್ಕ ನೇತ್ರಾವತಿ ನದಿಯ ಕೊಪ್ಪದ ಗಂಡಿ ಸೇತುವೆ ಮುಳುಗಡೆಯಾಗಿದೆ. ನೇತ್ರಾವತಿ ನದಿಗಳಲ್ಲೂ ನೀರಿನ ಪ್ರಮಾಣ ಹೆಚ್ಚಳವಾಗಿದೆ.

ಬೆಳ್ತಂಗಡಿ ತಾಲೂಕಿನಾದ್ಯಂತ ಭಾರಿ ಮಳೆ : ಕೊಪ್ಪದ ಗಂಡಿ ಸೇತುವೆ ಮುಳುಗಡೆ Read More »

ಕುಕ್ಕೆ ಕ್ಷೇತ್ರದಲ್ಲಿ ಭಾರೀ ಮಳೆ : ಜಲ ದಿಗ್ಭಂಧನದಿಂದ ಸಂಪರ್ಕ ಕಡಿತ

ಸುಬ್ರಹ್ಮಣ್ಯ: ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಮತ್ತು ಮಲೆನಾಡಿನಲ್ಲಿ ನಿರಂತರ ಭಾರೀ  ಮಳೆ ಸುರಿಯುತ್ತಿದ್ದು, ಜಿಲ್ಲೆಯ ಜೀವನದಿಗಳಾದ ನೇತ್ರಾವತಿ ಮತ್ತು ಕುಮಾರಧಾರ ನದಿಗಳಲ್ಲಿ ನೀರಿನ ಮಟ್ಟ ಏರುತ್ತಿದೆ. ಘಟ್ಟ ಪ್ರದೇಶದಲ್ಲಿ ಕೂಡಾ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣದಿಂದ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ  ಸ್ನಾನಘಟ್ಟ ಸಂಪೂರ್ಣ  ಮುಳುಗಡೆಯಾಗಿದೆ. ಈ ಭಾಗದಲ್ಲಿ ಶನಿವಾರದಿಂದ ನಿರಂತರ ಮಳೆಯಾಗುತ್ತಿದ್ದು, ಘಟ್ಟ ಪ್ರದೇಶದಿಂದ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಕುಮಾರಧಾರಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಿದ್ದು, ನದಿ ಸಮೀಪ ಹೋಗದಂತೆ ದೇವಸ್ಥಾನಕ್ಕೆ ಆಗಮಿಸುವ

ಕುಕ್ಕೆ ಕ್ಷೇತ್ರದಲ್ಲಿ ಭಾರೀ ಮಳೆ : ಜಲ ದಿಗ್ಭಂಧನದಿಂದ ಸಂಪರ್ಕ ಕಡಿತ Read More »

ಸೌಜನ್ಯ ಪ್ರಕರಣ ಮರು ತನಿಖೆಗೆ ಒಳಪಡಿಸಿ | ಶಾಸಕ ಹರೀಶ್ ಪೂಂಜಾರಿಂದ ಮುಖ್ಯಮಂತ್ರಿಗೆ ಮನವಿ

ಬೆಂಗಳೂರು: ಸೌಜನ್ಯ ಕೊಲೆ ಹಾಗೂ ಅತ್ಯಾಚಾರ ಪ್ರಕರಣ ಸಂಬಂಧ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಇಂದು ಭೇಟಿಯಾಗಿ ಸೌಜನ್ಯ  ಪ್ರಕರಣ ಮರು ತನಿಖೆಗೆ ಒಳಪಡಿಸಿ ತನಿಖೆ ನಡೆಸಲು ಆಗ್ರಹಿಸಿದರು  ಮೃತ ಸಹೋದರಿ, ಸೌಜನ್ಯನಿಗೆ ಮತ್ತು ಮೃತಳ ಕುಟುಂಬಕ್ಕೆ ಸೂಕ್ತ ನ್ಯಾಯ ದೊರಕಿಸಿಕೊಡಬೇಕಾಗಿ ಮಾನ್ಯ ಮುಖ್ಯಮಂತ್ರಿ ಅವರಿಗೆ ಮನವಿಯನ್ನು ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಉಪಸ್ಥಿತರಿದ್ದರು.

ಸೌಜನ್ಯ ಪ್ರಕರಣ ಮರು ತನಿಖೆಗೆ ಒಳಪಡಿಸಿ | ಶಾಸಕ ಹರೀಶ್ ಪೂಂಜಾರಿಂದ ಮುಖ್ಯಮಂತ್ರಿಗೆ ಮನವಿ Read More »

ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ವಿರುದ್ಧದ ವರದಿಗೆ ತಡೆ | ಸೆಷನ್ಸ್ ನ್ಯಾಯಾಲಯ ಆದೇಶ

ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ವಿರುದ್ಧ ಯಾವುದೇ ಮಾಧ್ಯಮದ ಮೂಲಕ ಅವಹೇಳನಕಾರಿ ವರದಿ ಮಾಡದಂತೆ ಬೆಂಗಳೂರಿನ ಸಿಟಿ ಸಿವಿಲ್‌ ಕೋರ್ಟ್‌ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯ ಆದೇಶಿಸಿದೆ. ಜತೆಗೆ ಈಗಾಗಲೇ ಸಾಮಾಜಿಕ ಮಾಧ್ಯಮಗಳೂ ಸೇರಿದಂತೆ ಇನ್ನಿತರೆ ಮಾಧ್ಯಮಗಳು ಮಾಡಿರುವ ಅವಹೇಳನಕಾರಿ ವರದಿಗಳನ್ನು ಅಳಿಸಿ ಹಾಕುವಂತೆ ಈ ಸಂಬಂಧ ವಾದಿಗಳಾದ ಶೀನಪ್ಪ ಮತ್ತಿತರರು ಸಲ್ಲಿಸಿರುವ ಅಸಲು ದಾವೆಯನ್ನು ಸಿಸಿಎಚ್‌-11ನೇ ನ್ಯಾಯಾಲಯ ವಿಚಾರಣೆ ನಡೆಸಿ ಇದೇ ಜು.19ರಂದು ಈ ಕುರಿತಂತೆ ಆದೇಶಿಸಿದೆ. ಅರ್ಜಿ ವಿಚಾರಣೆ

ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ವಿರುದ್ಧದ ವರದಿಗೆ ತಡೆ | ಸೆಷನ್ಸ್ ನ್ಯಾಯಾಲಯ ಆದೇಶ Read More »

ಆಯುಷ್ ಇಲಾಖೆಯಿಂದ ದ.ಕ.ಜಿಲ್ಲೆಗೆ ಮೂರು ಸಂಚಾರಿ ಕ್ಲಿನಿಕ್

ಪುತ್ತೂರು: ದ.ಕ.ಜಿಲ್ಲಾ ಆಯುಷ್ ಇಲಾಖೆ ಮೂರು ಸಂಚಾರಿ ಕ್ಲಿನಿಕ್‍ ಗಳನ್ನು ಆರಂಭಿಸಲು 2023-24ನೇ ಹಣಕಾಸು ವರ್ಷದಲ್ಲಿ ಸರಕಾರ ಮಂಜೂರು ಮಾಡಿದ್ದು, ಪುತ್ತೂರು, ಸುಳ್ಯ ಹಾಗೂ ಬೆಳ್ತಂಗಡಿ ತಾಲೂಕುಗಳ ಒಳಭಾಗಗಳಲ್ಲಿ ಸಂಚರಿಸಲಿದೆ. ಇದರ ಕಾರ್ಯ ಯೋಜನೆಯೊಂದೇ ಬಾಕಿಯಿದ್ದು, ಆಯುಷ್ ಸಂಚಾರಿ ವೈದ್ಯಕೀಯ ಘಟಕದ ವಾಹನಗಳಲ್ಲಿ ವೈದ್ಯರು, ವಿವಿಧೋದ್ದೇಶ ಕಾರ್ಯಕರ್ತೆಯರು ಸಂಚರಿಸಲಿದ್ದಾರೆ. ಕಡಿಮೆ ಸೇವೆಯಲ್ಲಿರುವ ನಿವಾಸಿಗಳ ಹಾಗೂ ಕಾಯ್ದಿರಿಸದ ಮನೆ ಬಾಗಿಲಿಗೆ ಆಯುಷ್ ಆರೋಗ್ಯ ಸೇವೆಯನ್ನು ಒದಗಿಸುವುದು ಸಂಚಾರಿ ವೈದ್ಯಕೀಯ ಘಟಕದ ಉದ್ದೇಶವಾಗಿದೆ. ಸಾಮಾನ್ಯ ಸಾಂಕ್ರಾಮಿಕ ರೋಗಗಳು, ಸಾಂಕ್ರಾಮಿಕವಲ್ಲದ ರೋಗಗಳ

ಆಯುಷ್ ಇಲಾಖೆಯಿಂದ ದ.ಕ.ಜಿಲ್ಲೆಗೆ ಮೂರು ಸಂಚಾರಿ ಕ್ಲಿನಿಕ್ Read More »

ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಸಭೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಸಂಸದ  ನಳಿನ್ ಕುಮಾರ್ ಕಟೀಲ್ ಅವರು ಇಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆಯನ್ನು ನಡೆಸಿದರು. ಸಭೆಯಲ್ಲಿ ಇತ್ತೀಚೆಗಿನ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ  ಉಂಟಾಗಿರುವ ಪಾಟ್ ಹೋಲ್ ಗಳನ್ನು ಮುಚ್ಚಲು ಕೂಡಲೇ  ಕ್ರಮ ಕೈಗೊಳ್ಳುವಂತೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಸ್ಥಳಗಳಿಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ಶೀಘ್ರದಲ್ಲಿ  ನಡೆಸುವುದಾಗಿ ಸಂಸದರು ಇದೇ ಸಂದರ್ಭದಲ್ಲಿ ಅಧಿಕಾರಿಗಳಿಗೆ  ತಿಳಿಸಿದರು. ಈ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಪ್ರಾಧಿಕಾರದ

ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಸಭೆ Read More »

ಗ್ರಾಪಂ ಉಪಚುನಾವಣೆ | ಶಸ್ತ್ರಾಸ್ತ್ರ ಠೇವಣಿ ಇಡುವಂತೆ ಜಿಲ್ಲಾಧಿಕಾರಿ ಸೂಚನೆ

ಮಂಗಳೂರು: ಇದೀಗ ಚುನಾವಣೆ ಘೋಷಣೆಯಾಗಿರುವ ಗ್ರಾಮ ಪಂಚಾಯತ್‍ಗಳ ವ್ಯಾಪ್ತಿಯಲ್ಲಿ ಪರವಾನಗಿ ಪಡೆದಿರುವ ಆಯುಧಗಳನ್ನು ಠೇವಣಿ ಇಡುವಂತೆ ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಅವರು ಆದೇಶಿಸಿದ್ದಾರೆ.  ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನಿಡ್ಪಳ್ಳಿ ಮತ್ತು ಆರ್ಯಾಪು ಗ್ರಾಮ ಪಂಚಾಯತ್, ಬೆಳ್ತಂಗಡಿ ತಾಲೂಕಿನ ಮಡಂತ್ಯಾರ್ ಮತ್ತು ಉಜಿರೆ ಗ್ರಾಮ ಪಂಚಾಯತ್ ಹಾಗೂ ಬಂಟ್ವಾಳ ತಾಲೂಕಿನ ಪುದು ಗ್ರಾಮ ಪಂಚಾಯತ್ ಚುನಾವಣೆಗಳು ನಡೆಯಲಿವೆ. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ಬೆಳೆ ರಕ್ಷಣೆ ಮತ್ತು

ಗ್ರಾಪಂ ಉಪಚುನಾವಣೆ | ಶಸ್ತ್ರಾಸ್ತ್ರ ಠೇವಣಿ ಇಡುವಂತೆ ಜಿಲ್ಲಾಧಿಕಾರಿ ಸೂಚನೆ Read More »

error: Content is protected !!
Scroll to Top