ಅಪರಾಧ

ಸಾವಿರಕ್ಕೂ ಅಧಿಕ ಮಹಿಳೆಯರ ಗುಂಪಿನಿಂದ ಸೇನಾ ನೆಲೆಯ ಮೇಲೆ ದಾಳಿ | ಸೆರೆಯಲ್ಲಿದ್ದ 12 ಬಂಡುಕೋರರ ಬಿಡುಗಡೆ

ಇಂಫಾಲ : ಮಹಿಳೆಯರ ಗುಂಪೊಂದು ಸೇನಾ ನೆಲೆಗೆ ಮುತ್ತಿಗೆ ಹಾಕಿ ಸೈನಿಕರ ಸೆರೆ ಹಿಡಿದಿದ್ದ 12 ಬಂಡುಕೋರರನ್ನು ಬಿಡಿಸಿಕೊಂಡು ಹೋದ ಘಟನೆ ಮಣಿಪುರದಲ್ಲಿ ನಡೆದಿದೆ. ಪೂರ್ವ ಇಂಫಾಲದ ಇಥಾಮ್ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸುಮಾರು 1200 ಕ್ಕೂ ಮಿಕ್ಕಿ ಮಹಿಳೆಯರ ಗುಂಪು ಸೇನಾ ಪಡೆಯನ್ನು ಸುತ್ತುವರಿದಿದ್ದು, ಬಂಡುಕೋರರನ್ನು ಬಿಡುವಂತೆ ಒತ್ತಾಯಿಸಿದೆ. ಹೆಚ್ಚಿನ ಅನಾಹುತ ತಪ್ಪಿಸಲು ಸೇವೆ ಅವರನ್ನು ಬಿಟ್ಟು ಕಳುಹಿಸಿದೆ ಎಂದು ಸೇನೆ ಟ್ವಿಟರ್ ಮೂಲಕ ತಿಳಿಸಿದೆ. ಮೆಟಾಯಿ ಬಂಡುಕೋರರ ಗುಂಪಿಗೆ ಸೇರಿದ 12 […]

ಸಾವಿರಕ್ಕೂ ಅಧಿಕ ಮಹಿಳೆಯರ ಗುಂಪಿನಿಂದ ಸೇನಾ ನೆಲೆಯ ಮೇಲೆ ದಾಳಿ | ಸೆರೆಯಲ್ಲಿದ್ದ 12 ಬಂಡುಕೋರರ ಬಿಡುಗಡೆ Read More »

ಮನೆಯಲ್ಲೇ ಗಾಂಜಾ ಬೆಳೆ ಬೆಳೆದ ವಿದ್ಯಾರ್ಥಿಗಳು | ಐದು ಮಂದಿಯ ಬಂಧನ

ಶಿವಮೊಗ್ಗ :   ವೈದ್ಯಕೀಯ ವಿಧ್ಯಾಭ್ಯಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳು ತಾವು ವಾಸವಿದ್ದ ಬಾಡಿಗೆ ಮನೆಯಲ್ಲೇ ಗಾಂಜಾ ಬೆಳೆದು ಮಾರಾಟ ಮಾಡುತ್ತಿದ್ದ ಘಟನೆ ಶಿವಮೊಗ್ಗದಲ್ಲಿ ನಡೆದಿದ್ದು, ಇದೀಗ ಶಿವಮೊಗ್ಗ ಪೊಲೀಸರು 5 ಮಂದಿ ಎಂಬಿಬಿಎಸ್ ವಿಧ್ಯಾರ್ಥಿಗಳನ್ನು ಬಂಧಿಸಿದ್ದಾರೆ. ಶಿವಮೊಗ್ಗದ ಖಾಸಗಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಾದ ಅಬ್ದುಲ್ ಖಯ್ಯಂ, ಅರ್ಪಿತಾ, ವಿಘ್ನರಾಜ್, ವಿನೋದ್ ಕುಮಾರ್, ಪಾಂಡಿದೊರೈ ಬಂಧಿತ ಆರೋಪಿಗಳು. ಅಬ್ದುಲ್ ಖಯ್ಯಂ, ವಿಘ್ನರಾಜ್ ಹಾಗೂ ಅರ್ಪಿತಾ ಶಿವಮೊಗ್ಗದ ಶಿವಗಂಗಾ ಲೇಔಟ್ ನಲ್ಲಿ ವಾಸಕ್ಕೆ ಬಾಡಿಗೆ ಮನೆ ಪಡೆದಿದ್ದರು. ಅದೇ ಮನೆಯಲ್ಲೇ ಹೂ

ಮನೆಯಲ್ಲೇ ಗಾಂಜಾ ಬೆಳೆ ಬೆಳೆದ ವಿದ್ಯಾರ್ಥಿಗಳು | ಐದು ಮಂದಿಯ ಬಂಧನ Read More »

ಯುವತಿ ನಾಪತ್ತೆ

ಕಡಬ : ಕಡಬ ಠಾಣಾ ವ್ಯಾಪ್ತಿಯ ಯುವತಿಯೊಬ್ಬಳು ನಾಪತ್ತೆಯಾಗಿರುವ ಕುರಿತು ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಡಬ ಗ್ರಾಮದ ಕಳಾರ ಎಂಬಲ್ಲಿ ವಾಸವಾಗಿರುವ ರಕ್ಷಿತಾ (18) ನಾಪತ್ತೆಯಾದ ಯುವತಿ. ಈಕೆ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದು, ಮೂಲತಃ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹಗರೆ ಅಂಗಡಿಹಳ್ಳಿಯವಳು. ಕಳೆದ 6 ವರ್ಷಗಳಿಂದ ಕಡಬದಲ್ಲಿ ವಾಸವಿದ್ದು, 10 ನೇ ತರಗತಿ ಓದಿದ್ದು, ಬಳಿಕ ಮೂರು ವರ್ಷದಿಂದ ಮನೆಯಲ್ಲೇ ಇದ್ದಳು. ಜೂ.20 ರಂದು ಬೆಳಿಗ್ಗೆ ಮನೆಯಿಂದ ಹೋದವಳು ಇದುವರೆಗೆ ಮನೆ ಬಾರದೆ, ಬೇಲೂರಿಗೂ

ಯುವತಿ ನಾಪತ್ತೆ Read More »

ನದಿಗೆ ಹಾರಿ ಆತ್ಮಹತ್ಯೆ | ಮೃತದೇಹ ಪತ್ತೆ

ಕಡಬ : ಸಕಲೇಶಪುರ ಮೂಲದ ವ್ಯಕ್ತಿಯೊಬ್ಬರು ಕಡಬ ತಾಲೂಕಿನ ಕೊಡಿoಬಾಳ ಗ್ರಾಮದ ದoಡ್ಡುಗುರಿ ಸಮೀಪ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜೂ 24 ರಂದು ಬೆಳಕಿಗೆ ಬಂದಿದೆ. ಸಕಲೇಶಪುರ ಬಾಲಗದ್ದೆ ನಿವಾಸಿ ಧರ್ಮಯ್ಯ (40) ಮೃತ ವ್ಯಕ್ತಿ. ಕಡಬ ಪೊಲೀಸರು ಹಾಗೂ ಸ್ಥಳೀಯರು ಮತ್ತು ಶೌರ್ಯ ತಂಡದ ಸದಸ್ಯರು ನದಿಗಿಳಿದು ಕಾರ್ಯಚರಣೆ ನಡೆಸಿ ಮೃತದೇಹ ಪತ್ತೆ ಹಚ್ಚಿದ್ದಾರೆ. ಕುಮಾರಧಾರ ನದಿ ಬಳಿ ವ್ಯಕ್ತಿಯೊಬ್ಬರ ಶೂ ಪತ್ತೆಯಾದ ಹಿನ್ನಲೆಯಲ್ಲಿ ಅನುಮಾನಗೊಂಡು   ನದಿಯಲ್ಲಿ ಹುಡುಕಾಟ ನಡೆಸಿದ್ದಾರೆ. ಧರ್ಮಯ್ಯ ನವರು

ನದಿಗೆ ಹಾರಿ ಆತ್ಮಹತ್ಯೆ | ಮೃತದೇಹ ಪತ್ತೆ Read More »

ಅಂಗನವಾಡಿಗೆ ವಿತರಿಸಲಾದ ಮೊಟ್ಟೆಯಲ್ಲಿ ಕೋಳಿ ಮರಿ | ಚರ್ಚೆಗೆ ಕಾರಣವಾದ ಘಟನೆ | ಪಂಚಾಯಿತಿ ಸಭೆಯಲ್ಲಿ ಚರ್ಚಿಸಲು ಗ್ರಾಮಸ್ಥರ ನಿರ್ಧಾರ

ಮಂಗಳೂರು: ಮಕ್ಕಳಿಗೆ ಪೌಷ್ಠಿಕಾಂಶಯುಕ್ತ ಆಹಾರ ಸಿಗಬೇಕೆಂದು ಸರ್ಕಾರ ಆರಂಭಿಸಿರುವ ಈ ಯೋಜನೆ ಆಘಾತಕಾರಿಯಾಗಿ ಪರಿಣಮಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಅರಸಿನಮಕ್ಕಿ ಎಂಬಲ್ಲಿ ಆಘಾತಕಾರಿ ಘಟನೆಯೊಂದು ಸಂಭವಿಸಿದ್ದು, ರೆಖ್ಯ ಗ್ರಾಮದ ಎಂಜಿರ ಕಟ್ಟೆ ಎಂಬಲ್ಲಿ ಅಂಗನವಾಡಿ ಕೇಂದ್ರದಿಂದ ವಿತರಣೆ ಮಾಡಲಾಗಿದ್ದ ಮೊಟ್ಟೆಯನ್ನು ಬೇಯಿಸಿದಾಗ ಅದರ ಒಳಗೆ ರಕ್ತ ಹಾಗೂ ಕೋಳಿ ಮರಿ ಪತ್ತೆಯಾಗಿತ್ತು. ಕೋಳಿ ಮರಿ ಕೂಡ ಬೆಂದು ಹೋಗಿದ್ದು ಕುಟುಂಬಸ್ಥರಲ್ಲಿ ಆತಂಕ ಮನೆ ಮಾಡಿದೆ. ಈ ವಿಚಾರ ಗ್ರಾಮಾದ್ಯಂತ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದು ಅಂಗನವಾಡಿ ಕೇಂದ್ರದಿಂದ

ಅಂಗನವಾಡಿಗೆ ವಿತರಿಸಲಾದ ಮೊಟ್ಟೆಯಲ್ಲಿ ಕೋಳಿ ಮರಿ | ಚರ್ಚೆಗೆ ಕಾರಣವಾದ ಘಟನೆ | ಪಂಚಾಯಿತಿ ಸಭೆಯಲ್ಲಿ ಚರ್ಚಿಸಲು ಗ್ರಾಮಸ್ಥರ ನಿರ್ಧಾರ Read More »

ಮಹಿಳೆಗೆ ಕಿರುಕುಳ | ವ್ಯಕ್ತಿಯೊಬ್ಬರ ಮೇಲೆ ಪ್ರಕರಣ ದಾಖಲು

ಪುತ್ತೂರು: ಮಹಿಳೆಯೊಬ್ಬರಿಗೆ ಬಸ್ಸಿನಲ್ಲಿ ಕಿರುಕುಳ ನೀಡಿದ ಆರೋಪದಲ್ಲಿ ವ್ಯಕ್ತಿಯೊಬ್ಬರ ಮೇಲೆ ಪುತ್ತೂರು ನಗರ ಠಾಣೆಗೆ ದೂರು ನೀಡಲಾಗಿದೆ. ಕೆಮ್ಮಿಂಜೆ ಸುಬ್ರಹ್ಮಣ್ಯ ಭಟ್ ಎಂಬವರು ಬಸ್ ನಲ್ಲಿ ಪುತ್ತೂರಿಗೆ ಬರುತ್ತಿದ್ದ ವೇಳೆ ಬೊಳುವಾರಿನಲ್ಲಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಕಿರುಕುಳ ನೀಡಿರುವುದಾಗಿ ಆರೋಪಿಸಲಾಗಿದೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಹಿಳೆಗೆ ಕಿರುಕುಳ | ವ್ಯಕ್ತಿಯೊಬ್ಬರ ಮೇಲೆ ಪ್ರಕರಣ ದಾಖಲು Read More »

ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆ

ಸುಬ್ರಹ್ಮಣ್ಯ: ಮಧ್ಯ ವಯಸ್ಕ ವ್ಯಕ್ತಿಯೊಬ್ಬರು ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ರಾತ್ರಿ ನೆಟ್ಟಣದಲ್ಲಿ ನಡೆದಿದೆ. ಕಡಬ ತಾಲೂಕಿನ ಐನೆಕಿದು ಪೈಲಾಜೆ ನಿವಾಸಿ ಧರ್ಮರಾಜ ಮುತ್ಲಾಜೆ (45) ಈ ಕೃತ್ಯ ಎಸಗಿದವರು. ಧರ್ಮರಾಜ್ ಎಲಿಮಲೆ ರಬ್ಬರ್ ಫ್ಯಾಕ್ಟರಿಯಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದು, ಕೆಲ ಸಮಯಗಳಿಂದ ಕೆಲಸಕ್ಕೆ ಗೈರು ಹಾಜರಾಗುತ್ತಿದ್ದರು ಎಂದು ತಿಳಿದು ಬಂದಿದೆ. ಗೂಡ್ಸ್‍ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆ Read More »

ನೇತ್ರಾವತಿ ನದಿಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ

ಬಂಟ್ವಾಳ: ಬಂಟ್ವಾಳ ಪುರಸಭಾ ವ್ಯಾಪ್ತಿಯ ಕಂಚಿಕಾರ್ ಪೇಟೆಯ ಕೂಟೇಲು ಸೇತುವೆ ಸಮೀಪ ನೇತ್ರಾವತಿ ನದಿಯಲ್ಲಿ ಸುಮಾರು 45 ವರ್ಷದ ಅಪರಿಚಿತ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಪುರಸಭಾ ಸದಸ್ಯ ಮೊಹಮ್ಮದ್ ಇಕ್ಬಾಲ್ ಅವರು ಬಂಟ್ವಾಳ ಪೇಟೆ ಕಡೆ ಹೋಗುತ್ತಿರುವ ಸಂದರ್ಭದಲ್ಲಿ ಕೂಟೇಲು ಸೇತುವೆ ಸಮೀಪದಲ್ಲಿ ಮಹಿಳೆಯ ಚಪ್ಪಲಿ ಕಂಡು ಬಂದ ಕಾರಣಕ್ಕಾಗಿ ನದಿಯಲ್ಲಿ ನೋಡಿದಾಗ ಮಹಿಳೆಯ ಮೃತದೇಹ ಕವಚಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು , ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಪರಿಚಿತ ಮಹಿಳೆಯ ಬಗ್ಗೆ ಗುರುತು ಪತ್ತೆಗಾಗಿ

ನೇತ್ರಾವತಿ ನದಿಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ Read More »

ಜಮಿನು ಖಾತೆ ಬದಲಾವಣೆ ಪಿಡಿಒರಿಂದ 20 ಸಾವಿರ ಲಂಚ ಬೇಡಿಕೆ | ಲೋಕಾಯುಕ್ತ ಅಧಿಕಾರಿಗಳ ಬಲೆಗೆ

ಕೌಕ್ರಾಡಿ: ಜಮೀನು ಖಾತೆ ಬದಲಾವಣೆಗೆ ಲಂಚದ ಬೇಡಿಕೆಯಿಟ್ಟ ಕೌಕ್ರಾಡಿ ಗ್ರಾಮ ಪಂಚಾಯಿತಿ ಪಿಡಿಒ ಮಹೇಶ್ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಕೊಕ್ಕಡ ನಿವಾಸಿಯೊಬ್ಬರು ಕೌಕ್ರಾಡಿ ಗ್ರಾಮದಲ್ಲಿ ಜಾಗದ 9/11 ಖಾತೆ  ಬದಲಾವಣೆಗೆ 2017 ರಲ್ಲಿ ಅರ್ಜಿ ಸಲ್ಲಿಸಿದ್ದರು. ಖಾತೆ ಬದಲಾವಣೆ ಆಗದ ಹಿನ್ನಲೆಯಲ್ಲಿ 2021 ರಲ್ಲಿ ಮತ್ತೆ ಅರ್ಜಿ ಸಲ್ಲಿಸಿ ಶುಲ್ಕ ಪಾವತಿ ಮಾಡಿದ್ದರು. ಆದರೂ ಬದಲಾವಣೆ ಆಗಿರಲಿಲ್ಲ. ಗ್ರಾಪಂ ಪಿಡಿಒ ಖಾತೆ ಬದಲಾವಣೆಗೆ 20 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರು.

ಜಮಿನು ಖಾತೆ ಬದಲಾವಣೆ ಪಿಡಿಒರಿಂದ 20 ಸಾವಿರ ಲಂಚ ಬೇಡಿಕೆ | ಲೋಕಾಯುಕ್ತ ಅಧಿಕಾರಿಗಳ ಬಲೆಗೆ Read More »

ಕೌಕ್ರಾಡಿ ಗ್ರಾಪಂ ಪಿಡಿಒ ವಿರುದ್ಧ ದೂರು ಹಿನ್ನಲೆ | ಲೋಕಾಯುಕ್ತ ಪೊಲೀಸರಿಂದ ದಾಳಿ

ಪುತ್ತೂರು: ಗ್ರಾಪಂ ಒಂದರ ಪಿಡಿಒ ವಿರುದ್ಧ ದೂರು ಬಂದ ಹಿನ್ನಲೆಯಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ವಿಚಾರಣೆ ನಡೆಸಿದ ಘಟನೆ ಗುರುವಾರ ನಡೆದಿದೆ. ಕೌಕ್ರಾಡಿ ಗ್ರಾಪಂಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು,ಗ್ರಾಪಂ ಕಚೇರಿಯಲ್ಲೇ ಪಿಡಿಒ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ

ಕೌಕ್ರಾಡಿ ಗ್ರಾಪಂ ಪಿಡಿಒ ವಿರುದ್ಧ ದೂರು ಹಿನ್ನಲೆ | ಲೋಕಾಯುಕ್ತ ಪೊಲೀಸರಿಂದ ದಾಳಿ Read More »

error: Content is protected !!
Scroll to Top