ಅಪರಾಧ

ಪ್ರಧಾನಿ ಮೋದಿ ನಿವಾಸದ ಬಳಿ ಡ್ರೋನ್ ಹಾರಾಟ | ಪೊಲೀಸರಿಂದ ತನಿಖೆ

ನವದೆಹಲಿ: ನವದೆಹಲಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಬಳಿ ಡ್ರೋನ್‌ ಹಾರಾಟವಾಗಿರುವ ಕುರಿತು ವರದಿಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಧಾನಿ ಮೋದಿ ಅವರ ರಕ್ಷಣೆಗಿರುವ ವಿಶೇಷ ರಕ್ಷಣಾ ತಂಡ ಡ್ರೋನ್‌ ಹಾರಾಟವನ್ನು ನೋಡಿ ಕೂಡಲೇ ಪೊಲೀಸರಿಗೆ ಮಾಹಿತಿಯನ್ನು ನೀಡಿದೆ. ಪೊಲೀಸರು ಕೂಡಲೇ ತನಿಖೆ ಆರಂಭಿಸಿದ್ದಾರೆ.ಇನ್ನು ಡ್ರೋನ್‌ ಪತ್ತೆ ಕಾರ್ಯವನ್ನು ಆರಂಭಿಸಿರುವ ಪೊಲೀಸರಿಗೆ ಇದುವರೆಗೆ ಯಾವುದೇ ಡ್ರೋನ್‌ ಪತ್ತೆಯಾಗಿಲ್ಲ ಎಂದು ವರದಿ ತಿಳಿಸಿದೆ. ಮೋದಿ ಅವರ ನಿವಾಸವು ನೋ ಡ್ರೋನ್ ಝೋನ್ ಅಡಿಯಲ್ಲಿ ಬರುತ್ತದೆ. ಆದರೂ ಡ್ರೋನ್‌ […]

ಪ್ರಧಾನಿ ಮೋದಿ ನಿವಾಸದ ಬಳಿ ಡ್ರೋನ್ ಹಾರಾಟ | ಪೊಲೀಸರಿಂದ ತನಿಖೆ Read More »

ಕುಂಬ್ರದ ವ್ಯಕ್ತಿ ದಿಢೀರ್ ನಾಪತ್ತೆ | ಕುಟುಂಬ ಆತಂಕದಲ್ಲಿ

ಪುತ್ತೂರು : ಒಳಮೊಗ್ರು ಗ್ರಾಮದ ಕುಂಬ್ರ ನಿವಾಸಿ ಉಮ್ಮರ್ ಎಂಬವರು ದಿಢೀರ್ ನಾಪತ್ತೆಯಾದ ಕುರಿತು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶನಿವಾರ ಮಧ್ಯಾಹ್ನ 3 ಗಂಟೆ ವರೆಗೆ ಪುತ್ತೂರಿನಲ್ಲಿದ್ದ ಅವರು ಬಳಿಕ ನಾಪತ್ತೆಯಾಗಿದ್ದಾರೆ. ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ. ಜು.3 ರಂದು ಅವರ ಪುತ್ರನಿಗೆ ಮದುವೆ ನಡೆಯಲಿದ್ದು, ಜು.2 ರಂದು ನಡೆಯಬೇಕಿದ್ದ ಮೆಹೆಂದಿ ರದ್ದು ಮಾಡಿದ್ದಾರೆ. ಇದೀಗ ನಾಪತ್ತೆಯಾಗಿರುವ ಕುರಿತು ಕುಟುಂಬದವರಿಗೆ ಅಘಾತ ಉಂಟು ಮಾಡಿದ್ದು, ಪೊಲೀಸರು ಹುಡುಕಾಟದಲ್ಲಿ ತೊಡಗಿದ್ದಾರೆ.

ಕುಂಬ್ರದ ವ್ಯಕ್ತಿ ದಿಢೀರ್ ನಾಪತ್ತೆ | ಕುಟುಂಬ ಆತಂಕದಲ್ಲಿ Read More »

ಐಎಸ್ ಉಗ್ರ ಸಂಘಟನೆ ಜತೆ ನಂಟು | ವಿದ್ವಂಸಕ ಕೃತ್ಯ ಎಸಗಲು ಸಂಚು | 9 ಮಂದಿ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ

ಮಂಗಳೂರು: ಐಎಸ್ ಉಗ್ರ ಸಂಘಟನೆ ಜತೆಗೂಡಿ ದೇಶಾಸ್ಯಂತ ಉಗ್ರ ಚಟುವಟಿಕೆ ನಡೆಸಲು ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕದ 9 ಮಂದಿ ವಿರುದ್ಧ ಎನ್‍ಐಎ ಆರೋಪ ಪಟ್ಟಿ ಸಲ್ಲಿಸಿದೆ. ಮಾಝ್‍ ಮುನೀರ್ ಅಹಮ್ಮದ್ (23), ಮಹಮ್ಮದ್ ಶಾರೀಕ್ (25), ರಿಶಾನ್ ತಾಜುದ್ದೀನ್ ಶೇಖ್ (22), ವಝೀನ್ ಅಬ್ದುಲ್ ರಹಿಮಾನ್ (22), ಹುಝೈರ್ ಫರ್ಹಾನ್ ಬೇಗ್ (22), ನದೀಮ್ ಅಹಮ್ಮದ್ ಕೆ. (22), ನದೀಮ್ ಫೈಝಲ್ ಎನ್. (27) ಹಾಗೂ ಜಬೀವುಲ್ಲಾ ಎಂಬವರ ಮೇಲೆ ಪೂರಕ ಆರೋಪ ಪಟ್ಟಿ

ಐಎಸ್ ಉಗ್ರ ಸಂಘಟನೆ ಜತೆ ನಂಟು | ವಿದ್ವಂಸಕ ಕೃತ್ಯ ಎಸಗಲು ಸಂಚು | 9 ಮಂದಿ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ Read More »

ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ ದಂಪತಿ |  ಪತಿ ಮೃತ್ಯು – ಪತ್ನಿಯ ಸ್ಥಿತಿ ಗಂಭೀರ

ಪುತ್ತೂರು : ಅನಂತಾಡಿಯ ಬಾಕಿಲ ಎಂಬಲ್ಲಿ ಪತಿ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಪತಿ ಮೃತಪಟ್ಟು ಪತ್ನಿಯನ್ನು ಗಂಭೀರ ಸ್ಥಿತಿಯಲ್ಲಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಅನಂತಾಡಿ ಬಾಕಿಲ ನಿವಾಸಿ ಪ್ರತಾಪ್(35) ಮೃತಪಟ್ಟಿದ್ದು ಪತ್ನಿ ವೀಣಾ(32)ಗಂಭೀರ ಸ್ಥಿತಿಯಲ್ಲಿದ್ದು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಶನಿವಾರ ರಾತ್ರಿ ನೇಣು ಬಿಗಿದುಕೊಂಡಿದ್ದು, ತಕ್ಷಣ ಮಾಹಿತಿ ತಿಳಿದು ಇಬ್ಬರನ್ನೂ ಪುತ್ತೂರು ಆಸ್ಪತ್ರೆಗೆ ಕರೆ ತರಲಾಗಿತ್ತು.ಆದರೆ ಪ್ರತಾಪ್ ಮೃತಪಟ್ಟಿದ್ದಾರೆ. ಪತ್ನಿ ವೀಣಾರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ವರ್ಗಾಯಿಸಿದ್ದಾರೆ. ವಿಟ್ಲ ಪೊಲೀಸರು ಸ್ಥಳಕ್ಕೆ ತೆರಳಿ ಪ್ರಕರಣ

ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ ದಂಪತಿ |  ಪತಿ ಮೃತ್ಯು – ಪತ್ನಿಯ ಸ್ಥಿತಿ ಗಂಭೀರ Read More »

ಜಾಗತಿಕ ಭಯೋತ್ಪಾದಕ ಸಂಘಟನೆ ಐಸಿಸ್ ನಿಂದ ರೋಬೋಟ್ ಮೂಲಕ ವಿದ್ವಂಸಕ ಕೃತ್ಯಕ್ಕೆ ಸಂಚು | ಸ್ಪೋಟಕ ಮಾಹಿತಿ ಬಯಲು

ಶಿವಮೊಗ್ಗ: ರಾಜ್ಯದಲ್ಲಿ ರೋಬೋಟ್ ಗಳ ಮೂಲಕ ವಿಧ್ವಂಸಕ ಕೃತ್ಯ ಎಸಗಲು ಜಾಗತಿಕ ಭಯೋತ್ಪಾದಕಾ ಸಂಘಟನೆ ಐಸಿಸ್ ಸಂಚು ಹೂಡಿದೆ ಎಂದು ಎನ್ಐಎ ಹೆಚ್ಚುವರಿ ಚಾರ್ಜ್ ಶೀಟ್ ನಲ್ಲಿ ಸ್ಫೋಟಕ ಮಾಹಿತಿ ಬಯಲಾಗಿದೆ. ಶಿವಮೊಗ್ಗ ಟ್ರಾಯಲ್ ಬ್ಲಾಸ್ಟ್ ಮತ್ತು ಐಸಿಸ್ ಲಿಂಕ್ ಕೇಸ್ ನಲ್ಲಿ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಸಲಾಗಿದ್ದು, ಮೆಕಾನಿಕಲ್ ಇಂಜಿನಿಯರ್ ಹಿನ್ನೆಲೆಯ ಐವರು ಶಂಕಿತರಿಂದ ರೋಬೋಟಿಕ್ ದಾಳಿಗೆ ಪ್ಲಾನ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ವಿಚಾರಣೆ ಸಂದರ್ಭದಲ್ಲಿ ಶಂಕಿತ ಉಗ್ರರು ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದಾರೆ. ಶಂಕಿತ ಉಗ್ರ

ಜಾಗತಿಕ ಭಯೋತ್ಪಾದಕ ಸಂಘಟನೆ ಐಸಿಸ್ ನಿಂದ ರೋಬೋಟ್ ಮೂಲಕ ವಿದ್ವಂಸಕ ಕೃತ್ಯಕ್ಕೆ ಸಂಚು | ಸ್ಪೋಟಕ ಮಾಹಿತಿ ಬಯಲು Read More »

ಪ್ರವೀಣ್ ನೆಟ್ಟಾರೆ ಹತ್ಯೆ ಆರೋಪಿಗಳಿಗೆ ನ್ಯಾಯಾಲಯಕ್ಕೆ ಶರಣಾಗಲು ಜೂ.30 ಡೆಡ್ ಲೈನ್ | ಶರಣಾಗದ ಆರೋಪಿಗಳು | ಎನ್‍ಐಎ ಮೂಲಗಳಿಂದ ಮಾಹಿತಿ

ಪುತ್ತೂರು: ಬೆಳ್ಳಾರೆಯ ಹಿಂದೂ ಕಾರ್ಯಕರ್ತ ಪ್ರವೀಣ್‍ ನೆಟ್ಟಾರು ಹತ್ಯೆ ಪ್ರಕರಣ ಆರೋಪಿಗಳಿಗೆ ಜೂ.30 ರಂದು ಡೆಡ್ ಲೈನ್ ನೀಡಲಾಗಿದ್ದು, ಆರೋಪಿಗಳು ನ್ಯಾಯಾಲಯಕ್ಕೆ ಶರಣಾಗಿಲ್ಲ ಎಂದು ಎನ್‍ಐಎ ಮೂಲಗಳಿಂದ ಮಾಹಿತಿ ಲಭಿಸಿದೆ. ಪ್ರಮುಕ ಆರೋಪಿಗಳಾದ ುಮರ್ ಫಾರೂಕ್, ಅಬೂಬಕ್ಕರ್ ಸಿದ್ದಿಕ್, ತುಫೈಲ್, ಮೊಹಮ್ಮದ್ ಮುಸ್ತಾಫಾ ಎನ್‍ಐಗೆ ಬೇಕಾಗಿರುವ ಆರೋಪಿಗಳಾಗಿದ್ದಾರೆ. ಈ ನಾಲ್ಕು ಜನರ ಪತ್ತೆಗೆ 14 ಲಕ್ಷ ರೂ. ಬಹುಮಾನ ಪತ್ತೆ ಮಾಡಿದವರಿಗೆ ನೀಡಲಾಗುವುದು ಎಂದು ಘೋಷಣೆ ಮಾಡಲಾಗಿತ್ತು. ಈ ಪೈಕಿ ತುಫೈಲ್, ಮೊಹಮ್ಮದ್ ಮುಸ್ತಾಫ ಸುಳಿವಿಗೆ ತಲಾ

ಪ್ರವೀಣ್ ನೆಟ್ಟಾರೆ ಹತ್ಯೆ ಆರೋಪಿಗಳಿಗೆ ನ್ಯಾಯಾಲಯಕ್ಕೆ ಶರಣಾಗಲು ಜೂ.30 ಡೆಡ್ ಲೈನ್ | ಶರಣಾಗದ ಆರೋಪಿಗಳು | ಎನ್‍ಐಎ ಮೂಲಗಳಿಂದ ಮಾಹಿತಿ Read More »

ಪುರುಷರಕಟ್ಟೆಯಲ್ಲಿ ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ |

ಪುತ್ತೂರು: ಪುತ್ತೂರು: ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಪುರುಷರಕಟ್ಟೆಯಲ್ಲಿ ಶನಿವಾರ ನಡೆದಿದೆ. 7 ವರ್ಷದ ಹಿಂದೆ ಗಂಡ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲೇ ಆತನ ಹೆಂಡತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುತೂಹಲಕ್ಕೆ ಪುಷ್ಟಿ ನೀಡಿದೆ. ಪುರುಷರಕಟ್ಟೆ ಇಂದಿರಾನಗರ ದಿ.ಪ್ರವೀಣ್ ಎಂಬವರ ಪತ್ನಿ ಕಾವ್ಯ(38ವ)ರವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡವರು. 7 ವರ್ಷದ ಹಿಂದೆ ಅವರ ಪತಿ ಪ್ರವೀಣ್ ಅವರು ಕೂಡಾ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಪ್ರವೀಣ್ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲೇ ಕಾವ್ಯ

ಪುರುಷರಕಟ್ಟೆಯಲ್ಲಿ ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ | Read More »

ವಾಯುವ್ಯ ಪಾಕಿಸ್ತಾನದಲ್ಲಿ ಒಂದೇ ಕುಟುಂಬದ 9 ಸದಸ್ಯರ ಗುಂಡಿಕ್ಕಿ ಹತ್ಯೆ

ಪೇಷಾವರ :  ವಾಯವ್ಯ ಪಾಕಿಸ್ತಾನದ ಖೈಬರ್ ಪಖ್ತೂಂಕ್ವ ಪ್ರಾಂತದಲ್ಲಿ ಮದುವೆಯ ಕುರಿತ ವಿವಾದದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ 9 ಸದಸ್ಯರನ್ನು ಬುಧವಾರ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಮಲಾಕಂಡ್ ಜಿಲ್ಲೆಯ ಬಟ್‍ಖೆಲಾ ತಾಲೂಕಿನಲ್ಲಿ ಈ ಘಟನೆ ನಡೆದಿದೆ. ಮದುವೆಯ ವಿವಾದದ ಹಿನ್ನೆಲೆಯಲ್ಲಿ ಸಂಬಂಧಿಕರೇ ಈ ಕೃತ್ಯ ಎಸಗಿದ್ದಾರೆ. ರಾತ್ರಿ ವೇಳೆ ಮನೆಗೆ ನುಗ್ಗಿದ ಗುಂಪು, ನಿದ್ದೆಯಲ್ಲಿದ್ದ 9 ಮಂದಿಯನ್ನು ಗುಂಡು ಹಾರಿಸಿ ಹತ್ಯೆಗೈದು ಪರಾರಿಯಾಗಿರುವುದಾಗಿ ವರದಿಯಾಗಿದೆ. ಮೃತದೇಹಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಪ್ರಾಂತೀಯ ಅರೆಸೇನಾ ಪಡೆ

ವಾಯುವ್ಯ ಪಾಕಿಸ್ತಾನದಲ್ಲಿ ಒಂದೇ ಕುಟುಂಬದ 9 ಸದಸ್ಯರ ಗುಂಡಿಕ್ಕಿ ಹತ್ಯೆ Read More »

ಮರ್ದಾಳದ ಯುವಕ ನೇಣು ಬಿಗಿದು ಆತ್ಮಹತ್ಯೆ

ಕಡಬ: ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ಮರ್ಧಾಳದಲ್ಲಿ ನಡೆದಿದೆ. ಮರ್ದಾಳ ನೆಕ್ಕಿತ್ತಡ್ಕ ನಿವಾಸಿ ದಿ.ಸಂಜೀವ ರೈ ಎಂಬವರ ಪುತ್ರ ರಘುನಾಥ ರೈ ಯಾನೆ ಚುಮ್ಮ (38) ಆತ್ಮಹತ್ಯೆ ಮಾಡಿಕೊಂಡವರು. ಗುರುವಾರ ಸಂಜೆ ವೇಳೆ ಈ ಕೃತ್ಯ ಎಸಗಿದ್ದು, ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿರುವುದಾಗಿ ಶಂಕಿಸಲಾಗಿದೆ. ಈ ಕುರಿತು ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮರ್ದಾಳದ ಯುವಕ ನೇಣು ಬಿಗಿದು ಆತ್ಮಹತ್ಯೆ Read More »

ತೆಂಕಿಲ ಗುಡ್ಡದಲ್ಲಿ ಮೃತಪಟ್ಟ ರೀತಿಯಲ್ಲಿ ಕರುವಿನ ಮೃತದೇಹ ಪತ್ತೆ

ಪುತ್ತೂರು: ನಗರದ ಹೊರವಲಯದ ತೆಂಕಿಲ ಕಟ್ಟತ್ತಾರು ಸಮೀಪದ ಗುಡ್ಡವೊಂದರಲ್ಲಿ ಕರುವಿನ ಮೃತದೇಹ ಪತ್ತೆಯಾಗಿದೆ. ಸ್ಥಳೀಯರ ಮಾಹಿತಿಯಂತೆ ರಾತ್ರಿ ಹೊತ್ತು ಅಕ್ರಮ ಗೋಸಾಗಾಟ ಸಂದರ್ಭದಲ್ಲಿ ಆಗಿರುವ ಕೃತ್ಯ ಎಂದು ಹಿಂದೂ ಸಂಘಟನೆ ಕಾರ್ಯಕರ್ತರು ತಿಳಿಸಿದ್ದಾರೆ. ಈ ಕುರಿತು ಪೊಲೀಸ್ ಇಲಾಖೆ ಸೂಕ್ತ ತನಿಖೆ ನಡೆಸುವಂತೆ ವಿಶ್ವ ಹಿಂದೂ ಪರಿಷತ್, ಬಜರಂಗದಳ ಆಗ್ರಹಿಸಿದೆ. ಮೃತದೇಹವನ್ನು ವಿಹಿಂಪ, ಬಜರಂಗದಳ ಹಾಗೂ ಸ್ಥಳೀಯ ಹಿಂದೂ ಯುವಕರಿಂದ ಅಂತಿಮ ಸಂಸ್ಕಾರ ನೆರವೇರಿತು.

ತೆಂಕಿಲ ಗುಡ್ಡದಲ್ಲಿ ಮೃತಪಟ್ಟ ರೀತಿಯಲ್ಲಿ ಕರುವಿನ ಮೃತದೇಹ ಪತ್ತೆ Read More »

error: Content is protected !!
Scroll to Top