ಕಡಬದ ಕುಟ್ರುಪ್ಪಾಡಿಯಲ್ಲಿ ಸೋಮವಾರ ಮುಂಜಾನೆ ಆನೆ ದಾಳಿ | ಇಬ್ಬರು ಮೃತ್ಯು | ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು
ಕಡಬ : ಕಡಬ ತಾಲೂಕಿನ ಕುಟ್ರುಪಾಡಿ ಗ್ರಾಮದ ಮೀನಾಡಿ ಎಂಬಲ್ಲಿ ಸೋಮವಾರ ಮುಂಜಾನೆ ಆನೆಯೊಂದು ದಾಳಿ ನಡೆಸಿದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟವರನ್ನು ಕಡಬ ತಾಲೂಕಿನ ರೆಂಜಲಾಡಿ ಗ್ರಾಮದ ನೈಲ ನಿವಾಸಿಗಳಾದ ರಂಜಿತಾ (21) ಹಾಗೂ ರಮೇಶ್ ರೈ(55) ಎಂದು ತಿಳಿದು ಬಂದಿದೆ. ರಂಜಿತಾ ಪೇರಡ್ಕ ಹಾಲಿನ ಸೊಸೈಟಿಯಲ್ಲಿ ಉದ್ಯೋಗಿಯಾಗಿದ್ದು, ಸೋಮವಾರ ಮುಂಜಾನೆ ಕರ್ತವ್ಯಕ್ಕೆ ಮನೆಯಿಂದ ಹೋಗುತ್ತಿದ್ದಾಗ ಮೀನಾಡಿ ಸಮೀಪ ರಸ್ತೆಯಲ್ಲಿ ಆನೆಯೊಂದು ಹಠಾತ್ತನಎ ದಾಳಿ ನಡೆಸಿದೆ. ಈ ಸಂದರ್ಭ ಯುತಿಯ ಬೊಬ್ಬೆ ಹೊಡೆದದ್ದನ್ನು […]










