ತುಮಕೂರಿನಲ್ಲಿ ಬೈಕ್ ಅಪಘಾತ: ಸುಳ್ಯದ ಯುವಕ ಸ್ಥಳದಲ್ಲೇ ಸಾವು
ಸುಳ್ಯ: ತುಮಕೂರು ಟೋಲ್ ಬಳಿ ನಡೆದ ಬೈಕ್ ಅಪಘಾತದಲ್ಲಿ ಸುಳ್ಯದ ಯುವಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಯುವಕನನ್ನು ಸುಳ್ಯ ತಾಲೂಕಿನ ಕೇರ್ಪಳ ನಿವಾಸಿ ಪ್ರಜ್ವಲ್ (25) ಎಂದು ಗುರುತಿಸಲಾಗಿದೆ. ಇವರು ಸುಳ್ಯದಲ್ಲಿ ರಿಕ್ಷಾ ಚಾಲಕರಾಗಿರುವ ರಮೇಶ್ ಅವರ ಪುತ್ರ. ಪ್ರಜ್ವಲ್ ತುಮಕೂರಿನಲ್ಲಿ ಟೋಲ್ ಸೂಪರ್ ವೈಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ರವಿವಾರ ತಡರಾತ್ರಿ ಟೋಲ್ ಸಮೀಪವೇ ಬೈಕ್ ಸ್ಕಿಡ್ ಆಗಿ, ಅಪಘಾತ ಸಂಭವಿಸಿತ್ತು. ಪ್ರಜ್ವಲ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಮೃತ ಪ್ರಜ್ವಲ್ ತಂದೆ, ತಾಯಿ, ಸಹೋದರಿಯನ್ನು ಅಗಲಿದ್ದಾರೆ. […]
ತುಮಕೂರಿನಲ್ಲಿ ಬೈಕ್ ಅಪಘಾತ: ಸುಳ್ಯದ ಯುವಕ ಸ್ಥಳದಲ್ಲೇ ಸಾವು Read More »










