ಬ್ಯಾನರ್ ವಿಚಾರದಲ್ಲಿ ಯುವಕರ ಮೇಲೆ ಪೊಲೀಸ್ ದೌರ್ಜನ್ಯ | ಡಿವೈಎಸ್ ಪಿ ಡಾ.ವೀರಯ್ಯ ಹೀರೇಮಠ ನ್ಯಾಯಾಲಯಕ್ಕೆ ಶರಣು | ಜಾಮೀನಿನ ಮೇಲೆ ಬಿಡುಗಡೆ
ಪುತ್ತೂರು: ಚುನಾವಣೆ ಸಂದರ್ಭ ನಡೆದ ಬ್ಯಾನರ್ ಪ್ರಕರಣದಲ್ಲಿ ಯುವಕರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ ಎದುರಿಸುತ್ತಿರುವ ಡಿವೈಎಸ್‍ಪಿ ಡಾ.ವೀರಯ್ಯ ಹಿರೇಮಠ ನ್ಯಾಯಾಲಯಕ್ಕೆ ಶರಣಾಗಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ಗ್ರಾಮಾಂತರ ಠಾಣಾ ಎಸ್‍ಐ ಶ್ರೀನಾಥ್ ರೆಡ್ಡಿ ಮತ್ತು ಕಾನ್‍ಸ್ಟೇಬಲ್ ಹರ್ಷಿತ್ ಅವರನ್ನು ಸೇವೆಯಿಂದ ಈಗಾಗಲೇ ಅಮಾನತುಗೊಳಿಸಲಾಗಿದೆ. ವಿಧಾನಸಭಾ ಚುನಾವಣೆ ಬಳಿಕ ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಭಾವಚಿತ್ರವನ್ನೊಳಗೊಂಡ ಶ್ರದ್ಧಾಂಜಲಿ ಬರಹದೊಂದಿಗೆ ಬ್ಯಾನರ್ ಅಳವಡಿಸಿ, […]










