ಅನುಮತಿ ಇಲ್ಲದೆ ವಿಜಯೋತ್ಸವ | ಪುತ್ತಿಲ ಪರಿವಾರ ಸಂಘಟನೆ ವಿರುದ್ಧ ಪ್ರಕರಣ ದಾಖಲು
ಪುತ್ತೂರು: ಪುತ್ತೂರು, ಜುಲೈ 27: ಅನುಮತಿ ಇಲ್ಲದೆ ವಿಜಯೋತ್ಸವ ಮಾಡಿದ್ದಕ್ಕಾಗಿ ಪುತ್ತಿಲ ಪರಿವಾರ ಸಂಘಟನೆ ವಿರುದ್ಧ ಪ್ರಕರಣ ದಾಖಲಾಗಿದೆ. ಆರ್ಯಾಪು ಗ್ರಾ.ಪಂ ಉಪ ಚುನಾವಣೆಯಲ್ಲಿ ಪುತ್ತಿಲ ಪರಿವಾರದ ಅಭ್ಯರ್ಥಿ ಸುಬ್ರಹ್ಮಣ್ಯ ಬಲ್ಯಾಯರು ಜಯಗಳಿಸಿದ ಹಿನ್ನಲೆಯಲ್ಲಿ ವಿಜಯೋತ್ಸವ ನಡೆಸಲಾಗಿತ್ತು. ಮಿನಿ ವಿಧಾನಸೌಧದಿಂದ ಮುಕ್ರಂಪಾಡಿವರೆಗೆ ಡಿಜೆ ಮೆರವಣಿಗೆ ನಡೆಸಿದ್ದ ಪುತ್ತಿಲ ಪರಿವಾರ ವಿರುದ್ಧ ಪುತ್ತೂರು ನಗರ ಪೋಲೀಸ್ ಠಾಣೆಯಲ್ಲಿ ಶಾಂತಿಭಂಗದ ಪ್ರಕರಣ ದಾಖಲಿಸಲಾಗಿದೆ.
ಅನುಮತಿ ಇಲ್ಲದೆ ವಿಜಯೋತ್ಸವ | ಪುತ್ತಿಲ ಪರಿವಾರ ಸಂಘಟನೆ ವಿರುದ್ಧ ಪ್ರಕರಣ ದಾಖಲು Read More »








