ಅಪರಾಧ

ನೀಟ್ ಆಕಾಂಕ್ಷಿ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ

ರಾಜಸ್ಥಾನ: ರಾಜಸ್ಥಾನದ ಕೋಟಾದಲ್ಲಿ ಮತ್ತೆ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ. ದೇಶದ ಮಹತ್ವಾಕಾಂಕ್ಷಿ ಕೋರ್ಸ್‌ಗಳಾದ ಎಂಜಿನಿಯರ್‌, ವೈದ್ಯಕೀಯ ಪ್ರವೇಶಾತಿ ಪರೀಕ್ಷೆ ಮತ್ತು ನಾಗರಿಕ ಸೇವೆಗಳ ಪರೀಕ್ಷೆಗಳ ತರಬೇತಿಯ ಕೇಂದ್ರವಾದ ಕೋಟಾದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ  ಹೆಚ್ಚಳ ಆತಂಕಕ್ಕೆ ಕಾರಣವಾಗಿದೆ. ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ನೀಟ್‌ ಪರೀಕ್ಷೆಗೆ ಸಿದ್ದತೆ ಮಾಡಿಕೊಳ್ಳುತ್ತಿದ್ದ ಅವಿಷ್ಕರ್ ಶುಭಾಂಗಿ ಮತ್ತು ಬಿಹಾರದ ವಿದ್ಯಾರ್ಥಿ ಆದರ್ಶ್ ಆತ್ಮಹತ್ಯೆ ಮಾಡಿಕೊಂಡವರು. ಅವಿಷ್ಕರ್ ಶುಭಾಂಗಿ ಮಹಾರಾಷ್ಟ್ರ ಮೂಲದವರಾಗಿದ್ದು, ಕೋಟಾದಲ್ಲಿ ತನ್ನ ಅಜ್ಜಿಯೊಂದಿಗೆ ನೆಲೆಸಿದ್ದರು. ಪರೀಕ್ಷೆ ಬರೆದ ಬಳಿಕ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನ […]

ನೀಟ್ ಆಕಾಂಕ್ಷಿ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ Read More »

ಮಹಿಳೆ ನಾಪತ್ತೆ : ಕಡಬ ಠಾಣೆಯಲ್ಲಿ ಪ್ರಕರಣ ದಾಖಲು

ಕಡಬ: ಕಡಬ ಠಾಣಾ ವ್ಯಾಪ್ತಿಯ ಐತ್ತೂರು ಗ್ರಾಮದ ಮಹಿಳೆಯೊಬ್ಬರು ನಾಪತ್ತೆಯಾದ ಕುರಿತು ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐತ್ತೂರು ಗ್ರಾಮದ ಓಟೆಕಜೆ ಸಿ.ಆರ್.ಸಿ. ಕಾಲೋನಿ ನಿವಾಸಿ ಮಂಜುಳಾ ನಾಪತ್ತೆಯಾದ ಮಹಿಳೆ. ಬಿಳಿನೆಲೆಯಲ್ಲಿರುವ ಅಂಗಡಿಯೊಂದರಲ್ಲಿ ವಾಹನ ಇನ್ಸೂರೆನ್ಸ್‍  ಏಜೆನ್ಸಿಯಾಗಿ ಕೆಲ ಮಾಡಿಕೊಂಡಿದ್ದರು. ಕೆಲಸಕ್ಕೆಂದು ಮನೆಯಿಂದ ಹೊರ ಹೋದೆ ಮಹಿಳೆ ಬಳಿಕ ನಾಪತ್ತೆಯಾಗಿದ್ದರು. ಆಕೆಯ ಮೊಬೈಲ್ ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿತ್ತು. ಈ ಕುರಿತು ಪತಿ ಶಿವಕುಮಾರ್ ಕಡಬ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಮಹಿಳೆ ನಾಪತ್ತೆ : ಕಡಬ ಠಾಣೆಯಲ್ಲಿ ಪ್ರಕರಣ ದಾಖಲು Read More »

ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ನಡೆದ ಹಲ್ಲೆ ವಿಚಾರ | ಪ್ರಕರಣ ಖುಲಾಸೆಗೊಳಿಸಿ ನ್ಯಾಯಾಲಯ | ನಮ್ಮ ಕಣ್ಣೇದುರೇ ನಡೆದ ಘಟನೆ, ಕೋರ್ಟ್‍ನಲ್ಲಿ ಪಿನ್‍‍ ಟು ಪಿನ್ ಹೇಳಿಕೆ ನೀಡಿದ್ದೇವೆ, ಮೃತ್ಯುಂಜಯೇಶ್ವರನ ಕೋರ್ಟ್‍ನಲ್ಲಿ ಅವರ ಆಟ ನಡೆಯಲ್ಲ : ಪ್ರತಿಕ್ರಿಯೆ ನೀಡಿದ ಲೋಕಪ್ಪ ಗೌಡ

ಪುತ್ತೂರು: ಪುತ್ತೂರು : 2021ರಲ್ಲಿ  ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ಜಾತ್ರೋತ್ಸವ ವೇಳೆ ಅಧ್ಯಕ್ಷರ ನೇಮಕಾತಿಯ ವಿಚಾರದಲ್ಲಿ ನಡೆದ ಹಲ್ಲೆ ಮತ್ತು ಬೆದರಿಕೆ ವಿಚಾರದಲ್ಲಿ ದಾಖಲಾದ ಪ್ರಕರಣವನ್ನು ನ್ಯಾಯಲಯ ಖುಲಾಸೆಗೊಳಿಸಿ ಆದೇಶಿಸಿದೆ. ಅರುಣ್ ಕುಮಾರ್ ಪುತ್ತಿಲ, ಅಶೋಕ್ ಕುಮಾರ್ ಪುತ್ತಿಲ, ಶ್ರೀಕಾಂತ್ ಆಚಾರ್ ಹಿಂದಾರ್ ದೋಷಮುಕ್ತರೆಂದು ನ್ಯಾಯಾಲಯ ಆದೇಶ ನೀಡಿದೆ. ವಕೀಲರಾದ ದೇವಾನಂದ ಕೆ, ಚಿನ್ಮಯ್ ರೈ ಈಶ್ವರಮಂಗಲ,ಹರಿಣಿ ವಾದಿಸಿದರು. 2021ರಲ್ಲಿ  ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ಜಾತ್ರೋತ್ಸವ ವೇಳೆ ಅಧ್ಯಕ್ಷರ ನೇಮಕಾತಿಯ ವಿಚಾರದಲ್ಲಿ ಹಲ್ಲೆ ನಡೆಸಿದ್ದಾರೆಂದು

ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ನಡೆದ ಹಲ್ಲೆ ವಿಚಾರ | ಪ್ರಕರಣ ಖುಲಾಸೆಗೊಳಿಸಿ ನ್ಯಾಯಾಲಯ | ನಮ್ಮ ಕಣ್ಣೇದುರೇ ನಡೆದ ಘಟನೆ, ಕೋರ್ಟ್‍ನಲ್ಲಿ ಪಿನ್‍‍ ಟು ಪಿನ್ ಹೇಳಿಕೆ ನೀಡಿದ್ದೇವೆ, ಮೃತ್ಯುಂಜಯೇಶ್ವರನ ಕೋರ್ಟ್‍ನಲ್ಲಿ ಅವರ ಆಟ ನಡೆಯಲ್ಲ : ಪ್ರತಿಕ್ರಿಯೆ ನೀಡಿದ ಲೋಕಪ್ಪ ಗೌಡ Read More »

ಮರದಿಂದು ಬಿದ್ದು ಚಿಕಿತ್ಸೆ ಪಡೆಯುತ್ತಿದ್ದ ಸೋಮನಾಥ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

ನೆಲ್ಯಾಡಿ: ಮರದಿಂದ ಬಿದ್ದು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಚ್ಲಂಪಾಡಿಯ ಕೂಲಿ ಕಾರ್ಮಿಕರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇಚ್ಲಂಪಾಡಿ ಗ್ರಾಮದ ಮೊಂಟೆತ್ತಡ್ಕ ನಿವಾಸಿ ಸೋಮನಾಥ (47) ಮೃತಪಟ್ಟವರು. 15 ದಿನಗಳ ಹಿಂದೆ ಇಚ್ಲಂಪಾಡಿ ಗ್ರಾಮದ ಮಾನಡ್ಕ ಎಂಬಲ್ಲಿ ಕೂಲಿ ಕೆಲಸಕ್ಕೆ ಹೋಗಿದ್ದ ಸಂದರ್ಭ ಮರ ಏರಿ ಗೆಲ್ಲುಗಳನ್ನು ಕಡಿಯುತ್ತಿರುವಾಗ ಆಕಸ್ಮಿಕವಾಗಿ ಜಾರಿ ಕೆಳಗೆ ಬಿದ್ದು ತೀವ್ರ ಗಾಯಗೊಂಡಿದ್ದರು. ಅವರು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಮರದಿಂದು ಬಿದ್ದು ಚಿಕಿತ್ಸೆ ಪಡೆಯುತ್ತಿದ್ದ ಸೋಮನಾಥ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು Read More »

ಚೂರಿ ಇರಿತಕ್ಕೊಳಗಾದ ಯುವತಿ ಮೃತ್ಯು | ಪರಸ್ಪರ ಪ್ರೀತಿಸುತ್ತಿದ್ದ ಪದ್ಮರಾಜ್-ಗೌರಿ | ಇವರಿಬ್ಬರ ಜಗಳದಲ್ಲಿ ವಿಟ್ಲ ಠಾಣೆಯಲ್ಲೂ ದಾಖಲಾಗಿತ್ತು ಪ್ರಕರಣ !?

ಪುತ್ತೂರು: ಮಹಿಳಾ ಪೊಲೀಸ್ ಠಾಣೆಯ ಹಿಂಭಾಗದಲ್ಲಿ ದುಷ್ಕರ್ಮಿಯಿಂದ ಚೂರಿ ಇರಿತಕ್ಕೆ ಒಳಗಾಗಿದ ಯುವತಿ ಮಂಗಳೂರಿಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾಳೆ. ವಿಟ್ಲ ಸಮೀಪದ ಅಳಿಕೆ ಗ್ರಾಮದ ಆದಾಳ ನಿವಾಸಿ ಗೌರಿ (18) ಮೃತಪಟ್ಟವರು. ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಹಿಬಂದಿ ಪದ್ಮರಾಜ್ ಎಂಬಾತ ಮಾರಕಾಯುದದಿಂದ ಹಲವು ಬಾರಿ ದಾಳಿ ಮಾಡಿದ್ದ. ಬೈಕ್ ನಲ್ಲಿ ಬಂದಿದ್ದ ಆತ, ಕೃತ್ಯ ಎಸಗಿ ಬೈಕನ್ನು ಅಲ್ಲೆ ಬಿಟ್ಟು ಪರಾರಿಯಾಗಿದ್ದಾನೆ. ತಕ್ಷಣ ಗಾಯಾಳು ಗೌರಿಯವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ತಂದು ತುರ್ತು ನಿಗಾ

ಚೂರಿ ಇರಿತಕ್ಕೊಳಗಾದ ಯುವತಿ ಮೃತ್ಯು | ಪರಸ್ಪರ ಪ್ರೀತಿಸುತ್ತಿದ್ದ ಪದ್ಮರಾಜ್-ಗೌರಿ | ಇವರಿಬ್ಬರ ಜಗಳದಲ್ಲಿ ವಿಟ್ಲ ಠಾಣೆಯಲ್ಲೂ ದಾಖಲಾಗಿತ್ತು ಪ್ರಕರಣ !? Read More »

ಚೂರಿ ಇರಿತಕ್ಕೊಳಗಾದ ಯುವತಿ ಮೃತ್ಯು | ಆರೋಪಿ ಪದ್ಮರಾಜ್ ಬಂಧನ

ಪುತ್ತೂರು: ಇಲ್ಲಿನ ಪೊಲೀಸ್ ಠಾಣಾ ಬಳಿ ಚೂರಿ ಇರಿತಕ್ಕೊಳಗಾಗದ  ಯುವತಿ ಇದೀಗ ಮಂಗಳೂರಿಗೆ ಸಾಗಿಸುವ ದಾರಿ ಮಧ್ಯೆಇದೀಗ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ. ಪ್ರಕರಣದ ಆರೋಪಿಯನ್ನು ಬಂಧಿಸಲಾಗಿದ್ದು, ಬಂಧಿತ ಯುವಕನ್ನು ಯುವಕನನ್ನು ಬಂಟ್ವಾಳ ಮೂಲಕ ಪದ್ಮರಾಜ್ ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡ ಯುವತಿಯನ್ನು ಅಳಿಕೆ ಮೂಲದ ಗೌರಿ (20 ವ.) ಎಂದು ಗುರುತಿಸಲಾಗಿದೆ. ಯುವತಿ ಗಂಭೀರ ಗಾಯಗೊಂಡಿದ್ದು, ಪುತ್ತೂರಿನಿಂದ ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದ್ದು, ಇದೀಗ ಯುವತಿ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.

ಚೂರಿ ಇರಿತಕ್ಕೊಳಗಾದ ಯುವತಿ ಮೃತ್ಯು | ಆರೋಪಿ ಪದ್ಮರಾಜ್ ಬಂಧನ Read More »

ಚೂರಿ ಇರಿತಕ್ಕೊಳಗಾದ ಯುವತಿ ಮಂಗಳೂರು ಆಸ್ಪತ್ರೆಗೆ ರವಾನೆ

ಪುತ್ತೂರು: ಯುವಕನಿಂದ ಇರಿತಕ್ಕೊಳಗಾಗಿ ಗಂಭೀರ ಗಾಯಗೊಂಡು ಪುತ್ತೂರು ಆಸ್ಪತ್ರೆಗೆ ದಾಖಲಾಗಿದ್ದ ಯುವತಿಯನ್ನು ಹೆಚ್ಚಿನ ಚಿಕಿತ್ಸೆಗೆ ಇದೀಗ ಮಂಗಳೂರಿಗೆ ರವಾನಿಸಲಾಗಿದೆ. ನಗರದ ಮಹಿಳಾ ಪೊಲೀಸ್ ಠಾಣಾ ಬಳಿ ಬೈಕ್‍ ನಲ್ಲಿ ಬಂದ ಯುವಕ ವಿಟ್ಲ ಮೂಲಕ ಗೌರಿ (20) ಎಂಬ ಯುವತಿಗೆ ಚೂರಿ ಇರಿದು ಪರಾರಿಯಾಗಿದ್ದ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲೆ ಮಾಡಲಾಯಿತು. ಯುವತಿ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

ಚೂರಿ ಇರಿತಕ್ಕೊಳಗಾದ ಯುವತಿ ಮಂಗಳೂರು ಆಸ್ಪತ್ರೆಗೆ ರವಾನೆ Read More »

ಯುವತಿಗೆ ಮಾರಣಾಂತಿಕ ಹಲ್ಲೆ | ಕೊಲೆಗೆ ಯತ್ನ

ಪುತ್ತೂರು: ಯುವತಿಯೋರ್ವಳಿಗೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ನಗರದ ಪೊಲೀಸ್ ಠಾಣೆ ಬಳಿ ನಡೆದಿದೆ. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ಮಹಿಳಾ ಠಾಣೆ ಬಳಿ ಯುವಕನೋರ್ವ ಯುವತಿಯ ಕುತ್ತಿಗೆಗೆ ಚಾಕು ಇರಿದು ಕೊಲೆಗೆ ಯತ್ನಿಸಲಾಗಿದೆ. ಗಂಭೀರ ಗಾಯಗೊಂಡ ಯುವತಿಯನ್ನು ವಿಟ್ಲ ಮೂಲದ ಗೌರಿ (20) ಎಂದು ತಿಳಿದು ಬಂದಿದೆ. ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವಕ  ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ಯುವತಿಗೆ ಮಾರಣಾಂತಿಕ ಹಲ್ಲೆ | ಕೊಲೆಗೆ ಯತ್ನ Read More »

ಅಪರಿಚಿತನಿಂದ ಇಬ್ಬರು ಮಹಿಳೆಯರಿಗೆ ಹಲ್ಲೆ | ಹಲ್ಲೆ ನಡೆಸಿದ ಆರೋಪಿ ಪರಾರಿ

ಪುತ್ತೂರು: ಅಪರಿಚಿತ ವ್ಯಕ್ತಿಯೋರ್ವ ಇಬ್ಬರು ಮಹಿಳೆಯರ ಮೇಲೆ ಹಲ್ಲೆ ನಡೆಸಿದ ಘಟನೆ ತಾಲೂಕಿನ ಬಡಗನ್ನೂರಿನಲ್ಲಿ ನಡೆದಿದೆ. ಕೂಲಿ ಕೆಲಸ ಮಾಡುತ್ತಿರುವ ಗಿರಿಜಾ ಹಾಗೂ ಸುಲೇಖಾ ಹಲ್ಲೆಗೊಳಗಾದವರು. ಬಡಗನ್ನೂರು ಸಮೀಪದ ಗುಡ್ಡೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಹಿಳೆಯರಿಬ್ಬರ ಮೇಲೆ ಅಪರಿಚಿತ ವ್ಯಕ್ತಿ ಮಾರಣಾಂತಿಕ ಹಲ್ಲೆ ನಡೆಸಿರುವುದಾಗಿ ವರದಿಯಾಗಿದೆ. ಗಂಭೀರ ಗಾಯಗೊಂಡ ಮಹಿಳೆಯರನ್ನು ಈಶ್ವರಮಂಗಲದ ಹಿಂದೂ ಜಾಗರಣ ವೇದಿಕೆ ಆಂಬ್ಯುಲೆನ್ಸ್ ಮೂಲಕ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆತರಲಾಗಿದ್ದು, ಇಬ್ಬರಿಗೂ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಗೋಳಿತ್ತೊಟ್ಟು

ಅಪರಿಚಿತನಿಂದ ಇಬ್ಬರು ಮಹಿಳೆಯರಿಗೆ ಹಲ್ಲೆ | ಹಲ್ಲೆ ನಡೆಸಿದ ಆರೋಪಿ ಪರಾರಿ Read More »

ನೆಟ್ಟಣಿಗೆ ಮುಡ್ನೂರು ಗ್ರಾಪಂ ಚುನಾವಣೆ | ಅಕ್ರಮ ನಡೆದಿದೆ ಎಂದು ಪುತ್ತಿಲ ಪರಿವಾರ  Vs ಬಿಜೆಪಿ ಪ್ರತಿಭಟನೆ

ಪುತ್ತೂರು: ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಪುತ್ತಿಲ ಪರಿವಾರ ಹಾಗೂ ಬಿಜೆಪಿಯವರು ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ. ಈ ಪಂಚಾಯಿತಿಯಲ್ಲಿ 21 ಸದಸ್ಯ ಬಲ ಹೊಂದಿದೆ. ವಿಶೇಷವೆಂದರೆ 23 ಬ್ಯಾಲೆಟ್ ಪೇಪರ್ ಚಲಾವಣೆಯಾಗಿದ್ದು , ಇದು ಹೇಗೆ ಎಂದು ಪ್ರಶ್ನಿಸಿ ಪಂಚಾಯಿತಿ ಎದುರು ಪ್ರತಿಭಟನಾಕಾರರು ಪ್ರತಿಭಟನೆ ನಡೆಸುತ್ತಿದ್ದಾರೆ. ಪುತ್ತಿಲ ಪರಿವಾರ ಹಾಗೂ ಬಿಜೆಪಿ ಬೆಂಬಲಿಗರು ಚುನಾವಣಾಧಿಕಾರಿಗಳಿಗೆ ದಿಕ್ಕಾರ ಕೂಗಿ ಪ್ರತಿಭಟಿಸುತ್ತಿದ್ದಾರೆ.

ನೆಟ್ಟಣಿಗೆ ಮುಡ್ನೂರು ಗ್ರಾಪಂ ಚುನಾವಣೆ | ಅಕ್ರಮ ನಡೆದಿದೆ ಎಂದು ಪುತ್ತಿಲ ಪರಿವಾರ  Vs ಬಿಜೆಪಿ ಪ್ರತಿಭಟನೆ Read More »

error: Content is protected !!
Scroll to Top