ಅಪರಾಧ

ಬಂಟ್ವಾಳ: ಯುವಕನಿಗೆ ತಂಡದಿಂದ ಹಲ್ಲೆ

ಬಂಟ್ವಾಳ: ಯುವಕನ ಮೇಲೆ ತಂಡವೊಂದು ಹಲ್ಲೆ ನಡೆಸಿದ ಘಟನೆ ಬಂಟ್ಟಾಳದ ಮೈಂದಾಳ ಎಂಬಲ್ಲಿ ನಡೆದಿದೆ.. ಮೈಂದಾಳ ನಿವಾಸಿ ನಿಸಾರ್ ಎಂಬವರ ಮೇಲೆ ಅಪರಿಚಿತರು ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ. ಶನಿವಾರ ರಾತ್ರಿ 9.45ರ ಸುಮಾರಿಗೆ ನಿಸಾರ್ ಅಜ್ಜಿ ಮನೆಯಿಂದ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುವಾಗ ಗುರಿಮಜಲು ಎಂಬಲ್ಲಿ ಆಟೋ ರಿಕ್ಷಾದ ಬಳಿ ನಿಂತಿದ್ದ 5 ಜನರ ಪೈಕಿ ಇಬ್ಬರು ನಿಸಾರ್ ಅವರನ್ನು ಅಡ್ಡ ಗಟ್ಟಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಇದೇ ಸಂದರ್ಭ ರಿಕ್ಷಾದ ಬಳಿ ತಲವಾರು […]

ಬಂಟ್ವಾಳ: ಯುವಕನಿಗೆ ತಂಡದಿಂದ ಹಲ್ಲೆ Read More »

ಸುಪ್ರೀಂಕೋರ್ಟ್ ವಕೀಲೆಯ ಕೊಲೆ ಪ್ರಕರಣ: ಪತಿ ಬಂಧನ

ಹೊಸದಿಲ್ಲಿ: ಸುಪ್ರೀಂ ಕೋರ್ಟ್ ವಕೀಲೆಯೋರ್ವರ ಕೊಲೆ ಆರೋಪದ ಮೇಲೆ ಆಕೆಯ ಪತಿಯನ್ನು ಬಂಧಿಸಲಾಗಿದೆ. ನೋಯ್ಡಾ ಬಂಗಲೆಯ ಸ್ನಾನ ಗೃಹದಲ್ಲಿ 61 ವರ್ಷದ ಸುಪ್ರೀಂ ಕೋರ್ಟ್ ವಕೀಲೆ ರೇಣು ಸಿನ್ಹಾ ಅವರು ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರ ಮಗ ವಿದೇಶದಲ್ಲಿ ವಾಸಿಸುತ್ತಿದ್ದು ರೇಣು ಸಿನ್ಹಾ ತನ್ನ ಪತಿಯೊಂದಿಗೆ ಬಂಗಲೆಯಲ್ಲಿ ವಾಸವಾಗಿದ್ದರು. ವಕೀಲೆಯ ಪತಿ ನಿತಿನ್ ನಾಥ್ ಸಿನ್ಹಾ ಅವರು ಬಂಗಲೆಯ ಸ್ಟೋರ್ ನಲ್ಲಿ 36 ಗಂಟೆಗಳಿಗೂ ಹೆಚ್ಚು ಕಾಲ ಅಡಗಿಕೊಂಡಿದ್ದ. ಪೊಲೀಸರು ಆತನ ಮೊಬೈಲ್ ಫೋನ್ ಅನ್ನು ಟ್ರ್ಯಾಕ್

ಸುಪ್ರೀಂಕೋರ್ಟ್ ವಕೀಲೆಯ ಕೊಲೆ ಪ್ರಕರಣ: ಪತಿ ಬಂಧನ Read More »

ಪರೀಕ್ಷೆಯಲ್ಲಿ ಫೇಲ್ : ದ್ವಿತೀಯ ಪಿಯು ವಿದ್ಯಾರ್ಥಿನಿ ಆತ್ಮಹತ್ಯೆ!!

ಮಂಗಳೂರು: ದ್ವಿತೀಯ ಪಿಯು ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಮನನೊಂದು ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನ ಕದ್ರಿ ಸಮೀಪ ಭಾನುವಾರ ರಾತ್ರಿ ನಡೆದಿದೆ. ಬಿಜೈಯ ಅಪಾರ್ಟ್ ಮೆಂಟಿನಲ್ಲಿ ಕೆಲಸ ಮಾಡುತ್ತಿದ್ದ ದಂಪತಿಯ ಪುತ್ರಿ ಆತ್ಮಹತ್ಯೆ ಮಾಡಿಕೊಂಡವರು. ನಗರದ ಕಾಲೇಜೊಂದರಲ್ಲಿ ಈಕೆ ದ್ವಿತೀಯ ಪಿಯು ವ್ಯಾಸಂಗ ಮಾಡುತ್ತಿದ್ದರು. ಭಾನುವಾರ ರಾತ್ರಿ ಕೆಲಸಕ್ಕೆಂದು ಹೊರಹೋದಾಗ ಘಟನೆ ನಡೆದಿದೆ. ಫ್ಯಾನಿಗೆ ನೇಣು ಬಿಗಿದುಕೊಂಡು ವಿದ್ಯಾರ್ಥಿನಿ ನೇಣಿಗೆ ಶರಣಾಗಿದ್ದಾಳೆ. ಕದ್ರಿ ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪರೀಕ್ಷೆಯಲ್ಲಿ ಫೇಲ್ : ದ್ವಿತೀಯ ಪಿಯು ವಿದ್ಯಾರ್ಥಿನಿ ಆತ್ಮಹತ್ಯೆ!! Read More »

ಸೌಜನ್ಯ ಕುಟುಂಬಕ್ಕೆ ಇನ್ನೂ ನ್ಯಾಯ ಸಿಗದಿರುವುದು ದುರಾದೃಷ್ಟಕರ | ಸೌಜನ್ಯ ನೈಜ ಆರೋಪಿಗಳನ್ನು  ಪತ್ತೆಹಚ್ಚುವಂತೆ ಎಬಿವಿಪಿ ವತಿಯಿಂದ ಪ್ರತಿಭಟನೆ |

ಪುತ್ತೂರು : ಸೌಜನ್ಯ ನೈಜ ಆರೋಪಿಗಳನ್ನು ಪತ್ತೆಮಾಡಿ ಸೌಜನ್ಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕು, ಘಟನೆಯನ್ನು ದಾಳವಾಗಿ ಉಪಯೋಗಿಸಿ ಧಾರ್ಮಿಕ ಶ್ರದ್ಧಾ ಕೇಂದ್ರಗಳಿಗೆ ಧಕ್ಕೆ ತರುವಂತಹ ಪ್ರಕರಣಗಳನ್ನು ತಕ್ಷಣ ಹತ್ತಿಕ್ಕಬೇಕು ಎಂದು ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ತಾಲೂಕು ಆಡಳಿತ ಸೌಧದ ಬಳಿ ಇರುವ ಅಮರ್ ಜವಾನ್ ಸ್ಮಾರಕದ ಬಳಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನುದ್ದೇಶಿಸಿ ಎಬಿವಿಪಿ ಸಹ ಕಾರ್ಯದರ್ಶಿ ಹರ್ಷಿತ್ ಕೊಯಿಲ ಮಾತನಾಡಿ, ಸೌಜನ್ಯ ಹತ್ಯೆಗಾಗಿ 11 ವರ್ಷಗಳಾಗಿದ್ದು ಇನ್ನೂ ನ್ಯಾಯ ಸಿಗದಿರುವುದು ದುರಾದೃಷ್ಟಕರ, ನಿಜವಾದ

ಸೌಜನ್ಯ ಕುಟುಂಬಕ್ಕೆ ಇನ್ನೂ ನ್ಯಾಯ ಸಿಗದಿರುವುದು ದುರಾದೃಷ್ಟಕರ | ಸೌಜನ್ಯ ನೈಜ ಆರೋಪಿಗಳನ್ನು  ಪತ್ತೆಹಚ್ಚುವಂತೆ ಎಬಿವಿಪಿ ವತಿಯಿಂದ ಪ್ರತಿಭಟನೆ | Read More »

ಸೌಜನ್ಯ ಪ್ರಕರಣ | ಸಾರ್ವಜನಿಕ ಹಿತಾಸಕ್ತಿ ಅರ್ಜಿ ಇಂದು ಉಚ್ಛ ನ್ಯಾಯಾಲಯದಲ್ಲಿ ವಿಚಾರಣೆ

ಪುತ್ತೂರು: ಧರ್ಮಸ್ಥಳ ಗ್ರಾಮದ ಮಣ್ಣಸಂಕದಲ್ಲಿ ಅತ್ಯಾಚಾರಕ್ಕೀಡಾಗಿ ಹತ್ಯೆಗೀಡಾದ ವಿದ್ಯಾರ್ಥಿನಿ ಸೌಜನ್ಯ ಪ್ರಕರಣ ಮರು ತನಿಖೆ ನಡೆಸಲು ಸರಕಾರಕ್ಕೆ ನಿರ್ದೇಶನ ನೀಡುವಂತೆ ಆಗ್ರಹಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಇಂದು ಹೈಕೋರ್ಟ್ ನಲ್ಲಿ ನಡೆಯಲಿದೆ. ಧರ್ಮಸ್ಥಳದ ಪಾಂಗಳ ನಿವಾಸಿಗಳಾದ ಚಂದಪ್ಪ ಗೌಡ ಹಾಗೂ ಕುಸುಮಾವತಿ ದಂಪತಿ ಪುತ್ರಿ ಸೌಜನ್ಯರನ್ನು ಅಪಹರಿಸಿ ಅತ್ಯಾಚಾರ ನಡೆಸಿ ಹತ್ಯೆ ಮಾಡಲಾಗಿತ್ತು. ಈ ಕುರಿತು ಪೊಲೀಸ್ ಇಲಾಖೆ, ಸಿಐಡಿ, ಸಿಬಿಐ ತನಿಖೆ ನಡೆದಿತ್ತು. ಪ್ರಕರಣ ಸಂಬಂಧಿಸಿ ಬಂಧಿತನಾಗಿದ್ದ ಕಾರ್ಕಳದ ಸಂತೋಷ್ ರಾವ್ ನಿರಪರಾಧಿ

ಸೌಜನ್ಯ ಪ್ರಕರಣ | ಸಾರ್ವಜನಿಕ ಹಿತಾಸಕ್ತಿ ಅರ್ಜಿ ಇಂದು ಉಚ್ಛ ನ್ಯಾಯಾಲಯದಲ್ಲಿ ವಿಚಾರಣೆ Read More »

ರಾಯಚೂರಿನ ಹಿರಿಯ ಪತ್ರಕರ್ತ ಕೆ.ಎನ್.ರೆಡ್ಡಿ ಆತ್ಮಹತ್ಯೆ | ಸಾಲ ಬಾಧೆಯಿಂದ ಮನನೊಂದು ಆತ್ಮಹತ್ಯೆ ಶಂಕೆ !

ರಾಯಚೂರು : ಹಿರಿಯ ಪತ್ರಕರ್ತರೊಬ್ಬರು ಕಟ್ಟಡದ ಮೇಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರುಗಿಯಲ್ಲಿ ನಡೆದಿದೆ. ರಾಯಚೂರಿನ ಕಲ್ಲೂರು ಗ್ರಾಮದ ಕೆ.ಎನ್.ರೆಡ್ಡಿ (57) ಈ ಕೃತ್ಯ ಎಸಗಿದವರು. ಹಲವು ವರ್ಷಗಳಿಂದ ಕಲಬುರಗಿ ನಗರದ ದರಿಯಾಪುರದಲ್ಲಿ ಪತ್ನಿ ಹಾಗೂ ಪುತ್ರಿ ಜತೆ ವಾಸವಾಗಿದ್ದರು. ಸಾಲದ ಹೊರೆ ಮತ್ತು ಕೌಟುಂಬಿಕ ಕಲಹಕ್ಕೆ ಬೇಸತ್ತು ಮಂಗಳವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ರೆಡ್ಡಿ ಅವರು ಡೆಕ್ಕನ್ ಹೆರಾಲ್ಡ್ ಸೇರಿದಂತೆ ವಿವಿಧ ಆಂಗ್ಲ ಪತ್ರಿಕೆಗಳಲ್ಲಿ ಕೆಲಸ ನಿರ್ವಹಿಸಿದ್ದರು. ಅಲ್ಲದೆ ಜೆಸ್ಕಾಂನ ಸಾರ್ವಜನಿಕ

ರಾಯಚೂರಿನ ಹಿರಿಯ ಪತ್ರಕರ್ತ ಕೆ.ಎನ್.ರೆಡ್ಡಿ ಆತ್ಮಹತ್ಯೆ | ಸಾಲ ಬಾಧೆಯಿಂದ ಮನನೊಂದು ಆತ್ಮಹತ್ಯೆ ಶಂಕೆ ! Read More »

ಗ್ರಾಪಂ ಮಾಜಿ ಸದಸ್ಯನ ಮನೆ ದರೋಡೆ | ಚಿನ್ನ, ನಗದು ದರೋಡೆ

ಪುತ್ತೂರು: ಮಾಜಿ ಸದಸ್ಯರೊಬ್ಬರ ಮನೆಗೆ ರಾತ್ರಿ ನುಗ್ಗಿ ದರೋಡೆ ಮಾಡಿದ ಘಟನೆ ಬಡಗನ್ನೂರಿನಲ್ಲಿ ನಡೆದಿದೆ. ಬಡಗನ್ನೂರು ಗ್ರಾಪಂ ಮಾಜಿ ಸದಸ್ಯ ಗುರುಪ್ರಸಾದ್ ಅವರ ಮನೆಯಲ್ಲಿ ದರೋಡೆ ನಡೆದಿದೆ. ಗುರುಪ್ರಸಾದ್, ಅವರ ತಾಯಿ, ಮನೆ ಕೆಲಸದವರು ಇರುವ ಸಂದರ್ಭ ರಾತ್ರಿ ಸುಮಾರು 2 ಗಂಟೆ ವೇಳೆಗೆ ಸುಮಾರು 10 ಮಂದಿ ದರೋಡೆಕೋರರು ಇದ್ದರು ಎನ್ನಲಾಗಿದೆ. 25 ಪವನ್ ಚಿನ್ನ, 30 ಸಾವಿರ ನಗದು ಕಳವಾಗಿದೆ ಎನ್ನಲಾಗಿದೆ. ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗ್ರಾಪಂ ಮಾಜಿ ಸದಸ್ಯನ ಮನೆ ದರೋಡೆ | ಚಿನ್ನ, ನಗದು ದರೋಡೆ Read More »

ಮಣಿಪುರ ಹಿಂಸಾಚಾರ ಪೀಡಿತ ಜಿಲ್ಲೆಗಳಲ್ಲಿ ಬೃಹತ್ ಪ್ರತಿಭಟನೆ  | ಭದ್ರತಾ ಪಡೆಗಳಿಂದ ರಬ್ಬರ್ ಬುಲ್ಲೆಟ್ ಸಿಡಿತ | ಹಲವರಿಗೆ ಗಾಯ

ಮಣಿಪುರ : ಮಣಿಪುರದ ಹಿಂಸಾಚಾರ ಪೀಡಿತ ಜಿಲ್ಲೆಗಳಲ್ಲಿ ಭದ್ರತಾ ಪಡೆಗಳು ಹಾಕಿದ್ದ ಬ್ಯಾರಿಕೇಡ್‌ಗಳತ್ತ  ಪ್ರತಿಭಟನಾಕಾರರು ಬೃಹತ್ ಮೆರವಣಿಗೆ ನಡೆಸಿದ್ದು, ಭದ್ರತಾ ಪಡೆಗಳು ಅಶ್ರುವಾಯು ಮತ್ತು ರಬ್ಬರ್ ಬುಲೆಟ್‌ಗಳನ್ನು ಸಿಡಿಸಿದ್ದಾರೆ. ಈ ವೇಳೆ  ಹಲವರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಣಿಪುರ ಮೈತೈ ಸಮುದಾಯದ ಜನರು ಇರುವ ಪ್ರದೇಶದಲ್ಲಿ ಜನರು ಕರ್ಪ್ಯೂ ಉಲ್ಲಂಘಿಸಿ ಮನೆಯಿಂದ ಹೊರಗೆ ಬಂದಿದ್ದಾರೆ. ಮೈತೈ ನಾಗರಿಕ ಸಮಾಜ ಸಂಸ್ಥೆಯ ಭಾಗವಾಗಿರುವ ಸಮನ್ವಯ ಸಮಿತಿಯು ಪ್ರತಿಭಟನೆಗೆ ಕರೆ ನೀಡಿತ್ತು. ಮಣಿಪುರದ ಬಿಕ್ಕಟ್ಟನ್ನು ಇನ್ನಷ್ಟು ಹದಗೆಡಿಸದಂತೆ ಸರ್ಕಾರ

ಮಣಿಪುರ ಹಿಂಸಾಚಾರ ಪೀಡಿತ ಜಿಲ್ಲೆಗಳಲ್ಲಿ ಬೃಹತ್ ಪ್ರತಿಭಟನೆ  | ಭದ್ರತಾ ಪಡೆಗಳಿಂದ ರಬ್ಬರ್ ಬುಲ್ಲೆಟ್ ಸಿಡಿತ | ಹಲವರಿಗೆ ಗಾಯ Read More »

ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ

ಪುತ್ತೂರು : ವ್ಯಕ್ತಿಯೋರ್ವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಬೆಟ್ಟಂಪಾಡಿ ಗ್ರಾಮದ ಅಂಗರಾಜೆ ಎಂಬಲ್ಲಿ ಮಂಗಳವಾರ ಪತ್ತೆಯಾಗಿದೆ. ಬೆಟ್ಟಂಪಾಡಿ ಗ್ರಾಮದ ಅಂಗರಾಜೆ ಬಾಲ್ಯೊಟ್ಟು ಗುತ್ತು ಸಂಕಯ್ಯ ಆಳ್ವರವರ ಪುತ್ರ ರವೀಂದ್ರನಾಥ ಆಳ್ವ (55) ಈ ಕೃತ್ಯ ಎಸಗಿದವರು. ರವೀಂದ್ರನಾಥ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಪತ್ನಿ ದೀಕ್ಷಾ ಹಾಗೂ ಮಕ್ಕಳಿಬ್ಬರು ಬೆದ್ರಾಳದಲ್ಲಿರುವ ತವರು ಮನೆಯಲ್ಲಿ ವಾಸಿಸುತ್ತಿದ್ದರು. ರವೀಂದ್ರನಾಥ ಆಳ್ವರು ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಪಕ್ಕದ ಸಹೋದರನ ಮನೆಯಲ್ಲಿ ಊಟ ಮಾಡುತ್ತಿದ್ದ ಅವರು, ಸೆ.3 ರಂದು ರಾತ್ರಿ ಎಂದಿನಂತೆ ಊಟಕ್ಕೆ

ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ Read More »

ಮಾದಕ‌ ವ್ಯಸನ ಚಟ : ಯುವಕ ನೇಣುಬಿಗಿದು ಆತ್ಮಹತ್ಯೆ

ಮಂಗಳೂರು : ಮಾದಕ ವ್ಯಸನಕ್ಕೆ ತುತ್ತಾದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೈದ ಘಟನೆ ನಡೆದಿದೆ. ತಲಪಾಡಿ ಪಡೀಲ್‍ ನಾರ್ಲ ನಿವಾಸಿ ಪೈಸಲ್ (24) ಆತ್ಮಹತ್ಯೆ ಮಾಡಿಕೊಂಡವ. ತಲಪಾಡಿ ನಾರ್ಲ ಬಳಿಯ ತನ್ನ ಮನೆಯ ಕೊಠಡಿಯಲ್ಲಿ ಫ್ಯಾನಿಗೆ ನೈಲಾನ್ ಬಟ್ಟೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆಗೈದಿದ್ದಾನೆ. ಮನೆಯಲ್ಲಿ ಫೈಸಲ್ ತಾಯಿ, ತಂಗಿ ಮತ್ತು ಅಜ್ಜಿ ಇದ್ದು ತಾಯಿ ಮನೆಯ ಮೇಲಿನ ಅಂತಸ್ತಿಗೆ ತೆರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಪೈಸಲ್‍ ಗೆ ,ಮಾದಕ ವ್ಯಸನದ ಚಟವಿದ್ದು, ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಗೈದಿರಬೇಕು

ಮಾದಕ‌ ವ್ಯಸನ ಚಟ : ಯುವಕ ನೇಣುಬಿಗಿದು ಆತ್ಮಹತ್ಯೆ Read More »

error: Content is protected !!
Scroll to Top