ಅಪರಾಧ

ಹಿಂಸಾಚಾರ ಪ್ರಕರಣ: ಆರೋಪಿ ಶ್ರೀಕಾಂತ್‌ ಪೂಜಾರಿಗೆ ಜಾಮೀನು

ಬಾಬರಿ ಮಸೀದಿ ಧ್ವಂಸ ಹಿಂಸಾಚಾರ ಪ್ರಕರಣದಲ್ಲಿ ಕಳೆದ ಶುಕ್ರವಾರ ಬಂಧನಕ್ಕೊಳಗಾಗಿದ್ದ ಆರೋಪಿ ಶ್ರೀಕಾಂತ್‌ ಪೂಜಾರಿಗೆ ಹುಬ್ಬಳ್ಳಿಯ ಒಂದನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಷರತ್ತುಬದ್ದ ಜಾಮೀನು ಮಂಜೂರು ಮಾಡಿದೆ.  ಡಿ. 5, 1992 ರಂದು ಹುಬ್ಬಳ್ಳಿ ನಗರದಲ್ಲಿ ಸಂಭವಿಸಿದ್ದ ಹಿಂಸಾಚಾರ ಸಂದರ್ಭ ಮಳಿಗೆಗಳಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ 8 ಜನರ ವಿರುದ್ಧ ಹುಬ್ಬಳ್ಳಿಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಹಿಂಸಾಚಾರ ಪ್ರಕರಣ: ಆರೋಪಿ ಶ್ರೀಕಾಂತ್‌ ಪೂಜಾರಿಗೆ ಜಾಮೀನು Read More »

ಮನೆಯ ಬೀಗ ಮುರಿದು ನಗ, ನಗದು ದೋಚಿದ ಕಳ್ಳರು

ಕಡಬ: ಧಾರ್ಮಿಕ ಕಾರ್ಯಕ್ರಮಕ್ಕೆ ತೆರಳಿದ ಸಂದರ್ಭ ಕಳ್ಳರು ಮನೆಯ ಬೀಗ ಮುರಿದು ಲಕ್ಷಾಂತರ ರೂ. ಮೌಲ್ಯದ ನಗ, ನಗದನ್ನು ಕಳವುಗೈದ ಘಟನೆ ಕಡಬ ಠಾಣಾ ವ್ಯಾಪ್ತಿಯ ಆತೂರು ಕೊಯಿಲದಲ್ಲಿ ಗುರುವಾರ ತಡರಾತ್ರಿ ನಡೆದಿದೆ. ಆತೂರು ಕೊಯಿಲ ಸಮೀಪದ ಕಲಾಯಿ ನಿವಾಸಿ ಯಾಕುಬ್ ಎಂಬವರ ಮನೆಯ ಬೀಗ ಮುರಿದ ಕಳ್ಳರು, ನಗದನ್ನು ದೋಚಿದ್ದಾರೆ. ಪಕ್ಕದಲ್ಲಿರುವ ಮನೆಯೊಂದರ ಬೀಗ ಮುರಿಯುವ ವೇಳೆ ಆಟೋ ರಿಕ್ಷಾ ಆಗಮಿಸುವುದನ್ನು ನೋಡಿದ ಕಳ್ಳರು ಪರಾರಿಯಾಗಿರುವುದಾಗಿ ತಿಳಿದುಬಂದಿದೆ. ಸ್ಥಳಕ್ಕೆ ಕಡಬ ಠಾಣಾ ಪೊಲೀಸರು, ಶ್ವಾನ ದಳ

ಮನೆಯ ಬೀಗ ಮುರಿದು ನಗ, ನಗದು ದೋಚಿದ ಕಳ್ಳರು Read More »

ಮಗು ಮಾರಾಟ ಪ್ರಕರಣ | ಐವರ ಬಂಧನ

ಹುಟ್ಟಿದ ಮಾರನೇ ದಿನವೇ ನವಜಾತ ಶಿಶುವನ್ನು ಮಾರಾಟ ಮಾಡಿರುವ ಘಟನೆ ಹಾಸನದಲ್ಲಿ ನಡೆದಿದೆ. ಸಕಲೇಶಪುರದ ಬ್ಯಾಕರ ಹಳ್ಳಿಯಲ್ಲಿ ಮಗುವನ್ನು ಮಾರಾಟ ಮಾಡಿದ ಆರೋಪದಡಿ ತಾಯಿ ಗಿರಿಜಾ, ಆಶಾಕಾರ್ಯಕರ್ತೆ ಸುಮಿತ್ರ, ಮಗು ಖರೀದಿಸಿದ ಮಹಿಳೆ ಉಷಾ, ಶ್ರೀಕಾಂತ್ ಸುಬ್ರಹ್ಮಣ್ಯ ಎಂಬುವವರನ್ನು ಬಂಧಿಸಲಾಗಿದೆ. ಕಳೆದ ವರ್ಷ ನ.15ರಂದು ಗಿರಿಜಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ ತಮಗೆ ಇಬ್ಬರು ಮಕ್ಕಳಿರುವುದರಿಂದ ನ.16ರಂದು ಆಶಾ ಕಾರ್ಯಕರ್ತೆ ಸುಮಿತ್ರ ಅವರ ಮೂಲಕ ಚಿಕ್ಕಮಗಳೂರು ಮೂಲದ ಉಷಾ ಎಂಬುವವರಿಗೆ ಮಗು ಮಾರಾಟ ಮಾಡಿದ್ದರು. ಈ

ಮಗು ಮಾರಾಟ ಪ್ರಕರಣ | ಐವರ ಬಂಧನ Read More »

ಮರುಜೀವ ಪಡೆದುಕೊಂಡ ಕಲ್ಲಡ್ಕ ಪ್ರಭಾಕರ ಭಟ್ ಕೇಸ್

ಮಂಗಳೂರು:  ಶ್ರೀರಂಗಪಟ್ಟಣದಲ್ಲಿ ಮಹಿಳಾ ವಿರೋಧಿ ದ್ವೇಷ ಭಾಷಣ ಮಾಡಿದ್ದ ಕಲ್ಲಡ್ಕ ಪ್ರಭಾಕರ ಭಟ್ ಪ್ರಕರಣ ಇದೀಗ ಮರುಜೀವ ಪಡೆದುಕೊಂಡಿದೆ. ಜ.3ರಂದು ಹಿರಿಯ ವಕೀಲ ಎಸ್ ಬಾಲನ್ ಐಪಿಸಿ ಸೆಕ್ಷನ್ 1860 (U/s 354, 294, 509, 506, 153A, 295, 295A, 298) ಅಡಿಯಲ್ಲಿ ಸುಪ್ರಿಂ ಕೋರ್ಟ್ ನ ಹಲವು ತೀರ್ಪುಗಳನ್ನು ಉಲ್ಲೇಖಿಸಿ ಶ್ರೀರಂಗಪಟ್ಟಣ ನ್ಯಾಯಾಲಯದಲ್ಲಿ ದೂರುದಾರರ ಪರವಾಗಿ ವಕಾಲತ್ತು ಹಾಕಿದ್ದಾರೆ. “ಮುಸ್ಲಿಂ ಮಹಿಳೆಯರಿಗೆ ದಿನಕ್ಕೊಬ್ಬರು ಗಂಡಂದಿರು” ಎಂದು ಭಾಷಣ ಮಾಡಿದ್ದ ಕಲ್ಲಡ್ಕ ಪ್ರಭಾಕರ ಭಟ್, ಮುಂದುವರೆದು

ಮರುಜೀವ ಪಡೆದುಕೊಂಡ ಕಲ್ಲಡ್ಕ ಪ್ರಭಾಕರ ಭಟ್ ಕೇಸ್ Read More »

ಪರವಾನಿಗೆ ಇಲ್ಲದೆ ಮರಳು ಸಾಗಾಟ | ವಾಹನ ವಶ, ಪ್ರಕರಣ ದಾಖಲು

ಕಡಬ: ಪರವಾನಿಗೆ ಇಲ್ಲದೇ ಮರಳು ಸಾಗಾಟ ಪ್ರಕರಣವನ್ನು ಕಡಬ ಪೊಲೀಸರು ಕಳಾರ ಎಂಬಲ್ಲಿ ಪತ್ತೆ ಹಚ್ಚಿ ಸಾಗಾಟಕ್ಕೆ ಬಳಸುತ್ತಿದ್ದ ಪಿಕಪ್ ವಾಹನ ವಶಪಡಿಸಿಕೊಂಡ ಘಟನೆ ನಡೆದಿದೆ. ಕಡಬ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಅಭಿನಂದನ್ ಎಂ.ಎಸ್. ಹಾಗೂ ಸಿಬ್ಬಂದಿಗಳು ಮಂಗಳವಾರ ಸಂಜೆ ಕಡಬ ಗ್ರಾಮದ ಕಳಾರ ಎಂಬಲ್ಲಿ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಕಡಬ ಕಡೆಗೆ ಬರುತ್ತಿದ್ದ ಪಿಕಪ್ ವಾಹನವನ್ನು ತಡೆದು ಪರಿಶೀಲಿಸಿದಾಗ ಅದರಲ್ಲಿ ಮರಳು ಕಂಡು ಬಂದಿದೆ. ಈ ಬಗ್ಗೆ ಚಾಲಕ ಕುಂತೂರು ನಿವಾಸಿ

ಪರವಾನಿಗೆ ಇಲ್ಲದೆ ಮರಳು ಸಾಗಾಟ | ವಾಹನ ವಶ, ಪ್ರಕರಣ ದಾಖಲು Read More »

ಸರಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿ | ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲು

ಪುತ್ತೂರು: ಸರಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರ ವಿರುದ್ಧ ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಠಾಣೆಗೆ ದೂರು ನೀಡಿದ್ದಾರೆ. ಅವಧಿ ಮುಗಿದ ಬಾಡಿಗೆ ಕಟ್ಟಡಕ್ಕೆ ಏಲಂ ಪ್ರಕಟಣೆ ಅಂಟಿಸಿದ ನೋಟೀಸನ್ನು ಕಿತ್ತು ಹಾಕಿ, ಅಂಗಡಿ ಕೋಣೆ ಮೇಲೆ ಅಕ್ರಮ ಹಕ್ಕು ಸಾಧಿಸಿದ್ದಲ್ಲದೆ ತಾಲೂಕು ಪಂಚಾಯತ್ ಕಚೇರಿಗೆ ನುಗ್ಗಿ ಸರಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಪುತ್ತೂರು ನಗರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪುತ್ತೂರು ತಾಲೂಕು ಪಂಚಾಯಿತಿ ವಾಣಿಜ್ಯ ಸಂಕೀರ್ಣ-2

ಸರಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿ | ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲು Read More »

ಆಟೋ ಚಾಲಕ ಆತ್ಮಹತ್ಯೆಯೋ, ಕೊಲೆಯೋ? | ತನಿಖೆಗೆ ಒತ್ತಾಯಿಸಿದ ಕಣ್ವರ್ಷಿ ಬಿ.ಎಂ.ಎಸ್. ಆಟೋರಿಕ್ಷಾ ಚಾಲಕ ಮಾಲಕರ ಸಂಘ

ಕಾಣಿಯೂರು: ಆಟೋ ಚಾಲಕ ಬೆದ್ರಾಜೆ ವಸಂತ ಗೌಡ ಅವರು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಸಾವಿನ ಹಿಂದೆ ಸಂಶಯ ಮೂಡಿದೆ. ಆದ್ದರಿಂದ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಬೆಳ್ಳಾರೆ ಪೊಲೀಸ್ ಠಾಣಾಧಿಕಾರಿಗಳಿಗೆ ಮನವಿ ನೀಡಲಾಗಿದೆ. ಬೆದ್ರಾಜೆ ವಸಂತ ಗೌಡ ಎಂಬವರು ಡಿ. 27ರಂದು ಮಧ್ಯಾಹ್ನ ಎಲುವೆ ಎಂಬಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮೇಲ್ನೊಟಕ್ಕೆ ಇದು ಆತ್ಮಹತ್ಯೆಯೆಂದು ಕಂಡುಬಂದಿತ್ತು. ಆದರೆ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಕಾಣಿಯೂರು ಕಣ್ವರ್ಷಿ ಬಿ.ಎಂ.ಎಸ್. ಆಟೋ ರಿಕ್ಷಾ

ಆಟೋ ಚಾಲಕ ಆತ್ಮಹತ್ಯೆಯೋ, ಕೊಲೆಯೋ? | ತನಿಖೆಗೆ ಒತ್ತಾಯಿಸಿದ ಕಣ್ವರ್ಷಿ ಬಿ.ಎಂ.ಎಸ್. ಆಟೋರಿಕ್ಷಾ ಚಾಲಕ ಮಾಲಕರ ಸಂಘ Read More »

ಬೋರ್ವೆಲ್ ಲಾರಿಯಿಂದ ಕಬ್ಬಿಣದ ಡ್ರಿಲ್ಲಿಂಗ್ ಬಿಟ್ ಕಳವು!!

ಕಡಬ: ಐತ್ತೂರು ಗ್ರಾಮದ ಸುಂಕದಕಟ್ಟೆ ಎಂಬಲ್ಲಿ ರಾಜ್ಯ ಹೆದ್ದಾರಿ ಬದಿ ನಿಲ್ಲಿಸಿದ್ದ ಬೋರ್ವೆಲ್ ಲಾರಿಯಿಂದ ಕೊಳವೆ ಬಾವಿ ಕೊರೆಯುವ ಕಬ್ಬಿಣದ ಡ್ರಿಲ್ಲಿಂಗ್ ಬಿಟ್ ಕಳವು ಮಾಡಿರುವ ಘಟನೆ ನಡೆದಿದೆ. ರಾಜ್ಯ ಸರಕಾರದ ಜಲಜೀವನ ಯೋಜನೆಯಡಿ ಕೊಳವೆ ಬಾವಿ ಕೊರೆಯಲು ಟೆಂಡರ್ ಆಗಿದ್ದು, ಅದರಂತೆ ಬಿಳಿನೆಲೆ ಗ್ರಾ.ಪಂ.ಗೆ ಸಂಬಂಧಿಸಿದ ಕೊಳವೆ ಬಾವಿ ಕೊರೆಯುವ ಬೋರ್ವೆಲ್ ಆಗಮಿಸಿತ್ತು. ಐತ್ತೂರು ಗ್ರಾಮದ ಸುಂಕದಕಟ್ಟೆ ಎಂಬಲ್ಲಿ ರಾಜ್ಯ ಹೆದ್ದಾರಿ ಬದಿಯಲ್ಲಿ ನಿಲ್ಲಿಸಿ ಕೆಲಸಗಾರರು ಲಾರಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಬೆಳಗ್ಗೆದ್ದು ನೋಡಿದಾಗ ಕೊಳವೆ ಬಾವಿ

ಬೋರ್ವೆಲ್ ಲಾರಿಯಿಂದ ಕಬ್ಬಿಣದ ಡ್ರಿಲ್ಲಿಂಗ್ ಬಿಟ್ ಕಳವು!! Read More »

ಸ್ಫೋಟದಲ್ಲಿ ಜೈಶ್​ ಮುಖ್ಯಸ್ಥ ಮಸೂದ್ ಅಜರ್ ಹತ್ಯೆ? ಸಾಮಾಜಿಕ ಜಾಲತಾಣದಲ್ಲಿದೆ ವಿಡಿಯೋ!!

ವಿಶ್ವದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಮಸೂದ್ ಅಜರ್ (55) ಸಾವನ್ನಪ್ಪಿದ್ದಾನೆ. ಮಂಗಳವಾರ ಬೆಳಗ್ಗೆ ಅಪರಿಚಿತ ದುಷ್ಕರ್ಮಿಗಳು ನಡೆಸಿದ ಬಾಂಬ್ ದಾಳಿಯಲ್ಲಿ ಮಸೂದ್ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ. ಆದರೆ ಈ ಕುರಿತಾಗಿ ಯಾವುದೇ ಅಧಿಕೃತವಾದ ಮಾಹಿತಿ ಕೂಡ ಲಭ್ಯವಾಗಿಲ್ಲ. ಮೊಹಮ್ಮದ್ ಮಸೂದ್ ಅಜರ್ ಅಲ್ವಿ, ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಸ್ಥಾಪಕ. ಸೋಮವಾರ ಬೆಳಗ್ಗೆ ಭಾವಲ್‌ಪುರ ಮಸೀದಿಯಿಂದ ವಾಪಸಾಗುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿಗಳು ಆತನ ಮೇಲೆ ಬಾಂಬ್ ಎಸೆದಿದ್ದಾರೆ ಎಂದು ವರದಿಯಾಗಿದೆ. ಮಸೂದ್ ಅಜರ್ ಸಾವಿನ ಕುರಿತು ಅಧಿಕೃತ ಘೋಷಣೆ

ಸ್ಫೋಟದಲ್ಲಿ ಜೈಶ್​ ಮುಖ್ಯಸ್ಥ ಮಸೂದ್ ಅಜರ್ ಹತ್ಯೆ? ಸಾಮಾಜಿಕ ಜಾಲತಾಣದಲ್ಲಿದೆ ವಿಡಿಯೋ!! Read More »

ಮುಸುಕುಧಾರಿಗಳಿಂದ ಆಭರಣ ಮಳಿಗೆಗೆ ನುಗ್ಗಲು ವಿಫಲ ಯತ್ನ!

ಕುಂದಾಪುರ: ಮುಸುಕುಧಾರಿ ದರೋಡೆಕೋರರ ತಂಡವೊಂದು ಶುಕ್ರವಾರ ತಡರಾತ್ರಿ ತೆಕ್ಕಟ್ಟೆ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರ ಶಾನುಭೋಗ್ ಕಾಂಪ್ಲೆಕ್ಸ್ ನಲ್ಲಿರುವ ಆಭರಣ ಮಳಿಗೆಗೆ ನುಗ್ಗಲು ವಿಫಲ ಯತ್ನಿಸಿದ ಘಟನೆ ನಡೆದಿದೆ. ಈ ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಡಿ.21ರಂದು ತೆಕ್ಕಟ್ಟೆ ಕೆನರಾ ಬ್ಯಾಂಕ್ ಬಳಿಯ ಸಮೃದ್ಧಿ ಕಾಂಪ್ಲೆಕ್ಸ್ ನಲ್ಲಿರುವ ಮೀನಾಕ್ಷಿ ಫರ್ನಿಚರ್ ಶೋರೂಮ್, ಗೋಡೌನ್ ಮತ್ತು ಟೈಲರಿಂಗ್ ಅಂಗಡಿಯಲ್ಲಿ ಇತ್ತೀಚೆಗೆ ಕಳ್ಳತನಕ್ಕೆ ಯತ್ನಿಸಿದ ಬೆನ್ನಲ್ಲೇ ಈ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದರೂ,

ಮುಸುಕುಧಾರಿಗಳಿಂದ ಆಭರಣ ಮಳಿಗೆಗೆ ನುಗ್ಗಲು ವಿಫಲ ಯತ್ನ! Read More »

error: Content is protected !!
Scroll to Top