ಅಪರಾಧ

ಅಕ್ರಮ ಮರಳು ಸಾಗಾಟ: ಆರೋಪಿ ಬಂಧನ!

ವಿಟ್ಲ : ಅಕ್ರಮ ಮರಳು ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ನರಿಂಗಾನ ಗ್ರಾಮದ ಕೆದಂಬಾಡಿ ಜಂಕ್ಷನ್ ನಲ್ಲಿ ಬಂಧಿಸಿದ್ದಾರೆ. ಬಂಟ್ವಾಳ ನರಿಂಗಾನ ನಿವಾಸಿ, ಸಿದ್ದೀಕ್ ಕೆ.ಎಂ. ಬಂಧಿತ ಆರೋಪಿಯಾಗಿದ್ದು, ಈತನ ವಿರುದ್ಧ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಯಾವುದೇ ದಾಖಲೆ ಪತ್ರ ಇಲ್ಲದಿದ್ದುದರಿಂದ ತಪಾಸಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಜ.8 ರಂದು ರಾತ್ರಿ ವಿಟ್ಲ ಠಾಣಾ ಎ.ಎಸ್.ಐ ಜಯರಾಮ ಹಾಗೂ ಸಿಬ್ಬಂದಿಗಳಾದ ಪುನೀತ್, ಹೇಮರಾಜ್, ಅಶೋಕ್ ರವರು ಬಂಟ್ವಾಳ ತಾಲೂಕು […]

ಅಕ್ರಮ ಮರಳು ಸಾಗಾಟ: ಆರೋಪಿ ಬಂಧನ! Read More »

ಪರಾರಿಯಾಗಲೆತ್ನಿಸಿದ ನಟೋರಿಯಸ್ ರೌಡಿಯ ಕಾಲಿಗೆ ಗುಂಡು, ಬಂಧನ! | ಮಂಗಳೂರು ಪೊಲೀಸರ ಕಾರ್ಯಾಚರಣೆ!

ಮಂಗಳೂರು: ನಟೋರಿಯಸ್ ರೌಡಿ ಆಕಾಶಭವನ ಶರಣ್ ನ ಕಾಲಿಗೆ ಮಂಗಳವಾರ ಪೊಲೀಸರು ಗುಂಡು ಹಾರಿಸಿದ್ದಾರೆಂದು ತಿಳಿದು ಬಂದಿದೆ. ಪರಾರಿಯಾಗಲು ಯತ್ನಿಸಿದಾಗ ಫೈರಿಂಗ್ ಮಾಡಲಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಕಾಶಭವನ ಶರಣ್ ವಿರುದ್ದ ಕೊಲೆ, ಸುಲಿಗೆ, ಅತ್ಯಾಚಾರದಂತಹ 21 ಪ್ರಕರಣಗಳು ದಾಖಲಾಗಿದ್ದವು. ಕೆವಿಜಿ ಪಾಲಿಟೆಕ್ನಿಕ್ ಕಾಲೇಜಿನ ಆಡಳಿತಾಧಿಕಾರಿ ರಾಮಕೃಷ್ಣ ಅವರ ಕೊಲೆ ಪ್ರಕರಣದಲ್ಲಿಯೂ ದೋಷಿಯಾಗಿದ್ದ. ಇತ್ತೀಚೆಗೆ ಪೊಲೀಸರ ವಾಹನಕ್ಕೆ ಕಾರು ಢಿಕ್ಕಿ ಮಾಡಿ ಕೊಲೆಗೆ ಯತ್ನಿಸಿ ಪರಾರಿಯಾಗಿದ್ದ.

ಪರಾರಿಯಾಗಲೆತ್ನಿಸಿದ ನಟೋರಿಯಸ್ ರೌಡಿಯ ಕಾಲಿಗೆ ಗುಂಡು, ಬಂಧನ! | ಮಂಗಳೂರು ಪೊಲೀಸರ ಕಾರ್ಯಾಚರಣೆ! Read More »

ಹೆತ್ತ ಮಗುವನ್ನೇ ಹತ್ಯೆಗೈದು, ಬ್ಯಾಗಿನಲ್ಲಿ ತುಂಬಿಸಿದ ಸ್ಟಾರ್ಟಪ್ ಕಂಪೆನಿ ಸಿಇಓ!!

ಬೆಂಗಳೂರಿನ ಎ.ಐ. ಸ್ಟಾರ್ಟಪ್ ಕಂಪನಿಯೊಂದರ ಸಿಇಒ ಒಬ್ಬಾಕೆ ತನ್ನ ಮಗನನ್ನೇ ಕೊಂದು ಗೋವಾದಿಂದ ಬ್ಯಾಗ್‌ನಲ್ಲಿ ತುಂಬಿಸಿಕೊಂಡು ಬರುತ್ತಿದ್ದಾಗ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾಳೆ. 39 ವರ್ಷದ ಈಕೆಯ ಹೆಸರು ಸುಚನಾ ಸೇಠ್. ಬೆಂಗಳೂರಿನಲ್ಲಿರುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸ್ಟಾರ್ಟ್‌ಅಪ್ ಮೈಂಡ್‌ಫುಲ್ ಎ.ಐ. ಲ್ಯಾಬ್ಸ್‌ನ ಸಹ-ಸ್ಥಾಪಕಿ ಹಾಗೂ ಸಿಇಒ. ಗೋವಾದಲ್ಲಿ ತನ್ನ ನಾಲ್ಕು ವರ್ಷದ ಮಗನನ್ನು ಹತ್ಯೆಗೈದಿದ್ದಾಳೆ ಎಂಬುದು ಈಕೆಯ ಮೇಲಿರುವ ಆರೋಪ. ಮಗನ ಶವವನ್ನು ಬ್ಯಾಗ್‌ನಲ್ಲಿ ತುಂಬಿ ಟ್ಯಾಕ್ಸಿಯಲ್ಲಿ ಕರ್ನಾಟಕಕ್ಕೆ ಪ್ರಯಾಣಿಸುತ್ತಿರುವಾಗ ಸಿಕ್ಕಿಬಿದ್ದಿದ್ದಾಳೆ. ಸುಚನಾ ಸೇಠ್ ಅವರನ್ನು ಸೋಮವಾರ ಕರ್ನಾಟಕದ ಚಿತ್ರದುರ್ಗದಲ್ಲಿ

ಹೆತ್ತ ಮಗುವನ್ನೇ ಹತ್ಯೆಗೈದು, ಬ್ಯಾಗಿನಲ್ಲಿ ತುಂಬಿಸಿದ ಸ್ಟಾರ್ಟಪ್ ಕಂಪೆನಿ ಸಿಇಓ!! Read More »

ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನ !

ಬೆಳ್ತಂಗಡಿ : ತನ್ನ ವಿದ್ಯಾರ್ಹತೆಗೆ ತಕ್ಕ ಕೆಲಸ ಸಿಗದ ಹಿನ್ನಲೆಯಲ್ಲಿ ಮನನೊಂದು ಯುವಕನೋರ್ವ ಕುತ್ತಿಗೆಗೆ ಚೂರಿಯಿಂದಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಧರ್ಮಸ್ಥಳ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೆಂಗಳೂರಿನ ಮಾದಾವರ ನಿವಾಸಿ ನಾರಾಯಣಪ್ಪ ಎಂಬವರ ಪುತ್ರ ಹಿತೇಶ್ (24) ಆತ್ಮಹತ್ಯೆಗೆ ಯತ್ನಿಸಿದಾತ. ಹಿತೇಶ್ ಸಿವಿಲ್ ಇಂಜಿನಿಯರಿಂಗ್‍ ಪದವಿ ಪಡೆದಿದ್ದು, ಎಷ್ಟೇ ಪ್ರಯತ್ನಿಸಿದರೂ ಕೆಲಸ ಸಿಗದೇ ಇರುವ ಹಿನ್ನಲೆಯಲ್ಲಿ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಬಂದು ಕಲ್ಲೇರಿ ಎಂಬಲ್ಲಿ ತನ್ನ ಬ್ಯಾಗ್‍ನಲ್ಲಿದ್ದ ಚೂರಿಯಿಂದ ಕುತ್ತಿಗೆಗೆ ಇರಿದುಕೊಂಡು ರಸ್ತೆ ಬದಿ ಅರೆ ಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದ.

ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನ ! Read More »

ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ !

ಪುತ್ತೂರು: ಕಾಲೇಜು ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯಪದವಿನ ಕನ್ನಡ್ಕದಲ್ಲಿ ಭಾನುವಾರ ನಡೆದಿದೆ. ಕನ್ನಡ್ಕ ನಿವಾಸಿ ಕಾಲೇಜೊಂದರ ವಿದ್ಯಾರ್ಥಿನಿ ದೀಕ್ಷಾ (16) ಮೃತಪಟ್ಟ ಯುವತಿ ದೀಕ್ಷಾ ಮನೆಯ ಫ್ಯಾನ್‍ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈಶ್ವಮಂಗಲ ಹೊರಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಆತ್ಮಹತ್ಯೆಗೆ ಕಾರಣಗಳು ತಿಳಿದು ಬಂದಿಲ್ಲ

ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ! Read More »

ಮೀಟರ್ ಬಡ್ಡಿಯವರಿಂದ ಕಿರುಕುಳ | ಆತ್ಮಹತ್ಯೆಗೆ ಶರಣಾದ ಮಹಿಳೆ

ಪುತ್ತೂರು: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯೋರ್ವರು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಶನಿವಾರ ನಡೆದಿದೆ. ಬಲ್ನಾಡು ನಿವಾಸಿ ಕೇಸರಿ ಕೊಪ್ಪಳ (38) ಮೃತಪಟ್ಟವರು. ಕೇಸರಿ ಕೊಪ್ಪಳ ಅವರು ಮನೆಯ ದಾಖಲೆ ಪತ್ರ ಇಟ್ಟು ಲೇವಾದೇವಿಯವರಿಂದ ಮೀಟರ್ ಬಡ್ಡಿಗೆ ಸಾಲ ಪಡೆದಿದ್ದರು. ಸಾಲ ಕೊಟ್ಟವರು ಕಿರುಕುಳ ನೀಡಿದ್ದಾರೆ ಹಲವರ ಬಳಿ ಹೇಳಿಕೊಂಡಿದ್ದರು. ಬಳಿಕ ನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಮಂಗಳೂರಿನ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು. ಈ ಕುರಿತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರಿಗೆ ಪತಿ, ಇಬ್ಬರು ಗಂಡು

ಮೀಟರ್ ಬಡ್ಡಿಯವರಿಂದ ಕಿರುಕುಳ | ಆತ್ಮಹತ್ಯೆಗೆ ಶರಣಾದ ಮಹಿಳೆ Read More »

ಸುಳ್ಯ ಬ್ಯಾನರ್ ಹರಿದ ಪ್ರಕರಣ | ಆರೋಪಿಗಳನ್ನು ಬಂಧಿಸುವಂತೆ ಆಗ್ರಹ

ಸುಳ್ಯ : ಶ್ರೀರಾಮಚಂದ್ರನ ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ ಬ್ಯಾನರನ್ನು ಹರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ನಳಿನ್ ಕುಮಾರ್ ಕಟೀಲ್ ಖಂಡನೆ ವ್ಯಕ್ತಪಡಿಸಿದ್ದಾರೆ. ಸುಳ್ಯ ಜಾತ್ರೆ ಹಾಗೂ ಅಯೋಧ್ಯೆ ರಾಮಮಂದಿರ ಮತ್ತು ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘ ಬಿಎಂಎಸ್ ನ ಬೆಳ್ಳಿಹಬ್ಬಕ್ಕೆ ಶುಭಕೋರಿ ಬೃಹತ್ ಬ್ಯಾನರ್ ಅಳವಡಿಕೆ ಮಾಡಲಾಗಿತ್ತು. ಇದನ್ನು ಯಾರೋ ಕಿಡಿಗೇಡಿಗಳು ಶ್ರೀರಾಮ ದೇವರ ಸಹಿತ ರಾಮಮಂದಿರ ಲೋಕಾರ್ಪಣೆ ವಿಷಯದ ಬ್ಯಾನ‌ರ್ ನ್ನು ಹರಿದು ಹಾಕಿದ್ದಾರೆ. ಈ ಬಗ್ಗೆ ಸಂಸದ ನಳಿನ್ ಕುಮಾರ್ ಕಟೀಲ್

ಸುಳ್ಯ ಬ್ಯಾನರ್ ಹರಿದ ಪ್ರಕರಣ | ಆರೋಪಿಗಳನ್ನು ಬಂಧಿಸುವಂತೆ ಆಗ್ರಹ Read More »

ಮಹಿಳೆಗೆ ಆ್ಯಸಿಡ್ ಎರಚುವ ಬೆದರಿಕೆ!!  ಪ್ರಕರಣ ದಾಖಲು

ಬೆಳ್ಳಾರೆ : ಮಹಿಳೆಯೋರ್ವರ ಮೇಲೆ ಆ್ಯಸಿಡ್ ಎರಚುವುದಾಗಿ ಬೆದರಿಕೆ ಹಾಕಿರುವ ಕುರಿತು ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಳ್ತಿಗೆ ನಿವಾಸಿ ಚಿತ್ರಪ್ರಭಾ ರೈ ನೀಡಿರುವ ದೂರಿನ ಮೇರೆಗೆ ಪ್ರದೀಪ್ ಶೆಟ್ಟಿ, ಭಾಸ್ಕರ ರೈ ಧರ್ಮಸ್ಥಳ, ರವೀಂದ್ರ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಸರಳ ರೈ, ಜಯಶ್ರೀ ಶೆಟ್ಟಿ, ಕನ್ಯಾಕುಮಾರಿ ರೈ, ಕಾವ್ಯ ರೈ, ಅಮಿತಾ ರೈ, ವಾರಿಜ ರೈ, ಯತೀಂದ್ರನಾಥ ಶೆಟ್ಟಿ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ. ಚಿತ್ರಪ್ರಭಾ ರೈ ಎಂಬವರು ಶುಕ್ರವಾರ ಸಂಜೆ ಮನೆಗೆ ನಡೆದುಕೊಂಡು

ಮಹಿಳೆಗೆ ಆ್ಯಸಿಡ್ ಎರಚುವ ಬೆದರಿಕೆ!!  ಪ್ರಕರಣ ದಾಖಲು Read More »

ಬ್ಯಾನರ್ ಹರಿದ ಪ್ರಕರಣ : ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

ಸುಳ್ಯ: ಸುಳ್ಯ ಜಾತ್ರೋತ್ಸವ ಹಾಗೂ ಅಯೋಧ್ಯೆ ರಾಮಮಂದಿರ ಕುರಿತು ಹಾಕಿರುವ ಬ್ಯಾನರ್ ಒಂದನ್ನು ಹರಿದ ಪ್ರಕರಣ ಸುಳ್ಯದಲ್ಲಿ ನಡೆದಿದ್ದು, ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಹಳೆ ಬಸ್ಸು ನಿಲ್ದಾಣದ ಬಳಿಯಲ್ಲಿ ಆಟೋ ಚಾಲಕ ಮಾಲಕರು ಸುಳ್ಯ ಜಾತ್ರೋತ್ಸವ, ಅಯೋಧ್ಯೆ ರಾಮ ಮಂದಿರ ಮತ್ತು ಬೆಳ್ಳಿ ಹಬ್ಬ ಸಂಭ್ರಮದ ಶುಭಕೋರುವ ಬ್ಯಾನರ್ ಕೆಲ ದಿನಗಳ ಹಿಂದೆ ಅಳವಡಿಸಲಾಗಿತ್ತು ಆದರೆ ಇಂದು ಮುಂಜಾನೆ ನೋಡಿದಾಗ ಬ್ಯಾನ‌ರ್ ನಲ್ಲಿ ರಾಮ ಮಂದಿರದ ಚಿತ್ರವಿರುವ ಸ್ಥಳವನ್ನು ಮಾತ್ರ ಹರಿದು

ಬ್ಯಾನರ್ ಹರಿದ ಪ್ರಕರಣ : ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ Read More »

ನೌಕಪಡೆಯ ಯಶಸ್ವಿ ಕಾರ್ಯಾಚರಣೆ: ಅಪಹರಣಕ್ಕೊಳಗಾದ 15 ಭಾರತೀಯರ ರಕ್ಷಣೆ

ಅರಬ್ಬಿ ಸಮುದ್ರದಲ್ಲಿ ಹೈಜಾಕ್ ಆದ ಹಡಗಿನಲ್ಲಿದ್ದ ಎಲ್ಲಾ 15 ಭಾರತೀಯರನ್ನು ಭಾರತೀಯ ನೌಕಪಡೆಯ ಕಮಾಂಡೋಗಳು ರಕ್ಷಿಸಿದ್ದಾರೆ. ಸರಕು ಹಡಗು ಎಂವಿ ಲೀಲಾ ನಾರ್ಫೋಕ್ ನ್ನು ಗುರುವಾರ ಸಂಜೆ ಸೊಮಾಲಿಯಾ ಕರಾವಳಿಯಲ್ಲಿ ಅಪಹರಿಸಲಾಗಿತ್ತು. ಇದರಲ್ಲಿ 15 ಭಾರತೀಯರಿದ್ದರು. ಹಡಗಿನಲ್ಲಿ ಐದರಿಂದ ಆರು ಅಪರಿಚಿತ ಶಸ್ತ್ರಸಜ್ಜಿತ ವ್ಯಕ್ತಿಗಳು ಇದ್ದರು ಎಂದು ತಿಳಿದು ಬಂದಿತ್ತು. ಘಟನೆಯ ಬಗ್ಗೆ ತಿಳಿದ ನಂತರ, ಯುದ್ಧನೌಕೆ ಐಎನ್ಎಸ್ ಚೆನ್ನೈ ಸೊಮಾಲಿ ಕರಾವಳಿಯಲ್ಲಿ ಅಪಹರಣಕ್ಕೊಳಗಾದ ಹಡಗು ಎಂವಿ ಲೀಲಾ ನಾರ್ಫೋಕ್ಷ್ಯ ಸಮೀಪಿಸುತ್ತಿತ್ತು ಮತ್ತು ಅಪಹರಣಕ್ಕೊಳಗಾದ ಹಡಗನ್ನ ಬಿಡುಗಡೆ

ನೌಕಪಡೆಯ ಯಶಸ್ವಿ ಕಾರ್ಯಾಚರಣೆ: ಅಪಹರಣಕ್ಕೊಳಗಾದ 15 ಭಾರತೀಯರ ರಕ್ಷಣೆ Read More »

error: Content is protected !!
Scroll to Top