ಮರಳು ದಂಧೆಕೋರರ ಅಟ್ಟಹಾಸಕ್ಕೆ ಕಿಂಡಿ ಅಣೆಕಟ್ಟಿನ ನೀರು ಖಾಲಿ | ತಮ್ಮ ಸ್ವಾರ್ಥಕ್ಕಾಗಿ ಅಣೆಕಟ್ಟಿನ ಹಲಗೆ ಜಾರಿಸುತ್ತಿರುವವರು ಯಾರು ? ಸ್ಥಳೀಯರಿಂದ ಆಕ್ರೋಶ
ಆಲಂಕಾರು: ಕಡಬ ತಾಲೂಕಿನ ಆಲಂಕಾರು- ಸವಣೂರು ಸಂಪರ್ಕ ರಸ್ತೆಯಲ್ಲಿ ಬರುವ ಶಾಂತಿಮೊಗರು ಎಂಬಲ್ಲಿ ಕುಮಾರಧಾರ ನದಿಗೆ ಅಡ್ಡಲಾಗಿರುವ ಕಿಂಡಿ ಅಣೆಕಟ್ಟಿಗೆ ಕಳೆದ ಎರಡು ತಿಂಗಳ ಹಿಂದೆ ಹಲಗೆ ಜೋಡಣೆಯಾಗಿ ಭರಪೂರ ನೀರು ಸಂಗ್ರಹವಾಗಿದ್ದರೂ, ಮರಳು ದಂಧೆಕೋರರ ಅಟ್ಟಹಾಸಕ್ಕೆ ನೀರು ಕಡಿಮೆಯಾಗಿರುವುದು ಬೆಳಕಿಗೆ ಬಂದಿದೆ. ನೀರು ಏಕಾಏಕಿ ಕಡಿಮೆಯಾಗಿರುವುದರ ಕುರಿತು ಮಾಹಿತಿ ಕಲೆ ಹಾಕಲು ತೆರಳಿದಾಗ ಈ ಜಾಗದಲ್ಲಿ ಅಕ್ರಮ ಮರಳುಗಾರಿಕೆ ಮಾಡುವವರು ತಮ್ಮ ಸ್ವಾರ್ಥಕ್ಕಾಗಿ ನೀರು ಸೋರಿಕೆಯಾಗುವಂತೆ ಮಾಡುತ್ತಿರುವುದು ತಿಳಿದು ಬಂದಿದೆ. ನೀರು ವಿಪರೀತ ಸಂಗ್ರಹವಾಗಿರುವುದರಿಂದ ಮರಳು […]










