ಅಪರಾಧ

ಪಾದ್ರಿಯಿಂದ ಹಲ್ಲೆಗೊಳಗಾದ ದಂಪತಿಗೆ ಸಮುದಾಯದಿಂದ ಬಹಿಷ್ಕಾರ | ಪತ್ರಿಕಾಗೋಷ್ಠಿಯಲ್ಲಿ ಸಂತ್ರಸ್ತ ಗ್ರೆಗೊರಿ ಮೊಂಥೆರೊ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪರಿಯಾಲತಡ್ಕ ಗ್ರಾಮದಲ್ಲಿ ಮಾರ್ಚ್ ಮೊದಲ ವಾರದಲ್ಲಿ ನಡೆದ ಚರ್ಚ್‌ನ ಪಾದ್ರಿಯೊಬ್ಬರಿಂದ ಹಲ್ಲೆಗೊಳಗಾದ ವೃದ್ಧ ದಂಪತಿಯನ್ನು ಗ್ರಾಮದ ಕ್ರೈಸ್ತ ಸಮುದಾಯ ಬಹಿಷ್ಕರಿಸಿದೆ ಎಂದು ಆರೋಪಿಸಲಾಗಿದೆ. ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ  ಹಲ್ಲೆಗೊಳಗಾದ ಗ್ರೆಗೊರಿ ಮೊಂಥೆರೊ ಹಾಗೂ ಫಿಲೋಮಿನಾ ಕೊಯೆಲೊ ಚರ್ಚ್ ಪಾದ್ರಿ ಫಾದರ್ ನೆಲ್ಸನ್ ಒಲಿವೆರಾ, ಹಲ್ಲೆ ನಡೆಸಿದವರ ವಿರುದ್ಧ ದೂರು ನೀಡಿದ ಕೂಡಲೇ ಕಿರುಕುಳ ಆರಂಭವಾಗಿದೆ. ಮೊದಲಿಗೆ ಚರ್ಚ್‌ಗೆ ಸಂಪರ್ಕ ಹೊಂದಿದ ಎಲ್ಲ ವಾಟ್ಸಾಪ್ ಗುಂಪುಗಳಿಂದ ನಮ್ಮನ್ನು ತೆಗೆದುಹಾಕಲಾಯಿತು. ನಂತರ […]

ಪಾದ್ರಿಯಿಂದ ಹಲ್ಲೆಗೊಳಗಾದ ದಂಪತಿಗೆ ಸಮುದಾಯದಿಂದ ಬಹಿಷ್ಕಾರ | ಪತ್ರಿಕಾಗೋಷ್ಠಿಯಲ್ಲಿ ಸಂತ್ರಸ್ತ ಗ್ರೆಗೊರಿ ಮೊಂಥೆರೊ Read More »

ತಿರುಪತಿ ದೇಗುಲದಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ | ಚುನಾವಣೆ- ಅವ್ಯವಹಾರ ಲಿಂಕ್ ಆರೋಪ

ತಿರುಪತಿ: ತಿರುಪತಿ ದೇಗುಲದಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿರುವ ಆರೋಪ ಕೇಳಿಬಂದಿದ್ದು, ಸರಕಾರದ ಅನುಮತಿ ಇಲ್ಲದೆ ಕೋಟ್ಯಂತರ ರೂಪಾಯಿ ಎಂಜಿನಿಯರಿಂಗ್ ಕಾಮಗಾರಿ ಆರ್ಡರ್ ಗಳನ್ನು ನೀಡಲಾಗಿದೆ ಎಂದು ಆರೋಪ ಕೇಳಿ ಬರುತ್ತಿದೆ. ತೆಲುಗು ದೇಶಂ ಪಾರ್ಟಿ ವಕ್ತಾರ ನೀಲಾಯಪಾಲೆಂ ವಿಜಯ್ ಕುಮಾರ್, ದೇವಸ್ಥಾನದ ಟ್ರಸ್ಟ್ ಬೋರ್ಡ್ ಅಧ್ಯಕ್ಷ ಭೂಮನ ಕರುಣಾಕರ್ ರೆಡ್ಡಿ ಮತ್ತು ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ ಧರ್ಮಾ ರೆಡ್ಡಿ ವಿರುದ್ಧ ಈ ಗಂಭೀರ ಆರೋಪ ಮಾಡಲಾಗಿದೆ. ಕರುಣಾಕರ್ ರೆಡ್ಡಿ ಮತ್ತು ಧರ್ಮಾ ರೆಡ್ಡಿ ಉಸ್ತುವಾರಿಯಲ್ಲಿ

ತಿರುಪತಿ ದೇಗುಲದಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ | ಚುನಾವಣೆ- ಅವ್ಯವಹಾರ ಲಿಂಕ್ ಆರೋಪ Read More »

ಶಾಂತಿಯುತ ಮತದಾನ ಹಿನ್ನಲೆ | ದ.ಕ.ಜಿಲ್ಲೆಯಿಂದ 13 ಮಂದಿ ಗಡಿಪಾರು, ನಾಲ್ವರ ಮೇಲೆ ಗೂಂಡಾ ಕಾಯ್ದೆ

ಮಂಗಳೂರು: ಲೋಕಸಭೆ ಚುನಾವಣೆಯನ್ನು ಶಾಂತಿಯುತವಾಗಿ ನಡೆಸುವ ಹಿನ್ನಲೆಯಲ್ಲಿ ಮಂಗಳೂರು ನಗರದಲ್ಲಿ ನಾಲ್ವರು ರೌಡಿಗಳ ವಿರುದ್ಧ ಗೂಂಡಾ ಕಾಯ್ದೆ ಹೇರಲಾಗಿದ್ದು, ಮತ್ತೆ 13 ಮಂದಿಯನ್ನು ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ. ಉಳ್ಳಾಲ ಅಂಬ್ಲಮೊಗರು ನಿವಾಸಿ ಹೇಮಚಂದ್ರ ಅಲಿಯಾಸ್ ಪ್ರಜ್ವಲ್ ಪೂಜಾರಿ (29), ಉಳ್ಳಾಲ ಕೈರಂಗಳ ನಿವಾಸಿ ನವಾಜ್ ಅಲಿಯಾಸ್ (36), ಕುದ್ರೋಳಿ ನಿವಾಸಿ ಅನೀಶ್ ಅಶ್ರಫ್ (26) ಹಾಗೂ ಬೋಳೂರು ನಿವಾಸಿ ಚರಣ್ ಶೇಟ್ ಅಲಿಯಾಸ್ ಚರಣ್ ಪಾಲ್ (39) ಎಂಬವರ ವಿರುದ್ಧ ಗೂಂಡಾ ಕಾಯ್ದೆ ಹೇರಲಾಗಿದೆ. ಈ ನಾಲ್ವರು

ಶಾಂತಿಯುತ ಮತದಾನ ಹಿನ್ನಲೆ | ದ.ಕ.ಜಿಲ್ಲೆಯಿಂದ 13 ಮಂದಿ ಗಡಿಪಾರು, ನಾಲ್ವರ ಮೇಲೆ ಗೂಂಡಾ ಕಾಯ್ದೆ Read More »

ಕಡಬ ತಾಲೂಕು ಪಂಚಾಯಿತಿ ಕಚೇರಿಗೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು

ಕಡಬ:  ತಾಲೂಕು ಪಂಚಾಯಿತಿ ಗೆ ಬುಧವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಹೊಂದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡಬ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಿ. ವಿ. ಜಯಣ್ಣ ಅವರನ್ನು ಲೋಕಾಯುಕ್ತ ಅಧಿಕಾರಿಗಳು ತನಿಖೆಗೆ ಒಳಡಿಸಿದ್ದಾರೆ. ಈ ಹಿಂದೆ ಸೋಮವಾರಪೇಟೆ ತಾಲೂಕು ಪಂಚಾಯಿತಿಯಲ್ಲಿ ಕಾರ್ಯ ನಿರ್ವಾಹಕ ಅಧಿಕಾರಿಯಾಗಿದ್ದ ಬಿ.ವಿ.ಜಯಣ್ಣ ಅವರು ಅಕ್ರಮ ಆಸ್ತಿ ಗಳಿಸಿದ್ದಾರೆ ಎಂಬ ಆರೋಪದಲ್ಲಿ ಲೋಕಾಯುಕ್ತ ಪೊಲೀಸರು ತನಿಖೆಗಾಗಿ ಬುಧವಾರ ಬೆಳ್ಳಂಬೆಳಗ್ಗೆ ಆಗಮಿಸಿದ್ದಾರೆ ಎಂದು ತಿಳಿದು ಬಂದಿದೆ. ಜಯಣ್ಣ ಅವರು ವಾಸ್ತವ್ಯ

ಕಡಬ ತಾಲೂಕು ಪಂಚಾಯಿತಿ ಕಚೇರಿಗೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು Read More »

ಲಕ್ಷಾಂತರ ನಗದು, ಚಿನ್ನಾಭರಣ ಕಳವು | ಇಬ್ಬರು ಆರೋಪಿಗಳ ಬಂಧನ

ಕಡಬ: ಮನೆಯೊಂದರಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಪ್ರಕರಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಾದತ್ ಆಲಿ ಫರಂಗಿಪೇಟೆ (30) ಮತ್ತು ಹಮೀದ್ ವಳಚ್ಚಿಲ್ (31) ಬಂಧಿತ ಆರೋಪಿಗಳು ಆರೋಪಿಗಳು ಮಾ.11 ರಂದು ರಾಮಕುಂಜದ ನೆಬಿಸಾ ಎಂಬವರ ಮನೆಯ ಬಾಗಿಲು ಮುರಿದು ಕೊಠಡಿಯಲ್ಲಿದ್ದ ಕಪಾಟಿನಿಂದ 1.08 ಲಕ್ಷ ರೂ. ನಗದು, 13 ಪವನ್ ಚಿನ್ನಾಭರಣ ಕಳವು ಮಾಡಿದ್ದರು. ಒಟ್ಟು 5.20 ಲಕ್ಷ ರೂ. ಆಗಿತ್ತು. ಈ ಕುರಿತು ನೆಬಿಸಾ ಅವರು ಕಡಬ ಠಾಣೆಗೆ

ಲಕ್ಷಾಂತರ ನಗದು, ಚಿನ್ನಾಭರಣ ಕಳವು | ಇಬ್ಬರು ಆರೋಪಿಗಳ ಬಂಧನ Read More »

ಲೋಕಾಯುಕ್ತ ಅಧಿಕಾರಿಗಳಿಂದ 60 ಕಡೆ ದಾಳಿ | ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ, ಆದಾಯ ಮೀರಿದ ಸಂಪತ್ತು ಗಳಿಸಿರುವ ಮಾಹಿತಿಯಂತೆ ಲೋಕಾಯುಕ್ತ ಅಧಿಕಾರಿಗಳು ರಾಜ್ಯದ 13 ಜಿಲ್ಲೆಗಳಲ್ಲಿ 60 ಕಡೆಗಳಲ್ಲಿ ಏಕಕಾಲದಲ್ಲಿ ಇಂದು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಬಿಬಿಎಂಪಿ ಚೀಫ್ ಇಂಜಿನಿಯರ್ ರಂಗನಾಥ್ ಮನೆ ಸೇರಿ ಹಲವು ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಮುಂಜಾನೆಯೇ ದಾಳಿ ನಡೆಸಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ರಂಗನಾಥ್ ಅವರಿಗೆ ಸೇರಿದ ಸದಾಶಿವನಗರ ಹಾಗೂ ಯಲಹಂಕ ಮನೆ ಮೇಲೆ ದಾಳಿ ನಡೆದಿದ್ದು, ಅಧಿಕಾರಿಗಳು ಮಹತ್ವದ ದಾಖಲೆಗಳನ್ನು

ಲೋಕಾಯುಕ್ತ ಅಧಿಕಾರಿಗಳಿಂದ 60 ಕಡೆ ದಾಳಿ | ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ Read More »

ಮಾಜಿ ಪವರ್ ಮ್ಯಾನ್‍ ಗಣೇಶ್ ಪೂಜಾರಿ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ !

ಪುತ್ತೂರು: ಮಾಜಿ ಪವರ್ ಮ್ಯಾನ್ ಒಬ್ಬರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕೊಡಿಪಾಡಿ ರಸ್ತೆಯ ಕುಂದ್ರುಕೋಟೆ ಎಂಬಲ್ಲಿ ನಡೆದಿದೆ. ಮಾಜಿ ಪವರ್ ಮ್ಯಾನ್‍ ಗಣೇಶ್ ಪೂಜಾರಿ (55) ಎಂಬವರ ಮೃತದೇಹ ಪತ್ತೆಯಾದದ್ದು. ಗಣೇಶ್ ಪೂಜಾರಿ ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದು, ಮಾ.25 ರಂದು ಸಂಜೆ ವೇಳೆ ಮನೆ ಸುತ್ತ ವಾಸನೆ ಬರುತ್ತಿದ್ದು, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದಾಗ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ.

ಮಾಜಿ ಪವರ್ ಮ್ಯಾನ್‍ ಗಣೇಶ್ ಪೂಜಾರಿ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ ! Read More »

ಕೃಷಿಕ ಶಿವಣ್ಣ ಗೌಡ ಆತ್ಮಹತ್ಯೆ !

ಕಡಬ: ಕೃಷಿಕರೋರ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ಠಾಣಾ ವ್ಯಾಪ್ತಿಯ ಕೊಯಿಲ ಗ್ರಾಮದ ಬುಡಲೂರಿನಲ್ಲಿ ನಡೆದಿದೆ. ಬುಡಲೂರು ನಿವಾಸಿ ಶಿವಣ್ಣ ಗೌಡ (61) ಆತ್ಮಹತ್ಯೆ ಮಾಡಿಕೊಂಡವರು. ಶಿವಣ್ಣ ಅವರು ಸ್ಥಳೀಯ ಕೃಷಿ ಪತ್ತಿನ ಸಹಕಾರಿ ಸಂಘ ಸೇರಿದಂತೆ ಇನ್ನಿತರ ಸಹಕಾರಿ ಸಂಘದಿಂದ ಸಾಲ ಪಡೆದಿದ್ದು, ವಿಪರೀತ ಸಾಲ ಮಾಡಿ ಮರುಪಾವತಿ ಮಾಡಲಾಗದೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಮೃತರ ಪುತ್ರ ಹೇಮಂತ್ ಕಡಬ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೃಷಿಕ ಶಿವಣ್ಣ ಗೌಡ ಆತ್ಮಹತ್ಯೆ ! Read More »

ರಾಮೇಶ್ವರಂ ಕೆಫೆ ಸ್ಫೋಟ | ಎನ್‌ಐಎ ಅಧಿಕಾರಿಗಳ ತೆಕ್ಕೆಗೆ ಇಬ್ಬರು ಶಂಕಿತ ಆರೋಪಿಗಳು

ಬೆಂಗಳೂರು: ವೈಟ್‌ಫೀಲ್ಡ್‌ನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ರಾಷ್ಟ್ರೀಯ ತನಿಖಾ ದಳ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬಂಧಿತರಾದವರು ಸ್ಫೋಟದ ಶಂಕಿತ ಆರೋಪಿಗಳೊಂದಿಗೆ ಸ್ಪೋಟದ ಪ್ರಧಾನ ಆರೋಪಿಗಳಾದ ಮಝಾವೀರ್, ಅಬ್ದುಲ್ ಮತೀನ್ ತಾಹ್ಯಾ ಜತೆ ನಿರಂತದ ಸಂಪರ್ಕದಲ್ಲಿದ್ದು, ಅವರಿಬ್ಬರಿಗೆ ಜೊತೆಯಾಗಿ ಇವರು ಸ್ಲೀಪರ್ ಸೆಲ್ ಆಗಿ ಕಾರ್ಯ ನಿರ್ವಹಿಸಿರುವ ಜತೆ ಶಂಕಿತ ಆರೋಪಿಗಳಿಗೆ ಬೆಂಗಳೂರಿನಲ್ಲಿ ಆಶ್ರಯ ಮತ್ತಿತರ ಅನುಕೂಲಗಳನ್ನು ಮಾಡಿಕೊಟ್ಟಿರುವ ಶಂಕೆ ಇದೆ. ರಾಮೇಶ್ವರಂ ಕೆಫೆಯಲ್ಲಿ ಸ್ಪೋಟಕವನ್ನು ಇಟ್ಟಿದ್ದವನ ಜೊತೆ ಮತ್ತೋರ್ವ ಪತ್ತೆಯಾಗಿದ್ದು, ತಮಿಳುನಾಡಿನಲ್ಲಿ

ರಾಮೇಶ್ವರಂ ಕೆಫೆ ಸ್ಫೋಟ | ಎನ್‌ಐಎ ಅಧಿಕಾರಿಗಳ ತೆಕ್ಕೆಗೆ ಇಬ್ಬರು ಶಂಕಿತ ಆರೋಪಿಗಳು Read More »

ಅಕ್ರಮ ಗೋವು ಸಾಗಾಟ | ಕಾರು ಬಿಟ್ಟು ಆರೋಪಿಗಳು ಪರಾರಿ

ಪುತ್ತೂರು: ಅಕ್ರಮ ದನ ಸಾಗಾಟ ಮಾಡುತ್ತಿದ್ದ ಕಾರನ್ನು ಬಜರಂಗದಳ ಕಾರ್ಯಕರ್ತರು ತಡೆದು ನಿಲ್ಲಿಸಿದಾಗ ಕಾರಿನಲ್ಲಿದ್ದವರು ಕಾರು ಬಿಟ್ಟು ಪರಾರಿಯಾದ ಘಟನೆ ಕಬಕ ಕಲ್ಲಂದಡ್ಕ ದಲ್ಲಿ ನಡೆದಿದೆ. ಕಾರಿನಲ್ಲಿ ನಾಲ್ಕು ಗೋವುಗಳು ಪತ್ತೆಯಾಗಿದ್ದು, ಕಾರು ಚಾಲಕ ಹಾಗೂ ಕಾರಿನಲ್ಲಿದ್ದವರು ಕಾರು ಹಾಗೂ ಗೋವುಗಳನ್ನು ಬಿಟ್ಟು ಪರಾರಿಯಾಗಿರುವುದಾಗಿ ಮೂಲಗಳಿಂದ ತಿಳಿದು ಬಂದಿದೆ. ಬಜರಂಗದಳ ಕಬಕದ ಕಾರ್ಯಕರ್ತರು ಕಾರನ್ನು ತಡೆಯಲು ಪ್ರಯತ್ನಿಸಿದಾಗ ಕಾರಿನ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಬಿದ್ದು ಜಖಂಗೊಂಡಿದೆ ಎಂದು ಹೇಳಲಾಗಿದೆ. ಕಾರಿನಲ್ಲಿ ಎರಡು ದನ

ಅಕ್ರಮ ಗೋವು ಸಾಗಾಟ | ಕಾರು ಬಿಟ್ಟು ಆರೋಪಿಗಳು ಪರಾರಿ Read More »

error: Content is protected !!
Scroll to Top