ಅಪರಾಧ

ಕಾಂತಮಂಗಲ ಶಾಲಾ ಜಗಲಿಯಲ್ಲಿ ಕೊಲೆಗೀಡಾದ ವ್ಯಕ್ತಿಯ ಗುರುತು ಪತ್ತೆ !

ಸುಳ್ಯ: ಅಜ್ಜಾವರ ಗ್ರಾಮದ ಕಾಂತಮಂಗಲ ಶಾಲಾ ಜಗಲಿಯಲ್ಲಿ ಕೊಲೆಗೀಡಾದ ವ್ಯಕ್ತಿಯ ಗುರುತು ಪತ್ತೆಯಾಗಿದೆ. ಕೊಡಗು ವಿರಾಜಪೇಟೆ ಮೂಲದ ವಸಂತ ಮೃತಪಟ್ಟವರೆಂದು ಗುರುತಿಸಲಾಗಿದೆ. ಇಂದು ಬೆಳಿಗ್ಗೆ ಕಾಂತಮಂಗಲ ಶಾಲಾ ಬಳಿಯಲ್ಲಿ ತಲೆಗೆ ಕಲ್ಲು ಹೊತ್ತು ಹಾಕಿ ಕೊಲೆಯಾದ ರೀತಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿತ್ತು. ಪೊಲೀಸರು ಸ್ಥಳಕ್ಕೆ ಬಂದು ಮಹಜರು ನಡೆಸಿ ತನಿಖೆ ಆರಂಭಿಸಿದ್ದರು. ಪೊಲೀಸರು ನಡೆಸಿದ ತನಿಖೆಯಿಂದ ಮೃತಪಟ್ಟ ವ್ಯಕ್ತಿ ವಸಂತ ಎಂದು ಗುರುತಿಸಲಾಗಿದ್ದು ಈತ ಕುದ್ರೆಪಾಯದಿಂದ ಮದುವೆಯಾಗಿದ್ದ ಎಂದು ಹೇಳಲಾಗುತ್ತಿದೆ. ಹೆಚ್ಚಿನ ತನಿಖೆ ಮುಂದುವರಿದಿದೆ.

ಕಾಂತಮಂಗಲ ಶಾಲಾ ಜಗಲಿಯಲ್ಲಿ ಕೊಲೆಗೀಡಾದ ವ್ಯಕ್ತಿಯ ಗುರುತು ಪತ್ತೆ ! Read More »

ಶಂಕಾಸ್ಪದ ರೀತಿಯಲ್ಲಿ ಮೃತಪಟ್ಟ ಮಹಿಳೆ | ಪೊಲೀಸರಿಂದ ತನಿಖೆ

ಉಪ್ಪಿನಂಗಡಿ: ಮಹಿಳೆಯೊಬ್ಬರು ಶಂಕಾಸ್ಪದ ರೀತಿಯಲ್ಲಿ ಮೃತಪಟ್ಟಿ ಘಟನೆ ಪೆರ್ನೆ ಬಳಿಯ ಬಿಳಿಯೂರು ದರ್ಖಾಸ್‍ ನಿಂದ ವರದಿಯಾಗಿದೆ. ದರ್ಖಾಸ್ ನಿವಾಸಿ ಹೇಮಾವತಿ (37 ) ಮೃತ ಮಹಿಳೆ. ಈ ಕುರಿತು ಕೊಲೆ ಶಂಕೆ ವ್ಯಕ್ತವಾಗಿದ್ದು,  ಹೇಮಾವತಿ ತಾಯಿ, ಅಕ್ಕನ ಮಗನೊಂದಿಗೆ ಈ ಮನೆಯಲ್ಲಿದ್ದ ವೇಳೆ ನಿನ್ನೆ ರಾತ್ರಿ ಕೃತ್ಯ ನಡೆದಿದೆ. ಮೊದಲಿಗೆ ಪರಿಸರದಲ್ಲಿ ಹೃದಯಾಘಾತವೆಂಬ ಸುದ್ದಿ ಹರಡಿತ್ತು. ಆದರೆ ಬಳಿಕ ಈ ಬಗ್ಗೆ ಸಂಶಯ ವ್ಯಕ್ತವಾಗಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಪೊಲೀಸರು ವಿಚಾರಣೆಗಾಗಿ ಮೃತರ ಅಕ್ಕನ ಮಗ ಎಸೆಸ್ಸೆಲ್ಸಿ

ಶಂಕಾಸ್ಪದ ರೀತಿಯಲ್ಲಿ ಮೃತಪಟ್ಟ ಮಹಿಳೆ | ಪೊಲೀಸರಿಂದ ತನಿಖೆ Read More »

ಕಲ್ಲು ಎತ್ತಿ ಹಾಕಿ ಕೊಲೆಗೈದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ !

ಸುಳ್ಯ: ಯುವಕನೊಬ್ಬನ ತಲೆಗೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ಕಾಂತಮಂಗಲದಿಂದ ವರದಿಯಾಗಿದೆ. ಅಜ್ಜಾವರ ಗ್ರಾಮದ ಕಾಂತಮಂಗಲದ ಶಾಲೆಯೊಂದರ ಜಗಲಿಯಲ್ಲಿ ತಲೆಗೆ ಕಲ್ಲು ಎತ್ತಿ ಕೊಲೆ ಮಾಡಿರುವ ಯುವಕನ ಶವ ಪತ್ತೆಯಾಗಿದೆ. ಸುಮಾರು 25 – 30 ವರ್ಷದ ಅಪರಿಚಿತ ಯುವಕನ ಶವ ಎಂದು ಅಂದಾಜಿಸಲಾಗಿದೆ. ಪೋಲೀಸರು ಸ್ಥಳಕ್ಕೆ ಬಂದಿದ್ದು ಮಹಜರು ನಡೆಸುತಿದ್ದಾರೆ ಎಂದು ತಿಳಿದು ಬಂದಿದೆ.

ಕಲ್ಲು ಎತ್ತಿ ಹಾಕಿ ಕೊಲೆಗೈದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ ! Read More »

ಹಣದ ಬೇಡಿಕೆಯಿಟ್ಟು ಉದ್ಯಮಿಗೆ ಅನಾಮಿಕ ವ್ಯಕ್ತಿಯಿಂದ ಕರೆ : ಪ್ರಕರಣ ದಾಖಲು

ಪುತ್ತೂರು : ಬೊಳುವಾರಿನ ಉದ್ಯಮಿಯೊಬ್ಬರಿಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿರುವ ಕುರಿತು ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅನಾಮಿಕ ವ್ಯಕ್ತಿಯೊಬ್ಬ 4 ದಿನಗಳ ಹಿಂದೆ ಹಿಂದಿ ಭಾಷೆಯಲ್ಲಿ ಸಿಬಿಐ ಕ್ರೈಂ ಬ್ರಾಂಚ್‌ನಿಂದ ಮಾತನಾಡುತ್ತಿದ್ದೇನೆ ಎಂದು ಪರಿಚಯಿಸಿಕೊಂಡು ಉದ್ಯಮಿಯ ಪುತ್ರನ ಹೆಸರು ಹೇಳಿ, ನಿಮ್ಮ ಮಗನನ್ನು ಡ್ರಗ್ಸ್ ಕೇಸ್‌ನಲ್ಲಿ ಅರೆಸ್ಟ್ ಮಾಡಿದ್ದೇವೆ. ನಿಮ್ಮ ಮಗ ಸೇರಿದಂತೆ ಮೂವರನ್ನು ಈ ಕೇಸ್‌ನಲ್ಲಿ ಬಂಧಿಸಿ ದೆಹಲಿಗೆ ಕರೆದುಕೊಂಡು ಹೋಗುತ್ತಿದ್ದೇವೆ ಎಂದು ಹೇಳಿದ್ದಾನೆ. ಈ ಸಂದರ್ಭದಲ್ಲಿ ಉದ್ಯಮಿಯು ಪುತ್ರನ ಜತೆ

ಹಣದ ಬೇಡಿಕೆಯಿಟ್ಟು ಉದ್ಯಮಿಗೆ ಅನಾಮಿಕ ವ್ಯಕ್ತಿಯಿಂದ ಕರೆ : ಪ್ರಕರಣ ದಾಖಲು Read More »

ವಿಷ ಸೇವಿಸಿ ಚಿಂತಾಜನಕ ಸ್ಥಿತಿಯಲ್ಲಿದ್ದ ವಿದ್ಯಾರ್ಥಿನಿ ಧನ್ಯಶ್ರೀ ಮೃತ್ಯು

ಕಾಸರಗೋಡು: ವಿಷ ಸೇವಿಸಿ ಚಿಂತಾಜನಕ ಸ್ಥಿತಿಯಲ್ಲಿದ್ದ ಪದವಿ ವಿದ್ಯಾರ್ಥಿನಿಯೊಬ್ಬರು ಮೃತಪಟ್ಟ ಘಟನೆ ಕಾಸರಕೋಟಿಯ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಮಂಗಳೂರಿನ ಕಾಲೇಜೊಂದರಲ್ಲಿ ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿನಿ, ಆಯಾಲಾ ಹಾಗೂ ಆಟೋ ಚಾಲಕ ನುರೇಶ್ ದಂಪತಿ ಪುತ್ರಿ ಯುಡುಪುಲುವಿನ ಧನ್ಯಶ್ರೀ (19) ಮೃತಪಟ್ಟವರು. ಕೆಲ ದಿನಗಳ ಹಿಂದೆ ಧನ್ಯಶ್ರೀ ಅವರು ಹೊಟ್ಟೆ ನೋವಿನಿಂದಾಗಿ ವೈದ್ಯರನ್ನು ನೋಡಿದ್ದರು. ಔಷಧ ಸೇವಿಸಿದ ಬಳಿಕ ನೋವು ಕಡಿಮೆಯಾಗಿ ನಂತರ ನೋವು ಕಾಣಿಸಿಕೊಂಡು ದೇರಳಕಟ್ಟೆಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿಯೇ ಧನ್ಯಶ್ರೀ ಅವರು ವಿಷ ಸೇವಿಸಿರುವುದಾಗಿ

ವಿಷ ಸೇವಿಸಿ ಚಿಂತಾಜನಕ ಸ್ಥಿತಿಯಲ್ಲಿದ್ದ ವಿದ್ಯಾರ್ಥಿನಿ ಧನ್ಯಶ್ರೀ ಮೃತ್ಯು Read More »

ಅಕ್ರಮ ಗಣಿಗಾರಿಕೆ ಪ್ರಕರಣ | ಬಂಧಿಸಲ್ಪಟ್ಟಿದ್ದ ಶಶಿರಾಜ್ ಶೆಟ್ಟಿಗೆ ಜಾಮೀನು

ಬೆಳ್ತಂಗಡಿ: ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟಿದ್ದ ಶಶಿರಾಜ್ ಶೆಟ್ಟಿಗೆ ಜಾಮೀನು ಮಂಜೂರಾಗಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದರೆಂದು ತಾಲೂಕು ಬಿಜೆಪಿ ಯುವಮೋರ್ಚ ಅಧ್ಯಕ್ಷರಾದ ಶಶಿರಾಜ್ ಶೆಟ್ಟಿ ಬಂಧನವಾಗಿತ್ತು. ಅದೇ ದಿನ ರಾತ್ರಿ ಶಾಸಕ ಹರೀಶ್ ಪೂಂಜ ಠಾಣೆಗೆ ಆಗಮಿಸಿ ಬಿಡುಗಡೆಗೊಳಿಸುವಂತೆ ಬೆಳಿಗ್ಗೆ ತನಕ ಠಾಣೆಯಲ್ಲಿದ್ದರು ಪ್ರಯೋಜನವಾಗದೇ ನಂತರದ ಬೆಳವಣಿಗೆಯಲ್ಲಿ ಪ್ರತಿಭಟನೆಗಳು ನಡೆದರು ಕಸ್ಟಡಿಗೆ ಪಡೆದಿದ್ದರು. ಇಂದು ಜಾಮೀನು ಮಂಜೂರುಗೊಂಡಿದೆ. ಶಶಿರಾಜ್ ಪರ ವಕೀಲರಾದ ಮಹೇಶ್ ಕಜೆ ವಾದಿಸಿದ್ದರು.

ಅಕ್ರಮ ಗಣಿಗಾರಿಕೆ ಪ್ರಕರಣ | ಬಂಧಿಸಲ್ಪಟ್ಟಿದ್ದ ಶಶಿರಾಜ್ ಶೆಟ್ಟಿಗೆ ಜಾಮೀನು Read More »

ಕ್ಷುಲ್ಲಕ ವಿಚಾರದಲ್ಲಿ ಗಲಾಟೆ : ಚೂರಿ ಇರಿತ

ಪುತ್ತೂರು : ಹಿರಿಯ ನಾಗರಿಕರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು ಓರ್ವರಿಗೆ ಚೂರಿಯಿಂದ ಇರಿದ ಘಟನೆ ಕೋರ್ಟ್ ರಸ್ತೆಯಲ್ಲಿ ಇಂದು ನಡೆದಿದೆ. ಗುಣಶೇಖರ್ ಶೆಟ್ಟಿ ಹಾಗೂ ಸದಾಶಿವ ಪೈ ಎಂಬವರ ಮಧ್ಯೆ ಪಾರ್ಕಿಂಗ್ ವಿಚಾರವಾಗಿ ಈ ಗಲಾಟೆ ನಡೆದಿದ್ದು, ಜಗಳ ತಾರಕಕ್ಕೇರಿ ಚೂರಿ ಇರಿಯಲಾಗಿದೆ ಎಂದು ತಿಳಿದು ಬಂದಿದೆ. ಸದಾಶಿವ ಪೈ ಅವರ ಕೈ ಗೆ ಚೂರಿ ತಾಗಿದ್ದು, ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.

ಕ್ಷುಲ್ಲಕ ವಿಚಾರದಲ್ಲಿ ಗಲಾಟೆ : ಚೂರಿ ಇರಿತ Read More »

ಬಾಲಕಿಗೆ ಲೈಂಗಿಕ ಕಿರುಕುಳ ಪ್ರಕರಣ | ಕುತೂಹಲ ಕೆರಳಿಸಿದ ಗೃಹಸಚಿವ ಡಾ.ಪರಮೇಶ್ವರ್ ಹೇಳಿಕೆ

ಬೆಂಗಳೂರು: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಪೋಕ್ಸೋ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಮಾಜಿ ಸಿಎಂ ಯಡಿಯೂರಪ್ಪ ಭಾರಿ ಸಂಕಷ್ಟಕ್ಕೆ ಸಿಲುಕಿಕೊಳ್ಳುವ ಸಾಧ್ಯತೆ ಕಂಡು ಬಂದಿದೆ. ಈ ವಿಚಾರದಲ್ಲಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ನೀಡಿರುವ ಹೇಳಿಕೆ ಈಗ ಕುತೂಹಲ ಕೆರಳಿಸಿದೆ. ಈ ಪ್ರಕರಣದ ಬಗ್ಗೆ ಮಾಧ್ಯಮದೊಂದಿಗೆ ತುಮಕೂರಿನಲ್ಲಿ ಮಾತನಾಡಿರುವ ಡಾ. ಜಿ ಪರಮೇಶ್ವರ್, ಅಗತ್ಯಬಿದ್ದರೆ ಸಿಐಡಿಯವರು ಯಡಿಯೂರಪ್ಪ ಅವರನ್ನು ಬಂಧಿಸಲಿದ್ದಾರೆ. ಯಡಿಯೂರಪ್ಪ ನೋಟಿಸ್ ಗೆ ಬಂದು ಉತ್ತರ ನೀಡಬೇಕಾಗುತ್ತದೆ ಎಂದು ತಿಳಿಸಿದರು. ಈಗಾಗಲೇ ಈ ಪ್ರಕರಣದ ಬಗ್ಗೆ

ಬಾಲಕಿಗೆ ಲೈಂಗಿಕ ಕಿರುಕುಳ ಪ್ರಕರಣ | ಕುತೂಹಲ ಕೆರಳಿಸಿದ ಗೃಹಸಚಿವ ಡಾ.ಪರಮೇಶ್ವರ್ ಹೇಳಿಕೆ Read More »

ಅನ್ಯ ಕೋಮಿನ ವಿದ್ಯಾರ್ಥಿಗಳ ಜತೆ ಹಿಂದೂ ಯುವತಿ ಕಾರಿನಲ್ಲಿ ಸುತ್ತಾಟ | ವಿದ್ಯಾರ್ಥಿಗಳು ಪೊಲೀಸರ ವಶಕ್ಕೆ

ಮಂಗಳೂರು: ಹಿಂದೂ ಯುವತಿಯೊಬ್ಬಳು ಅನ್ಯಕೋಮಿನ ವಿದ್ಯಾರ್ಥಿಗಳ ಜೊತೆ ಸುತ್ತಾಟ ನಡೆಸುತ್ತಿದ್ದುದು ಮಂಗಳೂರಿನಲ್ಲಿ ನಡೆದಿದೆ. ಮಂಗಳೂರು ಹೊರವಲಯದ ಮುಕ್ಕ ಎಂಬಲ್ಲಿ ಅನ್ಯಕೋಮಿನ ಯುವಕರು ಹಾಗೂ ಹಿಂದೂ ಯುವತಿಯಿದ್ದ ಐಬಿಎಂಡಬ್ಲ್ಯೂ ಕಾರು ಮುಕ್ಕ ಸಮೀಪ ಸ್ಕೂಲ್ ಬಸ್ ಗೆ ಡಿಕ್ಕಿಯಾಗಿದ್ದು, ಈ ವೇಳೆ ಬಸ್ ಚಾಲಕನ ಜೊತೆ ತಂಡ ಜಗಳವಾಡುತ್ತಿದ್ದು, ಸ್ಥಳದಲ್ಲಿ ಸಾರ್ವಜನಿಕರು ಜಮಾಯಿಸುತ್ತಿದ್ದಂತೆ ತಂಡ ಅಲ್ಲಿಂದ ಎಸ್ಕೆಪ್ ಆಗಲು ಯತ್ನಿಸಿದೆ. ಈ ವೇಳೆ ಕಾರು ಕೈ ಕೊಟ್ಟಿದೆ ಎನ್ನಲಾಗಿದೆ. ಸ್ಥಳದಲ್ಲಿ ಜನ ಜಮಾಯಿಸುತ್ತಿದ್ದಂತೆ ಅನ್ಯಕೋಮಿನ ಜೋಡಿ ಎಂದು ಬೆಳಕಿಗೆ

ಅನ್ಯ ಕೋಮಿನ ವಿದ್ಯಾರ್ಥಿಗಳ ಜತೆ ಹಿಂದೂ ಯುವತಿ ಕಾರಿನಲ್ಲಿ ಸುತ್ತಾಟ | ವಿದ್ಯಾರ್ಥಿಗಳು ಪೊಲೀಸರ ವಶಕ್ಕೆ Read More »

ನ್ಯಾಯಾಲಯದ ಆವರಣದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಕೈದಿ

ವಿಚಾರಣೆಗಾಗಿ ಕರೆತಂದಿದ್ದ ಕೈದಿಯೊಬ್ಬ ನ್ಯಾಯಾಲಯದ ಆವರಣದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಘಟನೆ ಇಂದು ಬೆಳಗ್ಗೆ ಬೆಳಗಾವಿಯಲ್ಲಿ ನಡೆದಿದೆ. ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿದ್ದ ಕೈದಿ ಕಡಬ ಮೂಲದ ಜಯೇಶ್ ಪೂಜಾರಿ ಎಂಬಾತನನ್ನು ವಿಚಾರಣೆಗಾಗಿ ನ್ಯಾಯಾಲಯಕ್ಕೆ ಕರೆತರಲಾಗಿತ್ತು. ಆಗ, ‘ನ್ಯಾಯಾಲಯದಲ್ಲಿ ನನ್ನ ಅಹವಾಲು ಸ್ವೀಕರಿಸುತ್ತಿಲ್ಲ’ ಎಂದು ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾನೆ ಎನ್ನಲಾಗಿದೆ. ಈ ವೇಳೆ ವಕೀಲರು ಮತ್ತು ಜನರು ಹೊಡೆಯುತ್ತಿದ್ದಂತೆ, ಕೈದಿಯನ್ನು ರಕ್ಷಿಸಿದ ಪೊಲೀಸರು ಎಪಿಎಂಸಿ ಠಾಣೆಗೆ ಕರೆದೊಯ್ದು ವಿಚಾರಣೆ ಮುಂದುವರಿಸಿದ್ದಾರೆ ಎಂದು

ನ್ಯಾಯಾಲಯದ ಆವರಣದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಕೈದಿ Read More »

error: Content is protected !!
Scroll to Top