ಅಪರಾಧ

ಉಪ್ಪಿನಂಗಡಿ ಹೇಮಾವತಿ ಕೊಲೆ ಪ್ರಕರಣ | ಹತ್ತನೇ ತರಗತಿ ವಿದ್ಯಾರ್ಥಿಯನ್ನು ಬಂಧಿಸಿದ ಪೊಲೀಸರು

ಉಪ್ಪಿನಂಗಡಿ: ಪೆರ್ನೆ ಗ್ರಾಮದ ಬಿಳಿಯೂರಿನ ದರ್ಖಾಸು ನಿವಾಸಿ ಹೇಮಾವತಿ (37) ಎಂಬುವವರು ರವಿವಾರ ತಡ ರಾತ್ರಿ ಕೊಲೆಯಾಗಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಆರೋಪಿ ಹತ್ತನೇ ತರಗತಿಯ ಬಾಲಕನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಬಾಲಕ ಹೇಮಾವತಿ ಅವರ ಮನೆಯ ತಂಗಿದ್ದು, ಈತ ಅವರ ಅಕ್ಕನ ಮಗನಾಗಿದ್ದು, ಹತ್ತನೇ ತರಗತಿ ವಿದ್ಯಾರ್ಥಿ. ಬಾಲಕ ಹೇಮಾವತಿ ಅವರು ಮಲಗಿದ್ದಲ್ಲಿ ಹೋಗಿ ದೇಹ ಸುಖ ಬಯಸಿದ್ದಾನೆ. ಇದಕ್ಕೆ ಹೇಮಾವತಿ ಪ್ರತಿರೋದ ಮಾಡಿದ್ದು, ಈ ವೇಳೆ ಆರೋಪಿ ಬಾಲಕ ಕತ್ತು ಹಿಸುಕಿ ಕೊಲೆ […]

ಉಪ್ಪಿನಂಗಡಿ ಹೇಮಾವತಿ ಕೊಲೆ ಪ್ರಕರಣ | ಹತ್ತನೇ ತರಗತಿ ವಿದ್ಯಾರ್ಥಿಯನ್ನು ಬಂಧಿಸಿದ ಪೊಲೀಸರು Read More »

ರೈಲಿಗೆ ಸಿಲುಕಿ ಯುವತಿ ಮೃತ್ಯು !

ತುಮಕೂರು : ಚಲಿಸುತ್ತಿದ್ದ ರೈಲಿನಡಿಗೆ ಬಿದ್ದು ವಿದ್ಯಾರ್ಥಿನಿ ಮೃತಪಟ್ಟ ಘಟನೆ ತುಮಕೂರು ಜಿಲ್ಲೆ ತಿಪಟೂರು ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ವರ್ಷಿಣಿ (19) ಮೃತ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. ವರ್ಷಿಣಿ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ದೇವರಹಳ್ಳಿ ಗ್ರಾಮದ ಸುರೇಶ್ ಎಂಬುವವರ ಪುತ್ರಿ. ತಿಪಟೂರಿನ ಕಲ್ಪತರು ಕಾಲೇಜಿನಲ್ಲಿ ಎರಡನೇ ವರ್ಷದ ಬಿಎ ಓದುತ್ತಿದ್ದಳು. ತನ್ನ ಊರಿನಿಂದ ಕಾಲೇಜಿಗೆ ಪ್ರತಿದಿನ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಳು. ನಿನ್ನೆ ಕಾಲೇಜು ಮುಗಿಸಿ ಮನೆಗೆ ತೆರಳುವಾಗ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನ

ರೈಲಿಗೆ ಸಿಲುಕಿ ಯುವತಿ ಮೃತ್ಯು ! Read More »

ಪುರುಷತ್ವ ಪರೀಕ್ಷೆ ತುಂಬಾ ಮುಜುಗರವಾಗುತ್ತೆ | ಜಡ್ಜ್ ಮುಂದೆ ಅಳಲು ತೋಡಿಕೊಂಡ ಪ್ರಜ್ವಲ್ ರೇವಣ್ಣ

ಬೆಂಗಳೂರು: ಲೈಂಗಿಕ ದೌರ್ಜನ್ಯ ಹಾಗೂ ಅಶ್ಲೀಲ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿಚಾರಣೆ ಮುಂದುವರಿದಿದ್ದು, ಇಂದು ಪ್ರಜ್ವಲ್ ರೇವಣ್ಣ ಅವರನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಈ ವೇಳೆ ಮತ್ತೊಮ್ಮೆ ಪುರುಷತ್ವ ಪರೀಕ್ಷೆಗೆ ಮನವಿ ಮಾಡಿಕೊಂಡಿದ್ದಕ್ಕೆ ಪ್ರಜ್ವಲ್ ರೇವಣ್ಣ ತನ್ನ ಅಳಲು ತೋಡಿಕೊಂಡಿದ್ದಾರೆ. ಕೋರ್ಟ್ ವಿಚಾರಣೆ ವೇಳೆ ಆರೋಪಿ ಪ್ರಜ್ವಲ್ ರೇವಣ್ಣ ಅವರು ನಾನು ಎರಡು ಕೇಸ್‌ನಲ್ಲಿ ಒಪ್ಪಿಕೊಂಡು ಮೆಡಿಕಲ್ ಟೆಸ್ಟ್ ಮಾಡಿಸಿಕೊಂಡಿದ್ದೇನೆ. ಪುರುಷತ್ವ ಪರೀಕ್ಷೆ ತುಂಬಾ ಮುಜುಗರ ಆಗುತ್ತೆ. ಎರಡು ಸಲ ಕೇಳಿದಕ್ಕೆ

ಪುರುಷತ್ವ ಪರೀಕ್ಷೆ ತುಂಬಾ ಮುಜುಗರವಾಗುತ್ತೆ | ಜಡ್ಜ್ ಮುಂದೆ ಅಳಲು ತೋಡಿಕೊಂಡ ಪ್ರಜ್ವಲ್ ರೇವಣ್ಣ Read More »

ಅನ್ಯಕೋಮಿನ ಯುವಕರೊಂದಿಗೆ ಹಿಂದೂ ಹುಡುಗಿ : ತಡೆದ ಹಿಂದೂ ಕಾರ್ಯಕರ್ತರು

ಸುಳ್ಯ: ಅನ್ಯಕೋಮಿನ ಇಬ್ಬರು ಯುವಕರೊಂದಿಗೆ ಹಿಂದೂ ಹುಡುಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹಿಂದೂ ಕಾರ್ಯಕರ್ತರು ತಡೆದ ಘಟನೆ ಸುಳ್ಯದಲ್ಲಿ ನಡೆದಿದೆ. ಕೇರಳ ಮೂಲದ ಅನ್ಯ ಕೋಮಿನ ಇಬ್ಬರು ಯುವಕರೊಂದಿಗೆ ಹಿಂದು ಹುಡುಗಿ ಇದ್ದಳೆಂದು ಅವರ ಪ್ರಯಾಣಿಸುತ್ತಿದ್ದ ಕಾರನ್ನು ಹಿಂದೂ ಕಾರ್ಯಕರ್ತರು ತಡೆದಿದ್ದಾರೆ. ಘಟನೆಗೆ ಸಂಬಂಧಿಸಿ ಮೂವರನ್ನು ಠಾಣೆಗೆ ಕರೆದೊಯ್ದಿರುವುದಾಗಿ ತಿಳಿದು ಬಂದಿದೆ. ಮಾರುತಿ ಶಿಫ್ಟ್ ಕಾರಿನಲ್ಲಿ ಬೆಂಗಳೂರಿಗೆ ಹೋಗುತ್ತಿದ್ದರು ಎನ್ನಲಾಗಿದೆ. ಇದೀಗ ಪೋಲಿಸರು ವಿಚಾರಿಸುತ್ತಿದ್ದು, ಹೆಚ್ಚಿನ ವಿವರ ಇನ್ನಷ್ಟೇ ತಿಳಿದು ಬರಬೇಕಿದೆ.

ಅನ್ಯಕೋಮಿನ ಯುವಕರೊಂದಿಗೆ ಹಿಂದೂ ಹುಡುಗಿ : ತಡೆದ ಹಿಂದೂ ಕಾರ್ಯಕರ್ತರು Read More »

ಕಾಂತಮಂಗಲ ಶಾಲಾ ಜಗಲಿಯಲ್ಲಿ ನಡೆದ ಕೊಲೆ ಪ್ರಕರಣ : ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರು

ಸುಳ್ಯ: ತಾಲೂಕಿನ ಅಜ್ಜಾವರ ಗ್ರಾಮದ ಕಾಂತಮಂಗಲ ಶಾಲಾ ಜಗಲಿಯಲ್ಲಿ ಕೊಲೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ವಸಂತ ಎಂಬವರ ಕೊಲೆ ಪ್ರಕರಣವನ್ನು ಭೇದಿಸಿರುವ ಸುಳ್ಯ ಪೊಲೀಸರು ಕೃತ್ಯ ಎಸಗಿದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಡಬ ತಾಲೂಕಿನ ಎಡಮಂಗಲದ ಉದಯ ಕುಮಾರ್ ನಾಯ್ಕ (35) ಬಂಧಿತ ಆರೋಪಿ. ರವಿವಾರ ರಾತ್ರಿ ವಿರಾಜಪೇಟೆಯ ವಸಂತ (45) ಎಂಬವರನ್ನು ತಲೆಗೆ ಕಲ್ಲು ಎತ್ತಿ ಹಾಕಿ ಕೊಲೆಗೈಯಲಾಗಿತ್ತು. ಸೋಮವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ. ಉದಯ ಕುಮಾರ್ ಗೆ ಬಾರೊಂದರಲ್ಲಿ ವಸಂತ ಎಂಬಾತನ ಪರಿಚಯವಾಗಿದ್ದು, ರವಿವಾರ

ಕಾಂತಮಂಗಲ ಶಾಲಾ ಜಗಲಿಯಲ್ಲಿ ನಡೆದ ಕೊಲೆ ಪ್ರಕರಣ : ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರು Read More »

ದರ್ಶನ್ ಫಾರ್ಮ್ ಹೌಸ್ ಮ್ಯಾನೇಜರ್ ಶ್ರೀಧರ್  ಆತ್ಮಹತ್ಯೆ ! | ಡೆತ್ ನೋಟ್ ಪತ್ತೆ

ಬೆಂಗಳೂರು : ಕಾಣೆಯಾಗಿದ್ದ ನಟ ದರ್ಶನ್ ಫಾರ್ಮ್ ಹೌಸ್ ಮ್ಯಾನೇಜರ್ ಶ್ರೀಧರ್ ಎಂಬಾತನ  ಶವ ಪತ್ತೆಯಾಗಿದ್ದು, ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ನಟ ದರ್ಶನ್ ಫಾರ್ಮ್ ಹೌಸ್ ಮ್ಯಾನೇಜರ್ ಶ್ರೀಧರ್ (35) ವಿಷ ಸೇವಿಸಿ ಏಪ್ರಿಲ್ 17 ರಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಸಾಯುವ ಮುನ್ನ ಬರೆದಿಟ್ಟಿರುವ ಡೆತ್ ನೋಟ್ ಪತ್ತೆಯಾಗಿದೆ. ಕೀಟನಾಶಕ ಸೇವನೆ ಮಾಡಿ ಶ್ರೀಧರ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ. ನನ್ನ ಸಾವಿಗೆ ನಾನೇ ಕಾರಣ ಎಂದು ಆತ ಸಾಯುವ ಮುನ್ನ ಬರೆದಿಟ್ಟಿದ್ದು, ಇದೀಗ ಪೊಲೀಸರು

ದರ್ಶನ್ ಫಾರ್ಮ್ ಹೌಸ್ ಮ್ಯಾನೇಜರ್ ಶ್ರೀಧರ್  ಆತ್ಮಹತ್ಯೆ ! | ಡೆತ್ ನೋಟ್ ಪತ್ತೆ Read More »

ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

ಪುತ್ತೂರು: ನೇಣು ಬಿಗಿದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಜೂ.17 ರ ಸಂಜೆ ಬೆಳಕಿಗೆ ಬಂದಿದೆ. ನಿಡ್ಪಳ್ಳಿ ಗ್ರಾಮ ವಾಲ್ತಾಜೆ ರಾಜಮೂಲೆ ನಿವಾಸಿ ದೇವಣ್ಣ ನಾಯ್ಕ(77) ಮೃತಪಟ್ಟವರು. ಅವರು ಮನೆಯ ಒಳಗೆ ನೈಲಾನ್ ಹಗ್ಗದಿಂದ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಅವರ ಪುತ್ರ ಮಂಜುನಾಥ ನಾಯ್ಕರವರು ಕೂಲಿ ಕೆಲಸ ಮುಗಿಸಿ ಮನೆಗೆ ಬಂದ ಸಮಯ ಘಟನೆ ಬೆಳಕಿಗೆ ಬಂದಿದೆ. ಘಟನೆ ಕುರಿತು ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ Read More »

ಅಗ್ನಿ ಅವಘಡ : ಫ್ರಿಡ್ಜ್ ಸ್ಪೋಟ

ಪುತ್ತೂರು : ಜಿಡೆಕಲ್ಲು ಕಾಲೇಜು ಬಳಿ ಇರುವ ಮನೆಯೊಂದರಲ್ಲಿ ರೆಫ್ರಿಜರೇಟರ್ ಸ್ಫೋಟಗೊಂಡ ಘಟನೆ ಇಂದು ಬೆಳಗ್ಗೆ ನಡೆದಿದೆ. ಜಿಡೆಕಲ್ಲು ಕಾಲೇಜು ಸಮೀಪದ ಮೋನಪ್ಪ ಎಂಬವರ ಮನೆಯಲ್ಲಿ ರೆಫ್ರಿಜರೇಟರ್ ಸ್ಫೋಟಗೊಂಡ ಹಿನ್ನೆಲೆ ಅಗ್ನಿ ಅವಘಡ ಸಂಭವಿಸಿದ್ದು, ಮನೆಯಲ್ಲಿ ಯಾರು ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆಯಲ್ಲಿ ಮನೆ ಹಾನಿಗೊಂಡಿದೆ. ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಕಾಲೇಜು ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ನೀರು ಹಾಕಿ ಬೆಂಕಿ ನಂದಿಸಲು ಯತ್ನಿಸಿದ್ದು, ಬಳಿಕ ಅಗ್ನಿಶಾಮಕದಳದವರಿಗೆ ಮಾಹಿತಿ ನೀಡಿದ್ದು, ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ.

ಅಗ್ನಿ ಅವಘಡ : ಫ್ರಿಡ್ಜ್ ಸ್ಪೋಟ Read More »

ಮತ್ತೊಂದು ಸಂಕಷ್ಟದಲ್ಲಿ ದರ್ಶನ್ l ಅರಣ್ಯ ಇಲಾಖೆಯಿಂದ‌ ಪ್ರಕರಣ‌ ದಾಖಲು l ದರ್ಶನ್ ಪತ್ನಿಗೂ ಸಂಕಷ್ಟ

ಬೆಂಗಳೂರು : ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸ್ ಕಸ್ಟಡಿಯಲ್ಲಿರುವ ದರ್ಶನ್ ಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ದರ್ಶನ್ ಜತೆಗೆ ಪತ್ನಿ ವಿಜಯಲಕ್ಷ್ಮೀಗೂ ಈ ಕಂಟಕ ಕಾಡಲಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಎ2 ಆರೋಪಿಯಾಗಿದ್ದರೆ, ಗೆಳತಿ ಪವಿತ್ರಾ ಗೌಡ ಎ1 ಆರೋಪಿಯಾಗಿದ್ದಾರೆ. ಆದರೆ, ಈ ಪ್ರಕರಣದಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮೀ ಎ1 ಆರೋಪಿಯಾಗಿದ್ದು, ದರ್ಶನ್ ಎ3 ಆರೋಪಿಯಾಗಿದ್ದಾರೆ. ಕೊಲೆ ಪ್ರಕರಣದಲ್ಲಿ ದರ್ಶನ್ ಬಂಧನವಾದ ಬಳಿಕ ದರ್ಶನ್ ಗೆ ಸಂಬಂಧಿಸಿದ ಸಾಕಷ್ಟು ಪ್ರಕರಣಗಳು ಹೊರಬರುತ್ತಿದ್ದು,

ಮತ್ತೊಂದು ಸಂಕಷ್ಟದಲ್ಲಿ ದರ್ಶನ್ l ಅರಣ್ಯ ಇಲಾಖೆಯಿಂದ‌ ಪ್ರಕರಣ‌ ದಾಖಲು l ದರ್ಶನ್ ಪತ್ನಿಗೂ ಸಂಕಷ್ಟ Read More »

ರೆಣುಕಾಸ್ವಾಮಿ ಕ್ಷಮೆ ಕೇಳಿದ ಚಿತ್ರೀಕರಣರದ ಮೊಬೈಲ್ ಗಾಗಿ ಸುಮನಹಳ್ಳಿ ರಾಜಕಾಲುವೆಯಲ್ಲಿ ಶೋಧ

ಬೆಂಗಳೂರು: ಕೊಲೆಯಾದ ರೇಣುಕಸ್ವಾಮಿ ಮೊಬೈಲ್ ಎಸೆದಿದ್ದ ಸುಮನಹಳ್ಳಿ ರಾಜಕಾಲುವೆಯಲ್ಲಿ ಮೊಬೈಲ್‌ಗಾಗಿ ಪೊಲೀಸರು ಸೋಮವಾರ ತೀವ್ರ ಶೋಧ ನಡೆಸಿದರು. ಸ್ಥಳಕ್ಕೆ ಹತ್ತಕ್ಕೂ ಹೆಚ್ಚು ಪೌರ ಕಾರ್ಮಿಕರನ್ನು ಕರೆಸಿ ರಾಜಕಾಲುವೆಯಲ್ಲಿ ಹುಡುಕಾಟ ನಡೆಸಲಾಯಿತು. ರಾಜಕಾಲುವೆಗೆ ಇಳಿದು ಕಾರ್ಮಿಕರು ಎರಡು ತಾಸು, 200 ಮೀಟರ್ ಉದ್ದಕ್ಕೂ ಶೋಧಿಸಿದರು. ಆದರೆ, ಮೊಬೈಲ್ ಪತ್ತೆಯಾಗದ ಕಾರಣ ಶೋಧ ಕಾರ್ಯ ಸ್ಥಗಿತ ಮಾಡಲಾಯಿತು. ಪಟ್ಟಣಗೆರೆಯ ಶೆಡ್‌ನಲ್ಲಿ ಜೂನ್ 9ರ ರಾತ್ರಿ ರೇಣುಕಸ್ವಾಮಿ ಕೊಲೆ ಮಾಡಿದ ಬಳಿಕ ಆರೋಪಿಗಳು ಮುಂಜಾನೆ ಸುಮಾರು 3.30ಕ್ಕೆ ಸ್ಕಾರ್ಪಿಯೋ ಕಾರಿನಲ್ಲಿ ಮೃತದೇಹವನ್ನು

ರೆಣುಕಾಸ್ವಾಮಿ ಕ್ಷಮೆ ಕೇಳಿದ ಚಿತ್ರೀಕರಣರದ ಮೊಬೈಲ್ ಗಾಗಿ ಸುಮನಹಳ್ಳಿ ರಾಜಕಾಲುವೆಯಲ್ಲಿ ಶೋಧ Read More »

error: Content is protected !!
Scroll to Top