ಅಪರಾಧ

ಗಾಂಜಾ ಮಾರಾಟ ಆರೋಪಿ ಪೊಲೀಸ್ ವಶಕ್ಕೆ

ಮಂಗಳೂರು : ಗಾಂಜಾ ಮಾರಾಟ ಮಾಡುತ್ತಿದ್ದವನನ್ನು ಪತ್ತೆ ಹಚ್ಚಿ 4 ಕೆ.ಜಿ. ಗಾಂಜಾವನ್ನು ಆರೋಪಿಸಿಯಿಂದ ವಶಪಡಿಸಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಕುಕ್ಕೇಡಿ ಗ್ರಾಮ ಗೋಳಿಯಂಗಡಿ ಹೌಸ್ ನಿವಾಸಿ ಅಬುತಾಹಿರ್ ಯಾನೇ ಅನ್ನಮ್ (25) ಬಂಧಿತ ಆರೋಪಿ, ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಡೀಲ್ ಪರಿಸರದಲ್ಲಿ ವಾಹನವೊಂದರಲ್ಲಿ ಅಕ್ರಮವಾಗಿ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಅತನನ್ನು ವಶಕ್ಕೆ ಪಡೆದಿದ್ದಾರೆ. […]

ಗಾಂಜಾ ಮಾರಾಟ ಆರೋಪಿ ಪೊಲೀಸ್ ವಶಕ್ಕೆ Read More »

ಈಜಲು ಫಲ್ಗುಣಿ ನದಿಗಿಳಿದ ಇಬ್ಬರು ಯುವಕರು ಮುಳುಗಿ ಸಾವು

ಮಂಗಳೂರು: ಮರವೂರು ಸಮೀಪ ಪಲ್ಗುಣಿ ನದಿಯಲ್ಲಿ ಈಜಲು ಹೋದ ಮಂಗಳೂರಿನ ಇಬ್ಬರು ಯುವಕರು ನೀರುಪಾಲಾದ ಘಟನೆ ಭಾನುವಾರ ಸಂಜೆ ಸಂಭವಿಸಿದೆ. ನಾಪತ್ತೆಯಾದ ಯುವಕರನ್ನು ಮಂಗಳೂರು ಕೊಟ್ಟಾರಚೌಕಿ ನಿವಾಸಿ ಸುಮಿತ್ (20) ಹಾಗೂ ಉರ್ವಸ್ಟೋರ್ ನಿವಾಸಿ ಅನೀಶ್ (19) ಎಂದು ಗುರುತಿಸಲಾಗಿದೆ.ಮರವೂರು ವೆಂಟೆಡ್ ಡ್ಯಾಂನ ಪಕ್ಕದಲ್ಲಿರುವ ರೈಲ್ವೆ ಸೇತುವೆಯ ಬಳಿ ಪಲ್ಗುಣಿ ನದಿಯಲ್ಲಿ ಈಜಲು ನಾಲ್ವರು ಯುವಕರ ತಂಡ ಹೋಗಿದ್ದು, ಕೋಡಿಕಲ್ ನಿವಾಸಿಗಳಾದ ಅರುಣ್ ಹಾಗೂ ದೀಕ್ಷಿತ್ ಅಪಾಯವಿಲ್ಲದೆ ಬಚಾವಾಗಿದ್ದಾರೆ. ನಾಪತ್ತೆಯಾದವರ ಹುಡುಕಾಟಕ್ಕಾಗಿ ಅಗ್ನಿಶಾಮಕ ದಳ ಹಾಗೂ ಮುಳುಗು

ಈಜಲು ಫಲ್ಗುಣಿ ನದಿಗಿಳಿದ ಇಬ್ಬರು ಯುವಕರು ಮುಳುಗಿ ಸಾವು Read More »

ವರ್ಧಮಾನ್‌ ಗ್ರೂಪ್‌ ಎಂಡಿಗೆ 7 ಕೋಟಿ ರೂ. ವಂಚಿಸಿದ ಸೈಬರ್‌ ಖದೀಮರು

ಸಿಬಿಐ ಅಧಿಕಾರಿಗಳಂತೆ ಸೋಗು ಹಾಕಿ ಉದ್ಯಮಿಯನ್ನು ಡಿಜಿಟಲ್‌ ಬಂಧನದಲ್ಲಿಟ್ಟು ವಂಚನೆ ಹೊಸದಿಲ್ಲಿ : ಸಿಬಿಐ ಅಧಿಕಾರಿಗಳ ಸೋಗುಹಾಕಿ ಆನ್‌ಲೈನ್‌ ಮೂಲಕ ವರ್ಧಮಾನ್‌ ಕಂಪನಿ ಮಾಲೀಕ ಎಸ್‌.ಪಿ.ಓಸ್ವಾಲ್‌ ಅವರ ಖಾತೆಯಿಂದ 7 ಕೋ. ರೂ. ಎಗರಿಸಿದ್ದ ಇಬ್ಬರು ಸೈಬರ್‌ ವಂಚಕರನ್ನು ಪಂಜಾಬ್‌ ಪೊಲೀಸರು 48 ತಾಸುಗಳೊಳಗೆ ಬಂಧಿಸಿದ್ದಾರೆ. ಈ ಗ್ಯಾಂಗಿನಲ್ಲಿ ಇನ್ನೂ 7 ಮಂದಿಯಿದ್ದು, ಅವರನ್ನು ಪೊಲೀಸರು ಹುಡುಕುತ್ತಿದ್ದಾರೆ.ಓರ್ವ ಆರೋಪಿ ಸಿಬಿಐ ಅಧಿಕಾರಿಯಂತೆ ಸೋಗು ಹಾಕಿ ಓಸ್ವಾಲ್‌ ಅವರನ್ನು ಸಂಪರ್ಕಿಸಿ ಅವರಿಗೆ ತನ್ನ ನಕಲಿ ಗುರುತಿನ ಕಾರ್ಡ್‌ ತೋರಿಸಿದ್ದ.

ವರ್ಧಮಾನ್‌ ಗ್ರೂಪ್‌ ಎಂಡಿಗೆ 7 ಕೋಟಿ ರೂ. ವಂಚಿಸಿದ ಸೈಬರ್‌ ಖದೀಮರು Read More »

ತಲೆಮರೆಸಿಕೊಂಡಿದ್ದ ಆರೋಪಿ ತೆಲಂಗಾಣದಲ್ಲಿ ಬಂಧನ

ಪುತ್ತೂರು: 14 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಮಹಮ್ಮದ್ ಇಕ್ಬಾಲ್‍ (53) ನನ್ನು ಪುತ್ತೂರು ಗ್ರಾಮಾಂತರ ಪೊಲೀಸರು ತೆಲಂಗಾಣ ರಾಜ್ಯದ ಹೈದರಾಬಾದ್‍ ನಲ್ಲಿ ಶನಿವಾರ ಬಂಧಿಸಿದ್ದಾರೆ. ಆಂಧ್ರಪ್ರದೇಶದ ಗೋದಾವರಿ ಜಿಲ್ಲಾ ನಿವಾಸಿ ಮಹಮ್ಮದ್ ಇಕ್ಬಾಲ್‍ ನ ವಿರುದ್ಧ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅ,ಕ್ರ 15/2008 ಕಲಂ 416, 420, 511 ಜೊತೆಗೆ 34 Ipc  ಪ್ರಕರಣ ದಾಖಲಾಗಿತ್ತು. ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿತ್ತು. ಆರೋಪಿ ಬಂಧನಕ್ಕಾಗಿ ಪುತ್ತೂರು ಗ್ರಾಮಾಂತರ ಪೊಲೀಸ್

ತಲೆಮರೆಸಿಕೊಂಡಿದ್ದ ಆರೋಪಿ ತೆಲಂಗಾಣದಲ್ಲಿ ಬಂಧನ Read More »

ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿರುವ ಅದ್ದು ಪಡೀಲ್‍ ಎಂಬವರದ್ದೆನ್ನಲಾದ ವೀಡಿಯೋ ವೈರಲ್‍ | ಕಾನೂನು ಹೋರಾಟದ ಎಚ್ಚರಿಕೆ ನೀಡಿದ ಅದ್ದು ಪಡೀಲ್‍

ಪುತ್ತೂರು : ರಾಜಕೀಯ ಪಕ್ಷವೊಂದರಲ್ಲಿ ಸಕ್ರಿಯರಾಗಿದ್ದ ಬಪ್ಪಳಿಗೆ ನಿವಾಸಿ ಅದ್ದು ಪಡೀಲ್ ಮಸೀದಿಯೊಳಗಡೆ ವೀಡಿಯೋ ಕಾಲ್ ಮೂಲಕ ಮಹಿಳೆಯೊಂದಿಗೆ ಮಾತನಾಡುತ್ತಾ ಅಸಭ್ಯವಾಗಿ ವರ್ತಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೀಡಿಯೋ ಕಾಲ್‌ನಲ್ಲಿ ಮಹಿಳೆಯೊಬ್ಬರು ನಗ್ನವಾಗಿರುವ ಮತ್ತು ನಗ್ನ ವೀಡಿಯೋ ನೋಡಿ ವ್ಯಕ್ತಿಯೊಬ್ಬರು ಸೂಪರ್ ಎಂದು ಹೇಳುವ ವಾಯ್ಸ್ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿರುವ ವ್ಯಕ್ತಿ ಈ ಹಿಂದೆ ಜೆಡಿಎಸ್‌ ನಲ್ಲಿ ಮತ್ತು ಬಳಿಕ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಪುತ್ತೂರು ಬಪ್ಪಳಿಗೆ ನಿವಾಸಿ ಅದ್ದು ಪಡೀಲ್ ಎನ್ನಲಾಗುತ್ತಿದೆ.

ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿರುವ ಅದ್ದು ಪಡೀಲ್‍ ಎಂಬವರದ್ದೆನ್ನಲಾದ ವೀಡಿಯೋ ವೈರಲ್‍ | ಕಾನೂನು ಹೋರಾಟದ ಎಚ್ಚರಿಕೆ ನೀಡಿದ ಅದ್ದು ಪಡೀಲ್‍ Read More »

3 ವರ್ಷದ ಬಾಲಕಿಯನ್ನು ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಅಪರಾಧಿಗೆ ಗಲ್ಲು

ಬೆಳಗಾವಿ : ಮೂರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಅಪರಾಧಿಗೆ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ. ಬೆಳಗಾವಿಯ ಪೋಕ್ಸೊ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಈ ತೀರ್ಪು ನೀಡಿದೆ. 2017ರಲ್ಲಿ ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿ ಉದ್ದಪ್ಪ ರಾಮಪ್ಪ ಗಾಣಿಗೇರ(32) ಎಂಬ ಐುವಕ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ.ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕಿಯನ್ನು ಚಾಕೊಲೇಟ್ ಕೊಡಿಸಿ ಆರೋಪಿ ಉದ್ದಪ್ಪ ಕಬ್ಬಿನ ಗದ್ದೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ. ನಂತರ ಮಗುವಿನ ಕಣ್ಣು

3 ವರ್ಷದ ಬಾಲಕಿಯನ್ನು ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಅಪರಾಧಿಗೆ ಗಲ್ಲು Read More »

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗೆ ಗಲ್ಲು

ಪೋಕ್ಸೊ ಅಡಿ ಮರಣ ದಂಡನೆ ವಿಧಿಸಿದ ದೇಶದ ಮೊದಲ ಪ್ರಕರಣ ಗುವಾಹಟಿ: ಇಲ್ಲಿನ ಸರ್ಕಾರಿ ವಸತಿ ಶಾಲೆಯೊಂದರಲ್ಲಿ 2014ರಿಂದ 2022ರ ನಡುವೆ 21 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಹಾಸ್ಟೆಲ್‌ ವಾರ್ಡನ್‌ ಯುಮ್ಕೆನ್‌ ಬಾಗ್ರಾ ಎಂಬಾತನಿಗೆ ಅರುಣಾಚಲ ಪ್ರದೇಶದ ವಿಶೇಷ ನ್ಯಾಯಾಲಯ ಗುರುವಾರ ಗಲ್ಲು ಶಿಕ್ಷೆ ವಿಧಿಸಿದೆ.ಮಕ್ಕಳು ದೂರು ನೀಡಿದರೂ ಅಪರಾಧವನ್ನು ವರದಿ ಮಾಡುವಲ್ಲಿ ವಿಫಲರಾದ ಮಾಜಿ ಮುಖ್ಯಶಿಕ್ಷಕ ಸಿಂಗ್ತುಂಗ್ ಯೋರ್ಪೆನ್ ಮತ್ತು ಹಿಂದಿ ಶಿಕ್ಷಕಿ ಮಾರ್ಬೊಮ್ ನ್ಗೊಮ್ದಿರ್ ಅವರಿಗೆ ಪೋಕ್ಸೊ ಕಾಯ್ದೆ ಅಡಿ 20

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗೆ ಗಲ್ಲು Read More »

ಎರಡು ಕೋಟಿ ರೂ. ಸಾಲ ಬಾಕಿ | ವಸೂಲಾತಿಗೆ ಹೋದ ಬ್ಯಾಂಕ್‍ ಸಿಬ್ಬಂದಿಗಳನ್ನು ಪಿಸ್ತೂಲ್ ತೋರಿಸಿ ಕೂಡಿಹಾಕಿದ ಅಪ್ಪ-ಮಗ : ಪ್ರಕರಣ ದಾಖಲು

ಪುತ್ತೂರು: ಬೊಳುವಾರಿನಲ್ಲಿ ಕಾರ್ಯಾಚರಿಸುತ್ತಿರುವ ತಿರುಮಲ ಹೊಂಡಾ ಮಾಲಕರು ಎಸ್‍ ಬಿಐ ಬ್ಯಾಂಕ್‍ ನಿಂದ ಪಡೆದುಕೊಂಡ  2 ಕೋಟಿ ಸಾಲ ಮರುಪಾವತಿಸಿಲ್ಲ ಎಂದು ವಸೂಲಾತಿಗೆ ಹೋದ ಬ್ಯಾಂಕ್ ಸಿಬ್ಬಂದಿಗಳಿಗೆ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿದ ಘಟನೆ ನಡೆದಿದ್ದು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಪುತ್ತೂರು ಕೋರ್ಟ್ ರೋಡ್ ನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ರಿಲೇಷನ್ ಶಿಪ್ ಮ್ಯಾನೇಜರ್ ಆದ ಚಿಕ್ಕಮಗಳೂರು ಕೊಪ್ಪ ತಾಲೂಕು ನಿವಾಸಿ ಚೈತನ್ಯ ಹೆಚ್.ಸಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ಬ್ಯಾಂಕ್ ನಲ್ಲಿ ಪುತ್ತೂರು

ಎರಡು ಕೋಟಿ ರೂ. ಸಾಲ ಬಾಕಿ | ವಸೂಲಾತಿಗೆ ಹೋದ ಬ್ಯಾಂಕ್‍ ಸಿಬ್ಬಂದಿಗಳನ್ನು ಪಿಸ್ತೂಲ್ ತೋರಿಸಿ ಕೂಡಿಹಾಕಿದ ಅಪ್ಪ-ಮಗ : ಪ್ರಕರಣ ದಾಖಲು Read More »

ಹೆದ್ದಾರಿ ಬದಿ ಪಾರ್ಕ್‌ ಮಾಡಿದ್ದ ಕಾರಿನಲ್ಲಿತ್ತು ಐದು ಶವ

ಒಂದೇ ಕುಟುಂಬದ ಐವರು ಸಾವು ಚೆನ್ನೈ: ಒಂದೇ ಕುಟುಂಬದ ಐವರು ಕಾರಿನಲ್ಲಿ ಶವವಾಗಿ ಪತ್ತೆಯಾದ ಘಟನೆ ತಮಿಳುನಾಡಿನ ಪುದುಕೊಟ್ಟೈನಲ್ಲಿ ನಡೆದಿದೆ. ಬುಧವಾರ ಬೆಳಗ್ಗೆ ತಿರುಚ್ಚಿ-ಕಾರೈಕುಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ನಿಂತಿತ್ತು. ಸಂಜೆಯಾದರೂ ಅದೇ ಸ್ಥಳದಲ್ಲಿ ಕಾರು ನಿಂತಿರುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರೀಶಿಲಿಸಿದಾಗ ಕಾರಿನೊಳಗೆ ಐವರು ಮೃತಪಟ್ಟಿರುವುದು ಕಂಡುಬಂದಿದೆ. ಮೃತರನ್ನು ಉದ್ಯಮಿ ಮಣಿಕಂಠನ್ (50), ಅವರ ಪತ್ನಿ ನಿತ್ಯಾ, ತಾಯಿ ಸರೋಜಾ ಮತ್ತು ಅವರ ಇಬ್ಬರು ಮಕ್ಕಳು ಎಂದು ಗುರುತಿಸಲಾಗಿದೆ.

ಹೆದ್ದಾರಿ ಬದಿ ಪಾರ್ಕ್‌ ಮಾಡಿದ್ದ ಕಾರಿನಲ್ಲಿತ್ತು ಐದು ಶವ Read More »

ಮಹಾಲಕ್ಷ್ಮಿಕೊಲೆ ಪ್ರಕರಣ : ಡೆತ್‌ನೋಟ್‌ನಲ್ಲಿದೆ ಅಸಲಿ ಕಾರಣ

ಮೃತದೇಹವನ್ನು 50 ತುಂಡು ಮಾಡಿ ಫ್ರಿಜ್‌ನಲ್ಲಿಟ್ಟಿದ್ದ ಪ್ರಕರಣ ಬೆಂಗಳೂರು : ನಗರದ ವೈಯಾಲಿಕಾವಲ್‌ನಲ್ಲಿ ನೇಪಾಳ ಮೂಲದ ಮಹಾಲಕ್ಷ್ಮಿ ಎಂಬ ವಿವಾಹಿತ ಮಹಿಳೆಯನ್ನು ಕೊಂದು ಮೃತದೇಹವನ್ನು 50ಕ್ಕೂ ಹೆಚ್ಚು ತುಂಡು ಮಾಡಿ ಫ್ರಿಜ್‌ನಲ್ಲಿ ತುಂಬಿಸಿಟ್ಟು ಹೋಗಿದ್ದ ಹಂತಕ ತನ್ನ ಹುಟ್ಟೂರಾದ ಒಡಿಶಾಕ್ಕೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅವನು ಬರೆದಿಟ್ಟಿರುವ ಡೆತ್‌ನೋಟ್‌ ಪೊಲೀಸರಿಗೆ ಸಿಕ್ಕಿದ್ದು, ಅದರಲ್ಲಿ ಕೊಲೆಯ ರಹಸ್ಯ ಬಹಿರಂಗವಾಗಿದೆ.ಕಳೆದ ಸೆ.21ರಂದು ಬೆಳಕಿಗೆ ಬಂದ ಈ ಕೊಲೆ ನಗರವನ್ನು ಬೆಚ್ಚಿಬೀಳಿಸಿತ್ತು. ಪೊಲೀಸರು ವಿಶೇಷ ತನಿಖಾ ತಂಡ ರಚಿಸಿ ಕೊಲೆಗಾರನ ಬೆನ್ನತ್ತಿದಾಗ

ಮಹಾಲಕ್ಷ್ಮಿಕೊಲೆ ಪ್ರಕರಣ : ಡೆತ್‌ನೋಟ್‌ನಲ್ಲಿದೆ ಅಸಲಿ ಕಾರಣ Read More »

error: Content is protected !!
Scroll to Top