ಕ್ಯಾಂಪಸ್‌

ನಾಳೆ (ಜೂ.26) : ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ಸಂಸ್ಥಾಪಕರ ದಿನಾಚರಣೆ ಮತ್ತು ಪುಸ್ತಕ ಬಿಡುಗಡೆ

ಪುತ್ತೂರು: ತಾಲೂಕಿನ ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ಸಂಸ್ಥಾಪಕರ ದಿನಾಚರಣೆ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮ ನಾಳೆ(ಜೂ.26) ಸಂಸ್ಥೆಯ ಗೋಪಾಲಕೃಷ್ಣ ಸಭಾಭವನದಲ್ಲಿ ನಡೆಯಲಿದೆ. ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ಅಧ್ಯಕ್ಷ ಎಸ್ ಜಯರಾಮ್ ಕೆದಿಲಾಯ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಅಂಬಿಕಾ ವಿದ್ಯಾಸಂಸ್ಥೆ ಸದಸ್ಯ ಕೆ.ಸುರೇಶ್ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ. ಸಾಂದೀಪನಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಎಸ್ .ಜಿ ಕೃಷ್ಣ ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ ಎಂದು ಸಂಸ್ಥೆಯ ಸಂಚಾಲಕ ಭಾಸ್ಕರ್ ಆಚಾರ್ ಹಿಂದಾರ್ ತಿಳಿಸಿದ್ದಾರೆ.

ನಾಳೆ (ಜೂ.26) : ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ಸಂಸ್ಥಾಪಕರ ದಿನಾಚರಣೆ ಮತ್ತು ಪುಸ್ತಕ ಬಿಡುಗಡೆ Read More »

ಅಕ್ಷಯ ಕಾಲೇಜಿನಲ್ಲಿ ವಿಶ್ವಯೋಗ ದಿನಾಚರಣೆ

ಪುತ್ತೂರು: ಸಂಪ್ಯದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ  ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶದ ವತಿಯಿಂದ ವಿಶ್ವಯೋಗ ದಿನಾಚರಣೆಯನ್ನು ಶನಿವಾರ ಆಚರಿಸಲಾಯಿತು. ಹೇಮ ಚಂದ್ರಹಾಸ ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿ ಮಾತನಾಡಿ, ಯೋಗವನ್ನು ಪ್ರತಿದಿನ ಅಭ್ಯಾಸ ಮಾಡಿದರೆ ದೇಹ ಮತ್ತು ಮನಸ್ಸು ಒತ್ತಡಮುಕ್ತವಾಗುತ್ತದೆ. ಅನೇಕ ಕಾಯಿಲೆಗಳಿಂದ ರಕ್ಷಣೆ ದೊರೆಯುತ್ತದೆ ಎಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲ ಸಂಪತ್‍ ಪಕ್ಕಳ ಅಧ್ಯಕ್ಷತೆ ವಹಿಸಿ ಮಾತನಾಡಿ,  ಯೋಗದ ಮೂಲಕ ದೇಹದ ಆರೋಗ್ಯ ಹಾಗೂ ಮನಸ್ಸಿನ ಸಮತೋಲನ ವೃದ್ಧಿ

ಅಕ್ಷಯ ಕಾಲೇಜಿನಲ್ಲಿ ವಿಶ್ವಯೋಗ ದಿನಾಚರಣೆ Read More »

ಕೊಯಿಲ  ಕೆ. ಸಿ. ಫಾರಂ ಶಾಲೆಯಲ್ಲಿ ಯೋಗ ದಿನಾಚರಣೆ

ಕಡಬ: ಕೊಯಿಲ ಕೆ. ಸಿ. ಫಾರಂ ಶಾಲೆಯಲ್ಲಿ 11ನೇಯ ವಿಶ್ವಯೋಗ ದಿನವನ್ನು ಶನಿವಾರ ಆಚರಿಸಲಾಯಿತು. ಈ ಸಂದರ್ಭದಲ್ಲಿ ಪ್ರಭಾರ ಮುಖ್ಯಶಿಕ್ಷಕಿ ಅನುಪಮಾ ಅವರು ಮಕ್ಕಳಿಗೆ ‘ ವಿಶ್ವ ಯೋಗ’ ದಿನದ ಪ್ರತಿಜ್ಞೆಯ ಮೂಲಕ ಯೋಗ ದಿನಾಚರಣೆಯ ಸಂಕಲ್ಪ ಮಾಡಿಸಿದರು. ಕಾರ್ಯಕ್ರಮದಲ್ಲಿ ಯೋಗ ಸಂಯೋಜಕ ಲಂಕೇಶ್ ಮಕ್ಕಳಿಗೆ ಯೋಗದ ಬಗ್ಗೆ ಘೋಷ ವಾಕ್ಯದ ಮೂಲಕ ಯೋಗದ ಅರಿವು ಮೂಡಿಸಿದರು.. ನಂತರ ಯೋಗದ ಹಲವಾರು ಆಸನ ಗಳನ್ನು ಮಾಡಿಸಿ, ಯೋಗ ದಿನವನ್ನು ಅರ್ಥವತ್ತಾಗಿ ಆಚರಣೆ ಮಾಡಲಾಯಿತು. ಲ್ಲಿ ಎಲ್ಲಾ  ಶಾಲಾ

ಕೊಯಿಲ  ಕೆ. ಸಿ. ಫಾರಂ ಶಾಲೆಯಲ್ಲಿ ಯೋಗ ದಿನಾಚರಣೆ Read More »

ಪ್ರೇರಣಾ ಕಥೆ – ರಸ್ತೆ ಬದಿ ಮೊಬೈಲ್‌ ಕವರ್‌ ಮಾರುತ್ತಿದ್ದಾತ ನೀಟ್‌ ಪಾಸ್‌

ಯಶಸ್ಸಾಗಲು ಹಣವೇ ಬೇಕೆಂದಿಲ್ಲ, ಛಲ, ಪರಿಶ್ರಮ ಸಾಕು ಎನ್ನುವುದಕ್ಕೆ ಸಾಕ್ಷಿಯಾದ ರೋಹಿತ್‌ ಯಾವುದೇ ಕೋಚಿಂಗ್ ಪಡೆಯದೆ, ತನ್ನ ಕುಟುಂಬದ ಆರ್ಥಿಕ ಸಂಕಷ್ಟಕ್ಕೆ ಹೆಗಲಾಗುವ ಬಯಕೆಯಿಂದ ರಸ್ತೆ ಬದಿಯಲ್ಲಿ ಮೊಬೈಲ್ ಕವರ್ ಮಾರುತ್ತಿದ್ದ ಹುಡುಗ ರೋಹಿತ್ ಕುಮಾರ್ ಎಂಬ ಯುವಕನೊಬ್ಬ ಈ ಸಾಲಿನ ನೀಟ್ ಪರೀಕ್ಷೆ ಪಾಸು ಮಾಡಿ ದೇಶದ ಗಮನ ಸೆಳೆದಿದ್ದಾರೆ. ಯಾರು ಈ ರೋಹಿತ್? ಜಾರ್ಖಂಡ್‌ನ ಜಮ್ಶೆಡ್‌ಪುರದ 20 ವರ್ಷದ ಯುವಕ ರೋಹಿತ್ ಕುಮಾರ್. ಇವರ ನೀಟ್ ಪರೀಕ್ಷಾ ತಯಾರಿ ಯಾವುದೋ ಕೋಚಿಂಗ್ ಸೆಂಟರ್‌ನಿಂದ ಆರಂಭವಾಗಿದ್ದಲ್ಲ.

ಪ್ರೇರಣಾ ಕಥೆ – ರಸ್ತೆ ಬದಿ ಮೊಬೈಲ್‌ ಕವರ್‌ ಮಾರುತ್ತಿದ್ದಾತ ನೀಟ್‌ ಪಾಸ್‌ Read More »

ವಿವೇಕಾನಂದ ಔಷಧೀಯ ವಿಜ್ಞಾನ ಸಂಸ್ಥೆಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಘಟಕವಾದ ವಿವೇಕಾನಂದ ಔಷಧೀಯ ವಿಜ್ಞಾನ ಸಂಸ್ಥೆ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನವನ್ನು ಶನಿವಾರ ಕೇಶವ ಸಂಕಲ್ಪ ಆಡಿಟೋರಿಯಂನಲ್ಲಿ ಆಚರಿಸಲಾಯಿತು. ಒಂದು ಆರೋಗ್ಯ, ಒಂದು ಭೂಮಿ ಎಂಬ ಧ್ಯೇಯ ವಾಕ್ಯದೊಂದಿಗೆ ಕಾಲೇಜು ಆಡಳಿತ್ತ ಮಂಡಳಿ ಸಂಚಾಲಕ ಗೋವಿಂದ ಪ್ರಕಾಶ್‍ ಸಾಯ ಹಾಗೂ ಪ್ರಾಂಶುಪಾಲ ಡಾ.ಗುರುರಾಜ ಎಮ್.ಪಿ. ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ನೆದರ್ ಲ್ಯಾಂಡ್‍ ನ ಭಾರತಿೇಯ ರಾಯಭಾರಿ, ಖ್ಯಾತ ಯೋಗಗುರು ಯೋಗಾಚಾರ್ಯ ವಿಜಯ ಗಣೇಶ್‍ ಮಾತನಾಡಿ, ಯೋಗ ಅಭ್ಯಾಸ ನಮ್ಮ ಉತ್ತಮ ಮನಸ್ಸು

ವಿವೇಕಾನಂದ ಔಷಧೀಯ ವಿಜ್ಞಾನ ಸಂಸ್ಥೆಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ Read More »

ನರೇಂದ್ರ ಪ.ಪೂ.ಕಾಲೇಜಿನಲ್ಲಿ ವಿಶ್ವಯೋಗ ದಿನಾಚರಣೆ

ಪುತ್ತೂರು: ಯೋಗ ಭಾರತದ ಪ್ರಾಚೀನ ಸಂಪ್ರದಾಯದ ಅಮೂಲ್ಯ ಕೊಡುಗೆಯಾಗಿದೆ. ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವನ್ನು ಪಡೆಯಲು ಪ್ರಾಚೀನ ಮಾರ್ಗವಾಗಿದೆ. ’ಯೋಗ’ ಎಂಬ ಪದದ ಅರ್ಥ ಒಗ್ಗೂಡಿಸುವುದು. ಮನುಷ್ಯನು ತನ್ನ ಮನಸ್ಸು, ದೇಹ ಮತ್ತು ಆತ್ಮವನ್ನು ಒಟ್ಟಿಗೆ ತರಲು ಪ್ರಯತ್ನಿಸುವ ಪ್ರಕ್ರಿಯೆಯಾಗಿದೆ. ಹೀಗಾಗಿ ನಿರ್ಣಾಯಕ ಶಾಂತಿಯನ್ನು ಪಡೆಯುತ್ತದೆ ಎಂದು ಪುತ್ತೂರಿನ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಯೋಗ ಶಿಕ್ಷಕಿ ಶರಾವತೀ ರವಿನಾರಾಯಣ ಹೇಳಿದರು. ನರೇಂದ್ರ ಪ.ಪೂ.ಕಾಲೇಜಿನಲ್ಲಿ ನಡೆದ ವಿಶ್ವಯೋಗ ದಿನಾಚರಣೆಯಲ್ಲಿ ಅವರು ಯೋಗದ ಪ್ರಾಮುಖ್ಯತೆಯನ್ನು ತಿಳಿಸಿದರು. ವೇದಿಕೆಯಲ್ಲಿ

ನರೇಂದ್ರ ಪ.ಪೂ.ಕಾಲೇಜಿನಲ್ಲಿ ವಿಶ್ವಯೋಗ ದಿನಾಚರಣೆ Read More »

ಸಂತ ಫಿಲೋಮಿನಾ ಕಾಲೇಜಿನಲ್ಲಿ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಪುತ್ತೂರು: ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ಇದರ ಎನ್‌.ಸಿ.ಸಿ. ಆರ್ಮಿ ಮತ್ತು ನೇವಿ ಘಟಕಗಳು, ಎನ್‌.ಎಸ್‌.ಎಸ್‌. ಘಟಕಗಳು, ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಎನ್‌.ಸಿ.ಸಿ. ಘಟಕಗಳು ಮತ್ತು ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆಯ ಎನ್‌.ಸಿ.ಸಿ ಘಟಕಗಳ ಸಂಯುಕ್ತ ಆಶ್ರಯದಲ್ಲಿ “ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ” ಎಂಬ ಧ್ಯೇಯವಾಕ್ಯದೊಂದಿಗೆಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆಯ ಸಭಾಭವನದಲ್ಲಿ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಆಚರಿಸಲಾಯಿತು. ಮಾಯ್‌ ದೆ ದೇವುಸ್‌ ಶಿಕ್ಷಣ ಸಂಸ್ಥೆಗಳ ಸಂಚಾಲಕ ಅ.ವಂ. ಲಾರೆನ್ಸ್ ಮಸ್ಕರೇನ್ಹಸ್ ಉದ್ಘಾಟಿಸಿ ಮಾತನಾಡಿ,

ಸಂತ ಫಿಲೋಮಿನಾ ಕಾಲೇಜಿನಲ್ಲಿ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ Read More »

ಕುದ್ಮಾರು ಹಿ.ಪ್ರಾ.ಶಾಲೆಯಲ್ಲಿ ವಿದಾಯ ಕೂಟ, ಸನ್ಮಾನ ಮತ್ತು ಧ್ವಜ ಕಟ್ಟೆಯ ಲೋಕಾರ್ಪಣೆ

ಕುದ್ಮಾರು: ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಕುದ್ಮಾರು ಇಲ್ಲಿನ ಮುಖ್ಯ ಶಿಕ್ಷಕ ಕುಶಾಲಪ್ಪ ಬರೆಮೇಲು ಅವರು ವಯೋನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಅವರಿಗೆ ಸನ್ಮಾನ ಮತ್ತು ವಿದಾಯ ಕೂಟವನ್ನು ಜೂ.21 ಶನಿವಾರ ಏರ್ಪಡಿಸಲಾಗಿತ್ತು. ಸಮಾರಂಭದ ಅಧ್ಯಕ್ಷತೆಯನ್ನು ಬೆಳಂದೂರು ಗ್ರಾಮ ಪಂಚಾಯತ್’ನ ಅಧ್ಯಕ್ಷೆ ತೇಜಾಕ್ಷಿ ಕೊಡಂಗೆ ಇವರು ವಹಿಸಿದ್ದರು. ಉದ್ಘಾಟಕರಾಗಿ ಕುಶಾಲಪ್ಪ ಬಿ. ಇವರ ಗುರುಗಳಾದ ರಾಮಚಂದ್ರ ಗೌಡ ಪೆರಿಂಜೆ ಇವರು ಆಗಮಿಸಿದ್ದರು. ಅಭಿನಂದನೆ ಸಲ್ಲಿಕೆಗಾಗಿ ಉದ್ದನೆಯ ಸಾಲು, ಹಾರ-ಶಾಲುಗಳ ರಾಶಿಗಳು ಅಭಿನಂದನಾ ಭಾಷಣಗೈದ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್, ಪುತ್ತೂರು ಇದರ ಆಡಳಿತಾಧಿಕಾರಿ

ಕುದ್ಮಾರು ಹಿ.ಪ್ರಾ.ಶಾಲೆಯಲ್ಲಿ ವಿದಾಯ ಕೂಟ, ಸನ್ಮಾನ ಮತ್ತು ಧ್ವಜ ಕಟ್ಟೆಯ ಲೋಕಾರ್ಪಣೆ Read More »

ವೀರಮಂಗಲ ಪಿಎಂಶ್ರೀ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

ಪುತ್ತೂರು: ವೀರಮಂಗಲ ಪಿಎಂಶ್ರೀ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಶನಿವಾರ ಆಚರಿಸಲಾಯಿತು. ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ರವಿಚಂದ್ರ ದೀಪ ಬೆಳಗಿಸಿ ಉದ್ಘಾಟಿಸಿದರು. ಎಸ್ ಡಿ ಎಂ ಸಿ ಉಪಾಧ್ಯಕ್ಷೆ ನವ್ಯ, ಸದಸ್ಯರಾದ ಸುರೇಶ್ ಗಂಡಿ, ವಿನುತ ಅರ್ಚನಾ, ಚಂದ್ರಾವತಿ ಹರೀಶ್, ರಝಾಕ್, ಸಲೀಂ, ಫಾರೂಕ್ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ತಾರಾನಾಥ ಸವಣೂರು ಸ್ವಾಗತಿಸಿದರು. ಶಿಕ್ಷಕರಾದ ಹರಿಣಾಕ್ಷಿ ಎಂ., ಶೋಭಾ, ಶ್ರೀಲತಾ, ಕವಿತಾ, ಶಿಲ್ಪರಾಣಿ, ಸೌಮ್ಯ, ಸವಿತಾ, ಸಂಚನಾ, ಕರಾಟೆ ಶಿಕ್ಷಕ ನಾರಾಯಣ ಆಚಾರ್ಯ

ವೀರಮಂಗಲ ಪಿಎಂಶ್ರೀ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ Read More »

ನಿವೃತ್ತ ಮುಖ್ಯ ಗುರು ಕುಶಾಲಪ್ಪ ಬರೆಮೇಲು ಅವರಿಗೆ ನ್ಯೂಸ್ ಪುತ್ತೂರು ವತಿಯಿಂದ ಅಭಿನಂದನೆ

ಪುತ್ತೂರು: ಕುದ್ಮಾರು ಸ. ಹಿ. ಪ್ರಾ. ಶಾಲಾ ಮುಖ್ಯಗುರುಗಳಾಗಿದ್ದು ವಯೋನಿವೃತ್ತಿ ಹೊಂದಿದ ಬರೆಮೇಲು ಕುಶಾಲಪ್ಪರಿಗೆ ನ್ಯೂಸ್ ಪುತ್ತೂರು ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು. ನ್ಯೂಸ್ ಪುತ್ತೂರು ಇದರ ಅಧ್ಯಕ್ಷ ಸೀತಾರಾಮ ಕೇವಳ ಮತ್ತು ನಿರ್ದೇಶಕ ನಾಗೇಶ್ ಕೆಡೆಂಜಿಯವರು ಶಾಲು ಅರ್ಪಿಸಿ ಹೂ ಗುಚ್ಛ ನೀಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕುಶಾಲಪ್ಪರ ಪತ್ನಿ, ಬೊಬ್ಬೇಕೇರಿ ಶಾಲೆಯ ಸಹ ಶಿಕ್ಷಕಿ ಶ್ರೀಮತಿ ಗೀತಾ ಕುಮಾರಿ ಡಿ. ವೇದಿಕೆಯಲ್ಲಿದ್ದರು. ರಾಕೇಶ್ ರೈ ಕೆಡೆಂಜಿಯವರು ಶಾಲು ಹೊದಿಸಿ ಸನ್ಮಾನಿಸಿದರು.  ಕುದ್ಮಾರು ಶಾಲಾ ಮುಖ್ಯೋಪಾಧ್ಯಾಯಿನಿ

ನಿವೃತ್ತ ಮುಖ್ಯ ಗುರು ಕುಶಾಲಪ್ಪ ಬರೆಮೇಲು ಅವರಿಗೆ ನ್ಯೂಸ್ ಪುತ್ತೂರು ವತಿಯಿಂದ ಅಭಿನಂದನೆ Read More »

error: Content is protected !!
Scroll to Top