ತಾಲೂಕು ಮಟ್ಟದ ಛದ್ಮವೇಷ ಸ್ಪರ್ಧೆ: ವಿದ್ಯಾರಶ್ಮಿ ಯ ತನಯ್ ಡಿ.ಕೆ ಪ್ರಥಮ
ಪುತ್ತೂರು: ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯ ಛದ್ಮವೇಷ ಸ್ಪರ್ಧಾ ವಿಭಾಗದಲ್ಲಿ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ 1ನೇ ತರಗತಿಯ ತನಯ್ ಡಿ.ಕೆ. ಪ್ರಥಮ ಸ್ಥಾನಿಯಾಗಿದ್ದಾರೆ. ಇವರಿಗೆ ಸಂಸ್ಥೆಯ ಚಿತ್ರಕಲಾ ಶಿಕ್ಷಕ ಧನಂಜಯ ಮರ್ಕಂಜ ತರಬೇತಿ ನೀಡಿದ್ದರು. ವಿದ್ಯಾರ್ಥಿ ಮತ್ತು ಶಿಕ್ಷಕರನ್ನು ಸಂಚಾಲಕ ಸವಣೂರು ಸೀತಾರಾಮ ರೈ, ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ ಮತ್ತು ಪ್ರಾಂಶುಪಾಲ ಸೀತಾರಾಮ ಕೇವಳ ಅಭಿನಂದಿಸಿದ್ದಾರೆ. ತನಯ್ ಡಿ.ಕೆ. ಅವರು ಧನಂಜಯ ಮರ್ಕಂಜ ಮತ್ತು ಚೇತನಾ ಎಸ್. ಕೊಚ್ಚಿ ಮರ್ಕಂಜ – ಸುಳ್ಯ ದಂಪತಿ ಪುತ್ರ.
ತಾಲೂಕು ಮಟ್ಟದ ಛದ್ಮವೇಷ ಸ್ಪರ್ಧೆ: ವಿದ್ಯಾರಶ್ಮಿ ಯ ತನಯ್ ಡಿ.ಕೆ ಪ್ರಥಮ Read More »










