ಕ್ಯಾಂಪಸ್‌

ರಾಮನ ಪ್ರತಿಷ್ಠೆಯಂದು ಹಳ್ಳಿ ಹಳ್ಳಿಗಳಲ್ಲಿ ಸಂಭ್ರಮ ಪಡಬೇಕು | ಕಥನ ಶ್ರೀರಾಮ ಕಥಾವೈಭವ ಕಾರ್ಯಕ್ರಮ ಉದ್ಘಾಟಿಸಿ ಡಾ.ಕಲ್ಲಡ್ಕ ಪ್ರಭಾಕರ ಭಟ್

ಪುತ್ತೂರು: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದ್ದು, ರಾಮ ಪ್ರತಿಷ್ಠೆಯಂದು ಹಳ್ಳಿ ಹಳ್ಳಿಗಳಲ್ಲಿ ಸಂಭ್ರಮ ಪಡಬೇಕು. ರಾಮ ಪ್ರತಿಷ್ಠೆಯಿಂದ ಮನುಷ್ಯನ ಜತೆ ಜೀವ ಸಂಕುಲಕ್ಕೂ ಒಳಿತಾಗಲಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು. ಅವರು ತೆಂಕಿಲದಲ್ಲಿ ಶ್ರೀರಾಮ ಕಥಾವೈಭವ ಸಾಂಸ್ಕೃತಿಕ ಸಮಿತಿ ಮತ್ತು ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ವೈಭವದ ಅಯೋಧ್ಯೆಯ ಸಮಗ್ರ ಕಥನ ಶ್ರೀರಾಮ ಕಥಾವೈಭವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬೆಂಗಳೂರು ಎಂ.ಆರ್. ಜಿ. ಗ್ರೂಪ್ ಅಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ […]

ರಾಮನ ಪ್ರತಿಷ್ಠೆಯಂದು ಹಳ್ಳಿ ಹಳ್ಳಿಗಳಲ್ಲಿ ಸಂಭ್ರಮ ಪಡಬೇಕು | ಕಥನ ಶ್ರೀರಾಮ ಕಥಾವೈಭವ ಕಾರ್ಯಕ್ರಮ ಉದ್ಘಾಟಿಸಿ ಡಾ.ಕಲ್ಲಡ್ಕ ಪ್ರಭಾಕರ ಭಟ್ Read More »

ಮನುಷ್ಯನನ್ನು ದೇವರಾಗಿಸುವ ನೀತಿಯೇ ರಾಮನೀತಿ: ರಾಧಾಕೃಷ್ಣ ಕಲ್ಚಾರ್ | ಶ್ರೀರಾಮೋತ್ಸವ – ಶ್ರೀರಾಮ ಭಾವ ಪೂಜೆಯ ಉದ್ಘಾಟನಾ ಸಮಾರಂಭ

ಪುತ್ತೂರು: ನೈತಿಕತೆ ಬೇರೆ ಅಲ್ಲ, ಶ್ರೀರಾಮ ಬೇರೆ ಅಲ್ಲ. ರಾಮನ ವ್ಯಕ್ತಿತ್ವ ಎಲ್ಲರಿಗಿಂತ ವ್ಯತ್ಯಸ್ತವಾಗಿ, ಜನರಿಗೆ ಆದರ್ಶವಾಗಿ ಕಾಣಿಸಿಕೊಳ್ಳುತ್ತದೆ ಎಂದು ಯಕ್ಷಗಾನ ಅರ್ಥಧಾರಿ, ಪ್ರಾಧ್ಯಾಪಕ ರಾಧಾಕೃಷ್ಣ ಕಲ್ಚಾರ್ ಹೇಳಿದರು. ಅವರು ಶನಿವಾರ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯದ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದಲ್ಲಿ ನಡೆದ ಶ್ರೀರಾಮೋತ್ಸವ – ಶ್ರೀರಾಮಭಾವ ಪೂಜೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ವೈಚಾರಿಕತೆ ಎಂದರೆ ಸರಿಯಾಗಿ ಅಧ್ಯಯನ ಮಾಡಿ,

ಮನುಷ್ಯನನ್ನು ದೇವರಾಗಿಸುವ ನೀತಿಯೇ ರಾಮನೀತಿ: ರಾಧಾಕೃಷ್ಣ ಕಲ್ಚಾರ್ | ಶ್ರೀರಾಮೋತ್ಸವ – ಶ್ರೀರಾಮ ಭಾವ ಪೂಜೆಯ ಉದ್ಘಾಟನಾ ಸಮಾರಂಭ Read More »

ಅಂಬಿಕಾದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ

ಪುತ್ತೂರು: ಸನ್ಯಾಸಿಯಾದವನು ಸಮಾಜದಿಂದ ಬೇರೆ ಇರಬಾರದು. ಜನರ ಜೊತೆಗಿರಬೇಕು. ಜನರಿಗಾಗಿ ಸನ್ಯಾಸಿಯ ಜ್ಞಾನ, ಹಸಿದವರಿಗೆ ಅನ್ನ ಕೊಡುವುದೇ ನಿಜವಾದ ಧರ್ಮ ಎಂದು ಖ್ಯಾತವಾಗ್ಮಿ, ಅಂಕಣಕಾರ ಪ್ರಕಾಶ ಮಲ್ಪೆ ಹೇಳಿದರು. ಅವರು ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ನಡೆದ ವಿವೇಕಾನಂದ ಜಯಂತಿ ಆಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ನಟ್ಟೋಜ ಫೌಂಡೇಶನ್ ಟ್ರಸ್ಟಿನ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜರು ಮಾತನಾಡಿ,  ವಿವೇಕಾನಂದರು ಸ್ತ್ರೀಯರಿಗೆ ತುಂಬಾ ಗೌರವ ಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ನಾವೂ ಭಾರತೀಯತೆಯನ್ನು ಸಾಧಿಸಬೇಕಾಗಿದೆ. ಈ ಮೂಲಕ ಭಾರತೀಯತೆಯನ್ನು ಪ್ರಪಂಚದಲ್ಲೆಲ್ಲಾ

ಅಂಬಿಕಾದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ Read More »

ಜ.13ರಂದು ಕನ್ಯಾನ ದೇಲಂತಬೆಟ್ಟು ಶಾಲೆಯ ಅಮೃತ ಮಹೋತ್ಸವ

ವಿಟ್ಲ: ಕನ್ಯಾನ ಗ್ರಾಮದ ದೇಲಂತಬೆಟ್ಟು ಹಿ. ಪ್ರಾ. ಶಾಲೆಯ ಅಮೃತ ಮಹೋತ್ಸವ ‘ಅಮೃತ ಸಿಂಚನ’ ಕಾರ್ಯಕ್ರಮ ಜ.13ರಂದು ನಡೆಯಲಿದೆ.1948 ಜೂ.1ರಂದು ಆರಂಭವಾದ ಈ ಶಾಲೆಗೆ 75 ವರ್ಷ ತುಂಬಿದ್ದು, ಹಳೆ ವಿದ್ಯಾರ್ಥಿಗಳು, ಅಮೃತ ಮಹೋತ್ಸವ ಸಮಿತಿ ಮತ್ತು ಶಾಲಾಭಿವೃದ್ಧಿ ಸಮಿತಿ ಜತೆಗೂಡಿ ಅಮೃತ ಮಹೋತ್ಸವವವನ್ನು ಆಚರಿಸಲಿದೆ ಎಂದು ಸಮಿತಿಯ ಅಧ್ಯಕ್ಷ ಡಿ. ಶ್ರೀನಿವಾಸ್ ತಿಳಿಸಿದ್ದಾರೆ.ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದ ನಿವೃತ್ತ ಉಪನ್ಯಾಸಕ ಡಿ. ನಾರಾಯಣ ರಾವ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ಬಳಿಕ ಬಯಲು ನೃತ್ಯ, ಪ್ರತಿಭಾ ಪುರಸ್ಕಾರ, ಪುಟಾಣಿಗಳ ಹಬ್ಬ

ಜ.13ರಂದು ಕನ್ಯಾನ ದೇಲಂತಬೆಟ್ಟು ಶಾಲೆಯ ಅಮೃತ ಮಹೋತ್ಸವ Read More »

ಸಿ.ಎ ಗ್ರೂಪ್-2 ಪರೀಕ್ಷೆ ತೇರ್ಗಡೆಯಾದ ತೇಜಸ್ವಿನಿ

ಪುತ್ತೂರು: ಬಪ್ಪಳಿಗೆಯ ಅಂಬಿಕಾ ಪದವಿ ಮಹಾವಿದ್ಯಾಲಯದ ಅಂತಿಮ ಬಿ.ಕಾಂ ವಿದ್ಯಾರ್ಥಿನಿ ತೇಜಸ್ವಿನಿ ಅವರು ಭಾರತೀಯ ಲೆಕ್ಕ ಪರಿಶೋಧನಾ ಮಂಡಳಿಯು (ಐಸಿಎಐ) ನವೆಂಬರ್ 2023 ರಲ್ಲಿ ನಡೆಸಿದ ಸಿ.ಎ. ಇಂಟರ್ ಗ್ರೂಪ್ ಪರೀಕ್ಷೆಯ ಗ್ರೂಪ್ – 2 ವಿಭಾಗದ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಅಂತಿಮ ಹಂತಕ್ಕೆ ಆಯ್ಕೆಯಾಗಿದ್ದಾರೆ. ಅವರು ಅಂಬಿಕಾ ಸಂಸ್ಥೆಯಲ್ಲಿ ಸಿಎ ಪರೀಕ್ಷೆಗಳಿಗೆ ತರಬೇತಿ ಪಡೆಯುತ್ತಿದ್ದರು. ತೇಜಸ್ವಿನಿ ಅವರು ಬಂಟ್ವಾಳದ ನಾರಾಯಣ ಮೂಲ್ಯ ಹಾಗೂ ಹೇಮಾವತಿ ದಂಪತಿ ಪುತ್ರಿ.

ಸಿ.ಎ ಗ್ರೂಪ್-2 ಪರೀಕ್ಷೆ ತೇರ್ಗಡೆಯಾದ ತೇಜಸ್ವಿನಿ Read More »

ಏಷ್ಯಾ ಬುಕ್ ಆಫ್ ರೆಕಾರ್ಡ್’ಗೆ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಹೆಸರು

ಕಾಣಿಯೂರು: ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ 9ನೇ ತರಗತಿ ವಿದ್ಯಾರ್ಥಿನಿ ರಾಶಿ ಕೆ.ಸಿ.  ಅವರ ಹೆಸರು ಏಷ್ಯಾ ಬುಕ್‌ ಆಫ್‌ ರೆಕಾರ್ಡ್‍ ನಲ್ಲಿ ದಾಖಲಾಗಿದೆ. ರಾಷ್ಟ್ರಗೀತೆಯನ್ನು 1 ಗಂಟೆ 40 ನಿಮಿಷ, 26 ಸೆಕೆಂಡ್ ನಲ್ಲಿ ಗರಿಷ್ಠ 116 ಬಾರಿ ನಿರಂತರವಾಗಿ ಹಾಡುವ ಮೂಲಕ ಈ ಸಾಧನೆ ಮಾಡಿದ್ದಾರೆ. ರಾಶಿ ಈ ಹಿಂದೆ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಮತ್ತು ವರ್ಲ್ಡ್ ರೆಕಾರ್ಡ್ಸ್ ಯುನಿವರ್ಸಿಟಿ ಸಾಧನೆಯನ್ನು ಮಾಡಿರುತ್ತಾರೆ. ಸಂಗೀತ, ನೃತ್ಯ, ಭಾಷಣ, ಏಕಪಾತ್ರಾಭಿನಯ, ನಾಟಕ, ಯೋಗ, ಕಲಿಕೆಯಲ್ಲಿಯೂ ಪ್ರತಿಭಾನ್ವಿತ

ಏಷ್ಯಾ ಬುಕ್ ಆಫ್ ರೆಕಾರ್ಡ್’ಗೆ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಹೆಸರು Read More »

ಸಿಇಟಿ ಪರೀಕ್ಷಾ ದಿನಾಂಕದಲ್ಲಿ ಬದಲಾವಣೆ

ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ದಿನಾಂಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಎರಡು ದಿನಗಳ ಮಟ್ಟಿಗೆ ಹಿಂದೂಡಿದೆ. ಈ ಹಿಂದೆ ಏ.20 ಹಾಗೂ 21 ರಂದು ಪರೀಕ್ಷೆ ದಿನಾಂಕ ನಿಗದಿಯಾಗಿತ್ತು. ಇದೀಗ ಏ.18 ಮತ್ತು 19ರಂದು ಪರೀಕ್ಷೆಗಳು ನಡೆಯಲಿವೆ ಎಂದು ಪ್ರಕಟಣೆ ನೀಡಿದೆ. ಏ.21 ರಂದು ಎನ್‍ ಡಿಎ ಪರೀಕ್ಷೆ ನಡೆಯಲಿರುವ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ತಿಳಿಸಿದ್ದಾರೆ. ವೃತ್ತಿಪರ ಕೋರ್ಸುಗಳಿಗೆ ಸೇರಲು ಬಯಸುವ ಅಭ್ಯರ್ಥಿಗಳು ಸಿಇಟಿ ಪರೀಕ್ಷೆಗೆ ಜ.10 ರಿಂದ

ಸಿಇಟಿ ಪರೀಕ್ಷಾ ದಿನಾಂಕದಲ್ಲಿ ಬದಲಾವಣೆ Read More »

ಜ. 12ರಂದು ವಿವೇಕಾನಂದ ಜಯಂತಿ ಆಚರಣೆ, ಬೊಂಬೆಯಾಟ | ಜ. 13ರಿಂದ ಶ್ರೀರಾಮ ಪ್ರಾಣ ಪ್ರತಿಷ್ಠಾ ಸಪ್ತಾಹ ಸರಣಿ ವಿಚಾರ ಸಂಕಿರಣ

ಪುತ್ತೂರು: ನೆಹರುನಗರ ವಿವೇಕಾನಂದ ಕಾಲೇಜಿನ ಆವರಣದ ವಿವೇಕಾನಂದ ಬಯಲು ಮಂದಿರದಲ್ಲಿ ಜನವರಿ 12ರಂದು ವಿವೇಕಾನಂದ ಜಯಂತಿ ನಡೆಯಲಿದೆ. ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ಪ್ರಯುಕ್ತ ಶ್ರೀ ರಾಮ ಪ್ರಾಣ ಪ್ರತಿಷ್ಠಾ ಸಪ್ತಾಹ ವಿಚಾರ ಸಂಕಿರಣ ಜ. 13ರಿಂದ 22ರವರೆಗೆ ನಡೆಯಲಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ. ಕೃಷ್ಣ ಭಟ್ ತಿಳಿಸಿದರು. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ ಎಂಬ ಪರಿಕಲ್ಪನೆಯಲ್ಲಿ ವಿವೇಕಾನಂದ ಜಯಂತಿ ನಡೆಯಲಿದೆ. ಸಮಾರಂಭದ ಅಧ್ಯಕ್ಷತೆಯನ್ನು

ಜ. 12ರಂದು ವಿವೇಕಾನಂದ ಜಯಂತಿ ಆಚರಣೆ, ಬೊಂಬೆಯಾಟ | ಜ. 13ರಿಂದ ಶ್ರೀರಾಮ ಪ್ರಾಣ ಪ್ರತಿಷ್ಠಾ ಸಪ್ತಾಹ ಸರಣಿ ವಿಚಾರ ಸಂಕಿರಣ Read More »

ಸಿಎ ಅಂತಿಮ ಪರೀಕ್ಷೆಯಲ್ಲಿ ಕೃತಿಕಾ ಎ.ಎಸ್‍. ಉತ್ತೀರ್ಣ

ಪುತ್ತೂರು: ನವೆಂಬರ್ ತಿಂಗಳಲ್ಲಿ ನಡೆದ ಚಾರ್ಟರ್ಡ್ ಎಕೌಂಟೆಂಟ್ (ಸಿ.ಎ.) ಅಂತಿಮ ಪರೀಕ್ಷೆಯಲ್ಲಿ ಕೃತಿಕಾ ಎ.ಎಸ್‍. ಉತ್ತೀರ್ಣರಾಗಿದ್ದಾರೆ. ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿರುವ ಅವರು ಪುತ್ತೂರಿನ ಸಿಎ ರಾಮಭಟ್ ಹಾಗೂ ಸಿಎ ಅರವಿಂದ ಕೃಷ್ಣ ಅವರ ಮಾರ್ಗದರ್ಶನದಲ್ಲಿ ಸಿಎ ತರಬೇತಿ ಪಡೆದಿದ್ದರು. ಕೃತಿಕಾ ಎ.ಎಸ್‍. ಬಿಎಸ್‍ಎನ್‍ಎಲ್ ನಿವೃತ್ತ ಉಪಮಂಡಲ ಅಧಿಕಾರಿ ಎ.ಸೀತಾರಾಮ ಗೌಡ ಹಾಗೂ ಚಂದ್ರಾವತಿ ದಂಪತಿ ಪುತ್ರಿ.

ಸಿಎ ಅಂತಿಮ ಪರೀಕ್ಷೆಯಲ್ಲಿ ಕೃತಿಕಾ ಎ.ಎಸ್‍. ಉತ್ತೀರ್ಣ Read More »

ಜೀವನ ಕೌಶಲ್ಯವನ್ನು ಕಲಿಸುವ ಪ್ರತಿಭಾ ಪುರಸ್ಕಾರ ಮೈಲುಗಲ್ಲಾಗಿ ನಿಲ್ಲಲಿ | ನರಿಮೊಗರು ಸರಸ್ವತಿ ವಿದ್ಯಾ ಮಂದಿರದ ‘ಪ್ರತಿಭಾ ಸರಸ್ವತೀ’ ಕಾರ್ಯಕ್ರಮದಲ್ಲಿ ಮಾಲತಿ ಡಿ.

ಪುತ್ತೂರು: ನರಿಮೊಗರು ಕೊಡಂಕಿರಿ ಫೌಂಡೇಶನ್ ಪ್ರಾಯೋಜಿತ ಸರಸ್ವತಿ ವಿದ್ಯಾ ಮಂದಿರದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವರ್ಧಂತ್ಯುತ್ಸವ -2024 ‘ಪ್ರತಿಭಾ ಸರಸ್ವತೀ’ ಕಾರ್ಯಕ್ರಮ ಶನಿವಾರ ಸಂಜೆ ನಡೆಯಿತು. ಮುಖ್ಯ ಅತಿಥಿಯಾಗಿ ಅಂಬಿಕಾ ಸಿಬಿಎಸ್‍ಇ ವಿದ್ಯಾಲಯದ ಪ್ರಾಂಶುಪಾಲೆ ಮಾಲತಿ ಡಿ. ಸಮಾರಂಭ ಉದ್ಘಾಟಿಸಿ ಮಾತನಾಡಿ, ಯಾವುದೇ ಮಗುವಿನ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರೋತ್ಸಾಹ ನೀಡಬೇಕು. ಮಗುವಿನಲ್ಲಿ ಇಲ್ಲದೆ ಇರುವ ಕಲೆಯ ಬಗ್ಗೆ ಒತ್ತಡ ಹಾಗಬಾರದು. ಈ ನಿಟ್ಟಿನಲ್ಲಿ ಪ್ರತಿಭಾ ವೇದಿಕೆ ಮಕ್ಕಳಲ್ಲಿನ ಪ್ರತಿಭೆಯನ್ನು ತೋರ್ಪಡಿಸಲು ಸಹಕಾರಿಯಾಗಬಲ್ಲದು. ಇಂತಹಾ ವೇದಿಕೆಯಿಂದ ಮಕ್ಕಳು ಇನ್ನೊಬ್ಬರ

ಜೀವನ ಕೌಶಲ್ಯವನ್ನು ಕಲಿಸುವ ಪ್ರತಿಭಾ ಪುರಸ್ಕಾರ ಮೈಲುಗಲ್ಲಾಗಿ ನಿಲ್ಲಲಿ | ನರಿಮೊಗರು ಸರಸ್ವತಿ ವಿದ್ಯಾ ಮಂದಿರದ ‘ಪ್ರತಿಭಾ ಸರಸ್ವತೀ’ ಕಾರ್ಯಕ್ರಮದಲ್ಲಿ ಮಾಲತಿ ಡಿ. Read More »

error: Content is protected !!
Scroll to Top