ಕ್ಯಾಂಪಸ್‌

ಪುತ್ತೂರು: ಪುತ್ತೂರು ಮಹಿಳೆಯರ ತ್ರೋಬಾಲ್ ತಂಡ ರಾಜ್ಯ ಮಟ್ಟಕ್ಕೆ ಆಯ್ಕೆ

ಪುತ್ತೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನಡೆದ ದಸರಾ ಕ್ರೀಡಾಕೂಟದಲ್ಲಿ ಪುತ್ತೂರು ಮಹಿಳೆಯರ ತ್ರೋಬಾಲ್ ತಂಡ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ. ಮಂಗಳೂರು ಮಂಗಳಾ ಕ್ರೀಡಾಂಗಣದಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪಂದ್ಯಾಟವನ್ನು ತಂಡದ ನಾಯಕಿಯಾಗಿ ಸೈಂಟ್ ವಿಕ್ಟರ್ ಫ್ರೌಡಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಹಾಗೂ ಅಂತರಾಷ್ಟ್ರೀಯ ಕ್ರೀಡಾಪಟು ಪೂರ್ಣಿಮಾ, ತನುಷಾ, ಅನುಶ್ರೀ, ಭವ್ಯಾ , ಶ್ರೀನಿತಾ, ಪ್ರತಿಜ್ಞಾ, ಕೃತಿ, ಅನಿಷಾ, ವೈಷ್ಣವಿ, ಸುನಿತಾ, ಅನುಷಾ, ಭಾವನ […]

ಪುತ್ತೂರು: ಪುತ್ತೂರು ಮಹಿಳೆಯರ ತ್ರೋಬಾಲ್ ತಂಡ ರಾಜ್ಯ ಮಟ್ಟಕ್ಕೆ ಆಯ್ಕೆ Read More »

ಕುದ್ಮಾರು ಶಾಲೆಗೆ ಬೋಳಾಸ್‌ ಸಂಸ್ಥೆಯಿಂದ ಬೋರ್‌ವೆಲ್‌ – ನೀರಿನ ಟ್ಯಾಂಕ್‌ ಕೊಡುಗೆ | 4 ಲಕ್ಷ ರೂ. ವೆಚ್ಚದ ಯೋಜನೆಗೆ ಅನುದಾನ

ಪುತ್ತೂರು : ಗೇರು ಹಾಗೂ ಡ್ರೈಫ್ರೂಟ್ಸ್‌ ಉದ್ಯಮದಲ್ಲಿ ಪ್ರಸಿದ್ಧಿ ಪಡೆದಿರುವ ಬೋಳಾಸ್‌ ಸಂಸ್ಥೆಯು ಕುದ್ಮಾರು ಹಿರಿಯ ಪ್ರಾಥಮಿಕ ಶಾಲೆಗೆ ಬೋರ್‌ವೆಲ್‌ ಹಾಗೂ ನೀರಿನ ಟ್ಯಾಂಕ್‌ ಅನ್ನು ಕೊಡುಗೆಯಾಗಿ ನೀಡಿದೆ. ಪತ್ರಕರ್ತ, ಕುದ್ಮಾರು ಶಾಲಾ ಹಿರಿಯ ವಿದ್ಯಾರ್ಥಿ ರಾಮಚಂದ್ರ ಬರೆಪ್ಪಾಡಿ ಅವರ ಮನವಿ ಮೇರೆಗೆ ಬೋಳಾಸ್‌ ಆಗ್ರೋ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯ ನಿರ್ದೇಶಕ ದಾಮೋದರ್‌ ಕಾಮತ್‌ ಅವರು ಬೋರ್‌ವೆಲ್‌ ಹಾಗೂ ನೀರಿನ ಟ್ಯಾಂಕ್‌ ನಿರ್ಮಾಣಕ್ಕಾಗಿ ಒಟ್ಟು 4 ಲಕ್ಷ ರೂ. ಅನುದಾನ ಒದಗಿಸಿರುತ್ತಾರೆ. ಬೋಳಾಸ್‌ ಬಗ್ಗೆ 1958ರಲ್ಲಿ ಕಾರ್ಕಳದಲ್ಲಿ

ಕುದ್ಮಾರು ಶಾಲೆಗೆ ಬೋಳಾಸ್‌ ಸಂಸ್ಥೆಯಿಂದ ಬೋರ್‌ವೆಲ್‌ – ನೀರಿನ ಟ್ಯಾಂಕ್‌ ಕೊಡುಗೆ | 4 ಲಕ್ಷ ರೂ. ವೆಚ್ಚದ ಯೋಜನೆಗೆ ಅನುದಾನ Read More »

ವಿವೇಕ ವಿಜ್ಞಾನ 2023 ಕಾರ್ಯಾಗಾರ ಸಮಾರೋಪ | ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕಲಿಕೆ ಹೆಚ್ಚು ಪ್ರಯೋಜನಕಾರಿ: ನವೀನ್ ಸ್ಟೀಫನ್ ವೇಗಸ್

ಪುತ್ತೂರು: ವಿಜ್ಞಾನದ ಕಲಿಕೆಯಲ್ಲಿ ಅನ್ವಯ ಮತ್ತು ಸಾಂಪ್ರಾದಾಯಿಕ ಪದ್ಧತಿಯ ಕಲಿಕೆಯನ್ನು ಅಳವಡಿಸಿಕೊಂಡರೆ ವಿಜ್ಞಾನದ ವಿಷಯವೂ ಕೂಡಾ ಆಸಕ್ತಿದಾಯಕವಾಗಬಲ್ಲುದು. ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕಲಿಕೆ ಹೆಚ್ಚು ಪ್ರಯೋಜನಕಾರಿ ಎಂಬುದಕ್ಕೆ ಅಧ್ಯಾಪಕರ ಕಾರ್ಯಾಗಾರ ‘ವಿವೇಕ-ವಿಜ್ಞಾನ 2023’ ಸಾಕ್ಷಿಯಾಗಿದೆ ಎಂದು ಪುತ್ತೂರು ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ನವೀನ್ ಸ್ಟೀಫನ್ ವೇಗಸ್ ಹೇಳಿದರು. ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪ್ರೌಢಶಾಲಾ ವಿಜ್ಞಾನ ಹಾಗೂ ಗಣಿತ ಅಧ್ಯಾಪಕರ ಕಾರ್ಯಾಗಾರ ‘ವಿವೇಕ-ವಿಜ್ಞಾನ 2023’ ಕಾರ್ಯಕ್ರಮದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಶಿಕ್ಷಕ ವೃತ್ತಿ

ವಿವೇಕ ವಿಜ್ಞಾನ 2023 ಕಾರ್ಯಾಗಾರ ಸಮಾರೋಪ | ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕಲಿಕೆ ಹೆಚ್ಚು ಪ್ರಯೋಜನಕಾರಿ: ನವೀನ್ ಸ್ಟೀಫನ್ ವೇಗಸ್ Read More »

ಅಕ್ಷಯ ಕಾಲೇಜಿನಲ್ಲಿ ಫ್ಯಾಷನ್ ಡಿಸೈನ್ ಸಂಘ ಉದ್ಘಾಟನೆ

ಪುತ್ತೂರು: ಅಕ್ಷಯ ಎಜುಕೇಷನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಫ್ಯಾಷನ್ ಡಿಸೈನ್ ವಿಭಾಗ ಮತ್ತು ಐಕ್ಯುಎಸಿ ಸಹಯೋಗದೊಂದಿಗೆ FACERA ಫ್ಯಾಷನ್ ಡಿಸೈನ್ ಅಸೋಸಿಯೇಷನ್ ಉದ್ಘಾಟನಾ ಸಮಾರಂಭ ನಡೆಯಿತು. ಮಂಗಳೂರು ಪಾಥ್ ವೇ ಎಂಟರ್’ಪ್ರೈಸಸ್ ಮಾಲಕ ದೀಪಕ್ ಗಂಗೂಲಿ ಅವರು FACERA ಫ್ಯಾಷನ್ ಡಿಸೈನ್ ಸಂಘವನ್ನು ಉದ್ಘಾಟಿಸಿ, ಪ್ರಸ್ತುತ ಕಾಲಘಟ್ಟದಲ್ಲಿ ಫ್ಯಾಷನ್ ಎಂಬುದು ಅತೀ ಮುಖ್ಯ. ಅದೇ ರೀತಿ ಈ ಕ್ಷೇತ್ರದಲ್ಲಿ ಉತ್ತಮ ಭವಿಷ್ಯ ಇದೆ ಎಂದು ಶುಭ ಹಾರೈಸಿದರು. Vanzova Facito ಸೀಸನ್ – 1 ಫ್ಯಾಷನ್ ಶೋವನ್ನು

ಅಕ್ಷಯ ಕಾಲೇಜಿನಲ್ಲಿ ಫ್ಯಾಷನ್ ಡಿಸೈನ್ ಸಂಘ ಉದ್ಘಾಟನೆ Read More »

ಅಕ್ಷಯ ಕಾಲೇಜಿನಲ್ಲಿ ‘ಏಕ್ ತಾರೀಕ್, ಏಕ್ ಘಂಟಾ’ ಸ್ವಚ್ಛತಾ ಅಭಿಯಾನ

ಪುತ್ತೂರು: ಇಲ್ಲಿನ ಸಂಪ್ಯ ಅಕ್ಷಯ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ  ಏಕ್ ತಾರಿಕ್, ಏಕ್ ಘಂಟಾ ಎಂಬ ಶಿರೋನಾಮೆಯಲ್ಲಿ ಸ್ವಚ್ಛತಾ ಅಭಿಯಾನ ಸಂಪ್ಯ ವಠಾರದಲ್ಲಿ ನಡೆಯಿತು. ಕಾಲೇಜಿನ ಅಧ್ಯಕ್ಷ ಜಯಂತ್ ನಡುಬೈಲು ಅವರು ಅಭಿಯಾನಕ್ಕೆ ಚಾಲನೆ ನೀಡಿದರು. ಕಾಲೇಜಿನ ಪ್ರಾಂಶುಪಾಲ ಸಂಪತ್ ಪಕ್ಕಳ, ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯಕ್ರಮಾಧಿಕಾರಿಗಳಾದ ಕಿಶೋರ್ ರೈ, ಮೇಘಶ್ರೀ, ಕಾಲೇಜಿನ ಉಪನ್ಯಾಸಕ ವೃಂದ, ಸ್ವಯಂ ಸೇವಕ ಸೇವಕಿಯರು ಈ ಅಭಿಯಾನದಲ್ಲಿ ಭಾಗವಹಿಸಿದ್ದರು.

ಅಕ್ಷಯ ಕಾಲೇಜಿನಲ್ಲಿ ‘ಏಕ್ ತಾರೀಕ್, ಏಕ್ ಘಂಟಾ’ ಸ್ವಚ್ಛತಾ ಅಭಿಯಾನ Read More »

ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಪರಿಮಳಾ ಎನ್.ಎಂ.ಗೆ ಸನ್ಮಾನ

ಸವಣೂರು: ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದಲ್ಲಿ ನಡೆದ 149ನೇ ಗಾಂಧೀ ಜಯಂತಿ ಆಚರಣೆ ಸಂದರ್ಭ ಪರಿಮಳಾ ಎನ್.ಎಂ. ಅವರನ್ನು ಸನ್ಮಾನಿಸಲಾಯಿತು. ಕನ್ನಡ ಭಾಷಾ ಶಿಕ್ಷಕಿಯಾಗಿರುವ ಪರಿಮಳಾ ಎನ್.ಎಂ. ಅವರು ಇತ್ತೀಚೆಗೆ ಬೆಳಗಾವಿಯ ಕನ್ನಡ ದೈನಿಕ ಸಂಸ್ಥೆಯಿಂದ ಸಾವಿತ್ರಿ ಬಾಯಿ ಫುಲೆ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದ ಹಿನ್ನೆಲೆಯಲ್ಲಿ ಅವರಿಗೆ ಸನ್ಮಾನ ಮಾಡಲಾಯಿತು. ಸನ್ಮಾನ ನೆರವೇರಿಸಿ ಮಾತನಾಡಿದ ಶಾಲಾ ಸಂಚಾಲಕ ಸವಣೂರು ಸೀತಾರಾಮ ರೈ, ಪರಿಮಳಾ ಅವರ ಶ್ರಮದ ಪರಿಣಾಮವಾಗಿ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಬಂದಿದೆ. ಈ ಸನ್ಮಾನದಿಂದ ನಮ್ಮ ಶಿಕ್ಷಕಿಯವರಿಗೆ

ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಪರಿಮಳಾ ಎನ್.ಎಂ.ಗೆ ಸನ್ಮಾನ Read More »

ಪರ್ಪುಂಜ ಸ.ಹಿ.ಪ್ರಾ. ಶಾಲೆಯಲ್ಲಿ ವಿವೇಕ ಕೊಠಡಿ ಉದ್ಘಾಟನೆ, ಸನ್ಮಾನ | ಶಾಲೆಗಳನ್ನು ವಿಲೀನಗೊಳಿಸುವುದರಿಂದ ಗುಣಮಟ್ಟದ ಶಿಕ್ಷಣ ಸಾಧ್ಯ: ಅಶೋಕ್ ರೈ

ಪುತ್ತೂರು: ತಮ್ಮ ಪ್ರತಿಷ್ಠೆಗೋಸ್ಕರ ಅಲ್ಲೊಂದು ಶಾಲೆ, ಇಲ್ಲೊಂದು ಶಾಲೆ ಕಟ್ಟುವುದರಿಂದ ಯಾವುದೇ ಪ್ರಯೋಜನವಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕೊಡಲು ಸಾಧ್ಯವಿಲ್ಲ. ಇರುವ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಕೆಲಸ ಆಗಬೇಕಾಗಿದೆ. ಆದಕ್ಕಾಗಿ ಈಗ ಇರುವ ಶಾಲೆಗಳನ್ನು ವಿಲೀನ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಸರಕಾರ ಕೂಡ ಚಿಂತನೆ ಮಾಡುತ್ತಿದೆ. ಇದಲ್ಲದೆ ವಿದ್ಯಾರ್ಥಿಗಳನ್ನು ಸರಕಾರಿ ಶಾಲೆಗಳಿಗೆ ಕರೆದುಕೊಂಡು ಹೋಗಲು ಬಸ್ಸಿನ ವ್ಯವಸ್ಥೆಯನ್ನು ಮಾಡುವ ಬಗ್ಗೆಯೂ ಸರಕಾರ ಚಿಂತನೆ ನಡೆಸಿದೆ ಎಂದು ಶಾಸಕ ಅಶೋಕ್

ಪರ್ಪುಂಜ ಸ.ಹಿ.ಪ್ರಾ. ಶಾಲೆಯಲ್ಲಿ ವಿವೇಕ ಕೊಠಡಿ ಉದ್ಘಾಟನೆ, ಸನ್ಮಾನ | ಶಾಲೆಗಳನ್ನು ವಿಲೀನಗೊಳಿಸುವುದರಿಂದ ಗುಣಮಟ್ಟದ ಶಿಕ್ಷಣ ಸಾಧ್ಯ: ಅಶೋಕ್ ರೈ Read More »

ಮೌಲ್ಯಗಳನ್ನು ನಿರ್ಮಾಣ ಮಾಡುವ ಕಾರ್ಯ ಆಗಬೇಕಿದೆ : ಚಿದಾನಂದ ಬೈಲಾಡಿ | ಅಂಬಿಕಾ ಕಾಲೇಜಿನ ಎನ್.ಎಸ್.ಎಸ್. ತಂಡದಿಂದ ನಗರದಲ್ಲಿ ಜಾಗೃತಿ ಅರಿವು

ಪುತ್ತೂರು: ನಾವಿಂದು ಚಂದ್ರಲೋಕಕ್ಕೂ ಅಡಿಯಿಡುವ ಯೋಗ್ಯತೆಯನ್ನು ಸಂಪಾದಿಸಿದ್ದೇವೆ. ಆದರೆ ಪಕ್ಕದ ಮನೆಗೆ ಹೋಗಲಾರದಷ್ಟು ಸಮಯಹೀನರಾಗಿದ್ದೇವೆ. ಮನುಷ್ಯನ ಮೌಲ್ಯಗಳು ಹಂತಹoತವಾಗಿ ಕುಸಿಯುತ್ತಿವೆ. ಆದ್ದರಿಂದ ನಿರ್ನಾಮವಾಗುತ್ತಿರುವ ಮೌಲ್ಯಗಳನ್ನು ನಿರ್ಮಾಣ ಮಾಡುವ ಕಾರ್ಯ ಆಗಬೇಕಿದೆ. ನಮ್ಮ ಸುತ್ತಲಿನ ಪರಿಸರವನ್ನು ಚೆನ್ನಾಗಿ ರೂಪಿಸುವ ಗುಣವನ್ನು ಬೆಳೆಸಿಕೊಳ್ಳಬೇಕಿದೆ ಎಂದು ಹಿರಿಯ ನ್ಯಾಯವಾದಿ ಚಿದಾನಂದ ಬೈಲಾಡಿ ಹೇಳಿದರು. ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ಆಯೋಜಿಸಲಾದ ಸ್ವಚ್ಚ ಭಾರತ – ಜಾಗೃತಿ ಅರಿವು ಕಾರ್ಯಕ್ರಮವನ್ನು ಶ್ರೀ ಮಹಾಲಿಂಗೇಶ್ವರ

ಮೌಲ್ಯಗಳನ್ನು ನಿರ್ಮಾಣ ಮಾಡುವ ಕಾರ್ಯ ಆಗಬೇಕಿದೆ : ಚಿದಾನಂದ ಬೈಲಾಡಿ | ಅಂಬಿಕಾ ಕಾಲೇಜಿನ ಎನ್.ಎಸ್.ಎಸ್. ತಂಡದಿಂದ ನಗರದಲ್ಲಿ ಜಾಗೃತಿ ಅರಿವು Read More »

ಟ್ರಿಪಲ್ ಜಂಪ್: ವಿವೇಕಾನಂದ ಪದವಿಪೂರ್ವ ಕಾಲೇಜಿನ ನಿಹಾಲ್ ರಾಜ್‌ಗೆ ಬೆಳ್ಳಿ ಪದಕ

ಪುತ್ತೂರು: ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದ ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ನಿಹಾಲ್ ರಾಜ್ ಬೆಳ್ಳಿಯ ಪದಕ ಪಡೆದುಕೊಂಡಿದ್ದಾರೆ. ಇವರು ಪುತ್ತೂರು ತಾಲೂಕನ್ನು ಪ್ರತಿನಿಧಿಸಿ, ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ನಿಹಾಲ್ ರಾಜ್ ಅವರು ಕಬಕದ ಬಿ. ನಾಗರಾಜ್ ಹೆಗ್ಡೆ ಮತ್ತು ಭಾನುಮತಿ ದಂಪತಿ ಪುತ್ರ. ನಿಹಾಲ್ ರಾಜ್ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.

ಟ್ರಿಪಲ್ ಜಂಪ್: ವಿವೇಕಾನಂದ ಪದವಿಪೂರ್ವ ಕಾಲೇಜಿನ ನಿಹಾಲ್ ರಾಜ್‌ಗೆ ಬೆಳ್ಳಿ ಪದಕ Read More »

ಎನ್ ಎಸ್ ಎಸ್ ಸೇವಾಸಂಗಮದಿಂದ ಕಾವು ಸರಕಾರಿ ಶಾಲೆಗೆ ಸ್ಮಾರ್ಟ್ ಕ್ಲಾಸ್ ಕೊಡುಗೆ

ಪುತ್ತೂರು: ಸುಳ್ಯ ಕುರಂಜಿ ವೆಂಕಟರಮಣ ಗೌಡ ಪಾಲಿಟೆಕ್ನಿಕ್ ನ ರಾಷ್ಟ್ರೀಯ ಸೇವಾ ಯೋಜನೆಯ ಹಿರಿಯ ವಿದ್ಯಾರ್ಥಿಗಳ ಸಂಘ ಎನ್.ಎಸ್.ಎಸ್.ಸೇವಾ ಸಂಗಮ ಟ್ರಸ್ಟ್ ವತಿಯಿಂದ ಕಾವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸ್ಮಾರ್ಟ್ ಕ್ಲಾಸ್ ಕೊಡುಗೆ ನೀಡಲಾಯಿತು. ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ಕಾವು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ಮಾಡಿದರು. ನಿವೃತ್ತ ಜಿಲ್ಲಾ ನ್ಯಾಯಾಧೀಶ

ಎನ್ ಎಸ್ ಎಸ್ ಸೇವಾಸಂಗಮದಿಂದ ಕಾವು ಸರಕಾರಿ ಶಾಲೆಗೆ ಸ್ಮಾರ್ಟ್ ಕ್ಲಾಸ್ ಕೊಡುಗೆ Read More »

error: Content is protected !!
Scroll to Top