ಮಾಧ್ಯಮದಲ್ಲಿ ಶುದ್ಧ ಕನ್ನಡ ಬಳಕೆ ಹಾಗೂ ರಾಷ್ಟ್ರದ ಬಗೆಗಿನ ಕಾರ್ಯಕ್ರಮಕ್ಕಾಗಿ ಒತ್ತಾಯ | ಅಂಬಿಕಾ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಪತ್ರಿಕಾಗೋಷ್ಠಿಯಲ್ಲಿ ಆಗ್ರಹ
ಪುತ್ತೂರು: ಖಾಸಗಿ ದೂರದರ್ಶನ ಮಾಧ್ಯಮ ಹಾಗೂ ಬಾನುಲಿ ಕೇಂದ್ರಗಳಲ್ಲಿ ಶುದ್ಧ ಕನ್ನಡವನ್ನೇ ಬಳಸುವಂತೆ ಹಾಗೂ ಎಲ್ಲಾ ದೂರದರ್ಶನ ವಾಹಿನಿಗಳಲ್ಲಿ ಕಡ್ಡಾಯವಾಗಿ ದಿನಕ್ಕೆ ಒಂದು ತಾಸಿನಷ್ಟು ಹೊತ್ತು ದೇಶದ ಉತ್ಕೃಷ್ಟತೆಯ ಬಗ್ಗೆ ಕಾರ್ಯಕ್ರಮ ನೀಡುವಂತೆ ಸರಕಾರ ಸೂಕ್ತ ನಿರ್ದೇಶ ನೀಡುವಂತೆ ಬಪ್ಪಳಿಗೆ ಅಂಬಿಕಾ ಮಹಾವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ನವನೀತ್ ತಿಳಿಸಿದ್ದಾರೆ. ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,, ಈ ಕುರಿತು ಪುತ್ತೂರು ಶಾಸಕರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಗುವುದು ಎಂದು ಅವರು ತಿಳಿಸಿದರು. ಕನ್ನಡದ ಬೆಳವಣಿಗೆಗೆ ಸರ್ಕಾರಾದಿಯಾಗಿ ಕನ್ನಡ […]