ಕ್ಯಾಂಪಸ್‌

ದೇಶ ಮತ್ತು ಧರ್ಮಕ್ಕಾಗಿ ಜೀವನ ಮುಡಿಪಾಗಿರಲಿ : ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು | ಅಂಬಿಕಾ ವಿದ್ಯಾಲಯದಲ್ಲಿ ದಶಾಂಬಿಕೋತ್ಸವ ಸಮಾರೋಪ, ಗುರುವಂದನಾ ಕಾರ್ಯಕ್ರಮ

ಪುತ್ತೂರು: ದೇಶ ಮತ್ತು ಧರ್ಮಕ್ಕಾಗಿ ನಾವು ನಮ್ಮ ಜೀವನ ನಡೆಸಬೇಕು. ದೇಶವನ್ನು ಬಿಟ್ಟು ಧರ್ಮವಾಗಲೀ, ಧರ್ಮವನ್ನು ಬಿಟ್ಟು ದೇಶವಾಗಲೀ ಇರುವುದಕ್ಕೆ ಸಾಧ್ಯವಿಲ್ಲ. ಅತ್ಯಂತ ಉತ್ಕೃಷ್ಟ ದೇಶ ಹಾಗೂ ಧರ್ಮದಲ್ಲಿ ನಾವು ಜನಿಸಿದ್ದೇವೆ ಎಂಬುದೇ ಹೆಮ್ಮೆ. ಹಾಗಾಗಿ ದೇಶ ಹಾಗೂ ಧರ್ಮ ಎರಡನ್ನೂ ಚೆನ್ನಾಗಿ ಇಟ್ಟುಕೊಂಡಾಗ ಮಾತ್ರ ನಮ್ಮ ಜನ್ಮ ಸಾರ್ಥಕಗೊಳ್ಳುತ್ತದೆ. ಮನುಷ್ಯ ಜನ್ಮ ಎನ್ನುವುದು ನಮಗೆ ದೊರಕುವ ಸುವರ್ಣಾವಕಾಶ. ಇದನ್ನು ವ್ಯರ್ಥ ಮಾಡಬಾರದು ಎಂದು ಶೃಂಗೇರಿಯ ಶ್ರೀ ಶಾರದಾ ಪೀಠಾಧೀಶ್ವರ ಶ್ರೀ ವಿಧುಶೇಖರ ಭಾರತಿ ಸನ್ನಿಧಾನಂಗಳವರು ಹೇಳಿದರು. […]

ದೇಶ ಮತ್ತು ಧರ್ಮಕ್ಕಾಗಿ ಜೀವನ ಮುಡಿಪಾಗಿರಲಿ : ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು | ಅಂಬಿಕಾ ವಿದ್ಯಾಲಯದಲ್ಲಿ ದಶಾಂಬಿಕೋತ್ಸವ ಸಮಾರೋಪ, ಗುರುವಂದನಾ ಕಾರ್ಯಕ್ರಮ Read More »

ಏ.29 : ಪಡ್ಡಾಯೂರಿನಲ್ಲಿ ಒಳಾಂಗಣ ಕ್ರೀಡಾಂಗಣ ಉದ್ಘಾಟನೆ

ಪುತ್ತೂರು: ವರುಣ್ಸ್  ಬ್ಯಾಡ್ಮಿಂಟನ್ ಅಕಾಡೆಮಿ ವತಿಯಿಂದ ಪಡ್ಡಾಯೂರಿನಲ್ಲಿ ನಿರ್ಮಿಸಲಾದ ಒಳಾಂಗಣ ಕ್ರೀಡಾಂಗಣದ ಉದ್ಘಾಟನೆ ಏ.29 ರಂದು ಬೆಳಿಗ್ಗೆ ನಡೆಯಲಿದೆ. ಒಳಾಂಗಣ ಕ್ರೀಡಾಂಗಣವನ್ನು ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಪಿಂಯನ್ ಶಿಪ್ ಕಂಚಿನ ಪದಕ ವಿಜೇತ ಆಯುಷ್ ಶೆಟ್ಟಿ ಉದ್ಘಾಟಿಸಲಿದ್ದು, ಪಡ್ಡಾಯೂರು ರುದ್ರಾಂಡಿ ನೇತ್ರಾಂಡಿ ದೈವಸ್ಥಾನದ ಅಧ್ಯಕ್ಷ, ನಗರಸಭೆ ನಿಕಟಪೂರ್ವ ಅಧ್ಯಕ್ಷ ಜೀವಂಧರ್ ಜೈನ್ ಸಮಾರಂಭದ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕರಾದ ಸಂಜೀವ ಮಠಂದೂರು, ಶಕುಂತಳಾ ಟಿ. ಶೆಟ್ಟಿ, ಸುದಾನ ಶಾಲಾ

ಏ.29 : ಪಡ್ಡಾಯೂರಿನಲ್ಲಿ ಒಳಾಂಗಣ ಕ್ರೀಡಾಂಗಣ ಉದ್ಘಾಟನೆ Read More »

ಸವಾಲನ್ನು ಸ್ವೀಕರಿಸಲು ಪೂರಕ ಶಿಕ್ಷಣ ನಮಗೆ ದೊರಕಬೇಕು: ಮುರಳಿ ಕೃಷ್ಣ ಕೆ.ಎನ್. | ವಿವೇಕಾನಂದ ಮಹಾವಿದ್ಯಾಲಯದಲ್ಲಿ ಶಿಕ್ಷಕ ರಕ್ಷಕ ಸಂಘದ ಸಭೆ

ಪುತ್ತೂರು: ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಅಂಕವನ್ನು ಗಳಿಸುವುದು ಮಾತ್ರವಲ್ಲದೇ ಜೀವನದಲ್ಲಿ ಒಳ್ಳೆಯ ಮೌಲ್ಯಗಳನ್ನು ಕಲಿತು  ಪರಿಪೂರ್ಣರಾಗಿ ಇಲ್ಲಿಂದ ತೆರಳಬೇಕು ಎಂಬುವುದು ವಿವೇಕಾನಂದ ಕಾಲೇಜಿನ  ಮುಖ್ಯ ಉದ್ದೇಶವಾಗಿದೆ. ಈಗಿನ ವಿದ್ಯಾರ್ಥಿಗಳು ಸಂಸ್ಕೃತಿ, ಸಂಸ್ಕಾರವನ್ನು ಕಲಿಯುವುದು ತುಂಬಾ ಮುಖ್ಯ. ಅದನ್ನು ನಾವು ವಿದ್ಯಾರ್ಥಿಗಳಿಗೆ ನಿರಂತರವಾಗಿ ನೀಡುತ್ತಿದ್ದೇವೆ ಎಂದು ಪುತ್ತೂರಿನ ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳಿ ಕೃಷ್ಣ ಕೆ.ಎನ್. ಹೇಳಿದರು. ಅವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ (ಸ್ವಾಯತ್ತ) ಶಿಕ್ಷಕ ರಕ್ಷಕ ಸಂಘ ಹಾಗೂ ಐಕ್ಯೂಎಸಿ ಘಟಕದ

ಸವಾಲನ್ನು ಸ್ವೀಕರಿಸಲು ಪೂರಕ ಶಿಕ್ಷಣ ನಮಗೆ ದೊರಕಬೇಕು: ಮುರಳಿ ಕೃಷ್ಣ ಕೆ.ಎನ್. | ವಿವೇಕಾನಂದ ಮಹಾವಿದ್ಯಾಲಯದಲ್ಲಿ ಶಿಕ್ಷಕ ರಕ್ಷಕ ಸಂಘದ ಸಭೆ Read More »

ಬೆಳ್ಳಾರೆ ಪೊಲೀಸ್ ಠಾಣೆಗೆ ವಿದ್ಯಾರಶ್ಮಿ ವಿದ್ಯಾಲಯದ ವತಿಯಿಂದ ಶುದ್ಧ ಕುಡಿಯುವ ನೀರಿನ ಯಂತ್ರ ಹಸ್ತಾಂತರ

ಬೆಳ್ಳಾರೆ : ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದ ವತಿಯಿಂದ ಬೆಳ್ಳಾರೆ ಪೊಲೀಸ್ ಠಾಣೆಗೆ ಸುಮಾರು 40,000/- ರೂ. ಮೌಲ್ಯದ ಶುದ್ಧ ಕುಡಿಯುವ ನೀರಿನ ಯಂತ್ರವನ್ನು ಕೊಡುಗೆಯಾಗಿ ನೀಡಲಾಯಿತು. ಕಾಲೇಜಿನ ಸಂಚಾಲಕ ಸಹಕಾರಿ ರತ್ನ ಸವಣೂರು ಸೀತಾರಾಮ ರೈಯವರು  ಠಾಣಾಧಿಕಾರಿ ಸಂತೋಷ್ ಬಿ. ಪಿ.ಯವರಿಗೆ ಯಂತ್ರವನ್ನು ಹಸ್ತಾಂತರಿಸಿದರು. ಕಾಲೇಜಿನ ಆಡಳಿತಾಧಿಕಾರಿ ಅಶ್ವಿನ್ ಎಲ್ ಶೆಟ್ಟಿ ಮತ್ತು ಠಾಣಾ ಸಿಬ್ಬಂದಿಯವರು ಉಪಸ್ಥಿತರಿದ್ದರು.

ಬೆಳ್ಳಾರೆ ಪೊಲೀಸ್ ಠಾಣೆಗೆ ವಿದ್ಯಾರಶ್ಮಿ ವಿದ್ಯಾಲಯದ ವತಿಯಿಂದ ಶುದ್ಧ ಕುಡಿಯುವ ನೀರಿನ ಯಂತ್ರ ಹಸ್ತಾಂತರ Read More »

ಅಕ್ಷಯ ಕಾಲೇಜಿನಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಸೈಬರ್ ಸೆಕ್ಯೂರಿಟಿ ಕುರಿತು ಮಾಹಿತಿ ಕಾರ್ಯಾಗಾರ

ಪುತ್ತೂರು: ಅಕ್ಷಯ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸಂಪ್ಯ ಅಕ್ಷಯ ಕಾಲೇಜಿನಲ್ಲಿ ಆರ್ಟಿ ಫಿಶಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಸೈಬರ್ ಸೆಕ್ಯೂರಿಟಿ ಕುರಿತು ವಿದ್ಯಾರ್ಥಿಗಳಿಗೆ ಎರಡು ದಿನದ ಕಾರ್ಯಾಗಾರ ನಡೆಯಿತು. ಅಕ್ಷಯ ಕಾಲೇಜಿನ ವಿದ್ಯಾರ್ಥಿಗಳಿಗೆ ನಿಯೋ ಇನ್ನೊವೇಶನ್ಸ್ & ಸ್ಕಿಲ್ಸ್ ಸಂಸ್ಥೆಯ ಸಹಯೋಗದೊಂದಿಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸಿ ಹಾಗೂ ಮಿಷಿನ್ ಲರ್ನಿಂಗ್ ಕುರಿತಾಗಿ 23 ವರ್ಷಗಳ ಆರ್ಟಿಫಿಶಿಯಲ್ ಇಂಟೆಲಿಜೆನ್ಸಿ ಹಾಗೂ ಮಿಷಿನ್ ಲರ್ನಿಂಗ್ ನಲ್ಲಿಅನುಭವ ಹೊಂದಿರುವ ಅಲೋಕ್ ಚಕ್ರವರ್ತಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕಾರ್ಯಗಾರದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸಿ

ಅಕ್ಷಯ ಕಾಲೇಜಿನಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಸೈಬರ್ ಸೆಕ್ಯೂರಿಟಿ ಕುರಿತು ಮಾಹಿತಿ ಕಾರ್ಯಾಗಾರ Read More »

ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿಗಳು ಪೇ ಪಾಲ್‌ ಕಂಪನಿಯ ಸಂದರ್ಶನಕ್ಕೆ ಆಯ್ಕೆ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನಲ್ಲಿ ತೃತೀಯ ಬಿಸಿಎ ವ್ಯಾಸಂಗ ಮಾಡುತ್ತಿರುವ 41 ವಿದ್ಯಾರ್ಥಿನಿಯರು ಪೇ ಪಾಲ್‌ ಬಹುರಾಷ್ಟ್ರೀಯ ಕಂಪನಿಯ ಅಂತಿಮ ಹಂತದ ಸಂದರ್ಶನಕ್ಕೆ ಆಯ್ಕೆಯಾಗಿದ್ದಾರೆ.  2023-24 ನೇ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಕಾಲೇಜಿನಲ್ಲಿ ಅಂತಿಮ ಬಿಸಿಎ ವಿದ್ಯಾರ್ಥಿಗಳಿಗಾಗಿ ಹನಿವೆಲ್‌ ಕಂಪನಿಯಿಂದ ಪ್ರಾಯೋಜಿಸಲ್ಪಟ್ಟ ಕಸ್ಟಮರ್‌ ರಿಲೇಶನ್‌ಶಿಪ್‌ ಮ್ಯಾನೇಜ್‌ಮೆಂಟ್‌ ಸರ್ಟಿಫಿಕೇಟ್‌ ಕೋರ್ಸನ್ನು ಆಯೋಜಿಸಲಾಗಿತ್ತು. ಸರ್ಟಿಫಿಕೇಟ್‌ ಕೋರ್ಸ್‌ನ ಕೊನೆಯಲ್ಲಿ ಕಂಪನಿಯ ವತಿಯಿಂದ ನಾಲ್ಕು ಹಂತಗಳ ಪರೀಕ್ಷೆಗಳನ್ನು ನಡೆಸಲಾಗಿತ್ತು. ಭಾಗವಹಿಸಿದ 118 ವಿದ್ಯಾರ್ಥಿಗಳೂ ಈ ನಾಲ್ಕು ಹಂತಗಳ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದು, ಅವರಿಗೆ ಕಂಪನಿಯ

ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿಗಳು ಪೇ ಪಾಲ್‌ ಕಂಪನಿಯ ಸಂದರ್ಶನಕ್ಕೆ ಆಯ್ಕೆ Read More »

ಭವಿಷ್ಯದ ಭಾರತಕ್ಕಾಗಿ ಶಿಕ್ಷಕರ ಸಕ್ರಿಯತೆ – ಸಂವಾದ ಕಾರ್ಯಕ್ರಮ

ಪುತ್ತೂರು: ಶಿಕ್ಷಣವು ಯಶಸ್ವಿ ಸಮಾಜದ ಅಡಿಪಾಯವಾಗಿದೆ. ಸದೃಢ ರಾಷ್ಟ್ರ ನಿರ್ಮಾಣದ ಮೂಲವಾಗಿದೆ. ಆಧುನಿಕ ದಿನಮಾನದಲ್ಲಿ ಇರುವ ನಾವು ಸಮಾಜದಲ್ಲಿ ಸುಸ್ಥಿರ ಬದಲಾವಣೆಯತ್ತ ಗಮನ ಹರಿಸಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಾಹಪೂರ ಹೇಳಿದರು. ವಿದ್ಯಾಭಾರತಿ ಉಚ್ಛ ಶಿಕ್ಷಾ ಸಂಸ್ಥಾನ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ಪುತ್ತೂರಿನ ತೆಂಕಿಲದ ನರೇಂದ್ರ ಪ.ಪೂ. ಕಾಲೇಜಿನಲ್ಲಿ ಆಯೋಜಿಸಿದ ಭವಿಷ್ಯದ ಭಾರತಕ್ಕಾಗಿ ಶಿಕ್ಷಕರ ಸಕ್ರಿಯತೆ ಎಂಬ ವಿಚಾರವಾಗಿ ಅಧ್ಯಾಪಕರ ಜೊತೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಉತ್ತಮ ಶಿಕ್ಷಣ,

ಭವಿಷ್ಯದ ಭಾರತಕ್ಕಾಗಿ ಶಿಕ್ಷಕರ ಸಕ್ರಿಯತೆ – ಸಂವಾದ ಕಾರ್ಯಕ್ರಮ Read More »

ಏ.25 : ಅಂಬಿಕಾ ವಿದ್ಯಾಲಯದ “ದಶಾಂಬಿಕೋತ್ಸವ” ಸಮಾರೋಪ, ಸಾರ್ವಜನಿಕ ಗುರುವಂದನಾ ಕಾರ್ಯಕ್ರಮ | ಶ್ರೀ ಶೃಂಗೇರಿ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ದಿವ್ಯ ಉಪಸ್ಥಿತಿ

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ವಿದ್ಯಾಲಯದ “ದಶಾಂಬಿಕೋತ್ಸವ”ದ ಸಮಾರೋಪ ಸಮಾರಂಭ ಹಾಗೂ ಸಾರ್ವಜನಿಕ ಗುರುವಂದನಾ ಏ.25 ರಂದು ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಆವರಣದಲ್ಲಿನ ಶ್ರೀ ಶಂಕರ ಸಭಾಭವನದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ತಿಳಿಸಿದ್ದಾರೆ. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಶ್ರೀ ಶಂಕರ ಸಭಾಭವನದ ಶ್ರೀ ಲಲಿತಾಂಬಿಕಾ ವೇದಿಕೆಯಲ್ಲಿ ನಡೆಯುವ ದಶಾಂಬಿಕೋತ್ಸವದ ಸಮಾರೋಪ ಸಮಾರಂಭದಲ್ಲಿ ಶೃಂಗೇರಿ ಮಠದ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಆಶೀರ್ವಚನ ನೀಡಲಿದ್ದಾರೆ

ಏ.25 : ಅಂಬಿಕಾ ವಿದ್ಯಾಲಯದ “ದಶಾಂಬಿಕೋತ್ಸವ” ಸಮಾರೋಪ, ಸಾರ್ವಜನಿಕ ಗುರುವಂದನಾ ಕಾರ್ಯಕ್ರಮ | ಶ್ರೀ ಶೃಂಗೇರಿ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ದಿವ್ಯ ಉಪಸ್ಥಿತಿ Read More »

ಸಂತ ಫಿಲೋಮಿನಾ ಕಾಲೇಜಿನಲ್ಲಿ “ಇಂಪ್ಯಾಕ್ಟ್‌ ಲೆಕ್ಚರ್‌” ಸರಣಿಯ ದ್ವಿತೀಯ ಉಪನ್ಯಾಸ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಇನ್ಸ್ಟಿಟ್ಯೂಶನಲ್‌ ಇನ್ನೊವೇಶನ್‌ ಕೌನ್ಸಿಲ್‌ (ಐಐಸಿ), ಗಣಕ ವಿಜ್ಞಾನ  ಹಾಗೂ ಎಂಕಾಂ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸ್ನಾತಕೋತ್ತರ ವಿಭಾಗದ ಸಭಾಭವನದಲ್ಲಿ “ಇಂಪ್ಯಾಕ್ಟ್‌ ಲೆಕ್ಚರ್‌” ಸರಣಿ ದ್ವಿತೀಯ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಯಿತು. ಮಂಗಳೂರಿನ ಗ್ಲೋಟಚ್‌ ಟೆಕ್ನಾಲಜೀಸ್‌ ಸಂಸ್ಥೆಯ   ಅಪ್ಲಿಕೇಶನ್‌ ಡೆವಲಪ್‌ಮೆಂಟ್‌ ವಿಭಾಗದ ನಿರ್ದೇಶಕ ದೀಪಕ್‌ ಕೃಷ್ಣಮೂರ್ತಿ ಡಿಸ್ರಪ್ಟಿವ್‌ ಇನ್ನೊವೇಶನ್‌: ಟ್ರಾನ್ಸ್ಫಾರ್ಮಿಂಗ್‌ ಇಂಡಸ್ಟ್ರೀಸ್‌ ಥ್ರೂ ಕ್ರಿಯೇಟಿವ್‌ ಐಡಿಯೇಶನ್‌ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ, 90 ರ ದಶಕದದಲ್ಲಿ ಕ್ಲೇಟನ್ ಕ್ರಿಸ್ಟೇನ್‌ಸೆನ್‌ನಿಂದ ಮೊದಲ ಬಾರಿಗೆ

ಸಂತ ಫಿಲೋಮಿನಾ ಕಾಲೇಜಿನಲ್ಲಿ “ಇಂಪ್ಯಾಕ್ಟ್‌ ಲೆಕ್ಚರ್‌” ಸರಣಿಯ ದ್ವಿತೀಯ ಉಪನ್ಯಾಸ Read More »

ಹವ್ಯಾಸಿ ಪತ್ರಕರ್ತರಾಗಿಯೂ ಬದುಕು ಕಟ್ಟಿಕೊಳ್ಳಬಹುದು | ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ವಿಚಾರ ಸಂವಾದ ಕಾರ್ಯಕ್ರಮದಲ್ಲಿ ಗುರುಪ್ರಸಾದ್ ಟಿ.ಎನ್.

ಪುತ್ತೂರು: ಫ್ರಿಲಾನ್ಸ್ ಪತ್ರಿಕೋದ್ಯಮ ಎನ್ನುವುದು ಇತ್ತೀಚಿನ ದಿನಗಳಲ್ಲಿ ಬಹು ಬೇಡಿಕೆಯ ಕ್ಷೇತ್ರ. ಸ್ವತಂತ್ರ ಪತ್ರಕರ್ತರಾಗಿ ದುಡಿಯಲು ಆಯ್ಕೆಗಳು ಹಲವಾರು ಇರುತ್ತದೆ. ಇಲ್ಲಿ ಪತ್ರಕರ್ತರು ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಪಟ್ಟ ಬೇರೆ ಬೇರೆ ಕೆಲಸಗಳನ್ನು ಮಾಡಿ ಆದಾಯವನ್ನು ಗಳಿಸಬಹುದು. ಪ್ರಸ್ತುತ ಕಾಲಘಟ್ಟದಲ್ಲಿ ನಿರ್ದಿಷ್ಟ ಆದಾಯಕ್ಕೆ ಅವಲಂಬಿತರಾಗಿರುವುದು ಕಷ್ಟ ಎಂದು ಮಂಗಳೂರಿನ ಹವ್ಯಾಸಿ ಪತ್ರಕರ್ತ ಗುರುಪ್ರಸಾದ್ ಟಿ.ಎನ್. ಹೇಳಿದರು. ಅವರು ವಿವೇಕಾನಂದ  ಕಲಾ,ವಿಜ್ಞಾನ  ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)ದ ಪತ್ರಿಕೋದ್ಯಮ ವಿಭಾಗದ ವತಿಯಿಂದ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ವಿಚಾರ ಸಂವಾದ ಕಾರ್ಯಕ್ರಮದಲ್ಲಿ

ಹವ್ಯಾಸಿ ಪತ್ರಕರ್ತರಾಗಿಯೂ ಬದುಕು ಕಟ್ಟಿಕೊಳ್ಳಬಹುದು | ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ವಿಚಾರ ಸಂವಾದ ಕಾರ್ಯಕ್ರಮದಲ್ಲಿ ಗುರುಪ್ರಸಾದ್ ಟಿ.ಎನ್. Read More »

error: Content is protected !!
Scroll to Top