ಡಿ.29-30: ಕಾವು ಬುಶ್ರಾ ವಿದ್ಯಾಸಂಸ್ಥೆಗಳ ಬೆಳ್ಳಿ ಹಬ್ಬ ಸಂಭ್ರಮ ‘ಬುವಿ ಉತ್ಸವ-2023’ | ನವೀಕೃತ ಸಭಾಂಗಣ ‘ಬುಶ್ರಾ ಅಡಿಟೋರಿಯಂ’ ಉದ್ಘಾಟನೆ
ಪುತ್ತೂರು: ಬೆಳ್ಳಿಹಬ್ಬದ ಹೊಸ್ತಿಲಲ್ಲಿರುವ ಪುತ್ತೂರಿನ ಗ್ರಾಮೀಣ ಪ್ರದೇಶದ ಕಾವು ಬುಶ್ರಾ ವಿದ್ಯಾಸಂಸ್ಥೆಯಲ್ಲಿ ಬೆಳ್ಳಿಹಬ್ಬ ಸಂಭ್ರಮ “ಬುವಿ ಉತ್ಸವ-2023” ಹಾಗೂ ನವೀಕೃತಗೊಂಡ ಸಭಾಂಗಣ “ಬುಶ್ರಾ ಅಡಿಟೋರಿಯಂ”ನ ಉದ್ಘಾಟನಾ ಸಮಾರಂಭ ಡಿ.29 ಹಾಗೂ 30 ರಂದು ವಿದ್ಯಾಸಂಸ್ಥೆಯ ಆವರಣದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಶೈಕ್ಷಣಿಕ ಸಲಗಹೆಗಾರರಾದ ಕೃಷ್ಣಪ್ರಸಾದ್ ತಿಳಿಸಿದ್ದಾರೆ. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಬೆಳಿಗ್ಗೆ 9.45 ಕ್ಕೆ ಧ್ವಜಾರೋಹಣವನ್ನು ಕಾವು ಬುಶ್ರಾ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷ ಜ.ಅಬ್ದುಲ್ ಅಝೀಝ್‍ನೆರವೇರಿಸಲಿದ್ದು, ಶ್ರೀ ರಾಮಕೃಷ್ಣ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ […]