ಕ್ಯಾಂಪಸ್‌

ಸಿಇಟಿ ಪರೀಕ್ಷಾ ದಿನಾಂಕದಲ್ಲಿ ಬದಲಾವಣೆ

ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ದಿನಾಂಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಎರಡು ದಿನಗಳ ಮಟ್ಟಿಗೆ ಹಿಂದೂಡಿದೆ. ಈ ಹಿಂದೆ ಏ.20 ಹಾಗೂ 21 ರಂದು ಪರೀಕ್ಷೆ ದಿನಾಂಕ ನಿಗದಿಯಾಗಿತ್ತು. ಇದೀಗ ಏ.18 ಮತ್ತು 19ರಂದು ಪರೀಕ್ಷೆಗಳು ನಡೆಯಲಿವೆ ಎಂದು ಪ್ರಕಟಣೆ ನೀಡಿದೆ. ಏ.21 ರಂದು ಎನ್‍ ಡಿಎ ಪರೀಕ್ಷೆ ನಡೆಯಲಿರುವ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ತಿಳಿಸಿದ್ದಾರೆ. ವೃತ್ತಿಪರ ಕೋರ್ಸುಗಳಿಗೆ ಸೇರಲು ಬಯಸುವ ಅಭ್ಯರ್ಥಿಗಳು ಸಿಇಟಿ ಪರೀಕ್ಷೆಗೆ ಜ.10 ರಿಂದ […]

ಸಿಇಟಿ ಪರೀಕ್ಷಾ ದಿನಾಂಕದಲ್ಲಿ ಬದಲಾವಣೆ Read More »

ಜ. 12ರಂದು ವಿವೇಕಾನಂದ ಜಯಂತಿ ಆಚರಣೆ, ಬೊಂಬೆಯಾಟ | ಜ. 13ರಿಂದ ಶ್ರೀರಾಮ ಪ್ರಾಣ ಪ್ರತಿಷ್ಠಾ ಸಪ್ತಾಹ ಸರಣಿ ವಿಚಾರ ಸಂಕಿರಣ

ಪುತ್ತೂರು: ನೆಹರುನಗರ ವಿವೇಕಾನಂದ ಕಾಲೇಜಿನ ಆವರಣದ ವಿವೇಕಾನಂದ ಬಯಲು ಮಂದಿರದಲ್ಲಿ ಜನವರಿ 12ರಂದು ವಿವೇಕಾನಂದ ಜಯಂತಿ ನಡೆಯಲಿದೆ. ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ಪ್ರಯುಕ್ತ ಶ್ರೀ ರಾಮ ಪ್ರಾಣ ಪ್ರತಿಷ್ಠಾ ಸಪ್ತಾಹ ವಿಚಾರ ಸಂಕಿರಣ ಜ. 13ರಿಂದ 22ರವರೆಗೆ ನಡೆಯಲಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ. ಕೃಷ್ಣ ಭಟ್ ತಿಳಿಸಿದರು. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ ಎಂಬ ಪರಿಕಲ್ಪನೆಯಲ್ಲಿ ವಿವೇಕಾನಂದ ಜಯಂತಿ ನಡೆಯಲಿದೆ. ಸಮಾರಂಭದ ಅಧ್ಯಕ್ಷತೆಯನ್ನು

ಜ. 12ರಂದು ವಿವೇಕಾನಂದ ಜಯಂತಿ ಆಚರಣೆ, ಬೊಂಬೆಯಾಟ | ಜ. 13ರಿಂದ ಶ್ರೀರಾಮ ಪ್ರಾಣ ಪ್ರತಿಷ್ಠಾ ಸಪ್ತಾಹ ಸರಣಿ ವಿಚಾರ ಸಂಕಿರಣ Read More »

ಸಿಎ ಅಂತಿಮ ಪರೀಕ್ಷೆಯಲ್ಲಿ ಕೃತಿಕಾ ಎ.ಎಸ್‍. ಉತ್ತೀರ್ಣ

ಪುತ್ತೂರು: ನವೆಂಬರ್ ತಿಂಗಳಲ್ಲಿ ನಡೆದ ಚಾರ್ಟರ್ಡ್ ಎಕೌಂಟೆಂಟ್ (ಸಿ.ಎ.) ಅಂತಿಮ ಪರೀಕ್ಷೆಯಲ್ಲಿ ಕೃತಿಕಾ ಎ.ಎಸ್‍. ಉತ್ತೀರ್ಣರಾಗಿದ್ದಾರೆ. ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿರುವ ಅವರು ಪುತ್ತೂರಿನ ಸಿಎ ರಾಮಭಟ್ ಹಾಗೂ ಸಿಎ ಅರವಿಂದ ಕೃಷ್ಣ ಅವರ ಮಾರ್ಗದರ್ಶನದಲ್ಲಿ ಸಿಎ ತರಬೇತಿ ಪಡೆದಿದ್ದರು. ಕೃತಿಕಾ ಎ.ಎಸ್‍. ಬಿಎಸ್‍ಎನ್‍ಎಲ್ ನಿವೃತ್ತ ಉಪಮಂಡಲ ಅಧಿಕಾರಿ ಎ.ಸೀತಾರಾಮ ಗೌಡ ಹಾಗೂ ಚಂದ್ರಾವತಿ ದಂಪತಿ ಪುತ್ರಿ.

ಸಿಎ ಅಂತಿಮ ಪರೀಕ್ಷೆಯಲ್ಲಿ ಕೃತಿಕಾ ಎ.ಎಸ್‍. ಉತ್ತೀರ್ಣ Read More »

ಜೀವನ ಕೌಶಲ್ಯವನ್ನು ಕಲಿಸುವ ಪ್ರತಿಭಾ ಪುರಸ್ಕಾರ ಮೈಲುಗಲ್ಲಾಗಿ ನಿಲ್ಲಲಿ | ನರಿಮೊಗರು ಸರಸ್ವತಿ ವಿದ್ಯಾ ಮಂದಿರದ ‘ಪ್ರತಿಭಾ ಸರಸ್ವತೀ’ ಕಾರ್ಯಕ್ರಮದಲ್ಲಿ ಮಾಲತಿ ಡಿ.

ಪುತ್ತೂರು: ನರಿಮೊಗರು ಕೊಡಂಕಿರಿ ಫೌಂಡೇಶನ್ ಪ್ರಾಯೋಜಿತ ಸರಸ್ವತಿ ವಿದ್ಯಾ ಮಂದಿರದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವರ್ಧಂತ್ಯುತ್ಸವ -2024 ‘ಪ್ರತಿಭಾ ಸರಸ್ವತೀ’ ಕಾರ್ಯಕ್ರಮ ಶನಿವಾರ ಸಂಜೆ ನಡೆಯಿತು. ಮುಖ್ಯ ಅತಿಥಿಯಾಗಿ ಅಂಬಿಕಾ ಸಿಬಿಎಸ್‍ಇ ವಿದ್ಯಾಲಯದ ಪ್ರಾಂಶುಪಾಲೆ ಮಾಲತಿ ಡಿ. ಸಮಾರಂಭ ಉದ್ಘಾಟಿಸಿ ಮಾತನಾಡಿ, ಯಾವುದೇ ಮಗುವಿನ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರೋತ್ಸಾಹ ನೀಡಬೇಕು. ಮಗುವಿನಲ್ಲಿ ಇಲ್ಲದೆ ಇರುವ ಕಲೆಯ ಬಗ್ಗೆ ಒತ್ತಡ ಹಾಗಬಾರದು. ಈ ನಿಟ್ಟಿನಲ್ಲಿ ಪ್ರತಿಭಾ ವೇದಿಕೆ ಮಕ್ಕಳಲ್ಲಿನ ಪ್ರತಿಭೆಯನ್ನು ತೋರ್ಪಡಿಸಲು ಸಹಕಾರಿಯಾಗಬಲ್ಲದು. ಇಂತಹಾ ವೇದಿಕೆಯಿಂದ ಮಕ್ಕಳು ಇನ್ನೊಬ್ಬರ

ಜೀವನ ಕೌಶಲ್ಯವನ್ನು ಕಲಿಸುವ ಪ್ರತಿಭಾ ಪುರಸ್ಕಾರ ಮೈಲುಗಲ್ಲಾಗಿ ನಿಲ್ಲಲಿ | ನರಿಮೊಗರು ಸರಸ್ವತಿ ವಿದ್ಯಾ ಮಂದಿರದ ‘ಪ್ರತಿಭಾ ಸರಸ್ವತೀ’ ಕಾರ್ಯಕ್ರಮದಲ್ಲಿ ಮಾಲತಿ ಡಿ. Read More »

ಸರಕಾರಿ ಶಾಲೆ ಬದುಕು ಧೈರ್ಯ ಕಲಿಸುತ್ತದೆ | ಚೂರಿಪದವು ಶಾಲಾ ನೂತನ ತರಗತಿ ಕೊಠಡಿ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಅಶೋಕ್ ರೈ

ಪುತ್ತೂರು: ಸರಕಾರಿ ಶಾಲೆಗಳು ಎಲ್ಲವನ್ನೂ ಕಲಿಸುತ್ತದೆ, ಗುಣಮಟ್ಟದ ಶಿಕ್ಷಣವೂ ಇದೆ ಜೊತೆಗೆ ಏನೇ ಸಂಕಷ್ಟ ಬಂದರೂ ಬದುಕುವ ಧೈರ್ಯವನ್ನು ಸರಕಾರಿ‌ ಶಾಲಾ ಶಿಕ್ಷಣ ನೀಡುತ್ತದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಅವರು ಚೂರಿಪದವು ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ, ನೂತನ ಕೊಠಡಿ, ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಶಿಕ್ಷಣದ ಜೊತೆಗೆ ಸಂಸ್ಕಾರವನ್ನೂ ಮಕ್ಕಳಿಗೆ ಕಲಿಸಬೇಕಾಗುತ್ತದೆ. ಸರಕಾರಿ ‌ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣದ ಕೊರತೆ ಇದೆ. ಅದನ್ನು ಮುಂದಿನ ದಿನಗಳಲ್ಲಿ ನೀಗಿಸುವ

ಸರಕಾರಿ ಶಾಲೆ ಬದುಕು ಧೈರ್ಯ ಕಲಿಸುತ್ತದೆ | ಚೂರಿಪದವು ಶಾಲಾ ನೂತನ ತರಗತಿ ಕೊಠಡಿ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಅಶೋಕ್ ರೈ Read More »

ಊರವರ ಪ್ರೀತಿಯ ಅಭಿನಂದನೆ ಪಡೆದಿದ್ದೇನೆ | ಚೂರಿಪದವು ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ, ನೂತನ ಕೊಠಡಿ ಉದ್ಘಾಟಿಸಿ ಸಂಜೀವ ಮಠಂದೂರು

ಪುತ್ತೂರು: ಚೂರಿಪದವು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ, ನೂತನ ಕೊಠಡಿ, ಪ್ರೊಜೆಕ್ಟರ್ ಹಾಗೂ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನಾ ಸಮಾರಂಭ ಶನಿವಾರ ನಡೆಯಿತು. ಮಾಜಿ ಶಾಸಕ ಸಂಜೀವ ಮಠಂದೂರು ಉದ್ಘಾಟನೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಈ ಹಿಂದೆ ಪುತ್ತೂರು ಕ್ಷೇತ್ರದ ಶಾಸಕನಾಗಿದ್ದ ಸಂದರ್ಭದಲ್ಲಿ ಚೂರಿಪದವು, ನಿಡ್ಪಳ್ಳಿ, ಆನಾಜೆ ಪರಿಸರದಲ್ಲಿ ಕೈಗೊಂಡ ಅನೇಕ ಅಭಿವೃದ್ಧಿ ಕಾರ್ಯಗಳಿಗಾಗಿ ಅನುದಾನ ಒದಗಿಸಿದ್ದು, ಈ ನಿಟ್ಟಿನಲ್ಲಿ ಊರವರಿಂದ ಪ್ರೀತಿಯ ಅಭಿನಂದನೆಯನ್ನು ಪಡೆದಿದ್ದೇನೆ ಎಂದರು.

ಊರವರ ಪ್ರೀತಿಯ ಅಭಿನಂದನೆ ಪಡೆದಿದ್ದೇನೆ | ಚೂರಿಪದವು ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ, ನೂತನ ಕೊಠಡಿ ಉದ್ಘಾಟಿಸಿ ಸಂಜೀವ ಮಠಂದೂರು Read More »

ಶ್ರೀ ಸೀತಾರಾಘವ ಪದವಿ ಪೂರ್ವ ಕಾಲೇಜಿನಲ್ಲಿ ‘ಪೆರ್ನಾಜೆ ಪ್ರತಿಬಾಲಾಲಿತ್ಯ- 2023 24’

ಪುತ್ತೂರು: ಪೆರ್ನಾಜೆ ಶ್ರೀ ಸೀತಾರಾಘವ ಪದವಿ ಪೂರ್ವ ಕಾಲೇಜಿನಲ್ಲಿ ‘ಪೆರ್ನಾಜೆ ಪ್ರತಿಬಾಲಾಲಿತ್ಯ 2023 24’ ಪೆರ್ನಾಜೆ ದಿ. ಸೀತಾರಾಮ್ ಭಟ್ ವೇದಿಕೆಯಲ್ಲಿ ನಡೆಯಿತು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಸಾದ್ವಿ ಶ್ರೀ ಮಾತಾ ನಂದಮಯೀ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿ, ಈ ಸಂಸ್ಥೆ ಉತ್ತರೋತ್ತರ ಅಭಿವೃದ್ದಿ ಹೊಂದಿ ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಬಾಳಿನಲ್ಲಿ ಬೆಳಕು ಪಸರಿಸಲಿ ಎಂದು ನುಡಿದರು. ನಿವೃತ್ತ ಉಪನ್ಯಾಸಕಿ ಸುಕನ್ಯಾ ಡಿ. ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು, ರಾಷ್ಟ್ರ ಪ್ರಶಸ್ತಿ ಪುರಸ್ಕೃತ

ಶ್ರೀ ಸೀತಾರಾಘವ ಪದವಿ ಪೂರ್ವ ಕಾಲೇಜಿನಲ್ಲಿ ‘ಪೆರ್ನಾಜೆ ಪ್ರತಿಬಾಲಾಲಿತ್ಯ- 2023 24’ Read More »

ತ್ರೋಬಾಲ್ ಪಂದ್ಯಾಟ: ವೈಗಾ ಎಂ. ರಾಷ್ಟ್ರಮಟ್ಟಕ್ಕೆ 

ಪುತ್ತೂರು: ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಶಿವಮೊಗ್ಗದಲ್ಲಿ ನಡೆದ ರಾಜ್ಯ ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಬಾಲಕಿಯರ ತ್ರೋಬಾಲ್ ಪಂದ್ಯಾಟದಲ್ಲಿ ಪುತ್ತೂರು ಬೆಥನಿ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿ ವೈಗಾ ಎಂ ಪ್ರಥಮ ಸ್ಥಾನವನ್ನು ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವೈಗಾ ದರ್ಬೆ ಸುದರ್ಶನ್ ಎಂಟರ್ಪ್ರೈಸಸ್ ನ ಮಾಲಕ ಮನೋಜ್ ಟಿ.ವಿ. ಹಾಗೂ ಸಂಧ್ಯಾ ಎಂ. ದಂಪತಿ ಪುತ್ರಿ. ವಿದ್ಯಾರ್ಥಿನಿಯನ್ನು ಶಾಲಾ ಮುಖ್ಯ ಶಿಕ್ಷಕಿ, ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

ತ್ರೋಬಾಲ್ ಪಂದ್ಯಾಟ: ವೈಗಾ ಎಂ. ರಾಷ್ಟ್ರಮಟ್ಟಕ್ಕೆ  Read More »

ರಾಜ್ಯದಲ್ಲಿ ವಿದ್ಯುತ್, ಮದ್ಯದ ಬಳಿಕ ಇದೀಗ ಶಿಕ್ಷಣವೂ ದುಬಾರಿ! | ಕಾಲೇಜು ಶುಲ್ಕವನ್ನು ಏರಿಸಿ ಶಾಕ್ ನೀಡಿದ ರಾಜ್ಯ ಸರ್ಕಾರ!

ರಾಜ್ಯ ಸರ್ಕಾರ ಇದೀಗ ಕಾಲೇಜು ವಿದ್ಯಾರ್ಥಿಗಳಿಗೆ ಶಾಕ್​ ನೀಡಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರುವಂತೆ ಕಾಲೇಜು ಮತ್ತು ಯೂನಿವರ್ಸಿಟಿಗಳ ಶುಲ್ಕವನ್ನು ಶೇ. 10ರಷ್ಟು ಏರಿಸಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪದವಿ ಕೋರ್ಸ್​ಗಳ ಶುಲ್ಕ ಶೇ.10 ಏರಿಕೆ ಮಾಡಲು ಶಿಕ್ಷಣ ಸಂಸ್ಥೆಗಳಿಗೆ ಉನ್ನತ ಶಿಕ್ಷಣ ಇಲಾಖೆ ಅವಕಾಶ ಕೊಟ್ಟಿದೆ. ಬಿಎ, ಬಿಕಾಂ, ಬಿಎಸ್​ಸಿ ಸೇರಿದಂತೆ ಅನೇಕ ಪದವಿ ಪ್ರವೇಶಕ್ಕೆ ಕಳೆದ ವರ್ಷ ಇದ್ದ ಶುಲ್ಕಕ್ಕೆ ಶೇ. 10ರಷ್ಟು ಏರಿಕೆಗೆ ಅವಕಾಶ ನೀಡಿದೆ. ಈ ಮೂಲಕ ಸರ್ಕಾರ ವಿದ್ಯಾರ್ಥಿಗಳ

ರಾಜ್ಯದಲ್ಲಿ ವಿದ್ಯುತ್, ಮದ್ಯದ ಬಳಿಕ ಇದೀಗ ಶಿಕ್ಷಣವೂ ದುಬಾರಿ! | ಕಾಲೇಜು ಶುಲ್ಕವನ್ನು ಏರಿಸಿ ಶಾಕ್ ನೀಡಿದ ರಾಜ್ಯ ಸರ್ಕಾರ! Read More »

ನಾಳೆ ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಗಳ ಕ್ರೀಡೋತ್ಸವ, ವಾರ್ಷಿಕೋತ್ಸವ

ಪುತ್ತೂರು: ನರಿಮೊಗರು ಗ್ರಾಮೀಣ ವಿದ್ಯಾಸಂಸ್ಥೆಗಳ ಹೊನಲು ಬೆಳಕಿನ ಕ್ರೀಡೋತ್ಸವ, ವಾರ್ಷಿಕೋತ್ಸವ ಸಮಾರಂಭ ಜ. 4ರಂದು ಗುರುವಾರ ಸಂಜೆ 5.10ಕ್ಕೆ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಉಡುಪಿ ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹಾಗೂ ಶ್ರೀ ಸುಶೀಂದ್ರ ತೀರ್ಥ ಸ್ವಾಮೀಜಿಯವರು ಕೋಟಿ ಗೀತಾ ಲೇಖನ ಯಜ್ಞ ದೀಕ್ಷಾ ಪ್ರದಾನ ಮತ್ತು ಆಶೀರ್ವಚನ ನೀಡಲಿದ್ದಾರೆ. ವಿದ್ಯಾಸಂಸ್ಥೆಗಳ ಅಧ್ಯಕ್ಷ ಎಸ್.ಜಯರಾಮ ಕೆದಿಲಾಯ ಅಧ್ಯಕ್ಷತೆ ವಹಿಸುವರು. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಅಶೋಕ್ ಕುಮಾರ್ ರೈ, ಹಿಂದೂ

ನಾಳೆ ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಗಳ ಕ್ರೀಡೋತ್ಸವ, ವಾರ್ಷಿಕೋತ್ಸವ Read More »

error: Content is protected !!
Scroll to Top