ಮಕ್ಕಳ ಮನಸ್ಸಲ್ಲಿ ‘ಸಾತ್ವಿಕ ದೀಪ’ ಹಚ್ಚಿ : ಪೋಷಕರಿಗೆ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿ ಕರೆ | ಪೆರಿಯಡ್ಕ ಬಿಜಿಎಸ್ ಸರ್ವೋದಯ ಪ್ರೌಢಶಾಲೆಯಲ್ಲಿ ನಡೆದ ಪ್ರತಿಭಾ ಪುರಸ್ಕಾರ-ಸಾಂಸ್ಕೃತಿಕ ಕಾರ್ಯಕ್ರಮ
ಉಪ್ಪಿನಂಗಡಿ: ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಳ್ಳುವಲ್ಲಿ ಪೋಷಕರು ಮುಂದಾಗುತ್ತಿಲ್ಲ. ಮಕ್ಕಳ ಮನಸ್ಸನ್ನು ಅಸ್ಥಿರಗೊಳಿಸುವ ಕೆಲಸ ತಂದೆ ತಾಯಿಯಿಂದ ನಡೆಯುತ್ತಿರುವ ಕಾರಣವೇ ಸಮಾಜದಲ್ಲಿ ಶಕ್ತಿವಂತ ಮತ್ತು ಶಕ್ತಿಹೀನ ಮನಸ್ಥಿತಿಗಳು ಹುಟ್ಟಿಕೊಳ್ಳುತ್ತಿವೆ. ಮಕ್ಕಳ ಅಂತ;ಕರಣದ ಶಕ್ತಿಯನ್ನು ಉದ್ದೀಪನ ಮಾಡುವ ಮೂಲಕ ಅವರ ಮನಸ್ಸಲ್ಲಿ ಸಾತ್ವಿಕ ದೀಪ ಹಚ್ಚುವ ಕೆಲಸ ಪೋಷಕರಿಂದ ನಡೆಯಬೇಕಾಗಿರುವುದು ಅತೀ ಅಗತ್ಯವಾಗಿದೆ ಎಂದು ಮಂಗಳೂರು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿ ನುಡಿದರು. ಪೆರಿಯಡ್ಕ ಬಿಜಿಎಸ್ ಸರ್ವೋದಯ ಪ್ರೌಢಶಾಲೆಯಲ್ಲಿ ನಡೆದ ಪ್ರತಿಭಾ ಪುರಸ್ಕಾರ-ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನಾ […]