ಕ್ಯಾಂಪಸ್‌

ಸವಣೂರು ವಿದ್ಯಾರಶ್ಮಿ ಪ್ರಥಮದರ್ಜೆ ಕಾಲೇಜಿನಲ್ಲಿ ಕೆನರಾ ವಲಯ ಕ್ರೀಡಾಕೂಟ

ಸವಣೂರು: ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೆನರಾ ವಲಯ ಕ್ರೀಡಾಕೂಟ, ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ರೋಟ್ರಾಕ್ಟ್ ಕ್ಲಬ್ ಹಾಗೂ ಪುತ್ತೂರು ರೋಟ್ರಾಕ್ಟ್ ಕ್ಲಬ್  ಜಂಟಿ ಆಶ್ರಯದಲ್ಲಿ ಕೆನರಾ ವಲಯ ಮಟ್ಟದ ಕ್ರೀಡಾಕೂಟ ನಡೆಯಿತು. ಸಭಾ ಕಾರ್ಯಕ್ರಮ ಉದ್ಘಾಟಿಸಿದ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ನಾರಾಯಣ ಮೂರ್ತಿ ಕೆ ಮಾತನಾಡಿ, ಕ್ರೀಡೆ ಪ್ರತಿಯೊಬ್ಬ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅಗತ್ಯ ಎಂದರು. ವಿದ್ಯಾರಶ್ಮಿ ರೋಟ್ರಾಕ್ಟ್ ಕ್ಲಬ್ ಅಧ್ಯಕ್ಷ ಶಮೀರ್ ಅಧ್ಯಕ್ಷತೆ ವಹಿಸಿದ್ದರು. […]

ಸವಣೂರು ವಿದ್ಯಾರಶ್ಮಿ ಪ್ರಥಮದರ್ಜೆ ಕಾಲೇಜಿನಲ್ಲಿ ಕೆನರಾ ವಲಯ ಕ್ರೀಡಾಕೂಟ Read More »

ಅಕ್ಷಯ ಕಾಲೇಜಿನಲ್ಲಿ BCA with Artificial Intelligence & Cyber security ಕುರಿತು ಎರಡು ದಿನದ ಕಾರ್ಯಾಗಾರ

ಪುತ್ತೂರು: ಅಕ್ಷಯ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸಂಪ್ಯ ಅಕ್ಷಯ ಕಾಲೇಜಿನಲ್ಲಿ  BCA with Artificial Intelligence & Cyber security ಕುರಿತು ವಿದ್ಯಾರ್ಥಿಗಳಿಗೆ ಎರಡು ದಿನದ ಕಾರ್ಯಾಗಾರ ನಡೆಯಿತು. ಕಾಲೇಜಿನ ವಿದ್ಯಾರ್ಥಿಗಳಿಗೆ ನಿಯೋ ಇನ್ನೊವೇಶನ್ಸ್ & ಸ್ಕಿಲ್ಸ್ ಸಂಸ್ಥೆಯ ಸಹಯೋಗದೊಂದಿಗೆ ಅರ್ಟಿಫಿಷಿಯಲ್ ಇಂಟೆಲಿಜೆನ್ಸಿ ವಿದ್ಯಾರ್ಥಿಗಳಿಗೆ ’ಪೈತಾನ್ ‘ ಕುರಿತಾಗಿ ಡಾಟಾ ಅನಾಲಿಸ್ಟ್, ಸಂಶೋದಕ ಸ್ಯಾಮ್ ಸುಂದರ್ ಸಿಂಗ್ ಮಾಹಿತಿ ನೀಡಿದರು. ಕಾರ್ಯಗಾರದಲ್ಲಿ 60 ವಿದ್ಯಾರ್ಥಿಗಳು, ಹಾಗೂ  ಬಿ.ಸಿ.ಎ ವಿಭಾಗದ ಮುಖ್ಯಸ್ಥರು ಉಪನ್ಯಾಸಕರು ಪಾಲ್ಗೊಂಡಿದ್ದರು.

ಅಕ್ಷಯ ಕಾಲೇಜಿನಲ್ಲಿ BCA with Artificial Intelligence & Cyber security ಕುರಿತು ಎರಡು ದಿನದ ಕಾರ್ಯಾಗಾರ Read More »

ಸಂತ ಫಿಲೋಮಿನಾ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ

ಪುತ್ತೂರು: ವಿದ್ಯಾರ್ಥಿಗಳು ಉತ್ಸಾಹದ ಚಿಲುಮೆಗಳಾಗಿರಬೇಕು. ದೇಶವನ್ನು ಮುಂದುವರಿಸುವ ಜವಾಬ್ದಾರಿ ವಿದ್ಯಾರ್ಥಿಗಳದ್ದು. ಈ ನಿಟ್ಟಿನಲ್ಲಿ ಕಠಿಣ ಪರಿಶ್ರಮ, ಪ್ರಾಮಾಣಿಕತೆ ಹಾಗೂ ನೈತಿಕತೆ ಇರಬೇಕು. ಯಶಸ್ಸು ಒಂದು ದಿನದಲ್ಲಿ ಬರುವಂತಹದ್ದಲ್ಲ. ಹಂತ ಹಂತವಾಗಿ ತಾಳ್ಮೆಯಿಂದ ಮುನ್ನಡೆದರೆ ಮಾತ್ರ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಅವರು ಸಂತ ಫಿಲೋಮಿನಾ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕೆಥೋಲಿಕ್ ಶಿಕ್ಷಣ ಮಂಡಳಿ ಕಾರ್ಯದರ್ಶಿ ಅತಿ ವಂ. ಆ್ಯಂಟನಿ ಮೈಕೆಲ್ ಶೆರಾ ಅಧ್ಯಕ್ಷತೆ

ಸಂತ ಫಿಲೋಮಿನಾ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ Read More »

ವಿವೇಕಾನಂದ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದಿಂದ ರಾಷ್ಟ್ರೀಯ ಮಟ್ಟದ ಪ್ರತಿಭಾನ್ವೇಷಣೆ ‘ವಿವೇಕ ಚೇತನ-2024’

ಪುತ್ತೂರು: ಇಂದು ಇಡೀ ವಿಶ್ವದಲ್ಲಿಯೇ  ಭಾರತ ಅದ್ಭುತ ಸ್ಥಾನಕ್ಕೆ ಏರುತಿದೆ. ಹೀಗಿರುವಾಗ ಮಾಧ್ಯಮಗಳಿಗೆ ದೇಶದಲ್ಲಿ ಕಂಡುಬರುವ ಎಲ್ಲಾ ಒಳ್ಳೆಯ ವಿಚಾರಗಳನ್ನು ಜಗತ್ತಿಗೆ ಪರಿಚಯಿಸಿ ರಾಷ್ಟ್ರವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಜವಾಬ್ದಾರಿ ಇದೆ. ಪತ್ರಕರ್ತರು ಯಾರ ಪರವಾಗಿಯೂ ನಿಲ್ಲದೆ, ಸತ್ಯದ ಪರ, ರಾಷ್ಟ್ರದ ಪರ ನಿಲ್ಲಬೇಕು. ಸಮಾಜದಲ್ಲಿ ಕಂಡುಬರುವ ಒಳ್ಳೆತನವನ್ನು ಗಮನಿಸಿ ಅವುಗಳನ್ನು ಗುರುತಿಸುವ ಜವಾಬ್ದಾರಿ ಪತ್ರಕರ್ತರಿಗಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು. ಅವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ

ವಿವೇಕಾನಂದ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದಿಂದ ರಾಷ್ಟ್ರೀಯ ಮಟ್ಟದ ಪ್ರತಿಭಾನ್ವೇಷಣೆ ‘ವಿವೇಕ ಚೇತನ-2024’ Read More »

ಎಸ್.ಎಸ್.ಎಲ್.ಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ ತಾಲೂಕಿನ ವಿದ್ಯಾರ್ಥಿಗಳಿಗೆ ಸನ್ಮಾನ

ಪುತ್ತೂರು: ನಮ್ಮ ದೇಶದ ಭವಿಷ್ಯ ವಿದ್ಯಾರ್ಥಿಗಳ ಕೈಯಲ್ಲಿದೆ. ಅವರ ಭವಿಷ್ಯಕ್ಕೆ ನಾವು ದಾರಿಯಾಗಬೇಕು. ಈ ನಿಟ್ಟಿನಲ್ಲಿ ಎಸ್.ಎಸ್.ಎಲ್.ಸಿ ಯಲ್ಲಿ ಅತ್ಯಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸುತ್ತಿದ್ದೇನೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ತಾಲೂಕಿನ 6 ಮಂದಿ ವಿದ್ಯಾರ್ಥಿಗಳನ್ನು ಪುತ್ತೂರು ರೈ ಎಸ್ಟೇಟ್ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಕಚೇರಿಯಲ್ಲಿ ಅವರು ಸನ್ಮಾನಿಸಿ ಗೌರವಿಸಿದರು. ಪುತ್ತೂರಿನ ಕೀರ್ತಿಗೆ ಭಾಜನರಾದ ವಿದ್ಯಾರ್ಥಿಗಳನ್ನು ಗೌರವಿಸುವುದು, ಅವರಿಗೆ ಅವರ ಮುಂದಿನ ಶೈಕ್ಷಣಿಕ

ಎಸ್.ಎಸ್.ಎಲ್.ಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ ತಾಲೂಕಿನ ವಿದ್ಯಾರ್ಥಿಗಳಿಗೆ ಸನ್ಮಾನ Read More »

ಸಂತ ಫಿಲೋಮಿನಾ ಕಾಲೇಜಿನಲ್ಲಿ ಬಹುಮಾನ ವಿತರಣಾ ಸಮಾರಂಭ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನಲ್ಲಿ ಕಾಲೇಜು ವಾರ್ಷಿಕೋತ್ಸವದ ಅಂಗವಾಗಿ ಬಿಕಾಮ್ ಹಾಗೂ ಬಿಬಿಎ ವಿಭಾಗಗಳ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೆರೋ ಮಾತನಾಡಿ, ವಿದ್ಯಾರ್ಥಿಗಳ ನಡವಳಿಕೆ ಒಂದು ಕಾಲೇಜಿನ ಮುಖವಾಣಿ ಇದ್ದಂತೆ. ವಿದ್ಯಾರ್ಥಿಗಳ ಜೀವನದಲ್ಲಿ ಶಿಸ್ತು, ಬದ್ಧತೆ ಅಳವಡಿಸಿಕೊಂಡಾಗ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು. ಉಪಪ್ರಾಂಶುಪಾಲ ಡಾ.ವಿಜಯ ಕುಮಾರ್ ಮೊಳೆಯಾರ್ ಮಾತನಾಡಿ, ವಿದ್ಯೆ ವಿನಯವನ್ನು ಕೊಡುತ್ತ್ತದೆ. ವಿದ್ಯಾರ್ಥಿ ಜೀವನದಲ್ಲಿ ಗುರಿ ಮುಖ್ಯ. ಗುರಿಯೆಡೆಗೆ

ಸಂತ ಫಿಲೋಮಿನಾ ಕಾಲೇಜಿನಲ್ಲಿ ಬಹುಮಾನ ವಿತರಣಾ ಸಮಾರಂಭ Read More »

ಸಿಬಿಎಸ್‌ಇ ಹತ್ತನೆಯ ತರಗತಿ ಫಲಿತಾಂಶ |100% ಫಲಿತಾಂಶ | ತಾಲೂಕಿನ ಮೊದಲ ಎಂಟು ಸ್ಥಾನಗಳನ್ನು ಬಾಚಿಕೊಂಡ ಅಂಬಿಕಾ ವಿದ್ಯಾರ್ಥಿಗಳು

ಪುತ್ತೂರು: ನಗರದ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ ಇ ಸಂಸ್ಥೆಯ ವಿದ್ಯಾರ್ಥಿಗಳು 2023-24ನೇ ಸಾಲಿನ ಹತ್ತನೆಯ ತರಗತಿ ಪರೀಕ್ಷೆಗಳಲ್ಲಿ ದಾಖಲೆಯ ಫಲಿತಾಂಶ ಸಾಧಿಸಿದ್ದಾರೆ. ಪರೀಕ್ಷೆಗೆ ಹಾಜರಾದ 36 ವಿದ್ಯಾರ್ಥಿಗಳೂ ತೇರ್ಗಡೆಯಾಗಿ ಸಂಸ್ಥೆ ನೂರು ಶೇಕಡಾ ಫಲಿತಾಂಶ ದಾಖಲಿಸಿದೆ. 17 ವಿದ್ಯಾರ್ಥಿಗಳು ವಿಶೇಷ ಶ್ರೇಣಿಯಲ್ಲಿ ಉತ್ತೀರ್ಣರಾದರೆ 17 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಮೂಲಕ ತಾಲೂಕಿನ ಮೊದಲ ಎಂಟು ರ್ಯಾಂಕ್‌ ಗಳನ್ನು ಅಂಬಿಕಾ ವಿದ್ಯಾಲಯ ತನ್ನದಾಗಿಸಿಕೊಂಡಿದೆ. ಶ್ರೀಲಕ್ಷ್ಮೀ ಎಸ್.ಸಿ. 96.2% ಫಲಿತಾಂಶ ಪಡೆದು ತಾಲೂಕಿಗೆ ಪ್ರಥಮ, ಜಸ್ವಿತ್

ಸಿಬಿಎಸ್‌ಇ ಹತ್ತನೆಯ ತರಗತಿ ಫಲಿತಾಂಶ |100% ಫಲಿತಾಂಶ | ತಾಲೂಕಿನ ಮೊದಲ ಎಂಟು ಸ್ಥಾನಗಳನ್ನು ಬಾಚಿಕೊಂಡ ಅಂಬಿಕಾ ವಿದ್ಯಾರ್ಥಿಗಳು Read More »

ಎನ್‍ ಎಸ್‍ ಎಸ್‍ ಶಿಬಿರಗಳು ಬದುಕಿನ ಶಿಕ್ಷಣಕ್ಕೆ ಪೂರಕ | ವಿವೇಕಾನಂದ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಶಿಬಿರ ಉದ್ಘಾಟಿಸಿ ಶಿವರಾಮ ಪಿ.

ಪುತ್ತೂರು: ನಮ್ಮ ಜೀವನದಲ್ಲಿ ಶಿಕ್ಷಣ ಮಾತ್ರ ಮುಖ್ಯವಲ್ಲ ಶಿಕ್ಷಣದೊಂದಿಗೆ ಬದುಕಿಗೆ ಪೂರಕವಾದ ಅಂಶಗಳು ಬಹುಮುಖ್ಯ. ಎನ್.ಎಸ್.ಎಸ್  ಶಿಬಿರದಿಂದ ಬದುಕಿಗೆ ಪೂರಕವಾದ ಶಿಕ್ಷಣವನ್ನು ಪಡೆಯಬಹುದು ಎಂದು ಶ್ರೀ ಕ್ಷೇತ್ರ ಹನುಮಗಿರಿಯ ಧರ್ಮದರ್ಶಿ ಶಿವರಾಮ ಪಿ. ಹೇಳಿದರು. ಅವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ನೇತೃತ್ವದಲ್ಲಿ ರಾಷ್ಟ್ರೀಯ ಸೇವಾ ಯೋಜನೆ, ಹನುಮಗಿರಿ ಶ್ರೀ ಗಜಾನನ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ಶ್ರೀ ಗಜಾನನ ವಿದ್ಯಾಸಂಸ್ಥೆಯಲ್ಲಿ ನಡೆದ ವಿಜ್ಞಾನ ಮತ್ತು ವೈಜ್ಞಾನಿಕ ಮನೋಧರ್ಮಕ್ಕಾಗಿ ಯುವಜನತೆ ಎಂಬ ಶಿರೋನಾಮೆಯಲ್ಲಿ ಕೌಶಲ್ಯ ಮತ್ತು ಉದ್ಯಮಶೀಲತ್ವದ

ಎನ್‍ ಎಸ್‍ ಎಸ್‍ ಶಿಬಿರಗಳು ಬದುಕಿನ ಶಿಕ್ಷಣಕ್ಕೆ ಪೂರಕ | ವಿವೇಕಾನಂದ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಶಿಬಿರ ಉದ್ಘಾಟಿಸಿ ಶಿವರಾಮ ಪಿ. Read More »

ಪ್ರೊ.ಕೃಷ್ಣ ಕಾರಂತ್ ಅವರಿಗೆ ಡಾಕ್ಟರೇಟ್ ಪದವಿ

ಪುತ್ತೂರು: ವಿವೇಕಾನಂದ ಪದವಿ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಕೃಷ್ಣ ಕಾರಂತ್ ಅವರು ಆಂದ್ರಪ್ರದೇಶದ ಕುಪ್ಪಂ ನ  ದ್ರಾವಿಡಿಯನ್ ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿದ ಸಿಂಥೆಸಿಸ್ “Synthesis and Characterizations of some bioactive molecules: Triazolopyrimidine, Quinoline,Benzisoxalzole and Benzimidazole Derivatives ” ಎಂಬ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ದೊರೆತಿದೆ. ಅವರು ಉಜಿರೆ ಎಸ್.ಡಿ.ಎಂ. ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಮತ್ತು ಸ್ನಾತಕೋತ್ತರ ವಿಭಾಗದ ಡೀನ್ ಡಾ.ಪಿ.ವಿಶ್ವನಾಥ್ ಅವರ ಮಾರ್ಗದರ್ಶನದಲ್ಲಿ  ಮಹಾಪ್ರಬಂಧವನ್ನು ಮಂಡಿಸಿದ್ದಾರೆ. ಪ್ರೊ.ಕೃಷ್ಣ ಕಾರಂತ್

ಪ್ರೊ.ಕೃಷ್ಣ ಕಾರಂತ್ ಅವರಿಗೆ ಡಾಕ್ಟರೇಟ್ ಪದವಿ Read More »

ಸಂತ ಫಿಲೋಮಿನಾ ಕಾಲೇಜಿನ ಜೀವ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಂದ ಪರಿಸರ ಅಧ್ಯಯನ : ಶೈಕ್ಷಣಿಕ ಪ್ರವಾಸ

ಪುತ್ತೂರು : ಸಂತ ಫಿಲೋಮಿನಾ ಕಾಲೇಜಿನ ಸಸ್ಯಶಾಸ್ತ್ರ ವಿಭಾಗ, ಪ್ರಾಣಿಶಾಸ್ತ್ರ ವಿಭಾಗ ಹಾಗೂ ಇಕೋ ಕ್ಲಬ್ ಗಳ  ಸಂಯುಕ್ತ ಆಶ್ರಯದಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಒಂದು ದಿನದ ಶೈಕ್ಷಣಿಕ ಪ್ರವಾಸವನ್ನು ಕೈಗೊಂಡರು. ಪ್ರಾರಂಭದಲ್ಲಿ ಕೊಯ್ಲದ ಪಶುಸಂಗೋಪನ ಕೇಂದ್ರಕ್ಕೆ ಭೇಟಿ ನೀಡಿ ಪಶು ಸಂರಕ್ಷಣೆ, ಅವುಗಳ ಆಹಾರ ಪದ್ಧತಿ, ಪಶುಗಳ ಆರೈಕೆಯ ವಿಧಾನಗಳು, ಮಾನವ ಕೃಷಿ ಪದ್ಧತಿ ಮತ್ತು ಪಶುಗಳ ನಡುವೆ ಇರುವ ಅವಿನಾಭಾವ ಸಂಬಂಧ ಮುಂತಾದ ವಿಷಯಗಳ ಬಗ್ಗೆ ಅಧ್ಯಯನ ನಡೆಸಿದರು. ನಂತರ ಅವರು ಕೋಳಿಸಾಕಣೆಯ ವಿವಿಧ

ಸಂತ ಫಿಲೋಮಿನಾ ಕಾಲೇಜಿನ ಜೀವ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಂದ ಪರಿಸರ ಅಧ್ಯಯನ : ಶೈಕ್ಷಣಿಕ ಪ್ರವಾಸ Read More »

error: Content is protected !!
Scroll to Top