ಕ್ಯಾಂಪಸ್‌

ವಿಶ್ವವಿದ್ಯಾನಿಲಯ ಪರೀಕ್ಷೆಯಲ್ಲಿ ವಿವೇಕಾನಂದ ಕಾಲೇಜಿಗೆ ರ್‍ಯಾಂಕ್

ಪುತ್ತೂರು: ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ 2022-23ನೇ ಸಾಲಿನ ಪದವಿ ಪರೀಕ್ಷೆಗಳಲ್ಲಿ ವಿವೇಕಾನಂದ ಪದವಿ ಕಾಲೇಜಿಗೆ ಮೂರು ರ್‍ಯಾಂಕ್‌ಗಳು ಲಭ್ಯವಾಗಿವೆ. ಬಿಎಸ್ಸಿ ಪರೀಕ್ಷೆಯಲ್ಲಿ ಪಿಎಂಸಿ ವಿಭಾಗದಲ್ಲಿ ಶರಧಿ ಎಸ್.ಕೆ 4200 ರಲ್ಲಿ 4087  ಅಂಕ ಪಡೆದು ಐದನೇಯ ರ್‍ಯಾಂಕ್ ಪಡೆದುಕೊಂಡಿದ್ದಾರೆ. ಇವರು ವಿಟ್ಲದ ಕೇಶವಯ್ಯ ಎಸ್ ಹಾಗೂ ಶಶಿಕಲಾ ದಂಪತಿ ಪುತ್ರಿ. ಕಲಾ ವಿಭಾಗದ ಎಚ್‌ ಇಪಿ ವಿಭಾಗದಲ್ಲಿ ಸೃಜನಿ ಎಸ್.ಆರ್.  3748 ಅಂಕ ಪಡೆದು ಐದನೇಯ ರ್‍ಯಾಂಕ ಪಡೆದಿದ್ದಾರೆ. ಅವರು ಕಡಬದ ರಾಮಚಂದ್ರ ಹಾಗೂ ಭವಾನಿ ದಂಪತಿ […]

ವಿಶ್ವವಿದ್ಯಾನಿಲಯ ಪರೀಕ್ಷೆಯಲ್ಲಿ ವಿವೇಕಾನಂದ ಕಾಲೇಜಿಗೆ ರ್‍ಯಾಂಕ್ Read More »

ಸಂತ ಫಿಲೋಮಿನಾ ಕಾಲೇಜಿನಲ್ಲಿ ಇಂಟ್ರಾ ಡಿಪಾರ್ಟ್‌ಮೆಂಟ್‌ ಐಟಿ ಫೆಸ್ಟ್‌ ವಿಶನ್- 24 ಕ್ಕೆ ಚಾಲನೆ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಗಣಕ ವಿಜ್ಞಾನ ವಿಭಾಗ ಹಾಗೂ ಪಿನ್ಯಾಕಲ್‌ ಐಟಿ ಕ್ಲಬ್‌ಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಇಂಟ್ರಾ ಡಿಪಾರ್ಟ್‌ಮೆಂಟ್‌ ಐಟಿ ಫೆಸ್ಟ್‌ ವಿಶನ್-24 ಸ್ಪರ್ಧೆಗಳಿಗೆ ಕಾಲೇಜಿನ ಬೆಳ್ಳಿಹಬ್ಬ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು. ಕಾಲೇಜಿನ ಪ್ರಾಂಶುಪಾಲ ವಂ.ಡಾ. ಆ್ಯಂಟನಿ ಪ್ರಕಾಶ್‌ ಮೊಂತೇರೊ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ಅನುಭವಗಳು ಜೀವನದಲ್ಲಿ ಹೆಚ್ಚಿನ ಪಾಠ ಕಲಿಸುತ್ತವೆ. ನಮ್ಮನ್ನು ಕೆಣಕುವವರು, ಟೀಕಿಸುವವರು ಸಮಾಜದಲ್ಲಿ ಸಾಕಷ್ಟು ಜನರಿರುತ್ತಾರೆ. ಅವರ ಟೀಕೆ ಟಿಪ್ಪಣಿಗಳನ್ನು ನಮ್ಮಲ್ಲಿ ಧನಾತ್ಮಕ ಬದಲಾವಣೆಗಳನ್ನು ತರುವುದಕ್ಕೆ ಮಾತ್ರವೇ ಬಳಸಿಕೊಳ್ಳಬೇಕು

ಸಂತ ಫಿಲೋಮಿನಾ ಕಾಲೇಜಿನಲ್ಲಿ ಇಂಟ್ರಾ ಡಿಪಾರ್ಟ್‌ಮೆಂಟ್‌ ಐಟಿ ಫೆಸ್ಟ್‌ ವಿಶನ್- 24 ಕ್ಕೆ ಚಾಲನೆ Read More »

ಬಪ್ಪಳಿಗೆ ಅಂಬಿಕಾ ಕಾಲೇಜಿಗೆ ವಿಶ್ವವಿದ್ಯಾನಿಲಯ ಮಟ್ಟದ ಎರಡು ರ್ಯಾಂಕ್

ಪುತ್ತೂರು: ಬಪ್ಪಳಿಗೆ ಅಂಬಿಕಾ ಮಹಾವಿದ್ಯಾಲಯದ ಇಬ್ಬರು ವಿದ್ಯಾರ್ಥಿನಿಯರು ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ರ್ಯಾಂಕ್ ಗೆ ಭಾಜನರಾಗಿದ್ದಾರೆ. ಬಿ.ಎಸ್ಸಿ ವಿಭಾಗದಲ್ಲಿ ಪೆರ್ಲದ ಪಡ್ರೆ ನಿವಾಸಿಗಳಾದ ಬಾಲಚಂದ್ರ ಬಿ.ವಿ ಹಾಗೂ ಪ್ರಿಯಾ ವಿ ದಂಪತಿ ಪುತ್ರಿ ವರೇಣ್ಯಾ ಒಟ್ಟು 4200  ಅಂಕಗಳಲ್ಲಿ 4093 ಅಂಕ ಗಳಿಸಿ 97.45 ಶೇ. ದೊಂದಿಗೆ ಮೂರನೇ ರ್ಯಾಂಕ್ ಗಳಿಸಿದ್ದಾರೆ. ಬಿ.ಎ ವಿಭಾಗದಲ್ಲಿ ಪುತ್ತೂರಿನ ವಾಲ್ತಾಜೆ ನಿವಾಸಿ ಸತ್ಯನಾರಾಯಣ ಭಟ್ ಹಾಗೂ ವಿನಯಾ ದಂಪತಿ ಪುತ್ರಿ ನಯನಾ ಒಟ್ಟು 3814 ಅಂಕ ಗಳಿಸಿ 90.81 ಶೇ.

ಬಪ್ಪಳಿಗೆ ಅಂಬಿಕಾ ಕಾಲೇಜಿಗೆ ವಿಶ್ವವಿದ್ಯಾನಿಲಯ ಮಟ್ಟದ ಎರಡು ರ್ಯಾಂಕ್ Read More »

ನಾಳೆ (ಮೇ 31): ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಾಜ್ಯಮಟ್ಟದ ಐ2 ಕನೆಕ್ಟ್-2024 ಪ್ರಾಜೆಕ್ಟ್‌ಗಳ ಪ್ರದರ್ಶನ

ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿ ಮತ್ತು ಐಇಇಇ ಮಂಗಳೂರು ಉಪ ವಿಭಾಗದ ಸಂಯುಕ್ತ ಆಶ್ರಯದಲ್ಲಿ ನವದೆಹಲಿ ಐಎಸ್‌ಟಿಇ, ವಿವೇಕಾನಂದ ಸೆಂಟರ್ ಫಾರ್ ರೀಸರ್ಚ್ ಸ್ಟಡೀಸ್, ಇನ್ಸ್ಟಿಟ್ಯೂಶನ್ ಇನ್ನೋವೇಶನ್ ಕೌನ್ಸಿಲ್ ಹಾಗೂ ಐಇಇಇ ವಿಸಿಇಟಿ ವಿದ್ಯಾರ್ಥಿ ವಿಭಾಗದ ಸಹಭಾಗಿತ್ವದಲ್ಲಿ ರಾಜ್ಯಮಟ್ಟದ ಐ2 ಕನೆಕ್ಟ್-2024 ಪ್ರಾಜೆಕ್ಟ್‌ಗಳ ಪ್ರದರ್ಶನ ಮೇ 31 ನಾಳೆ ಕಾಲೇಜಿನ ಆವರಣದಲ್ಲಿ ಏರ್ಪಡಿಸಲಾಗಿದೆ. ಇದೊಂದು ಐಇಇಇ ಮಂಗಳೂರು ಉಪ ವಿಭಾಗದ ಪ್ರಮುಖ ಕಾರ್ಯಕ್ರಮವಾಗಿದ್ದು, ವಿದ್ಯಾರ್ಥಿಗಳ ನವ-ನವೀನ ಯೋಜನೆಗಳ ಪ್ರದರ್ಶನಕ್ಕೆ ವೇದಿಕೆಯಾಗಿದೆ. ಅಲ್ಲದೆ

ನಾಳೆ (ಮೇ 31): ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಾಜ್ಯಮಟ್ಟದ ಐ2 ಕನೆಕ್ಟ್-2024 ಪ್ರಾಜೆಕ್ಟ್‌ಗಳ ಪ್ರದರ್ಶನ Read More »

ವಿದ್ಯಾಧ್ವನಿ – ಶಿಕ್ಷಕರ ಕಲಿಕಾ ಕಾರ್ಯಾಗಾರ

ಪುತ್ತೂರು: ಪ್ರಸಕ್ತ ಶೈಕ್ಷಣಿಕ ವರ್ಷದ ಪೂರ್ವಾರಂಭ ಯೋಜನೆಯಾದ ‘ವಿದ್ಯಾಧ್ವನಿ’ ಶಿಕ್ಷಕರ ಕಲಿಕಾ ಕಾರ್ಯಾಗಾರವನ್ನು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಆಯೋಜಿಸಲಾಯಿತು. ಶ್ರೀ ರಾಮಕುಂಜೇಶ್ವರ ಪ್ರೌಢಶಾಲಾ ಮುಖ್ಯ ಶಿಕ್ಷಕ ಸತೀಶ್ ಭಟ್ ಬಿಳಿನೆಲೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಶಿಕ್ಷಕರಾದ ನಾವು ಮಕ್ಕಳಲ್ಲಿರುವ ವೈಯಕ್ತಿಕ ವಿಭಿನ್ನತೆಗೆ ಅನುಗುಣವಾಗಿ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಶೈಕ್ಷಣಿಕ ಯೋಜನೆಯನ್ನು ರೂಪಿಸಬೇಕಾದ ಅಗತ್ಯತೆಯನ್ನು ತಿಳಿಸಿದರು. ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥೆ ಡಾ. ಶಿಲ್ಪಾ ಹೆಗ್ಡೆ ಮಾತನಾಡಿ, ವಿಶೇಷ ಅಗತ್ಯವುಳ್ಳ ಮಕ್ಕಳ ದೈಹಿಕ ಮಾನಸಿಕ,

ವಿದ್ಯಾಧ್ವನಿ – ಶಿಕ್ಷಕರ ಕಲಿಕಾ ಕಾರ್ಯಾಗಾರ Read More »

ಸಂತ ಫಿಲೋಮಿನಾ  ಕಾಲೇಜಿನ ಪ್ರಥಮ ಬಿ.ಬಿ.ಎ. ವಿದ್ಯಾರ್ಥಿನಿ ಅನಘ ಎಸ್. ರೈ ಕಂಪನಿ ಸೆಕ್ರೆಟರಿ ಪರೀಕ್ಷೆಯಲ್ಲಿ ತೇರ್ಗಡೆ

ಪುತ್ತೂರು: ಸಂತ ಫಿಲೋಮಿನಾ  ಕಾಲೇಜಿನ ಪ್ರಥಮ ಬಿ.ಬಿ.ಎ. ವಿದ್ಯಾರ್ಥಿನಿ ಅನಘ ಎಸ್. ರೈ ಕಂಪನಿ ಸೆಕ್ರೆಟರಿಯ ಪ್ರವೇಶ ಪರೀಕ್ಷೆ ಸಿ.ಯಸ್.ಇ.ಇ.ಟಿ. ಯಲ್ಲಿ ತೇರ್ಗಡೆಗೊಂಡಿದ್ದಾರೆ. ಅನಘ ಎಸ್. ರೈ ಸದಾಶಿವ ರೈ ಮತ್ತು ಧ್ಯಾನ ಎಸ್ ರೈ ದಂಪತಿ ಪುತ್ರಿಯಾಗಿದ್ದು, ಮಗಳ ಸಾಧನೆ ಬಗ್ಗೆ ಹೆತ್ತವರು ಸಂತಸ ವ್ಯಕ್ತ ಪಡಿಸಿದ್ದಾರೆ. ಅನಘ ಕುರಿತು ಕಾಲೇಜಿನ ಪ್ರಾಂಶುಪಾಲ ವಂ.ಡಾ. ಆ್ಯಂಟನಿ ಪ್ರಕಾಶ್‌ ಮೊಂತೇರೊ ಅಭಿಪ್ರಾಯ ವ್ಯಕ್ತ ಪಡಿಸಿ, ಪ್ರಥಮ ವರುಷದ ಪ್ರಥಮ ಬ್ಯಾಚ್ ನಲ್ಲಿ ವಿದ್ಯಾರ್ಥಿನಿ ಉತ್ತೀರ್ಣರಾಗಿರುವುದು ಅತಿ ಸಂತಸದ

ಸಂತ ಫಿಲೋಮಿನಾ  ಕಾಲೇಜಿನ ಪ್ರಥಮ ಬಿ.ಬಿ.ಎ. ವಿದ್ಯಾರ್ಥಿನಿ ಅನಘ ಎಸ್. ರೈ ಕಂಪನಿ ಸೆಕ್ರೆಟರಿ ಪರೀಕ್ಷೆಯಲ್ಲಿ ತೇರ್ಗಡೆ Read More »

ಅಕ್ಷಯ ಕಾಲೇಜಿನಲ್ಲಿ ‘ರೆಸ್ಯೂಮ್ ರೈಟಿಂಗ್ ಮತ್ತು ಇಂಟರ್ ವ್ಯೂ ಪ್ರಿಪೆರೇಶನ್’ ಕಾರ್ಯಾಗಾರ

ಪುತ್ತೂರು: ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಅಂತಿಮ ಪದವಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ರೆಸ್ಯೂಮ್ ರೈಟಿಂಗ್ ಮತ್ತು ಇಂಟರ್ ವ್ಯೂ ಪ್ರಿಪೆರೇಶನ್’ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ನ ಸ್ಥಾಪಕ ಡಾ. ಶ್ರೀಶ ಭಟ್, ವಿದ್ಯಾರ್ಥಿಗಳಿಗೆ ರೆಸ್ಯೂಮ್ ರೈಟಿಂಗ್ ಕುರಿತು ಮಾಹಿತಿ ನೀಡಿ, ಉದ್ಯೋಗವನ್ನು ಬಯಸುವ ವಿದ್ಯಾರ್ಥಿಗಳ ರೆಸ್ಯೂಮ್ ಹೇಗಿರಬೇಕು, ಯಾವೆಲ್ಲ ವಿಷಯಗಳನ್ನು ಒಳಗೊಂಡಿರಬೇಕು, ವಿದ್ಯಾರ್ಥಿಗಳು ಮಾಡುವಂತಹ ತಪ್ಪುಗಳು,

ಅಕ್ಷಯ ಕಾಲೇಜಿನಲ್ಲಿ ‘ರೆಸ್ಯೂಮ್ ರೈಟಿಂಗ್ ಮತ್ತು ಇಂಟರ್ ವ್ಯೂ ಪ್ರಿಪೆರೇಶನ್’ ಕಾರ್ಯಾಗಾರ Read More »

ವಿವೇಕಾನಂದ ಕಾಲೇಜಿನಲ್ಲಿ ಖೋಖೋ ಚಾಂಪಿಯನ್ ಶಿಪ್ ‘ಅಲ್ಟಿಮೇಟ್ ಟ್ರೋಫಿ -2024′

ಪುತ್ತೂರು: ಕ್ರೀಡೆ ಎನ್ನುವುದು ನಮ್ಮ ಸದೃಢ ಆರೋಗ್ಯಕ್ಕೆ ಬಹಳ ಸಹಕಾರಿ. ದೇಹಕ್ಕೆ ಸಮರ್ಪಕವಾದ ವ್ಯಾಯಾಮ ಸಿಕ್ಕಾಗ ನಮ್ಮ ಮಾನಸಿಕ ಆರೋಗ್ಯವು ಕೂಡಾ ವೃದ್ಧಿಯಾಗುತ್ತದೆ. ಕ್ರೀಡಾ ಪಂದ್ಯಾಟಗಳನ್ನು ಆಯೋಜಿಸುವುದರಿಂದ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ಸಿಗುತ್ತದೆ ಎಂದು ಉಪ್ಪಿನಂಗಡಿ ಎಸ್‌ ಬಿ ಐ ಬ್ಯಾಂಕ್ ನಿವೃತ್ತ ಉದ್ಯೋಗಿ ಜಿ. ಕೆ ಪೂವಪ್ಪ ಹೇಳಿದರು. ಅವರು ವಿವೇಕಾನಂದ ಕಾಲೇಜು ಕ್ರೀಡಾಂಗಣದಲ್ಲಿ ಅಲ್ಟಿಮೇಟ್ ಸ್ಪೋರ್ಟ್ಸ್ ಕ್ಲಬ್ ಪುತ್ತೂರು ಮತ್ತು ವಿವೇಕಾನಂದ ಕಾಲೇಜು (ಸ್ವಾಯತ್ತ) ಸಂಯುಕ್ತ ಆಶ್ರಯದಲ್ಲಿ ನಡೆದ ದ.ಕ. ಜಿಲ್ಲಾ ಮಟ್ಟದ ಪುರುಷರ

ವಿವೇಕಾನಂದ ಕಾಲೇಜಿನಲ್ಲಿ ಖೋಖೋ ಚಾಂಪಿಯನ್ ಶಿಪ್ ‘ಅಲ್ಟಿಮೇಟ್ ಟ್ರೋಫಿ -2024′ Read More »

ವಿವೇಕಾನಂದ ಕಾಲೇಜಿನಲ್ಲಿ ಕಾಮರ್ಸ್ ಫೆಸ್ಟ್ ಏಕತ್ರ -2024

ಪುತ್ತೂರು: ಒಂದು ಉದ್ಯಮವನ್ನು ಯಶಸ್ವಿಯಾಗಿ ನಡೆಸಲು ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ಆಗ ಅವುಗಳಿಗೆಲ್ಲ ಯೋಚಿಸಿ ಪರಿಹಾರವನ್ನು ಕಂಡುಕೊಂಡು ಮುಂದುವರೆಯುವ ಶಕ್ತಿ ನಮ್ಮಲ್ಲಿರಬೇಕು. ಉದ್ಯಮ ಕ್ಷೇತ್ರಕ್ಕೆ ಕೌಶಲ್ಯವೆನ್ನುವುದು ಅತ್ಯಗತ್ಯ. ಬದಲಾವಣೆಗೆ ನಾವು ಹೊಂದಿಕೊಂಡು ನಮ್ಮ ಕೆಲಸದಲ್ಲಿ ಹೊಸತನವನ್ನು ಕಂಡು ಯಶಸ್ವಿಗೊಳ್ಳಬೇಕು ಅದಕ್ಕಾಗಿ ನಿರಂತರವಾದ ಕಲಿಕೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳೋಣ ಎಂದು ಮಾಸ್ಟರ್ ಪ್ಲಾನರಿಯ ಆಕಾಶ್ ಎಸ್. ಕೆ ಹೇಳಿದರು. ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ(ಸ್ವಾಯತ್ತ)ದ  ವಾಣಿಜ್ಯ ವಿಭಾಗ, ಕಾಮರ್ಸ್ ಅಸೋಸಿಯೇಷನ್ ಹಾಗೂ ಐಕ್ಯೂಎಸಿ ಘಟಕದ ಸಹಯೋಗದಲ್ಲಿ

ವಿವೇಕಾನಂದ ಕಾಲೇಜಿನಲ್ಲಿ ಕಾಮರ್ಸ್ ಫೆಸ್ಟ್ ಏಕತ್ರ -2024 Read More »

ಎಸ್.ಆರ್.ಕೆ. ಲ್ಯಾಡರ್ಸ್ ನ ಮಾಲಕರಾದ ಕೇಶವ ಅಮೈ ಅವರಿಗೆ ಸಂಸ್ಥೆಯ ಸಿಬ್ಬಂದಿಗಳಿಂದ ಬೆಳ್ಳಿಯ ಏಣಿ ಅರ್ಪಿಸಿ ಗೌರವ ವಂದನೆ

ಕಡಬ: ಎಸ್‍.ಆರ್.ಕೆ. ಲ್ಯಾಡರ್ಸ್‍ ಸಂಸ್ಥೆಯ ರಜತ ಸಂಭ್ರಮದ ಸಮಾರೋಪ ಸಮಾರಂಭದ ಅಂಗವಾಗಿ ಎಸ್.ಆರ್.ಕೆ. ಲ್ಯಾಡರ್ಸ್ ಸಂಸ್ಥೆಯ ಸಿಬ್ಬಂದಿಗಳಿಂದ ಸಂಸ್ಥೆಯ ಮಾಲಕರಾದ ಕೇಶವ ಅಮೈ ಅವರನ್ನು ಸನ್ಮಾನಿಸಿ, ಗೌರವ ವಂದನೆ ಸಲ್ಲಿಸಿದರು. ಸಿಬ್ಬಂದಿಗಳು ಬೆಳ್ಳಿಯ ಏಣಿ ನೀಡಿ, ಶಾಲು ಹೊದಿಸಿ, ಹಾರ ಹಾಕಿ ಸನ್ಮಾನಿಸಿ ಗೌರವ ವಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಎಸ್.ಆರ್.ಕೆ. ಲ್ಯಾಡರ್ಸ್ ನ ಮಾಲಕರಾದ ಕೇಶವ ಅಮೈ ಅವರಿಗೆ ಸಂಸ್ಥೆಯ ಸಿಬ್ಬಂದಿಗಳಿಂದ ಬೆಳ್ಳಿಯ ಏಣಿ ಅರ್ಪಿಸಿ ಗೌರವ ವಂದನೆ Read More »

error: Content is protected !!
Scroll to Top