ಸಶಕ್ತ ರಾಷ್ಟ್ರ ನಿರ್ಮಾಣಕ್ಕೆ ಯುವ ಮನಸ್ಸುಗಳು ಒಂದಾಗಲಿ | ವಿವೇಕಾನಂದ ಕಾಲೇಜಿನ ನವಯುಗ -2024 ಕಾರ್ಯಕ್ರಮದಲ್ಲಿ ಕಿಶೋರ್ ಕುಮಾರ್ ಪುತ್ತೂರು
ಪುತ್ತೂರು: ನನ್ನ ಇಂದಿನ ಬೆಳವಣಿಗೆಯ ಬಹುಪಾಲು ಯಶಸ್ಸು ಪುತ್ತೂರು ವಿವೇಕಾನಂದ ಕಾಲೇಜಿಗೆ ಸಲ್ಲಬೇಕು. ವ್ಯಕ್ತಿತ್ವ ವಿಕಸನದ ಮೂಲಕ ಕಾಲೇಜು ಉತ್ತಮ ನಾಗರಿಕರನ್ನು ನೀಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ಹೇಳಿದರು. ಪುತ್ತೂರು ವಿವೇಕಾನಂದ ಕಾಲೇಜಿನ ನವಯುಗ 2024 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ವಿಧ್ಯಾಭ್ಯಾಸದ ಜೊತೆ ಜೀವನದ ಗುರಿಯನ್ನು ಸಾಧಿಸಲು ಬೇಕಾದ ಮಾನಸಿಕ ದೃಢತೆಯನ್ನು ಬೆಳೆಸಿಕೊಳ್ಳಿ. ದೇಶದ ಭವಿಷ್ಯದ ಶಕ್ತಿ ನೀವು. ಹೊಸತನದ ಚಿಂತನೆಗಳು ನಿಮ್ಮ ಮೂಲಕ ದೇಶಕ್ಕೆ ದೊರೆಯುವಂತಾಗಲಿ […]










