ಕ್ಯಾಂಪಸ್‌

ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಯವರ ನೂತನ ಕಛೇರಿ ಲೋಕಾರ್ಪಣೆ

ಪುತ್ತೂರು: ಶಾಲಾ ಶಿಕ್ಷಣ ಇಲಾಖೆಯ ಪುತ್ತೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯವರ ನೂತನ ಕಛೇರಿಯ ಉದ್ಘಾಟನೆ ಏಪ್ರಿಲ್ 5ರಂದು ನೂತನ  ಕಚೇರಿ ಆವರಣದಲ್ಲಿ ನಡೆಯಿತು. ಆರಂಭದಲ್ಲಿ ಶಾಸಕರಾದ ಅಶೋಕ್ ರೈ ಅವರು ರಿಬ್ಬನ್ ಕತ್ತರಿಸಿ ಕಛೇರಿಯೊಳಗಡೆ ದೀಪ ಪ್ರಜ್ವಲಿಸಿ ಕಚೇರಿಯನ್ನು ಉದ್ಘಾಟಿಸಿದರು. ಶಿಕ್ಷಕರು ನಮ್ಮ ಜಿಲ್ಲೆಯ ಮಕ್ಕಳನ್ನು ಪ್ರತಿಭಾವಂತರನ್ನಾಗಿ ರೂಪಿಸಿ ಹೆಚ್ಚು ಸರ್ಕಾರಿ ಉದ್ಯೋಗ ಸಿಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿ ಶಿಕ್ಷಣ ಇಲಾಖೆಯಿಂದ ಸಿಗುವ ಎಲ್ಲಾ ಅನುದಾನಗಳನ್ನು ತರಿಸಿಕೊಡುತ್ತೇನೆ ಎಂದು ವಾಗ್ದಾನ ನೀಡಿದರು. ಬಳಿಕ ಕಳೆದ ಸಾಲಿನಲ್ಲಿ 10ನೇ […]

ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಯವರ ನೂತನ ಕಛೇರಿ ಲೋಕಾರ್ಪಣೆ Read More »

ಸಂತ ಫಿಲೋಮಿನಾ ಕಾಲೇಜಿನಲ್ಲಿ ರಾಜ್ಯ ಮಟ್ಟದ ಐಟಿ ಫೆಸ್ಟ್‌ “ಪಿನ್ಯಾಕಲ್‌” ಗೆ ಚಾಲನೆ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಗಣಕವಿಜ್ಞಾನ ವಿಭಾಗ ಮತ್ತು ಪಿನ್ಯಾಕಲ್‌ ಐಟಿಕ್ಲಬ್‌ಗಳ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಮಟ್ಟದ ಐಟಿ ಫೆಸ್ಟ್‌ ಪಿನ್ಯಾಕಲ್‌-25 ಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು. ಸೋಷಿಯಲ್‌ ಮೀಡಿಯಾ ಇನ್‌ ಪ್ಲುಎನ್ಸರ್‌ ಹಾಗೂ ತುಳು ಕಂಟೆಂಟ್‌ ಕ್ರಿಯೇಟರ್‌ ಶರಣ್‌ ಚಿಲಿಂಬಿ ದೀಪ ಬೆಳಗಿಸುವುದರ ಮೂಲಕ ಐಟಿ ಫೆಸ್ಟ್‌ ನ್ನು ಉದ್ಘಾಟಿಸಿ ಮಾತನಾಡಿ, “ಪಾಠಗಳಿಂದ ಮಾತ್ರವಲ್ಲದೆ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಬಹಳಷ್ಟು ಕಲಿಯಲು ಸಾಧ್ಯವಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವುದು ಹೆಚ್ಚು ಮುಖ್ಯ. ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಜನರು ಇತರರಿಗಿಂತ ಒಂದು ಹೆಜ್ಜೆ

ಸಂತ ಫಿಲೋಮಿನಾ ಕಾಲೇಜಿನಲ್ಲಿ ರಾಜ್ಯ ಮಟ್ಟದ ಐಟಿ ಫೆಸ್ಟ್‌ “ಪಿನ್ಯಾಕಲ್‌” ಗೆ ಚಾಲನೆ Read More »

ಎ.ವಿ.ಜಿ. ಇಂಗ್ಲೀಷ್ ಮೀಡಿಯಂ ಸ್ಕೂಲ್’ನ ಮುಖ್ಯೋಪಾಧ್ಯಾಯರಾಗಿ ಅಮರನಾಥ್

ಪುತ್ತೂರು: ಬನ್ನೂರಿನ ಅಲಂಬುಡದಲ್ಲಿ ಕಾರ್ಯಾಚರಿಸುತ್ತಿರುವ ಎ.ವಿ.ಜಿ. ಇಂಗ್ಲೀಷ್ ಮೀಡಿಯಂ ಸ್ಕೂಲ್’ನ ಮುಖ್ಯೋಪಾಧ್ಯಾಯರಾಗಿ ಅಮರನಾಥ್ ಪಟ್ಟೆ ಅಧಿಕಾರ ಸ್ವೀಕರಿಸಿದರು. ಇಂದು ಶಾಲೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಶಾಲಾ ಅಧ್ಯಕ್ಷ ಕಳುವಾಜೆ ವೆಂಕಟ್ರಮಣ ಗೌಡರು ನೂತನ ಮುಖ್ಯೋಪಾಧ್ಯಾಯರಿಗೆ ನೇಮಕಾತಿ ಆದೇಶ ಪತ್ರ ಮತ್ತು ಶಾಲಾ ಕಡತಗಳನ್ನು ನೀಡಿ ಶಾಲು ಹೊದಿಸಿ ಶುಭ ಹಾರೈಸಿದರು. ಸಂಚಾಲಕರಾದ ಎ.ವಿ. ನಾರಾಯಣ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ, ನೂತನ ಪ್ರಾಂಶುಪಾಲರನ್ನು ಪರಿಚಯಿಸಿದರು. ನಿರ್ದೇಶಕರಾದ ಸೀತಾರಾಮ ಕೇವಳ ಮಾತನಾಡಿ ನೂತನ ಪ್ರಾಂಶುಪಾಲರಿಗೆ ಶುಭ ಹಾರೈಸಿದರು. ಆಡಳಿತಾಧಿಕಾರಿ ಗುಡ್ಡಪ್ಪ

ಎ.ವಿ.ಜಿ. ಇಂಗ್ಲೀಷ್ ಮೀಡಿಯಂ ಸ್ಕೂಲ್’ನ ಮುಖ್ಯೋಪಾಧ್ಯಾಯರಾಗಿ ಅಮರನಾಥ್ Read More »

ಸಂತ ಫಿಲೋಮಿನಾದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ

ಪುತ್ತೂರು: ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜು, ಯಕ್ಷ ಕಲಾಕೇಂದ್ರ ಹಾಗೂ ಲಲಿತಕಲಾ ಸಂಘದ ಆಶ್ರಯದಲ್ಲಿ ವಿಶ್ವ ರಂಗಭೂಮಿ ದಿನವನ್ನು ಆಚರಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಐಕ್ಯೂಎಸಿ ಸಂಯೋಜಕಿ, ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ.ಮಾಲಿನಿ ಕೆ.  ‘ರಂಗಭೂಮಿಯಲ್ಲಿ ಸೃಜನಶೀಲತೆ’ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿ,  ರಂಗಭೂಮಿಯು ನಿರಂತರತೆಯನ್ನು ಹೊಂದಿ ಹೊಸ ಸ್ವರೂಪಗಳಿಗೆ ತೆರೆದಿರಬೇಕಾದ ಅಗತ್ಯತೆಯ ಬಗ್ಗೆ ತಿಳಿಸುತ್ತಾ, ರಂಗಭೂಮಿಯ ಪ್ರಸ್ತುತಿಯನ್ನು ಅನುಭವಿಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಸಂಸ್ಥೆಯ ಪ್ರಾಂಶುಪಾಲ ಡಾ. ಆ್ಯಂಟನಿ ಪ್ರಕಾಶ್‍ ಮೊಂತೆರೊ ಅಧ್ಯಕ್ಷತೆ ವಹಿಸಿ ಮಾತನಾಡಿ,

ಸಂತ ಫಿಲೋಮಿನಾದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ Read More »

ಸಂತ ಫಿಲೋಮಿನಾ ಕಾಲೇಜಿನಲ್ಲಿ ಎಂಸಿಎ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಪರೀಕ್ಷೆಗೆ ಚಾಲನೆ

ಪುತ್ತೂರು: ಸಂತ ಫಿಲೋಮಿನಾ ಕಾಲೇಜು ಸ್ವಾಯತ್ತತೆಯನ್ನು ಪಡೆದ ಬಳಿಕ ಪ್ರಥಮ ವರ್ಷದ ಎಂಸಿಎ ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ದ್ವಿತೀಯ ಆಂತರಿಕ ಪರೀಕ್ಷೆಗಳನ್ನು ಆನ್‌ಲೈನ್‌ ಮೂಲಕ ನಡೆಸಲಾಯಿತು. ಪರೀಕ್ಷಾ ಪ್ರಕ್ರಿಯೆಯ ಗೌಪ್ಯತೆ ಹಾಗೂ ಸಮಗ್ರತೆಗಳನ್ನು ಕಾಪಾಡಿಕೊಳ್ಳಲು ಆನ್‌ಲೈನ್‌ ಪರೀಕ್ಷೆಗಳಿಗೆ ಕಾಲೇಜು ಬಳಸುವ ಸಾಫ್ಟ್‌ವೇರ್ ವಿದ್ಯಾರ್ಥಿಗಳು ಪರೀಕ್ಷೆಯ ಸಮಯದಲ್ಲಿ ಯಾವುದೇ ಇತರ ವೆಬ್‌ಸೈಟ್‌ಗಳನ್ನು ಪ್ರವೇಶಿಸುವುದನ್ನು ಅಥವಾ ಯಾವುದೇ ರೀತಿಯ ಅವ್ಯವಹಾರಗಳಲ್ಲಿ   ತೊಡಗಿಸಿಕೊಳ್ಳುವುದನ್ನು ನಿರ್ಬಂಧಿಸುವ ಮೂಲಕ ಸುರಕ್ಷಿತ ಪರೀಕ್ಷಾ ವಾತಾವರಣವನ್ನು ಖಾತ್ರಿಗೊಳಿಸುತ್ತದೆ. ವಿದ್ಯಾರ್ಥಿಳು ಪರೀಕ್ಷೆಯ ಸಂದರ್ಭದಲ್ಲಿ ತಮ್ಮ ಕಂಪ್ಯೂಟರ್‌ನ ವೆಬ್‌ ಕ್ಯಾಮರಾವನ್ನು ಚಾಲ್ತಿಯಲ್ಲಿರಿಬೇಕಾಗಿದ್ದು 

ಸಂತ ಫಿಲೋಮಿನಾ ಕಾಲೇಜಿನಲ್ಲಿ ಎಂಸಿಎ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಪರೀಕ್ಷೆಗೆ ಚಾಲನೆ Read More »

ಜಿಡೆಕಲ್ಲು ಸರಕಾರಿ ಕಾಲೇಜಿನಲ್ಲಿ ಜಾನಪದ ಉತ್ಸವ

ಪುತ್ತೂರು: ಜಿಡೆಕಲ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ’ ಎಂಬ ಶಿರೋನಾಮೆಯಲ್ಲಿ ‘ಜಾನಪದ ಉತ್ಸವ-2025’ ನಡೆಯಿತು. ಉಡುಪಿಯ ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಮತ್ತು ಸಹಾಯಕ ಪ್ರಾಧ್ಯಾಪಕಿ ಡಾ. ಹರಿಣಾಕ್ಷಿ ಎಂ.ಡಿ.ಯವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ತುಳುನಾಡ ಜಾನಪದ ಸಂಸ್ಕೃತಿ ಶ್ರೇಷ್ಠವಾಗಿದ್ದು ಅದು ಭಾರತೀಯ ಸಂಸ್ಕೃತಿಗೆ ಪ್ರಮುಖ ಕೊಡುಗೆಯಾಗಿದೆ. ಜನಪದ ಸಾಹಿತ್ಯದ ಪ್ರಕಾರಗಳಾದ ಗಾದೆ, ಒಗಟು, ಪಾಡ್ದನ ಮತ್ತು ಕತೆಗಳು ಜೀವನ ಮೌಲ್ಯಗಳನ್ನು ತಲೆಮಾರುಗಳ ಮೂಲಕ ದಾಟಿಸುವ ಪ್ರಮುಖ ಮಾಧ್ಯಮಗಳಾಗಿವೆ

ಜಿಡೆಕಲ್ಲು ಸರಕಾರಿ ಕಾಲೇಜಿನಲ್ಲಿ ಜಾನಪದ ಉತ್ಸವ Read More »

ಪುತ್ತೂರು ರೋಟರಿ ಕ್ಲಬ್ ಗೆ 60 ರ ಸಂಭ್ರಮ | ವಿವಿಧ ಸಮಾಜಮುಖಿ ಯೋಜನೆಗಳ ಲೋಕಾರ್ಪಣೆ

ಪುತ್ತೂರು: 60 ರ ಸಂಭ್ರಮದಲ್ಲಿರುವ ಪುತ್ತೂರು ರೋಟರಿ ಕ್ಲಬ್‍ ವತಿಯಿಂದ ಹಲವಾರು ಸಮಾಜಮುಖಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಡಾ.ಶ್ರೀಪತಿ ರಾವ್‍ ತಿಳಿಸಿದ್ದಾರೆ. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಜಗತ್ತಿನಾದ್ಯಂತ ಹಲವು ಕ್ಲಬ್‍ ಗಳು, ಕೆಲವು ಲಕ್ಷ ಸದಸ್ಯರಿದ್ದಾರೆ. 34 ಹಿರಿಯ ಗಣ್ಯ ವ್ಯಕ್ತಿಗಳ ದೂರದೃಷ್ಟಿಯಿಂದ ಬೆಳೆದು ಬಂದ ಪುತ್ತೂರು ರೋಟರಿ ಕ್ಲಬ್‍ ತನ್ನದೇ ಆದ ಕೊಡುಗೆಯನ್ನು ಪುತ್ತೂರಿನ ಜನತೆಗೆ ನೀಡುತ್ತಾ ಬಂದಿದೆ ಎಂದ ಅವರು, 2024-25ನೇ ಸಾಲಿನಲ್ಲಿ ಹಮ್ಮಿಕೊಂಡ ಹಾಗೂ ಮುಂದೆ ಹಮ್ಮಿಕೊಳ್ಳುವ

ಪುತ್ತೂರು ರೋಟರಿ ಕ್ಲಬ್ ಗೆ 60 ರ ಸಂಭ್ರಮ | ವಿವಿಧ ಸಮಾಜಮುಖಿ ಯೋಜನೆಗಳ ಲೋಕಾರ್ಪಣೆ Read More »

ಸಂತ ಫಿಲೋಮಿನಾ ಕಾಲೇಜಿನಲ್ಲಿ “ನಾವೀನ್ಯತೆಯಲ್ಲಿ ಮಹಿಳೆಯರ ಪಾತ್ರ” ಉಪನ್ಯಾಸ ಕಾರ್ಯಕ್ರಮ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಇನ್‌ಸ್ಟಿಟ್ಯೂಶನ್ಸ್ ಇನ್ನೊವೇಶನ್ ಕೌನ್ಸಿಲ್ (ಐಐಸಿ) ಹಾಗೂ ಗಣಕವಿಜ್ಞಾನ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ  ‘ನಾವೀನ್ಯತೆಯಲ್ಲಿ ಮಹಿಳೆಯರ ಪಾತ್ರ’ ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ಕಾಲೇಜಿನ ಸ್ಪಂದನ ಸಭಾಭವನದಲ್ಲಿ ಆಯೋಜಿಸಲಾಯಿತು. ಸಂತ ಫಿಲೋಮಿನಾ ವಿಮೆನ್ಸ್ ಹಾಸ್ಟೆಲ್‌ನ ವಾರ್ಡನ್ ಸಿಸ್ಟರ್ ಲೂರ್ದ್ ಮೇರಿ ಸಂಪನ್ಮೂಲವ್ಯಕ್ತಿಯಾಗಿ, ಆಧುನಿಕ ಜಗತ್ತಿನಲ್ಲಿ ಮಹಿಳೆಯರು ಯಾವರೀತಿಯ ಸಾಧನೆ ಮಾಡಿರುತ್ತಾರೆ ಎಂಬುದನ್ನು ತಿಳಿಸಿದ ಅವರು, ನಾವು ಯಾವತ್ತೂ ಬೇರೆಯವರಿಂದ ಸ್ಪೂರ್ತಿ ಪಡೆಯುತ್ತೇವೆ. ನಮ್ಮಲ್ಲಿ ಅಂತರ್ಗತವಾದ ಅಗಾಧ ಶಕ್ತಿಯ ಅರಿವು ನಮಗಿರುವುದಿಲ್ಲ. ಯಾವುದೇ

ಸಂತ ಫಿಲೋಮಿನಾ ಕಾಲೇಜಿನಲ್ಲಿ “ನಾವೀನ್ಯತೆಯಲ್ಲಿ ಮಹಿಳೆಯರ ಪಾತ್ರ” ಉಪನ್ಯಾಸ ಕಾರ್ಯಕ್ರಮ Read More »

ಎವಿಜಿ ಆಂಗ್ಲ ಮಾಧ್ಯಮ ಶಾಲೆಯ ಆಡಳಿತಾಧಿಕಾರಿಯಾಗಿ ಗುಡ್ಡಪ್ಪ ಗೌಡ ಬಲ್ಯ

ಪುತ್ತೂರು: ಕೃಷ್ಣ ನಗರದ ಅಲಂಬುಡದಲ್ಲಿರುವ ಎ.ವಿ.ಜಿ. ಆಂಗ್ಲ ಮಾಧ್ಯಮ ಶಾಲೆಯ ಆಡಳಿತಾಧಿಕಾರಿಯಾಗಿ ನಿವೃತ್ತ ಉಪನ್ಯಾಸಕ, ಜೇಸೀ ತರಬೇತುದಾರ ಮತ್ತು ಖ್ಯಾತ ಯಕ್ಷಗಾನ ತಾಳಮದ್ದಳೆ ಅರ್ಥದಾರಿಯೂ ಆಗಿರುವ ಗುಡ್ಡಪ್ಪ ಗೌಡ ಬಲ್ಯ ಅವರು ಅಧಿಕಾರ ಸ್ವೀಕರಿಸಿದರು. 35 ವರ್ಷಗಳ ಬೋಧನ ಅನುಭವ ಇರುವ ಇವರು ಈ ಶಾಲೆಯ ಆರಂಭದಿಂದಲೇ ಆಡಳಿತ ಮಂಡಳಿಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಸಂಸ್ಥೆಯ ಅಧ್ಯಕ್ಷ  ವೆಂಕಟ್ರಮಣ ಗೌಡ ಕಳುವಾಜೆಯವರು ದಾಖಲೆಗಳ ಕಡತಗಳನ್ನು ನೀಡಿ ಶ್ರೀಯುತರನ್ನು ಆಡಳಿತಾಧಿಕಾರಿಯೆಂದು ಘೋಷಿಸಿ ಶುಭ ಹಾರೈಸಿದರು. ನಿರ್ದೇಶಕರಾದ ಗೌರಿ ಬನ್ನೂರು, ಗಂಗಾಧರ

ಎವಿಜಿ ಆಂಗ್ಲ ಮಾಧ್ಯಮ ಶಾಲೆಯ ಆಡಳಿತಾಧಿಕಾರಿಯಾಗಿ ಗುಡ್ಡಪ್ಪ ಗೌಡ ಬಲ್ಯ Read More »

ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ಅಗ್ನಿ ಸುರಕ್ಷತೆಯ ಜಾಗೃತಿ ಕಾರ್ಯಕ್ರಮ

ಪುತ್ತೂರು: ಬೆಂಕಿ ನಮ್ಮ ಮಿತ್ರನೂ ಹೌದು ಶತ್ರುವೂ ಹೌದು. ಆದರೆ ಅದನ್ನು ಬಳಸುವಲ್ಲಿ ವ್ಯತ್ಯಯ ಉಂಟಾದರೆ ಅದರಿಂದ ಸಾವು ನೋವುಗಳು, ಕಷ್ಟ ನಷ್ಟಗಳು ಉಂಟಾಗಬಹುದು. ಹಾಗಾಗಿ ಇದರ ಬಗ್ಗೆ ಸೂಕ್ತ ಮುನ್ನೆಚ್ಚರಿಕೆಯ ಜತೆಗೆ ಅಗ್ನಿ ಅವಘಡಗಳ ನಿಯಂತ್ರಣದ ಬಗ್ಗೆಯೂ ನಾವು ಜಾಗೃತರಾಗಿರಬೇಕು ಎಂದು  ಪುತ್ತೂರು ಅಗ್ನಿಶಾಮಕ ಮತ್ತು ತುರ್ತುಸೇವಾ ಠಾಣೆಯ ಪ್ರಮುಖ ಅಗ್ನಿಶಾಮಕ ರುಕ್ಮಯ ಗೌಡ ಹೇಳಿದರು. ಅವರು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ಎಂಬಿಎ ಮತ್ತು ಎನ್‌ಎಸ್‌ಎಸ್ ವಿಭಾಗದ ವತಿಯಿಂದ ಏರ್ಪಡಿಸಲಾದ ಅಗ್ನಿ

ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ಅಗ್ನಿ ಸುರಕ್ಷತೆಯ ಜಾಗೃತಿ ಕಾರ್ಯಕ್ರಮ Read More »

error: Content is protected !!
Scroll to Top