ಕ್ಯಾಂಪಸ್‌

ಪಡ್ಡಾಯೂರು ಅಂಗನವಾಡಿಯಲ್ಲಿ ಬಾಲಮೇಳ

ಪುತ್ತೂರು : ಬಾಲಮೇಳ ಕಾರ್ಯಕ್ರಮ ಭಾನುವಾರ ಪಡ್ಡಾಯೂರು ಅಂಗನವಾಡಿ ಕೇಂದ್ರದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಗರ್ಭಿಣಿಯರಿಗೆ ಪೋಷಣೆ, ಮೊಟ್ಟೆ ಕೊಡುವ ಕೇಂದ್ರ, ಮತದಾರ ಪಟ್ಟಿ ಸೇರ್ಪಡೆ ಶ್ರೀ ಶಕ್ತಿ ಸಂಘ ಮಹಿಳಾ ಸಂಘ ಹೀಗೆ ಹಲವು ಕಾರ್ಯಕ್ರಮ ಗಳಿಗೆ ಒಂದು ಕೇಂದ್ರವಾಗಿ ಅಂಗನವಾಡಿ ಕೆಲಸ ಮಾಡುತ್ತಿದೆ. ಶುದ್ಧ ಕುಡಿಯುವ ನೀರಿನ ಘಟಕ, ಕೊಠಡಿ ಹೀಗೆ ಸರಕಾರದ ಯೋಜನೆಗಳನ್ನು ಎಲ್ಲಾ ಅಂಗನವಾಡಿಗಳಿಗೂ ಕೊಡುವ ಕೆಲಸ ಆಗಿದೆ ಎಂದರು. ನಿಶಾನ್ ಕಾರ್ಯಕ್ರಮ ಉದ್ಘಾಟಿಸಿದರು. ವೈಷ್ಣವಿ […]

ಪಡ್ಡಾಯೂರು ಅಂಗನವಾಡಿಯಲ್ಲಿ ಬಾಲಮೇಳ Read More »

ನರಿಮೊಗರು ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ, ಸ್ಮಾರ್ಟ್ ಕ್ಲಾಸ್ ಉದ್ಘಾಟನೆ

ಪುತ್ತೂರು: ನರಿಮೊಗರು ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಸ್ಮಾರ್ಟ್ ಕ್ಲಾಸ್ ಬಿಡುಗಡೆ ಕಾರ್ಯಕ್ರಮ ಜ. 28ರಂದು ನಡೆಯಿತು. ಶಾಸಕ ಸಂಜೀವ ಮಠಂದೂರು ಮಾತನಾಡಿ, ಕಳೆದ 5 ವರ್ಷಗಳಲ್ಲಿ ಪುತ್ತೂರು ಕ್ಷೇತ್ರದ 111 ಸರಕಾರಿ ಶಾಲೆಗಳಿಗೆ ಕೊಠಡಿ, ಸ್ಮಾರ್ಟ್ ಕ್ಲಾಸ್, ಬೆಂಚು, ಡೆಸ್ಕ್ ನೀಡುವ ಕೆಲಸ ಆಗಿದೆ. ಶಾಲೆಗಳಿಗೆ ಮೂಲಸೌಲಭ್ಯಗಳನ್ನು ನೀಡುವ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಪೂರಕ ವಾತಾವರಣ ಕಲ್ಪಿಸಿಕೊಡುವ ಕೆಲಸ ಆಗಿದೆ ಎಂದರು.ಎಸ್.ಡಿ.ಎಂ.ಸಿ. ಅಧ್ಯಕ್ಷ ಕೃಷ್ಣರಾಜ ಜೈನ್, ನಳಿನಿ ಲೋಕಪ್ಪ ಗೌಡ, ನರಿಮೊಗರು

ನರಿಮೊಗರು ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ, ಸ್ಮಾರ್ಟ್ ಕ್ಲಾಸ್ ಉದ್ಘಾಟನೆ Read More »

ಕಾವು ಶಾಲೆಯಲ್ಲಿ ಬಣ್ಣದ ಕಲರವ, ಸ್ಮಾರ್ಟ್ ಕ್ಲಾಸ್ ಉದ್ಘಾಟನೆ

ಪುತ್ತೂರು: ಕಾವು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಬಣ್ಣದ ಕಲರವ ಹಾಗೂ ಸ್ಮಾರ್ಟ್ ಕ್ಲಾಸ್ ಉದ್ಘಾಟನಾ ಕಾರ್ಯಕ್ರಮ ಜ. 28ರಂದು ನಡೆಯಿತು. ಶಾಸಕ ಸಂಜೀವ ಮಠಂದೂರು ಮಾತನಾಡಿ, ಕೋವಿಡ್ ನಂತರ ಸಾಮಾಜಿಕ ಬದಲಾವಣೆಗಳು ಬಹಳಷ್ಟು ಆಗಿವೆ. ಇದರ ನಡುವೆ ನಮ್ಮ ಜೀವನ ಹೇಗಿರಬೇಕು ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು. ಬದುಕು ಚೆನ್ನಾಗಿರಬೇಕಾದರೆ, ಶಿಕ್ಷಣದಲ್ಲಿ ಬದಲಾವಣೆ ತೀರಾ ಅವಶ್ಯಕ. ಈ ಹಿನ್ನೆಲೆಯಲ್ಲಿ ಶಿಕ್ಷಣದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಡಿಜಿಟಲ್ ಇಂಡಿಯಾ ಯೋಜನೆಯಲ್ಲಿ ಎಲ್ಲಾ ಶಾಲೆಗಳಿಗೂ ಸ್ಮಾರ್ಟ್ ಕ್ಲಾಸ್ ಕೊಡುವ ಕೆಲಸ

ಕಾವು ಶಾಲೆಯಲ್ಲಿ ಬಣ್ಣದ ಕಲರವ, ಸ್ಮಾರ್ಟ್ ಕ್ಲಾಸ್ ಉದ್ಘಾಟನೆ Read More »

ಕುಡಿಯುವ ನೀರಿಗೆ ವ್ಯವಸ್ಥೆ ಮಾಡಿದ್ದ ಶಾಸಕ ಸಂಜೀವ ಮಠಂದೂರು ನಮ್ಮ ಹೆಮ್ಮೆ | ಮೆಚ್ಚುಗೆ ವ್ಯಕ್ತಪಡಿಸಿದ ನೆಕ್ಕಿಲಾಡಿ ಗ್ರಾ.ಪಂ. ಅಧ್ಯಕ್ಷ

ಪುತ್ತೂರು: ನೆಕ್ಕಿಲಾಡಿಯಲ್ಲಿ ಎದುರಾದ ನೀರಿನ ಸಮಸ್ಯೆಗೆ ತಕ್ಷಣವೇ ಸ್ಪಂದಿಸಿರುವ ಶಾಸಕ ಸಂಜೀವ ಮಠಂದೂರು ಅವರು, ಕೊಳವೆ ಬಾವಿಯ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಆದ್ದರಿಂದ ಸಂಜೀವ ಮಠಂದೂರು ಅವರು ನಮ್ಮ ಹೆಮ್ಮೆ ಎಂದು ನೆಕ್ಕಿಲಾಡಿ ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್ ಹೇಳಿದರು. ಶಾಂತಿನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜ. 27ರಂದು ನಡೆದ ಸ್ಮಾರ್ಟ್ ಕ್ಲಾಸ್ ಮತ್ತು ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ನೆಕ್ಕಿಲಾಡಿಯಲ್ಲಿ ಅತೀ ಹೆಚ್ಚು ನೀರಿನ ಸಮಸ್ಯೆ ಇತ್ತು. ಎಲ್ಲಾ ಕಡೆಯೂ ಗ್ರಾ.ಪಂ. ವತಿಯಿಂದ

ಕುಡಿಯುವ ನೀರಿಗೆ ವ್ಯವಸ್ಥೆ ಮಾಡಿದ್ದ ಶಾಸಕ ಸಂಜೀವ ಮಠಂದೂರು ನಮ್ಮ ಹೆಮ್ಮೆ | ಮೆಚ್ಚುಗೆ ವ್ಯಕ್ತಪಡಿಸಿದ ನೆಕ್ಕಿಲಾಡಿ ಗ್ರಾ.ಪಂ. ಅಧ್ಯಕ್ಷ Read More »

ಭಾರತೀಯ ಸಂಸ್ಕೃತಿಗೆ ಪೂರಕವಾದ ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿಗಾಗಿ ಸ್ಮಾರ್ಟ್ ಕ್ಲಾಸ್‍ | ಶಾಂತಿಗೋಡು ಹಿ.ಪ್ರಾ. ಶಾಲೆಯಲ್ಲಿ ಶಾಸಕ ಸಂಜೀವ ಮಠಂದೂರು

ಪುತ್ತೂರು: ಶಾಂತಿಗೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಯಲು ರಂಗಮಂದಿರ, ನೂತನ ಕೊಠಡಿ, ಹಾಗೂ ಕುಡಿಯುವ ನೀರಿನ ಘಟಕ, ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ಜ. 26ರಂದು ನಡೆಯಿತು. ಶಾಸಕ ಸಂಜೀವ ಮಠಂದೂರು ಮಾತನಾಡಿ, ನಮ್ಮ ಸಂಸ್ಕೃತಿಯ ಪ್ರತಿಬಿಂಬ ನಮ್ಮ ಊರಿನ ಶಾಲೆ. ಇಂತಹ ಸರಕಾರಿ ಶಾಲೆಗಳ ಉಳಿವಿಗಾಗಿ ನಮ್ಮ ಕಾರ್ಯ ತುಂಬಾ ಇದೆ. ಕೇಂದ್ರ ಸರಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪರಿಚಯಿಸುವ ಮೂಲಕ ಮೆಕಾಲೆಯ ಶಿಕ್ಷಣ ಪದ್ಧತಿಯಿಂದ ಹೊರತಂದು, ಭಾರತೀಯ ಸಂಸ್ಕೃತಿಗೆ ಪೂರಕವಾದ ಶಿಕ್ಷಣ ನೀಡುವ ಕೆಲಸ

ಭಾರತೀಯ ಸಂಸ್ಕೃತಿಗೆ ಪೂರಕವಾದ ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿಗಾಗಿ ಸ್ಮಾರ್ಟ್ ಕ್ಲಾಸ್‍ | ಶಾಂತಿಗೋಡು ಹಿ.ಪ್ರಾ. ಶಾಲೆಯಲ್ಲಿ ಶಾಸಕ ಸಂಜೀವ ಮಠಂದೂರು Read More »

ಜ. 30: ಉಚಿತ ಕಣ್ಣಿನ ತಪಾಸಣಾ ಶಿಬಿರ

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್, ದ.ಕ. ಜಿಲ್ಲಾ ಮರಾಠಿ ಸಂರಕ್ಷಣಾ ಸಮಿತಿ ಆಶ್ರಯದಲ್ಲಿ ಪುತ್ತೂರು ನಗರಸಭೆ, ಸರಕಾರಿ ಆಸ್ಪತ್ರೆ ಹಾಗೂ ಸ್ಟಾರ್ ಒಪ್ಟಿಕಲ್ಸ್ ಸಹಕಾರದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ಜ. 30 ರಂದು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1.00ರವರೆಗೆ ನಗರಸಭೆ ಕಟ್ಟಡದ 2ನೇ ಮಹಡಿಯಲ್ಲಿ ನಡೆಯಲಿದೆ. ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ., ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಬಾಲಚಂದ್ರ,, ಪೌರಾಯುಕ್ತ ಮಧು ಎಸ್. ಮನೋಹರ್,

ಜ. 30: ಉಚಿತ ಕಣ್ಣಿನ ತಪಾಸಣಾ ಶಿಬಿರ Read More »

ವೀರಮಂಗಲ ಶಾಲೆಯಲ್ಲಿ ಗಣರಾಜ್ಯೋತ್ಸವ

ಪುತ್ತೂರು: ವೀರಮಂಗಲ ಶಾಲೆಯಲ್ಲಿ 74 ನೇ ವರ್ಷದ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.,ಎಸ್ ಡಿ ಎಂ ಸಿ ಅಧ್ಯಕ್ಷೆ ಅನುಪಮಾ ಧ್ವಜಾರೋಹಣಗೈದರು. ಬಳಿಕ ಸ್ಕೌಟ್ ಧ್ವಜಾರೋಹಣ ಮಾಡಲಾಯಿತು.ನರಿಮೊಗರು ಗ್ರಾಮ ಪಂಚಾಯಿತಿ ಸದಸ್ಯೆ ಪದ್ಮಾವತಿ ಇವರು ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಭಾಷಣ, ದೇಶಭಕ್ತಿ ಗೀತೆಗಳು ಹಾಗೂ ದೇಶಭಕ್ತಿಗೀತೆ ಸಂಬಂಧ ಸೇವಾದಳ ತಂಡದಿಂದ ನೃತ್ಯಕಾರ್ಯಕ್ರಮ ನಡೆಯಿತು. ಶಾಲೆಯ ಶಿಕ್ಷಕರಾದ ಹರಿಣಾಕ್ಷಿ, ಶೋಭಾ, ಶೀಲತಾ, ಕವಿತಾ, ಹೇಮಾವತಿ, ಅಡುಗೆ ಸಿಬ್ಬಂಧಿಗಳಾದ ಪಾರ್ವತಿ,

ವೀರಮಂಗಲ ಶಾಲೆಯಲ್ಲಿ ಗಣರಾಜ್ಯೋತ್ಸವ Read More »

ಕೆವಿಜಿ ಮೆಡಿಕಲ್ ಕಾಲೇಜು-ಆಸ್ಪತ್ರೆಗೆ ಜಿಲ್ಲೆಯ ನಂ.1 ಸೇವಾ ಪುರಸ್ಕಾರ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಸುಳ್ಯದ ಕೆವಿಜಿ ಸಮೂಹ ಶಿಕ್ಷಣ ಸಂಸ್ಥೆಯ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗೆ ಆರೋಗ್ಯ ಭಾರತ್ -ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನೆ (AB-PMJAY-ArK)) ಅತ್ಯುತ್ತಮ ಸೇವಾ ಪುರಸ್ಕಾರ ದೊರೆತಿದೆ. ಗಣರಾಜ್ಯೋತ್ಸವ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬೆಳಗ್ಗೆ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ರವಿ ಕುಮಾರ್ ಅವರಿಂದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ., ಕಾಲೇಜಿನ ಡೀನ್ ನೀಲಾಂಬಿಕೈ ನಟರಾಜನ್ ಪ್ರಶಂಸನಾ ಪತ್ರ ಸ್ವೀಕರಿಸಿದರು.

ಕೆವಿಜಿ ಮೆಡಿಕಲ್ ಕಾಲೇಜು-ಆಸ್ಪತ್ರೆಗೆ ಜಿಲ್ಲೆಯ ನಂ.1 ಸೇವಾ ಪುರಸ್ಕಾರ Read More »

ವಿವೇಕಾನಂದ ಮಹಾವಿದ್ಯಾಲಯದಲ್ಲಿ ಗಡಿನಾಡ ಸಂಸ್ಕೃತಿ ಉತ್ಸವಕ್ಕೆ ಚಾಲನೆ

ಪುತ್ತೂರು: 75 ನೆಯ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಕರ್ನಾಟಕ ಸರಕಾರ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮತ್ತು ನೃತ್ಯೋಪಾಸನಾ ಕಲಾಕೇಂದ್ರ ಆಯೋಜನೆಯಲ್ಲಿ ವಿವೇಕಾನಂದ ಮಹಾವಿದ್ಯಾಲಯದಲ್ಲಿ ನಡೆಯುವ ಗಡಿನಾಡ ಸಂಸ್ಕೃತಿ ಉತ್ಸವ – ಗೌರವ ಸನ್ಮಾನ, ವಿಚಾರಗೋಷ್ಠಿ, ಸಾಂಸ್ಕೃತಿಕ ಉತ್ಸವಗಳಿಗೆ ಜ. 26ರಂದು ಬೆಳಿಗ್ಗೆ ಚಾಲನೆ ನೀಡಲಾಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕರವರು ‘ಭಾರತದಲ್ಲಿನ ಮೂಲ ಚಿಂತನೆಗಳನ್ನು ನಾಶ ಮಾಡುವ ಪ್ರಯತ್ನ ನಡೆಯುತ್ತಲೇ ಇದೆ. ಆದರೂ

ವಿವೇಕಾನಂದ ಮಹಾವಿದ್ಯಾಲಯದಲ್ಲಿ ಗಡಿನಾಡ ಸಂಸ್ಕೃತಿ ಉತ್ಸವಕ್ಕೆ ಚಾಲನೆ Read More »

ದೇಸೀಯ ಉತ್ಪನ್ನಗಳಿಗೆ ಬೆಂಬಲ ನೀಡಿದಾಗ ದೇಶ ಅಭಿವೃದ್ಧಿ | ಅಂಬಿಕಾ ಮಹಾವಿದ್ಯಾಲಯದಲ್ಲಿ ವೆಂಚುರಾ – ವಾಣಿಜ್ಯ ಸ್ಪರ್ಧೆ ಸಮಾರೋಪದಲ್ಲಿ ಸುಬ್ರಹ್ಮಣ್ಯ ನಟ್ಟೋಜ

ಪುತ್ತೂರು: ದೇಶದ ಬಗೆಗೆ ಅಭಿಮಾನವನ್ನು ಬೆಳೆಸುವಂತಹ ಕಾರ್ಯಚಟುವಟಿಕೆಗಳೊಂದಿಗೆ ವಿದ್ಯಾರ್ಥಿಗಳು ಬೆಳೆಯಬೇಕು. ದೇಸೀಯ ಸಾಧಕರು, ಅವರ ಸಾಧನೆಗಳು ನಮ್ಮ ಆದರ್ಶವಾಗಬೇಕು. ನಮ್ಮನ್ನು ಆಕರ್ಷಿಸುವ ಅನೇಕ ವಿದೇಶೀ ಮೂಲದ ವಸ್ತುಗಳಿದ್ದರೂ ನಮ್ಮ ನೆಲದ ಉತ್ಪನ್ನಗಳಿಗೆ ನಾವು ಬೆಂಬಲ ನೀಡಬೇಕು. ದೇಶಕ್ಕೆ ಸಂಕಷ್ಟ ಒದಗಿದಾಗ ನೆರವಾಗುವವರು ನಮ್ಮವರೇ ಹೊರತು ಅನ್ಯರಲ್ಲ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು. ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಪದವಿ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ಆಶ್ರಯದಲ್ಲಿ

ದೇಸೀಯ ಉತ್ಪನ್ನಗಳಿಗೆ ಬೆಂಬಲ ನೀಡಿದಾಗ ದೇಶ ಅಭಿವೃದ್ಧಿ | ಅಂಬಿಕಾ ಮಹಾವಿದ್ಯಾಲಯದಲ್ಲಿ ವೆಂಚುರಾ – ವಾಣಿಜ್ಯ ಸ್ಪರ್ಧೆ ಸಮಾರೋಪದಲ್ಲಿ ಸುಬ್ರಹ್ಮಣ್ಯ ನಟ್ಟೋಜ Read More »

error: Content is protected !!
Scroll to Top